Board Room

From the Board April 2022


ಸ್ನೇಹಿತರೆ ನಮಸ್ಕಾರ,

ಎಪ್ರಿಲ್ ೧೭ ಕ್ಕೆ ಸರಿಯಾಗಿ ನಮ್ಮ ಅಕ್ಕರೆಯ ಕಲಾ ಕೈಂಕರ್ಯದ ಕನಸಾದ ನಾದನೂಪುರ ಟ್ರಸ್ಟ್ ಗೆ ೧ ವರ್ಷ ತುಂಬುತ್ತದೆ. ಈ ಒಂದು ವರ್ಷದಲ್ಲಿ ನಮ್ಮೆಡೆ ಕುತೂಹಲದಿಂದ ನೋಡಿದ ಕಣ್ಣುಗಳು ಹಲವು. ಹತ್ತರಲ್ಲಿ ಹನ್ನೊಂದು ಎಂಬAತಹ ಟ್ರಸ್ಟಾಗಿ ಉಳಿದು ಬಿಡಬಾರದೆಂಬ ಸಾಲಿಡ್ ಕಮಿಟ್ ಮೆಂಟ್ ನೊಂದಿಗೆ ಕಲಾಸೇವೆಯ ಕನಸುಗಳನ್ನು ಬರೆಯುತ್ತಿದ್ದೇವೆ. ೧೭ ವರ್ಷಗಳಿಂದ ಸತತ ಗೆಜ್ಜೆ ಕಟ್ಟಿ ಕುಣಿದು ಗಳಿಸಿದ ಖ್ಯಾತಿ, ಕಟ್ಟಿಕೊಂಡ ಬದುಕು, ಪಡೆದುಕೊಂಡ ಆತ್ಮಾನಂದದ ಫಲಶ್ರುತಿಯೇ ಮರಳಿ ಕಲೆಗೆ ಕಿಂಚಿತ್ ನೀಡಬೇಕೆನ್ನುವ ತುಡಿತ. ಆ ತುಡಿತಕ್ಕೆ ಮನಮೆಚ್ಚಿದ ಹೆಸರೇ ನಾದನೂಪುರ.

ನನ್ನ ಬಳಗವೂ ಇದೇ ಹೆಸರನ್ನು ಒಪ್ಪಿಕೊಂಡಿತ್ತು. ವಂಡಾರು ಗ್ರಾಮದಲ್ಲಿ ನನ್ನದೇ ನಿವಾಸದಲ್ಲಿ ಒಂದು ಭಾಗವನ್ನು ಟ್ರಸ್ಟ್ ನ ಕಛೇರಿಯನ್ನಾಗಿ ಮಾಡಿಕೊಂಡೆವು. ಪ್ರತಿಫಲವೇನೂ ಅಪೇಕ್ಷೆ ಮಾಡದೇ ಕೆಲವೊಂದು ಕೆಲಸಗಳಿಗೆ ಉತ್ಸಾಹದಿಂದ ತೊಡಗಿಸಿಕೊಂಡೆವು. ಗುಣಾತ್ಮಕ ಹಾಗೂ ಪ್ರಯೋಗಾತ್ಮಕ ಯಕ್ಷಗಾನ ಕಾರ್ಯಕ್ರಮ ನೀಡುವುದು, ಈ ಮೂಲಕ ಸಹ ಕಲಾವಿದರ ಉದ್ಯೋಗಕ್ಕೆ ದಾರಿ, ಸಂಶೋಧನಾತ್ಮಕ ಚಟುವಟಿಕೆಗಳನ್ನು ಯೋಜಿಸುವುದು, ಯಕ್ಷಗಾನ ತರಗತಿಗಳನ್ನು ನಡೆಸಲು ರೂಪು ರೇಷೆ, ಅಗತ್ಯ ಕಲಾವಿದರಿಗೆ ನೆರವು, ಈ ಮೊದಲಾದ ಅಂಶಗಳನ್ನು ಟ್ರಸ್ಟ ನ ಮೂಲ ಗುರಿ ಉದ್ದೇಶಗಳನ್ನಾಗಿ ರೂಪಿಸಿಕೊಂಡೆವು. ಮೊದಲ ವರ್ಷದಲ್ಲಿ ಚೊಚ್ಚಲ ಕಾರ್ಯಕ್ರಮವಾಗಿ ಶತರೂಪಾ ಮತ್ತು ನೀಲಾಂಜನೆ ಎಂಬ ಪೌರಾಣಿಕ ಪ್ರಸಂಗಗಳನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದೆವು. ಜನರಿಂದ ಕಲಾಭಿಮಾನಿಗಳಿಂದ ಇದಕ್ಕೆ ಸಿಕ್ಕಪ್ರತಿಕ್ರಿಯೆ ಅತ್ಯದ್ಬುತ. ಆ ಚಿಕ್ಕ ಕಾರ್ಯಕ್ಕೆ ಸಿಕ್ಕ ದೊಡ್ಡ ಪ್ರೋತ್ಸಾಹವೇ ಇಂದು ಮತ್ತೊಂದು ಹೆಜ್ಜೆ ಮುಂದಿಡಲು ಪ್ರೇರಣೆಯಾಗಿದೆ. ಅದು ನಾದ ನೂಪುರ ವಂಡಾರು ಡಿಜಿಟಲ್-ಪತ್ರಿಕೆ. ಶುಭಕೃತ್ ಸಂವತ್ಸರದ (೨೦೨೨) ಯುಗಾದಿಗೆ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಮೂಲಕ

ಹೊರಬರುತ್ತಿರುವ ಮೊದಲ ಡಿಜಿಟಲ್-ಪತ್ರಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವೆನಿಸುತ್ತಿದೆ. ಈಗಾಗಲೇ ಯಕ್ಷಗಾನ ಕ್ಷೇತ್ರಕ್ಕೆ ಸಂಬAಧಿಸಿದ ಸುದ್ದಿ, ವಿಚಾರ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿರುವ ಅನೇಕ ಪತ್ರಿಕೆಗಳು ಮಾರುಕಟ್ಟೆಯಲ್ಲಿವೆ. ಆದರೂ ಮತ್ತೊಂದೇಕೆ ಎಂಬ ಪ್ರಶ್ನೆಗೆ ಉತ್ತರ ನಮ್ಮ ಟ್ರಸ್ಟ್ ನ ಧ್ಯೇಯೋದ್ಧೇಶಗಳು. ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ಟ್ರಸ್ಟ್ ತೊಡಗಿಸಿಕೊಳ್ಳಬೇಕು ಎಂಬುದು ಟ್ರಸ್ಟ್ ನ ಒಂದು ಉದ್ದೇಶವಾಗಿದ್ದು ಸಂಶೋಧನೆಗೆ ಪೂರ್ವಭಾವಿಯಾಗಿ ಡಾಕ್ಯುಮೆಂಟರಿ ತೀರಾ ಅತ್ಯಗತ್ಯವೆನಿಸಿದೆ. ಈ ನಿಟ್ಟಿನಲ್ಲಿ ಪತ್ರಿಕಾ ವರದಿ ಹಾಗೂ ಸುದ್ದಿಗಳು ಪ್ರಮುಖ ದಾಖಲೆ ಎನಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಕಲೆ ಯಕ್ಷಗಾನ ಸಾಹಿತ್ಯ ಹಾಗೂ ಕಲಾವಿದರಿಗೆ ಸಂಬAಧಿಸಿದ ಉಪಯುಕ್ತ ಲೇಖನಗಳನ್ನು ಜನರಿಗೆ ತಲುಪಿಸುವಲ್ಲಿಯೂ ಟ್ರಸ್ಟ್ ನ ಟೀಂ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ. ಕಲಾವಿದರ, ಆಸಕ್ತಿಯ ಕಿರು ಮಾಹಿತಿಗಳು ಯಕ್ಷಗಾನ ಕ್ಷೇತ್ರದ ಪ್ರಸ್ತುತ ಬೆಳವಣಿಗೆಗಳು, ವಿಮರ್ಶಾತ್ಮಕ ಲೇಖನ, ಪುಸ್ತಕ ಪರಿಚಯ, ಸಾಧಕ ಕಲಾವಿದರ ಜೀವನಗಾಥೆಯ ಸರಣಿ ಲೇಖನ ಮಾಲೆ, ಹೀಗೆ ಚಿಕ್ಕದಾಗಿ ಕೆಲವೇ ಅಂಕಣಗಳನ್ನೊಳಗೊAಡ ಪತ್ರಿಕೆಯ ಅಕ್ಷರ ಲೋಕಕ್ಕೆ ಸಮರ್ಪಣೆಯಾಗಿದೆ. ಈ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಶುಭಾಶಯ, ಹಾಗು ಗೌರವ ಸಂಪಾದಕರಾಗಿ ಶ್ರೀ ಅಜಿತ್ ಕಾರಂತ್ ರವರು ಈ ಡಿಜಿಟಲ್ ಪತ್ರಿಕೆಯನ್ನು ಮುನ್ನಡೆಸಲಿದ್ದಾರೆ. ಸಕಾಲಿಕ ವಿಚಾರಗಳ ಬಗ್ಗೆ ಶಾಂತಾರಾಮ ಕುಡ್ವರು ಹಾಗು ಪ್ರೊ. ಉದಯ್ ಕುಮಾರ್ ಶೆಟ್ಟಿಯವರ ಸಮರ್ಥ ಲೇಖನಗಳು ಓದುಗರನ್ನು ಚಿಂತನೆಗೆ ಹಚ್ಚಲಿದೆ. ಮಹಿಳಾ ಸಾಧಕಿಯರ ಬಗ್ಗೆ ಯಕ್ಷಗಾನದ ಯುವ ಕಲಾವಿದೆ ಸಾಯಿಸುಮ ನಾವುಡ ನಿರೂಪಿಸಲಿದ್ದಾರೆ. ಕಾಡುವ ಸನ್ನಿವೇಶ ಅಂಕಣದಲ್ಲಿ ಹಲವಾರು ಕಲಾವಿದರು ತಮ್ಮ ಆಪ್ತ ಕ್ಷಣ/ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಬಾರಿ ಮದ್ದಳೆಗಾರರಾದ ಪದ್ಯಾಣ ಶಂಕರ ನಾರಾಯಣ ಭಟ್ ಹಾಗು ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟಿಯವರ ಮನದಾಳದ ಮಾತುಗಳು ಪ್ರಕಟವಾಗಿವೆ. ನಮ್ಮ ಲೈಬ್ರರಿ ಅಂಕಣದಲ್ಲಿ, ಯಕ್ಷಗಾನ ಕೃತಿಗಳ ಪರಿಚಯ ತೆರೆದುಕೊಳ್ಳಲಿದೆ. ಡಿಬೇಟ್ ಕಾರ್ನರ್ ನಲ್ಲಿ ಯಕ್ಷಗಾನದ ಬದಲಾವಣೆ ಬೆಳವಣಿಗೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಲಿದೆ. ಅಷ್ಟೇ ಅಲ್ಲದೆ ನೀವು ವಿಶೇಷ ಸುದ್ದಿಗಳಿದ್ದರೆ ನಮ್ಮ ಡಿಜಿಟಲ್ ಪತ್ರಿಕೆಗೆ ಬರೆದು ಕಳುಹಿಸಬಹುದು ಈಗಾಗಲೇ ಜನಪ್ರಿಯವಾಗಿರುವ ಪತ್ರಿಕೆಗಳ ಮಟ್ಟಕ್ಕೆ ವಿಚಾರಗಳು ಇಲ್ಲದೇ ಹೋದರೂ ಮೌಲ್ವಿಕ ವಿಚಾರ ಹಾಗೂ ಸುದ್ದಿಗಳಿಂದ ಮುಂದೆ ನಿಮಗೆ ಆಪ್ತವಾಗಲಿದ್ದೇವೆ. ನಿಮ್ಮ ಸಹಕಾರ ಬೆಂಬಲ, ನಿರಂತರ ಸಂಪರ್ಕ ನಮ್ಮನ್ನು ಬೆಳೆಸುವಲ್ಲಿ ಕೊಡುಗೆಯಾಗಲಿ ಎಂಬ ನಿರೀಕ್ಷೆ ನಮ್ಮದು. ನಮ್ಮ ಈ ಪತ್ರಿಕೆಯನ್ನೂ ಪ್ರೀತಿಯಿಂದ ನಿಮ್ಮ ಮಡಿಲಿಗೆ ಹಾಕಿಕೊಳ್ಳುತ್ತೀರಿ ಎಂಬ ಭರವಸೆಯೊಂದಿಗೆ


Board room May 2022


ಬೋರ್ಡ್ ರೂಮ್

ಸ್ನೇಹಿತರೆ ನಮಸ್ಕಾರ,

ನಾಡಿನ ಸಮಸ್ತ ಜನತೆಯ ಸುಕೃತ ಅಕ್ಷಯವಾಗಲೆಂದು ಬಯಸುತ್ತಾ ಸರ್ವರಿಗೂ ಅಕ್ಷಯ ತೃತೀಯದ ಶುಭಾಶಯಗಳು. ನಾದನೂಪುರದ ಒಂದೆರಡು ಚಟುವಟಿಕೆಗಳ ಬಗ್ಗೆ ಈ ಸಂಚಿಕೆಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ.ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವತಿಯಿಂದ ಚಂದ್ರಾವಳಿ ವಿಲಾಸ ಎಂಬ ಕಿರು ಯಕ್ಷಗಾನ ಪ್ರಸಂಗವನ್ನು ದಿನಾಂಕ ೧೯-೦೩-೨೦೨೨ರಂದು ಶಿರಸಿಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಸಹಯೋಗದಲ್ಲಿ ಶಿರಸಿ ತಾಲೂಕಿನ ಹರಿಶಿಯಲ್ಲಿ

ಪ್ರದರ್ಶಿಸಿದೆವು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಅಂಕೋಲ, ಮದ್ದಳೆ ನಾಗರಾಜ ಭಂಡಾರಿ ಹಾಗೂ ಚೆಂಡೆವಾದಕರಾಗಿ ರಾಮನ್ ಹೊನ್ನಾವರ ಭಾಗವಹಿಸಿದ್ದರು. ಸಹಕಲಾವಿದರಾಗಿ ಅಶೋಕ್ ಭಟ್ ಸಿದ್ಧಾಪುರ, ಪ್ರಸನ್ನ ಶೆಟ್ಟಿಗಾರ್, ಮಾರುತಿ ಬೈಲಗದ್ದೆ, ಕಾಸರಕೋಡ್ ಶ್ರಿಧರ್ ಭಟ್ ಮತ್ತು ನಾನು ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದೆವು. ಚಂದ್ರಾವಳಿ- ಕಿರು ಪ್ರಸಂಗವಾದರೂ ಅನೇಕ ವಿಷಯಗಳಿಂದಾಗಿ ಮಹತ್ವವನ್ನು ಪಡೆದಿರುವಂತಹಾ ಪ್ರಸಂಗ. ಇದು ಧ್ವಜಪುರದ ನಾಗಪ್ಪಯ್ಯ ವಿರಚಿತ ಪ್ರಸಂಗವಾಗಿದ್ದು ಈವರೆಗೆ ವಿವಿಧ ಮೇಳಗಳಲ್ಲಿ ವಿವಿಧ ಕಲಾವಿದರಿಂದ ಲೆಕ್ಕವಿಲ್ಲದಷ್ಟು ಪ್ರದರ್ಶನಗಳನ್ನು ಕಂಡಿದೆ. ಆದರೂ ಈ ಪ್ರಸಂಗದ ಆಕರ್ಷಣೆ ಜನರಿಗೆ ಕಡಿಮೆ ಆಗುವುದಿಲ್ಲ ಎನ್ನುವುದಕ್ಕೆ ಈಗಲೂ ಮುಂದೆಯೂ ಈ ಪ್ರಸಂಗಕ್ಕಿರುವ ಬೇಡಿಕೆಯೇ ಸಾಕ್ಷಿ. ವರ್ಷಕ್ಕೆ ೩೫ರಿಂದ ೪೦ರಷ್ಟು ಬಾರಿ ಈ ಪಾತ್ರ ನಿರ್ವಹಿಸುವ ಅವಕಾಶ ನನಗೆ ಸಿಗುತ್ತದೆ. ಒಂದೇ ದಿನದಲ್ಲಿ ೨-೩ ಬಾರಿಯೂ ಅದೇ ಪ್ರಸಂಗ, 

ಅದೇ ಪಾತ್ರವನ್ನು ಅಭಿನಯಿಸಿದ್ದು ಇದೆ.ಈ ಪ್ರಸಂಗದಲ್ಲಿ ಜನರಿಗೆ ಇಷ್ಟವಾಗುವಂತಹಾ ಅಂಶಗಳನ್ನು ಹೇಳುವುದಾದರೆ, ಕಾಲಮಿತಿಗೆ ಸೂಕ್ತವಾದ ಹಾಗೂ ಎಲ್ಲ ರಸಗಳೂ ಮಿಳಿತವಾಗಿರುವಂತಹಾ ಪ್ರಸಂಗ ಇದಾಗಿದೆ. ಈ ಕಥೆಯಲ್ಲೊಂದು ಸಂದೇಶವಿದೆ, ಮನರಂಜನೆಯಿದೆ, ಲವಲವಿಕೆಯ ನಡೆಯಿದೆ. ಸಾಮಾನ್ಯವಾಗಿ ಜನರಲ್ಲಿ ಒಂದು ನಂಬಿಕೆಯಿದೆ, ಇದೊಂದು ಸಣ್ಣ ಪಾತ್ರ, ಈ ಪಾತ್ರವನ್ನು ಯಾರು ಬೇಕಾದರೂ ನಿಭಾಯಿಸಬಲ್ಲರು ಎಂದು.. ಆದರೆ ಆ ಪಾತ್ರದ ವಿಶೇಷತೆಯನ್ನು ಅರ್ಥ ಮಾಡಿಕೊಂಡು ಪ್ರದರ್ಶನ ನೀಡಿದಾಗಲಷ್ಟೇ ಆ ಕಥೆಯ ಮಹತ್ವ ಹಾಗೂ ಘನತೆಗೆ ನ್ಯಾಯ ನೀಡಿದಂತೆ. ಭಗವಂತನ ಅಸ್ಥಿತ್ವ ಸಕಲ ಚರಾಚರಗಳಲ್ಲೂ ಇದೆ, ಆತ ಸರ್ವವ್ಯಾಪಿ ಎಂಬುದನ್ನು ಈ ಪ್ರಸಂಗದಲ್ಲಿ ಶ್ರೀಕೃಷ್ಣ ವೇದ್ಯಗೊಳಿಸುತ್ತಾನೆ. ಶ್ರೀಕೃಷ್ಣನ ದೈವತ್ವನ್ನು ಅರಿತುಕೊಳ್ಳದ ಚಂದಗೋಪ ಹಾಗೂ ಚಂದ್ರಾವಳಿ ಶ್ರೀ ಕೃಷ್ಣನನ್ನು ಸಾಮಾನ್ಯ ಪುಂಡನೆAದುಕೊAಡಿರುತ್ತಾರೆ. (ಚಂದ್ರಾವಳಿಗೆ ಒಂದು ರೀತಿಯ ಶೀಲಮದವೆಂದು ಹೇಳಬಹುದು). ಒಂದಲ್ಲ ಒಂದು ರೀತಿಯಿಂದ ಪ್ರತಿಯೊಂದು ಜೀವಿಯೂ ಭಗವಂತನ ಸೂತ್ರಕ್ಕೊಳಪಟ್ಟವರು ಎಂಬುದೇ ಈ ಕಥೆಯ ಸಂದೇಶ. ತನ್ನೊಳಗಿನ ಮದವಿಳಿದಾಗ ದೇವದರ್ಶನವಾಗುತ್ತದೆ ಎಂಬುದನ್ನು ಸಾರುವ ಈ ಪ್ರಸಂಗದುದ್ದ ನಡೆಯುವ ತಿಳಿ ಹಾಸ್ಯದ ಸಂಭಾಷಣೆಗಳೇ ನೋಡುಗನಿಗೂ ಕಲಾವಿದನಿಗೂ ಮುದ ನೀಡುವಂತದ್ದು. ವೇಷಧಾರಿಗೆ ತೂಕಬದ್ದವಾದ ಅರ್ಥಗಾರಿಕೆಯಿಂದ ಒಳಾರ್ಥಗಳನ್ನು ನೀಡಬಲ್ಲ ಸಾಕಷ್ಟು ಅವಕಾಶಗಳಿವೆ. ಬಡಗಿನಲ್ಲಿ ಚಂದ್ರಾವಳಿ ಪಾತ್ರಕ್ಕೆ ಇಂಥದ್ದೇ ನಡೆ ಎಂಬುದನ್ನು ಗುರುತಿಸಬಹುದಾದರೆ ಅಥವ ಅನುಸರಿಸಬಹುದಾದರೆ, ಅದು ಮಂದಾರ್ತಿ ಎಂ ಎ ನಾಯಕರು ಚಂದ್ರಾವಳಿಯ ಪಾತ್ರವನ್ನು ನಿರ್ವಹಿಸುವ ರೀತಿ. ನಾನೂ ಚಂದ್ರಾವಳಿ ಪಾತ್ರ ನಿರ್ವಹಿಸುವಾಗ ಅವರದ್ದೇ ನಡೆಯನ್ನು ಅನುಸರಿಸುತ್ತೇನೆ. ಮೇಲಿಂದ ಮೇಲೆ ಒಂದೆ ಪಾತ್ರವನ್ನು ನಿರ್ವಹಿಸುವಾಗ ಏನಾದರು ಹೊಸತನ ತರಬಹುದೇ ಎಂದು ಕೆಲವರು ಕೇಳುವುದಿದೆ. ಆದರೆ ಹೊಸತನ ಅಂದ್ರೆ ಪ್ರಸಂಗದ ನಡೆಯನ್ನು ಮೀರಿ ಇನ್ನೇನನ್ನೋ ತುರುಕಲಾಗುವುದಿಲ್ಲ. ವೇಷಧಾರಿಯು ಬಳಸುವ ಭಾಷೆ, ಪದಪ್ರಯೋಗಗಳಲ್ಲಿ ಬದಲಾವಣೆ ಮಾಡುವುದರ ಮೂಲಕ ಏಕತಾನತೆಯನ್ನು ಕಡಿಮೆಮಾಡಿಕೊಳ್ಳಬಹುದು. ಕಲಾವಿದರು ಸಭಿಕರನ್ನು ಗಮನಿಸಿ ಸಂದರ್ಭಕ್ಕೆ ಬೇಕಾದ ಹಾಗೆ ಹಾಸ್ಯ, ಶೃಂಗಾರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುತ್ತೇವೆ. ನಾನು ಚಂದ್ರಾವಳಿ ಪಾತ್ರ ನಿರ್ವಹಿಸಿದಾಗ ನನ್ನೆದುರು ಕೃಷ್ಣನಾಗಿ ಮಂಕಿ ಈಶ್ವರ ನಾಯಕ್, ತೀರ್ಥಹಳ್ಳಿ ಗೋಪಾಲ್ ಆಚಾರ್, ಪ್ರಸನ್ನ ಶೆಟ್ಟಿಗಾರ್, ರಾಜೇಶ್ ಭಂಡಾರಿ, ನಾಗರಾಜ್ ಭಂಡಾರಿ, ಚಂದ್ರಹಾಸ ಗೌಡ, ವಿಶ್ವನಾಥ್ ಹೆನ್ನಾಬೈಲ್, ಕಣ್ಣಿಮನೆ ಗಣಪತಿ ಭಟ್, ಕಡಬಾಳ, ಕಿರಾಡಿ ಪ್ರಕಾಶ್, ಹರೀಶ್ ಜಪ್ತಿ ಮೊದಲಾದವರು ಪಾತ್ರ ನಿರ್ವಹಿಸಿದ್ದಾರೆ. ನನ್ನ ಎದುರು ವೇಷಧಾರಿಗಳ ಹೊಂದಾಣಿಕೆ ಹಾಗೂ ಸ್ಪಂದನೆಯಿAದಾಗಿಯೇ ಪ್ರತೀ ಬಾರಿಯೂ ಪಾತ್ರ ಮಾಡಿದಾಗ ಆ ಪಾತ್ರ ಹೆಚ್ಚು ಜೀವಂತವಾಗಿ ಮೂಡಿ ಬರುತ್ತದೆ. ಒಂದೇ ಪಾತ್ರವನ್ನು ಅದೆಷ್ಟೇ ಸಲ ನಿರ್ವಹಿಸಿದ್ದರೂ ಹೊಸತನ ಕೊಡಬೇಕೆನ್ನುವ ತುಡಿತ ಕಲಾವಿದನಾದವನಲ್ಲಿ ಇರಲೇಬೇಕು. ಇದು ಚಂದ್ರಾವಳಿ ಪಾತ್ರದ ನನ್ನ ಅನುಭವ.ಹಿಂದಿನ ತಿಂಗಳಿನಲ್ಲಿ ನಡೆದ ಮತ್ತೊಂದು ಪ್ರಮುಖವಾದ ಕಾರ್ಯಕ್ರಮ, ನಮ್ಮದೇ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮಿ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾಸಂಘ ಶ್ರೀ ಕ್ಷೇತ್ರ ಶಂಕರಪ್ಪನಕೊಡ್ಲು ಕೆಂಚನೂರು ಇವರ ಸಹಭಾಗಿತ್ವದಲ್ಲಿ ಪ್ರದರ್ಶನ ಕಂಡ ಚಂದಮಾಮ ಎಂಬ ಪ್ರಸಂಗ.


Board room June 2022


ಬೋರ್ಡ್ ರೂಮ್

ನಮಸ್ಕಾರ ಸ್ನೇಹಿತರೆ,

ಮಾನಸಿಕವಾದ ಸಂತೋಷ ನೆಮ್ಮದಿಯೇ ಸುಖ ಜೀವನದ ಸಂಕೇತ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಕೀರ್ತಿ ತಂದ ಸಾಲಿಗ್ರಾಮ ಮೇಳಕ್ಕೆ ವಿದಾಯ ಹೇಳಿ, ನನ್ನ ಕಲಾಸೇವೆಯನ್ನು ಮಂದಾರ್ತಿ ಮೇಳದಲ್ಲಿ ಮುಂದುವರೆಸುವ ನನ್ನ ತೀರ್ಮಾನದ ಕುರಿತು ನನ್ನ ಜನರು ಅಂದರೆ ನನ್ನ ಅಭಿಮಾನಿಗಳು ತುಂಬ ಬೇಸರ ವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂಬುದಾಗಿ ಹೇಳುತ್ತಿದ್ದಾರೆ. ಕೋರೋನ ಬಿಕ್ಕಟ್ಟಿನ ನಂತರ ಮೇಳಗಳಿಗೆ ದೊರಕುವ ಆಟಗಳು ಕಡಿಮೆಯಾಗುತ್ತಾ ಬಂದವು, ಕೌಟುಂಬಿಕ ಹಾಗೂ ಆರ್ಥಿಕ ಭದ್ರತೆಯನ್ನು ಆದ್ಯತೆಯನ್ನಾಗಿಟ್ಟುಕೊಂಡು ಮಂದಾರ್ತಿ ಮೇಳದಲ್ಲಿ

ತಿರುಗಾಟ ನಡೆಸುವ ನಿಧಾರ್ರಕ್ಕೆ ಬಂದಿದ್ದೇನೆ. ಅದಲ್ಲದೆ, ಮೇಳದ ಸಂಗಡಿಗರೊAದಿಗಾಗಲೀ, ಯಜಮಾನರೊಂದಿಗಾಗಲೀ ಯಾವುದೇ ಮನಸ್ತಾಪಗಳಿಲ್ಲ. ಈ ಸಂದರ್ಭದಲ್ಲಿ ಬೇಡಿಕೆ ಗಳಿಸುವಂತಹಾ ಕಾಲದಲ್ಲಿ ಕಲಾವಿದನೊಬ್ಬ ಟೆಂಟ್ ಮೇಳವನ್ನು ತ್ಯಜಿಸುವುದು ಸೂಕ್ತವಲ್ಲ, ಮಂದಾರ್ತಿ ಮೇಳದಲ್ಲಿ ಗುರುತಿಸಿಕೊಳ್ಳುವ ಅವಕಾಶ ಕಡಿಮೆ ಇಂತಹ ಮಾತುಗಳು ಬಹಳಷ್ಟು ಕೇಳಿ ಬಂತು. ಆದರೆ ಆ ಅಭಿಪ್ರಾಯಗಳು ನಿಜವಲ್ಲ ಎನ್ನುವುದು ನನ್ನ ಭಾವನೆ. ಪೌರಾಣಿಕ ಪ್ರಸಂಗಗಳಳಲ್ಲೇ ಕಲಾವಿದನೊಬ್ಬ ತನ್ನ ಸಾಮರ್ಥ್ಯವನ್ನು ತೋರಿಸಿಕೊಳ್ಳಬಹುದಾದ ವಿಪುಲ ಅವಕಾಶಗಳಿವೆ. ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಖ್ಯಾತಿ ಹಾಗೂ ಒಬ್ಬ ಕಲಾವಿದನ ಬೆಳವಣಿಗೆ ನಿಂತಿದೆ. ಈ ಅರ್ಥದಲ್ಲಿ ಮಂದಾರ್ತಿ ಮೇಳದಲ್ಲಿ ನನ್ನ ಬೆಳವಣಿಗೆ ಖಂಡಿತ ಕುಂಠಿತವಾಗಲಾರದು. ಸಂತೋಷ, ನೆಮ್ಮದಿ ಎಂದರೆ ಸಂಪಾದನೆ, ಹಾಗೂ ಜಾಗಕ್ಕೆ ಸಂಬAಧಿಸಿದ್ದಲ್ಲ. ಅದು ಮನಸಿಗೆ ಸಂಬAಧಿಸಿದ್ದು. ಎಲ್ಲಿದ್ದರೂ ನಮ್ಮ ಸ್ಥಿತಿಗತಿಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರಲ್ಲಿ ಜೀವನದ

ಸಂತೋಷ ಇದೆ. ಹಾಗಾಗಿ ಮಂದಾರ್ತಿ ಮೇಳದ ಕಲಾತಿರುಗಾಟ ನನ್ನ ಯಕ್ಷಬದುಕಿನಲ್ಲಿ ಮೈಲಿಗಲ್ಲಾಗಲಿದೆ. ನಿಮ್ಮ ಅಭಿಮಾನ ಪ್ರೋತ್ಸಾಹ ಮುಂದೆಯೂ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ಈ ಅವಧಿಯಲ್ಲಿ ನನ್ನದೇ ಆದ ಟ್ರಸ್ಟ್ ನ ಚಟುವಟಿಕೆಗಳಿಗೆ ಒಂದಷ್ಟು ಸಮಯ ಕೊಡಲೂ ಅವಕಾಶವಾಗಿದೆ. ಈ ಸಂದರ್ಭ ನಮ್ಮ ಟ್ರಸ್ಟ್ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ. ಕಳೆದ ಮಾಸಿಕದಲ್ಲಿ ಪ್ರದರ್ಶನಗೊಂಡ ಮಾಳವಿಕಾಗ್ನಿಮಿತ್ರ ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ಪೂರ್ಣ ಯಕ್ಷಗಾನ ಬಿಡುಗಡೆಯಾಗುವುದಲ್ಲದೇ, ಆಂಗ್ಲ ಭಾಷೆಯಲ್ಲಿ ಪಿಕ್ಟೋರಿಯಲ್ ರೂಪದಲ್ಲಿ ಪ್ರಸ್ತುತ ಪಡಿಸಲಿದ್ದೇವೆ. ಈ ಮೂಲಕ ಈ ಆಖ್ಯಾನ ಕನ್ನಡ ಪ್ರೇಕ್ಷಕರಷ್ಟೇ ಅಲ್ಲದೆ, ಜಾಗತಿಕವಾಗಿ ಕಾಳಿದಾಸನ ಮಹಾಕಾವ್ಯ ಕಥಾ ನಿರೂಪಣೆಯ ಮೂಲಕ ಬಿತ್ತರವಾಗಲಿದೆ. ಇದು ಡಿಜಿಟಲ್ ಮಾಧ್ಯಮ ಹಾಗೂ ತಾಂತ್ರಿಕತೆ ಕಲ್ಪಿಸಿದ ಅವಕಾಶ. ಕಥಾ ನಿರೂಪಣೆಯ ಜೊತೆಗೆ ಯಕ್ಷಗಾನದ ಭಾಗಗಳನ್ನು ಬಿಟ್ಸ್ ಮತ್ತು ಪೀಸ್ ಗಳಲ್ಲಿ ಸೇರ್ಪಡೆಗೊಳಿಸುವುದರಿಂದ ವೀಕ್ಷಕರನ್ನು ಮತ್ತಷ್ಟು ಸೆಳೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಶೀಘ್ರದಲ್ಲಿ ಮಾಳವಿಕೆಯ ಹೊಸರೂಪ ನಿಮ್ಮ ಮುಂದೆ ಬರಲಿದೆ. ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ. ಪ್ರೀತಿ ಇರಲಿ…


Board room July 2022



ಮಾನಸಿಕವಾದ ಸಂತೋಷ ನೆಮ್ಮದಿಯೇ ಸುಖ ಜೀವನದ ಸಂಕೇತ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಕೀರ್ತಿ ತಂದ ಸಾಲಿಗ್ರಾಮ ಮೇಳಕ್ಕೆ ವಿದಾಯ ಹೇಳಿ, ನನ್ನ ಕಲಾಸೇವೆಯನ್ನು ಮಂದಾರ್ತಿ ಮೇಳದಲ್ಲಿ ಮುಂದುವರೆಸುವ ನನ್ನ ತೀರ್ಮಾನದ ಕುರಿತು ನನ್ನ ಜನರು ಅಂದರೆ ನನ್ನ ಅಭಿಮಾನಿಗಳು ತುಂಬ ಬೇಸರ ವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂಬುದಾಗಿ ಹೇಳುತ್ತಿದ್ದಾರೆ. ಕೋರೋನ ಬಿಕ್ಕಟ್ಟಿನ ನಂತರ ಮೇಳಗಳಿಗೆ ದೊರಕುವ ಆಟಗಳು ಕಡಿಮೆಯಾಗುತ್ತಾ ಬಂದವು, ಕೌಟುಂಬಿಕ ಹಾಗೂ ಆರ್ಥಿಕ ಭದ್ರತೆಯನ್ನು ಆದ್ಯತೆಯನ್ನಾಗಿಟ್ಟುಕೊಂಡು ಮಂದಾರ್ತಿ ಮೇಳದಲ್ಲಿ

ತಿರುಗಾಟ ನಡೆಸುವ ನಿಧಾರ್ರಕ್ಕೆ ಬಂದಿದ್ದೇನೆ. ಅದಲ್ಲದೆ, ಮೇಳದ ಸಂಗಡಿಗರೊAದಿಗಾಗಲೀ, ಯಜಮಾನರೊಂದಿಗಾಗಲೀ ಯಾವುದೇ ಮನಸ್ತಾಪಗಳಿಲ್ಲ. ಈ ಸಂದರ್ಭದಲ್ಲಿ ಬೇಡಿಕೆ ಗಳಿಸುವಂತಹಾ ಕಾಲದಲ್ಲಿ ಕಲಾವಿದನೊಬ್ಬ ಟೆಂಟ್ ಮೇಳವನ್ನು ತ್ಯಜಿಸುವುದು ಸೂಕ್ತವಲ್ಲ, ಮಂದಾರ್ತಿ ಮೇಳದಲ್ಲಿ ಗುರುತಿಸಿಕೊಳ್ಳುವ ಅವಕಾಶ ಕಡಿಮೆ ಇಂತಹ ಮಾತುಗಳು ಬಹಳಷ್ಟು ಕೇಳಿ ಬಂತು. ಆದರೆ ಆ ಅಭಿಪ್ರಾಯಗಳು ನಿಜವಲ್ಲ ಎನ್ನುವುದು ನನ್ನ ಭಾವನೆ. ಪೌರಾಣಿಕ ಪ್ರಸಂಗಗಳಳಲ್ಲೇ ಕಲಾವಿದನೊಬ್ಬ ತನ್ನ ಸಾಮರ್ಥ್ಯವನ್ನು ತೋರಿಸಿಕೊಳ್ಳಬಹುದಾದ ವಿಪುಲ ಅವಕಾಶಗಳಿವೆ. ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಖ್ಯಾತಿ ಹಾಗೂ ಒಬ್ಬ ಕಲಾವಿದನ ಬೆಳವಣಿಗೆ ನಿಂತಿದೆ. ಈ ಅರ್ಥದಲ್ಲಿ ಮಂದಾರ್ತಿ ಮೇಳದಲ್ಲಿ ನನ್ನ ಬೆಳವಣಿಗೆ ಖಂಡಿತ ಕುಂಠಿತವಾಗಲಾರದು. ಸಂತೋಷ, ನೆಮ್ಮದಿ ಎಂದರೆ ಸಂಪಾದನೆ, ಹಾಗೂ ಜಾಗಕ್ಕೆ ಸಂಬAಧಿಸಿದ್ದಲ್ಲ. ಅದು ಮನಸಿಗೆ ಸಂಬAಧಿಸಿದ್ದು. ಎಲ್ಲಿದ್ದರೂನಮ್ಮ ಸ್ಥಿತಿಗತಿಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರಲ್ಲಿ ಜೀವನದ

ಸಂತೋಷ ಇದೆ. ಹಾಗಾಗಿ ಮಂದಾರ್ತಿ ಮೇಳದ ಕಲಾತಿರುಗಾಟ ನನ್ನ ಯಕ್ಷಬದುಕಿನಲ್ಲಿ ಮೈಲಿಗಲ್ಲಾಗಲಿದೆ. ನಿಮ್ಮ ಅಭಿಮಾನ ಪ್ರೋತ್ಸಾಹ ಮುಂದೆಯೂ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ಈ ಅವಧಿಯಲ್ಲಿ ನನ್ನದೇ ಆದ ಟ್ರಸ್ಟ್ ನ ಚಟುವಟಿಕೆಗಳಿಗೆ ಒಂದಷ್ಟು ಸಮಯ ಕೊಡಲೂ ಅವಕಾಶವಾಗಿದೆ. ಈ ಸಂದರ್ಭ ನಮ್ಮ ಟ್ರಸ್ಟ್ ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ. ಕಳೆದ ಮಾಸಿಕದಲ್ಲಿ ಪ್ರದರ್ಶನಗೊಂಡ ಮಾಳವಿಕಾಗ್ನಿಮಿತ್ರ ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ಪೂರ್ಣ ಯಕ್ಷಗಾನ ಬಿಡುಗಡೆಯಾಗುವುದಲ್ಲದೇ, ಆಂಗ್ಲ ಭಾಷೆಯಲ್ಲಿ ಪಿಕ್ಟೋರಿಯಲ್ ರೂಪದಲ್ಲಿ ಪ್ರಸ್ತುತ ಪಡಿಸಲಿದ್ದೇವೆ. ಈ ಮೂಲಕ ಈ ಆಖ್ಯಾನ ಕನ್ನಡ ಪ್ರೇಕ್ಷಕರಷ್ಟೇ ಅಲ್ಲದೆ, ಜಾಗತಿಕವಾಗಿ ಕಾಳಿದಾಸನ ಮಹಾಕಾವ್ಯ ಕಥಾ ನಿರೂಪಣೆಯ ಮೂಲಕ ಬಿತ್ತರವಾಗಲಿದೆ. ಇದು ಡಿಜಿಟಲ್ ಮಾಧ್ಯಮ ಹಾಗೂ ತಾಂತ್ರಿಕತೆ ಕಲ್ಪಿಸಿದ ಅವಕಾಶ. ಕಥಾ ನಿರೂಪಣೆಯ ಜೊತೆಗೆ ಯಕ್ಷಗಾನದ ಭಾಗಗಳನ್ನು ಬಿಟ್ಸ್ ಮತ್ತು ಪೀಸ್ ಗಳಲ್ಲಿ ಸೇರ್ಪಡೆಗೊಳಿಸುವುದರಿಂದ ವೀಕ್ಷಕರನ್ನು ಮತ್ತಷ್ಟು ಸೆಳೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಶೀಘ್ರದಲ್ಲಿ ಮಾಳವಿಕೆಯ ಹೊಸರೂಪ ನಿಮ್ಮ ಮುಂದೆ ಬರಲಿದೆ. ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ. ಪ್ರೀತಿ ಇರಲಿ…


Board room August 2022


ಆತ್ಮೀಯರೇ,

ಇದೀಗ ನನ್ನ ಯಕ್ಷ ಬದುಕಿನ ೧೯ ವರ್ಷಗಳನ್ನು ಪೂರೈಸಿ, ಇಪ್ಪತ್ತನೇ ವರುಷದ ತಿರುಗಾಟದ ಹುಮ್ಮಸ್ಸಿನಲ್ಲಿದ್ದೇನೆ. ಶ್ರೀ ಕಿಶನ್ ಹೆಗ್ಡೆಯವÀರು ಆಶ್ರಯ ಕೊಟ್ಟ ಶ್ರೀ ಸಾಲಿಗ್ರಾಮ ಮೇಳದ ಅನುಭವಗಳ ಸ್ಮರಣೆಯೊಂದಿಗೆ, ಶ್ರೀ ಕ್ಷೇತ್ರ ಮಂದಾರ್ತಿ ಮೇಳದಲ್ಲಿ ನನ್ನ ಯಕ್ಷ ಸೇವೆ ಮುಂದುವರೆಯಲಿದೆ. ಇದು ಬದುಕಿನ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುವುದೇನಲ್ಲ. ಆದರೆ ಅಭಿಮಾನಿಗಳ ಮೂಟೆ ಮೂಟೆ ಪ್ರೀತಿ ಅಭಿಮಾನ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಯಾಕೀ ಮಾತು ಎಂದರೆ ಮುಂದಿಗೂ ನನ್ನನ್ನು ಬೆಳೆಸಬೇಕಾದವರು ಯಕ್ಷಾಭಿಮಾನಿಗಳಾದ ನೀವೇ. ಬದುಕಿನ ಕೊಂಚ ಭಾಗವನ್ನು 

ಕಲಾಸೇವೆಗೆ ಮರಳಿ ಕೊಡುವ ಅಪೇಕ್ಷೆಯಿಂದ ಪ್ರಾರಂಭವಾದ ನಾದ ನೂಪುರ ಟ್ರಸ್ಟ್ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ನಾಲ್ಕೆöÊದು ಚಟುವಟಿಕೆಗಳನ್ನು ಬೆನ್ನೇರಿಸಿಕೊಂಡು ತನ್ನ ಪಯಣ ಮುಂದುವರಿಸಿದೆ. ಅನುಭವಿ ಬರಹಗಾರರ ಪತ್ರಿಕಾ ತಂಡ ನಾದನೂಪುರ ಪತ್ರಿಕೆಯನ್ನು ಬೆಳೆಸುತ್ತಿದ್ದರೆ, ಸ್ನೇಹಿತ ಕಲಾವಿದರ ಬಳಗ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ಇದರಾಚೆಗೆ ಇನ್ನಷ್ಟು ಯೋಜನೆಗಳು ಜೀವ ತಳೆಯುತ್ತಿವೆ. ಈ ಎಲ್ಲ ಪ್ರಯತ್ನಗಳ ನಡುವೆ ೨೦ ವಸಂತಗಳನ್ನು ಕಂಡ ಯಕ್ಷಬದುಕಿನ ಈ ಸಂಭ್ರಮವನ್ನು ಮುಂಬೈನ ಅಂಧೇರಿಯಲ್ಲಿ ಆಚರಿಸಿಕೊಳ್ಳಲಿದ್ದೇನೆ. ಅಂಧೇರಿಯಲ್ಲಿ ನೆಲೆಸಿರುವಂತಹಾ, ಯಕ್ಷಪ್ರೇಮಿಗಳು, ನನ್ನ ಸಮುದಾಯದವರು, ಅಲ್ಲಿ ಬೃಹತ್ ಮಟ್ಟದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯೊAದು ನನ್ನ ಕಲಾಸೇವೆಯನ್ನು ಗುರುತಿಸಿ ಈ ಸನ್ಮಾನಕ್ಕೆ ನನ್ನನ್ನು ಭಾಜನನನ್ನಾಗಿಸಿದ್ದಾರೆ. ಅವರ ಪ್ರೀತಿಗೆ ಅಭಿಮಾನಕ್ಕೆ ನಾನು ಅಭಾರಿ. ಶ್ರೀ ಅಶೋಕ್ ಸುವರ್ಣರವರ ಮುತುವರ್ಜಿಯಿಂದ ಮೊಗವೀರ ವ್ಯವಸ್ಥಾಪಕ ಮಂಡಳಿಯವರು ನನ್ನ ಕಲಾಸೇವೆಯನ್ನು ಗುರುತಿನಿದೆ ಆಗಸ್ಟ್ ಏಳರಂದು ನನ್ನನ್ನು ಗೌರವಿಸಲಿದ್ದಾರೆ. ನನ್ನ ಕಲಾಸೇವೆಯನ್ನು ಗುರುತಿಸಿ ಸನ್ಮಾನಿಸಲಿರುವ ಈ ಸಂಘಟನೆಯ ಬಗ್ಗೆ ನಾನಿಲ್ಲಿ ಹೇಳಲೇ ಬೇಕಿದೆ. ಮುಂಬೈ ಮಹಾನಗರದಲ್ಲಿ ಕೇಂದ್ರ

ಕಛೇರಿಯನ್ನು ಹೊಂದಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಗೆ  ೧೨೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಆಗಸ್ಟ್ ೦೯ ೧೯೦೨ ರಲ್ಲಿ ಪ್ರಾರಂಭವಾದ ಸಂಸ್ಥೆಯು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕಲ್ಯಾಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರವಾದ ಸೇವೆ ಸಲ್ಲಿಸುತ್ತಾ ಬಂದಿದೆ. (ಸಂಸ್ಥೆಯ ಕುರಿತ ಹೆಚ್ಚಿನ ಮಾಹಿತಿ ಯಕ್ಷ ಸಂಪನ್ಮೂಲ ಅಂಕಣದಲ್ಲಿ ನೀಡಲಾಗಿದೆ). ಸಾಂಸ್ಕೃತಿಕವಾಗಿ, ಅದರಲ್ಲೂ ಯಕ್ಷಗಾನ ಕ್ಷೇತ್ರಕ್ಕೆ ಈ ಸಂಘಟನೆ ನೀಡಿರುವ ಕೊಡುಗೆ ಅನನ್ಯ. ಇದುವರೆಗೂ ಸುಮಾರು ಐವತ್ತಕ್ಕೂ ಮಿಕ್ಕಿ ಅರ್ಹ ಕಲಾವಿದರನ್ನು ಗುರುತಿಸಿ ಈ ಮಂಡಳಿಯ ಮೂಲಕ ಸನ್ಮಾನಿಸಲಾಗಿದೆ. ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ ನೆರವು ನೀಡುವುದು, ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಪ್ರೋತ್ಸಾಹ ಧನ ನೀಡುವುದು, ಮೊದಲಾದ ಕಾರ್ಯಗಳಿಂದ ಅತೀ ಹೆಚ್ಚು ಜನಪ್ರಿಯವಾಗಿರುವ ಸಂಘಟನೆಯಿದು. ಈ ಸಂಸ್ಥೆಯ ಇನ್ನೊಂದು ಹಿರಿಮೆಯೆಂದರೆ ಇದು ೨೦೧೨ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಸಮಾಜ ಸೇವಾ ವಿಭಾಗದಲ್ಲಿ ಪಡೆದುಕೊಂಡಿರುವುದು. ಅದೇ ಹಿನ್ನಲೆಯಲ್ಲಿ ಈ ವರ್ಷ ಮಂಡಳಿಯ ಸನ್ಮಾನಕ್ಕೆ ನಾನು ಪಾತ್ರನಾಗಿರುವುದು ನನಗೆ ಹೆಮ್ಮೆಯ ಸಂಗತಿ. ಇದೇ ಸಂದರ್ಭ, ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಸಾಂಸ್ಕೃತಿಕ ಆಶ್ರಯದಲ್ಲಿ ಅಮೃತೇಶ್ವರಿ ಪ್ರವಾಸಿ ಮೇಳ ಕೋಟ ಹಾಗು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಜಂಟಿಯಾಗಿ ಶ್ವೇತ ಕುಮಾರ ಚರಿತೆ ಎಂಬ ಕಥಾನಕವನ್ನು ದಿನಾಂಕ ೦೭-೦೮-೨೦೨೨ ರಂದು ಅಂಧೇರಿಯ ಶಾಲಿನಿ ಜಿ ಶಂಕರ ಕನ್ವೆನ್ಷನಲ್ ಹಾಲ್ ನಲ್ಲಿ ಸಂಜೆ ನಾಲ್ಕು ಗಂಟೆಗೆ ಪ್ರದರ್ಶಿಸಲಿದೆ. ಕರಾವಳಿಯಾಚೆ ದಾಪುಗಾಲಿಟ್ಟಿರುವ ನಾದನೂಪುರ ಯಕ್ಷೆÆÃತ್ಥಾನ ಟ್ರಸ್ಟ್ನ ಚೊಚ್ಚಲ ಕಾರ್ಯಕ್ರಮ ಇದಾಗಿದೆ. ನಾದನೂಪುರ ಟ್ರಸ್ಟ್ನ ಇನ್ನಷ್ಟು ದಾಖಲಾರ್ಹ ಕಾರ್ಯಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.

ಮತ್ತೆ ಸಿಗೋಣ, ನಿಮ್ಮವನೆ

ಗೋವಿಂದ ವಂಡಾರು


Board room October -2022


ಬೋರ್ಡ್ ರೂಂ

ಆತ್ಮೀಯರೇ,

ನಮ್ಮ ಸಕಲ ಓದುಗರಿಗೆ ಶರನ್ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ಅಕ್ಟೋಬರ್ ಕೊನೆಯ ವಾರ ಅಥವ ನವಂಬರ್ ತಿಂಗಳಿನಲ್ಲಿ ಯಾವ ಮೇಳಗಳಲ್ಲಿ ಯಾವ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಯಾರು ಎಲ್ಲಿಗೆ ಸೇರ್ಪಡೆಯಾಗಿದ್ದಾರೆ, ಎಲ್ಲಿಂದ ನಿರ್ಗಮಿಸುತ್ತಿದ್ದಾರೆ ಇವೆಲ್ಲ ವಿವರಗಳು ಹೊರ ಬೀಳುತ್ತವೆ. ಸಾಮಾನ್ಯವಾಗಿ ಕಲಾವಿದರಿಗೆ ಮೇಳದ ಜೊತೆಗಿನ ಒಪ್ಪಂದ ಹಿಂದಿ£

ವರ್ಷವೇ ಮೇಳ ಹೊರಟಾಗ ನಿಗದಿಯಾಗಿರುತ್ತದೆ. ಕಲಾವಿದನ ಸಂಬಳ, ಮೇಳದ ನಿಯಮಗಳು ಇವೆಲ್ಲಕ್ಕೂ ಕಲಾವಿದ ಬದ್ಧನಾಗಿರಬೇಕಾಗುತ್ತದೆ. ಮೇಳದ ಪಟ್ಟಿ ಹೊರ ಬೀಳುವ ಸಂದರ್ಭ ಪ್ರೇಕ್ಷಕ ವಲಯದಲ್ಲಿ ಕಲಾವಿದರ ಬದಲಾವಣೆಯ ಬಗ್ಗೆ ಕುತೂಹಲ, ಊಹಾಪೋಹ, ಚರ್ಚೆಗಳಾಗುವುದು ಸರ್ವೇ ಸಾಮಾನ್ಯ. ಇದು ಕಲಾವಲಯದ ಸಹಜ ಪ್ರಕ್ರಿಯೆ. ಈ ಬದಲಾವಣೆಯ ಸಂದರ್ಭದಲ್ಲಿ ಕಲಾವಿದ ಎದುರಿಸಬೇಕಾದ ಸನ್ನಿವೇಶ ಹಾಗೂ ಅದನ್ನು ನಿಭಾಯಿಸಬೇಕಾದ ಮಾನಸಿಕ ಸ್ಥಿತಿಯನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡಿದ್ದೇನೆ. 

ಸಾಮಾನ್ಯವಾಗಿ ಇತ್ತಿಚಿನ ವ್ಯವಸ್ಥೆ ಹೇಗಿದೆಯೆಂದರೆ, ಮೇಳದಲ್ಲಿರುವ ಕಲಾವಿದರ ಮೇಲೆ ಪ್ರಸಂಗ ಹಾಗೂ ಪಾತ್ರಗಳನ್ನು ರೂಪಿಸುವ  ಸ್ಥಿತಿ ಇದೆ. ಅದರಲ್ಲೂ ಮುಖ್ಯ ಕೆಲವು ಪಾತ್ರಧಾರಿಗಳನ್ನು ಗಮನಿಸಿಯೇ ಪ್ರಸಂಗ ಕಥೆ ರೂಪುಗೊಳ್ಳುತ್ತದೆ. ಕಲಾವಿದ ಮೇಳ ಬದಲಾವಣೆ ಮಾಡಿದಾಗ ಪೌರಾಣಿಕ ಪ್ರದರ್ಶನಗಳಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ. ಆದರೆ ಕಾಲ್ಪನಿಕ ಪ್ರಸಂಗಗಳಲ್ಲಿ ಒಂದು ಪಾತ್ರವನ್ನು ಒಬ್ಬ ಕಲಾವಿದ ನಿರ್ವಹಿಸುತ್ತಿದ್ದರೆ ಅದೇ ಪಾತ್ರವನ್ನು ಬೇರೆ ಕಲಾವಿದ ನಿರ್ವಹಿಸಿದಾಗ ಕೆಲವೊಮ್ಮೆ ಪ್ರೇಕ್ಷಕರು ಹೋಲಿಕೆ ಮಾಡಿ ನೋಡುವುದಿದೆ. ಹಿಂದಿನ ಕಲಾವಿದನ ಸ್ಥಾನದಲ್ಲಿ ಹೊಸ ಕಲಾವಿದನ ಪಾತ್ರ ನಿರ್ವಹಣೆ ಕೆಲವೊಮ್ಮೆ ಸ್ವಿಕರಿಸಲ್ಪಡುತ್ತೆ, ಕೆಲವೊಮ್ಮೆ ಇಲ್ಲ.

ವೈಯುಕ್ತಿವಾಗಿ ಮೇಳ ಬದಲಾಯಿಸಿದಾಗ ಕಲಾವಿದನಿಗೆ ಸವಾಲುಗಳೆಂದರೆ ಹೊಸ ಮೇಳದಲ್ಲಿ ಅಲ್ಲಿನ ರಂಗ ನಡೆ,

 ಪ್ರಸಂಗ ಕ್ರಮ ಸಹಕಲಾವಿದರೊಂದಿಗೆ, ಪ್ರಸಂಗಕರ್ತ, ನಿರ್ದೇಶಕ, ಭಾಗವತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ಪ್ರಯೋಜನವೆಂದರೆ, ಹೊಸ ಕಲಿಕೆಗಳಿಗೆ ಅವಕಾಶವಾಗುತ್ತದೆ. ಕಲಾವಿದನ ಅನುಭವ ವಿಸ್ತಾರವಾಗ್ತಾ ಹೋಗುತ್ತದೆ. ಕಲಾವಿದನ ಮೇಲೆ ವೈಯುಕ್ತಿಕ ಅಭಿಮಾನ ಯಾವತ್ತಿಗೂ ಕಲಾವಿದನಿಗೆ ತೊಂದರೆಯೇ. ಬೇಡಿಕೆಯ ಕಲಾವಿದ ಮೇಳ ಬಿಟ್ಟಾಗ ಕಲಾವಿದ ಮೇಲೋ ಮೇಳದ ಮೇಲೋ ಅಪಪ್ರಚಾರ ಮಾಡುವುದು ಇಂತಹ ಘಟನೆಗಳು ಅಭಿಮಾನಿಗಳಿಂದ ನಡೆದುಬಿಡುತ್ತವೆ. ಅಭಿಮಾನ ಹೆಚ್ಚಾದಾಗ ಕಲಾವಿದನ ತಪ್ಪುಗಳನ್ನು ಗುರುತಿಸಲು ಮುಂದಾಗುವುದಿಲ್ಲ. ಕಲೆ ಹಾಗೂ ಮೇಳದ ಮೇಲಿನ ಅಭಿಮಾನ ಒಳ್ಳೆಯದು. ಅಭಿಮಾನ ಕಲಾವಿದನ ಬೆಳವಣಿಗೆಗೆ ಅನುಕೂಲವಾಗುವಂತಿರಬೇಕು. ಮೇಳದಿಂದ ಭಾಗವತ ಅಥವಾ ವೇಷಧಾರಿ ಬದಲಾವಣೆಯಾದಾಗ ಮೇಳ ಮುನ್ನಡೆಸುವವರನ್ನು, ಕಲಾವಿದರನ್ನು, ವೈಯುಕ್ತಿಯವಾಗಿ ಟೀಕೆ ಮಾಡದೇ ಆವೇಶ, ಆಕ್ರೋಶದ ಮಾತುಗಳನ್ನಾಡದೇ ಕಲಾವಿದನದೂ ಬದುಕಿಗಾಗಿ ದುಡಿಮೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸಬೇಕು ಹಾಗೂ ಅದರ ಬದಲು ಕಲಾವಿದನ ಸಾಧನೆ ಕೃತಿಗೆ ಬೆಂಬಲ ಕೈಜೋಡಿಸುವಂತಹಾ ಕೆಲಸ ನಿಜವಾದ ಕಲಾಭಿಮಾನಿಯಿಂದ ಆಗಬೇಕಿದೆ. ಎಲ್ಲ ಮೇಳಗಳ ಮುಂದಿನ ಆರು ತಿಂಗಳ ತಿರುಗಾಟ ಸುಖಪ್ರದವಾಗಿರಲಿ ಎಂದು ಆಶಿಸ್ತೇನೆ. ನಮಸ್ಕಾರ- ಗೋವಿಂದ ವಂಡಾರು


Board room November 2022


ಬೋರ್ಡ್ ರೂಂ

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಯಕ್ಷಗಾನವು ಕನ್ನಡಮ್ಮನನ್ನು ಹೊತ್ತು ಮೆರೆಸುವ ಕಲೆ ಎಂದರೆ ತಪ್ಪಿಲ್ಲ. ಸಮೃದ್ಧ ಸಾಹಿತ್ಯ ಭಂಡಾರವನ್ನು ಗರ್ಭೀಕರಿಸಿಕೊಂಡಿರುವ ಯಕ್ಷಗಾನ ಕನ್ನಡ ಮಣ್ಣಿನಲ್ಲಿ ವೈಭವದಿಂದ ಮೆರೆಯುತ್ತಿರುವ ಕಲೆ. ಆದರೆ ಕಳೆದರಡು ಮೂರು ವರ್ಷಗಳಲ್ಲಿ ಕೊರೊನಾ ಕರಿಛಾಯೆ ಯಕ್ಷಗಾನವನ್ನು ಆತಂಕವಾಗಿ ಕಾಡಿತ್ತು. ಇನ್ನೇನು ಯಕ್ಷಗಾನದ ಭವಿಷ್ಯ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕಳೆದೆರಡು ವರ್ಷಗಳಲ್ಲಿ ನಿರೀಕ್ಷೆಯನ್ನೂ ಮೀರಿ ಫೀನಿಕ್ಸ್ ಪಕ್ಷಿಯಂತೆ ಅತೀವೇಗದಲ್ಲಿ ಚೇತರಿಸಿಕೊಂಡ ಕಲೆ ಯಕ್ಷಗಾನ

ಎನ್ನುವುದು ಸತ್ಯ. ಅದಕ್ಕೆ ಸಾಕ್ಷಿ ಎಂಬAತೆ ಮೇಳದ ತಿರುಗಾಟಗಳು ನಿಂತ ಬಳಿಕ ಈ ಮಳೆಗಾಲದ ಅವಧಿಯಲ್ಲಿ ಯಾವುದೇ ಕಲಾವಿದರು ಕೆಲಸವಿಲ್ಲದೆ ಖಾಲಿ ಕೂತ ದಿನಗಳೇ ಅಪರೂಪವಾಗಿತ್ತು. ಒಂದಿಬ್ಬರು ಸಹವರ್ತಿಗಳೇ ಹೇಳಿದ ಹಾಗೆ ನಾಟಕ ಹಾಗೂ ಇತರ ರಂಗಭೂಮಿ ಪ್ರದರ್ಶನಗಳಿಗಿಂತ ಈ ಬಾರಿ ಹೆಚ್ಚಿನ ಬೇಡಿಕೆ ಇದ್ದದ್ದು ಯಕ್ಷಗಾನ ಪ್ರದರ್ಶನಕ್ಕೆ. ಬೆಂಗಳೂರು ಮುಂಬೈ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಉಡುಪಿ ಕುಂದಾಪುರ, ಸಾಗರ ಉತ್ತರ ಕನ್ನಡದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಯಕ್ಷಗಾನ ಪ್ರದರ್ಶನಗಳು ಆಯೋಜನೆಯಾಗಿವೆ. ಇದಕ್ಕೆ ಕಾರಣ ಯಕ್ಷಗಾನ ಕ್ಲಾಸ್ ಕಲೆಯಾಗಿಯೂ, ಮಾಸ್ ಕಲೆಯಾಗಿಯೂ ಎಲ್ಲಾ ವರ್ಗದ ಜನರನ್ನು ರಂಜಿಸುತ್ತಿರುವುದು. ಯಕ್ಷಗಾನವನ್ನು ಜನ ಅಪ್ಪಿಕೊಂಡಿರುವ ರೀತಿಯೂ, ಹೊಸ ಹೊಸ

ಪ್ರಯೋಗಗಳಾಗುತ್ತಿರುವುದು ಎರಡೂ ಸ್ವಾಗತಾರ್ಹವೇ. ಇಂತಹ ಯಕ್ಷಗಾನ ಉತ್ತುಂಗ ಸ್ಥಿತಿಯಲ್ಲಿರುವಾಗ ಅಲ್ಲೋ ಇಲ್ಲೋ ನಡುವೆ ಕಳಪೆ ಮನರಂಜನೆಯೂ ವೈಭವೀಕರಿಸುತ್ತದೆ. ಅಪಸವ್ಯಗಳು ಸೇರಿಕೊಳ್ಳುತ್ತವೆ. ಇದು ಕಲೆಯ ದೃಷ್ಟಿಯಿಂದ ಅಪಾಯಕಾರಿ ಎನಿಸಿದರೂ ಯಕ್ಷಗಾನವೆಂಬ ಜಾನಪದ ಕಲೆಯಲ್ಲಿ ಅಪರಾಧ ಎಂದು ಬಿಂಬಿಸುವ ನಡೆ ಸರಿಯಲ್ಲವೆಂದು ನನ್ನ ಭಾವನೆ. ರಂಗದಲ್ಲಿ ಪ್ರದರ್ಶನಗಳಲ್ಲಿ ಕಲಾವಿದನಿಂದ ಏನಾದರೂ ರಂಗದ ತಪ್ಪುಗಳಾದರೆ ಅದು ಕ್ಷಮ್ಯವೇ. ಏಕೆಂದರೆ ಕಲಾವಿದನ ಹಿನ್ನಲೆ ಹೆಚ್ಚಿನ ಬಾರಿ ಹಳ್ಳಿ ಸೊಗಡಿನ ಜೀವನಾನುಭವದ ಜಾನಪದ ಸಂಸ್ಕೃತಿ ಆಗಿರುತ್ತದೆಯೇ ಹೊರತು ಗ್ರಾಮ್ಯ ಕಲಾವಿದ ಪಾಂಡಿತ್ಯವನ್ನು ಅರೆದು ಕುಡಿದುಕೊಂಡು ಬಂದಿರುವುದಿಲ್ಲ. ಕಲೆಯಲ್ಲೇ ತೊಡಗಿಸಿ ಪಳಗಿ ಅನುಭವದ ಮೂಲಕ ರಂಗಜ್ಞಾನ ಗಳಿಸುತ್ತಾನೆ. ಈ ನೆಲೆಗಟ್ಟಿನಲ್ಲಿ ಯಕ್ಷಗಾನದಲ್ಲಿ ಏನೇ ಅಪಸವ್ಯ ಅಸಂಬಧ್ಧಗಳು ಅನಿಸಿದರೆ ಕಟು ಟೀಕೆ ಹರಿಯಬಿಡುವುದನ್ನು ತಪ್ಪಿಸಿ.. ಏಕೆಂದರೆ ಒಂದು ಕಾರ್ಯಕ್ರಮದ ಸಂಘಟನೆ ಹಾಗೂ ಸಂಯೋಜನೆಯ ಹಿಂದೆ, ಹೊಸ ಪ್ರಯೋಗ ಪ್ರಸಂಗಗಳ ನಿರ್ಮಾಣದ ಹಿಂದೆ ಅನೇಕ ಜನರ ಬೆವರಿರುತ್ತದೆ. ಅನೇಕ ಕಲಾವಿದರ ಹೊಟ್ಟೆ ಪಾಡಿರುತ್ತದೆ. ಕಟು ಟೀಕಾಕಾರರು ರಂಗದಲ್ಲಿ ಅವರಿಗೆ ಸರಿ ಕಾಣದ್ದನ್ನು ವೈಯುಕ್ತಿಕಾಗಿ ಬಂದು ಹೇಳಿ ಸರಿ ಮಾಡಿಸಬಹುದು. ಅದರೊಂದಿಗೆ ಕಲಾವಿದನೂ ತಪ್ಪನ್ನು ಸರಿ ಪಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಾದದು ಅನಿವಾರ್ಯ. ಎಲ್ಲಾ ಮೇಳಗಳ ಈ ವರ್ಷದ ತಿರುಗಾಟ ಸಂತೋಷದಾಯಕವಾಗಿರಲಿ ಎಂದು ಆಶಿಸ್ತೇನೆ. - ಗೋವಿಂದ ವಂಡಾರು

Board room December 2022


                                  ಬೋರ್ಡ್ ರೂಂ

ನವAಬರ್ ತಿಂಗಳಿನಲ್ಲಿ ನಾದನೂಪುರ ಯಕ್ಷೆÆÃತ್ಥಾನ ಟ್ರಸ್ಟ್, ಸೋಶಿಯಲ್ ಇನ್ಫಾçಸ್ಟçಕ್ಚರ್ ಡೆವಲಪ್‌ಮೆಂಟ್ ಸೊಸೈಟಿ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸಾಲಿಗ್ರಾಮದ ಸದಾನಂದ ರಂಗಮAಟಪದಲ್ಲಿ ನಡೆದ ಚಿನ್ನದ ಅಳಿಲು ಯಕ್ಷಗಾನ ಪ್ರಸಂಗ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಹೊಸ ಪ್ರಸಂಗವೊAದು ಮೊದಲ ಪ್ರಯೋಗದಲ್ಲೇ ಅಚ್ಚುಕಟ್ಟಾಗಿ ಪ್ರದರ್ಶನ ಕಾಣಬೇಕಾದರೆ ಇದಕ್ಕೆ ಸಾಮೂಹಿಕ ಪ್ರಯತ್ನ ಬೇಕಾಗುತ್ತದೆ. ಪ್ರಸಂಗದಲ್ಲಿ ಬರುವ ಹೆಚ್ಚಿನ ಪಾತ್ರಗಳಿಗೆ ರಂಗದಲ್ಲಿ ಕೆಲಸ ಕಡಿಮೆಯೇ ಇದ್ದರೂ

ಪ್ರತಿಯೊಬ್ಬರೂ ಅವರ ಪಾತ್ರಗಳನ್ನು ಶ್ರದ್ಧೆಯಿಂದ ಮಾಡಿದರೆ ಪ್ರಸಂಗದ ಸಂಪೂರ್ಣ ಪ್ರಸ್ತುತಿ ಸುಂದರವಾಗಿರುತ್ತದೆ ಎಂಬುದಕ್ಕೆ ಮೊನ್ನೆಯ ಪ್ರದರ್ಶನವೇ ಉದಾಹರಣೆ. ಸಣ್ಣ ಪಾತ್ರ‍್ರವಾದರೂ ಆ ಪಾತ್ರವನ್ನು ಮನಸ್ಪೂರ್ವಕವಾಗಿ ಮಾಡಬೇಕಾದ್ದು ಕಲಾವಿದನ ಕಲಾನಿಷ್ಠೆ. ಹಾಗಿಲ್ಲವಾದರೆ ಪ್ರಸಂಗ ಖಂಡಿತ ಗೆಲ್ಲಲು ಸಾಧ್ಯವಿಲ್ಲ. ಚಿನ್ನದ ಅಳಿಲು ಪ್ರಸಂಗದಲ್ಲಿ ಪ್ರತಿಭಾನ್ವಿತ ಕಲಾವಿದರಾದ ಹರೀಶ್ ಜಪ್ತಿಯವರಿಗೆ ಅಳಿಲು ಪಾತ್ರ ಎಂದು ನಿರ್ಧರಿಸಲಾಗಿತ್ತು. ಇದರ ಬಗ್ಗೆ ಅವರು ನನ್ನಲ್ಲಿ ವೈಯುಕ್ತಿಕವಾಗಿ ‘ನನಗೆ ಅಳಿಲಿನ ಪಾತ್ರವೇ’ ಎಂದು ಕೇಳಿ ಮುಖ ಮುದುಡಿಸಿಕೊಂಡಿದ್ದರು. ಆಗ ನಾನು ‘ಹೆಸರು ಚಿಕ್ಕದಷ್ಟೆ, ಆ ಪಾತ್ರದ ಮಹತ್ವ ಏನು ಎಂಬುದು ಪ್ರದರ್ಶನ ಕಂಡ ಮೇಲೆ ನಿಮಗೆ ಗೊತ್ತಾಗುತ್ತz’ೆ ಎಂದು ಹೇಳಿ ಒಪ್ಪಿಸಿದ್ದೆ. ನಂತರ ಆ ಪಾತ್ರಕ್ಕೆ ನಿರೀಕ್ಷೆಗೂ ಮೀರಿದ ಮೆಚ್ಚುಗೆ ವ್ಯಕ್ತವಾಗಿದ್ದು ನಿಜಕ್ಕೂ ಸಂತೋಷದಾಯಕ.. ಪ್ರಸಂಗ ಸಂಪೂರ್ಣ ಎಂದೆನಿಸಿಕೊಳ್ಳಬೇಕಾದರೆ, ಪದ್ಯದಲ್ಲೇ ಪೂರ್ತಿ ಕಥೆಯನ್ನು ಹೇಳಲಾಗುವುದಿಲ್ಲ, ಪದ್ಯ ಕಥೆಯ ಸ್ವಲ್ಪ ಭಾಗವನ್ನು ತಿಳಿಸಿದರೆ, ಉಳಿದ ಭಾಗವನ್ನು ಸಂಭಾಷಣೆಯಲ್ಲಿ ತುಂಬಿ ಕೊಡಬೇಕಾಗುತ್ತದೆ. ಆ ಮಟ್ಟಿಗೆ ಮೊನ್ನೆಯ ಪ್ರಸಂಗದಲ್ಲಿ ಭಾಗವಹಿಸಿದವರ ಪೌರಾಣಿಕ ಜ್ಞಾನ ಹಾಗೂ ಸನ್ನಿವೇಷಗಳನ್ನು ಪ್ರಸ್ತುತ ಪಡಿಸಿರುವ ರೀತಿ ಮೆಚ್ಚುವಂಥದ್ದು.

ಪ್ರತೀ ಪಾತ್ರವೂ ಕಲಾವಿದ ಪ್ರಬುದ್ಧ ಪೋಷಣೆಯಿಂದ ಉತ್ತಮವಾಗಿ ಮೂಡಿ ಬಂತು. ಹಿರಿಯರಾದ ಎಂಕೆ ರಮೇಶ್ ಆಚಾರ್, ಪ್ರೊ. ಎಸ್ ವಿ ಉದಯ್ ಕುಮಾರ್ ಶೆಟ್ಟಿ, ಕೆಪಿ ಹೆಗಡೆ, ರಾಜಶೇಖರ್ ಹೆಬ್ಬಾರ್‌ರವರ ಮಾರ್ಗದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯರ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಮಂಗಳೂರಿನ ಹರೀಶ್ ಅಮೈ ಮೊದಲಾದವರ ಸಹಕಾರ ಸ್ಮರಿಸಿಕೊಳ್ಳುವಂಥದ್ದು. ಇನ್ನು ನಮ್ಮ ಟಸ್ಟ್ ನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ಭಾಗವಹಿಸುವ ಮೂಡುಬೆಳ್ಳೆ ಚಂದ್ರಕಾAತ್ ರಾವ್ ಕಥೆಯ ಆಶಯವನ್ನು ಅರ್ಥೈಸಿಕೊಂಡು ರಂಗದಲ್ಲಿ ಪ್ರಸಂಗ ನಿರ್ದೇಶಿಸಬಲ್ಲ ಸಮರ್ಥರು. ಪ್ರತೀ ಪ್ರದರ್ಶನದಲ್ಲೂ ಅವರ ತೊಡಗಿಸಿಕೊಳ್ಳುವಿಕೆ ಹಾಗೂ ಪ್ರಸಂಗದ ಹಿಂದಿರುವ ಅವರ ಶ್ರಮವನ್ನು ಪರಿಗಣಿಸಿ ಟ್ರಸ್ಟ್ ವತಿಯಿಂದ ಕುಶಲ ರಂಗ ನಿದೇಶಕ ಎಂಬ ಅಭಿದಾನವನ್ನೂ ನೀಡಿ ಗೌರವಿಸಲಾಗಿದೆ. ಯಕ್ಷಗಾನ ಕಲೆಯಿಂದ ಅನೇಕ ಗೌರವ ಸನ್ಮಾನಗಳನ್ನು ನಾನು ಪಡೆದುಕೊಂಡಿದ್ದೇನೆ. ಜನರ ಪ್ರೀತಿ ಅಭಿಮಾನವನ್ನು ಪಡೆದುಕೊಂಡಿದ್ದೇನೆ. ಟ್ರಸ್ಟ್ ವತಿಯಿಂದ ಉತ್ತಮ ಕಲಾವಿದರನ್ನೂ ಗುರುತಿಸಬೇಕು ಎಂಬ ಹಂಬಲ ಈ ಮೂಲಕ ಈಡೇರುತ್ತಿದೆ. ನಾನು ಕಲಾವಿದನಾಗಿ ಇನ್ನೊಬ್ಬ ಕಲಾವಿದನಿಗೆ ಟ್ರಸ್ಟ್ ವತಿಯಿಂದ ನೀಡಲಾಗಿರುವ ಚೊಚ್ಚಲ ಗೌರವ ಇದು. ಮುಂದೆ ಇಂತಹ ಕಾರ್ಯಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕೆಂಬ ಕನಸು ನನ್ನದು. ಈ ಪತ್ರಿಕೆಯ ವಿನ್ಯಾಸದ ಅಂತಿಮ ಹಂತದಲ್ಲಿ ಯಕ್ಷ ದಿಗ್ಗಜ ಕುಂಬ್ಳೆ ಸುಂದರ್ ರಾವ್ ರವರು ಸ್ವರ್ಗಸ್ಥರಾದ ಕಹಿ ವಾರ್ತೆ ಬಂದು ತಲುಪಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ - ಗೋವಿಂದ ವಂಡಾರು.


From the Board Feb -2023


ಬೋರ್ಡ್ ರೂಂ

ನಮಸ್ಕಾರ ಓದುಗರೇ,

ಚೌಕಿಯೊಳಗಿನ ಒಂದು ನೋಟವನ್ನು ಕೊಡುವ ಪ್ರಯತ್ನ ಈ ಲೇಖನದಲ್ಲಿ. ಒಬ್ಬ ಕಲಾವಿದನಾದವನು ಕೇವಲ ಕಲಾವಿದನಾಗಿಯಷ್ಟೇ ಮೊದಲು ಒಂದು ಮೇಳಕ್ಕೆ ಸೇರಿಕೊಳ್ತಾನೆ. ಯಾವುದೇ ಕಲಾವಿದ ಮೊದಲು ಬಯಲಾಟ ಮೇಳಗಳಲ್ಲಿ ಕೋಡಂಗಿ ವೇಷ, ಬಾಲಗೋಪಾಲ ವೇಷಗಳಲ್ಲಿ ಪಳಗಿಯೇ ಸಾಧಾರಣ ಮಟ್ಟಿನ ವೇಷ ಮಾಡುವ ಹಂತಕ್ಕೆ ಏರಬೇಕಾಗುತ್ತದೆ. ಪ್ರತೀ ಕಲಾವಿದನಿಗೂ ಮೊದಲು ಗೆಜ್ಜೆ ಕಟ್ಟಿದ ಮೇಳ ಮಹತ್ವದ್ದಾಗಿರುತ್ತದೆ. ಯಾಕೆಂದರೆ ಹೆಚ್ಚಿನ ಕಲಿಕೆಗಳೂ ಅಲ್ಲೇ 


ನಡೆದಿರುತ್ತವೆ. ಪ್ರಥಮ ಬಾರಿಗೆ ನೂಪುರ ವಂದನೆ, ಗಣಪತಿ ವಂದನೆ, ಗುರುವಂದನೆಯ ನಂತರ ರಂಗಪ್ರವೇಶ, ಇದು ಯಕ್ಷಗಾನದ ಕಟ್ಟುಪಾಡು. (ನಾನು ಮೊದಲಿಗೆ ಗೆಜ್ಜೆ ಕಟ್ಟಿದ ಮೇಳ ಯಕ್ಷಗಾನದ ಭೀಷ್ಮ ಎಂದೆನಿಸಿಕೊAಡ ಮೂಡಲಕಟ್ಟೆ ಮುತ್ತಯ್ಯ ಹೆಗಡೆಯವರ ಯಜಮಾನಿಕತ್ವದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಾಲಾಡಿ). ಮೇಳದ ತಿರುಗಾಟದ ಅವಧಿಯಲ್ಲಿ ವಿವಿಧ ಪಾತ್ರಗಳಲ್ಲಿ ಹೆಜ್ಜೆಗಾರಿಕೆ ಮಾತುಗಾರಿಕೆಯಲ್ಲಿ ಪಳಗಿ ನಂತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಅವಕಾಶ ನೀಡುತ್ತಾರೆ, ಅದೂ ಪ್ರತಿಭೆಯನ್ನು ಗುರುತಿಸಿ. ಸ್ಥಾನದ ಮಾತು ನಂತರ. ಚೌಕಿಯೊಳಗಿನ ಸ್ಥಾನದ ವ್ಯವಸ್ಥೆ ಹೇಗೆಂದರೆ, ಪ್ರಧಾನ ಸ್ಥಾನ ಮೇಳದ ಭಾಗವತನಿಗೆ, ಎರಡನೆಯ ವೇಷಧಾರಿ ಎಂದರೆ ಕಥೆಯ ಮುಖ್ಯ ಪಾತ್ರವನ್ನು ನಿಭಾಯಿಸುವ ಅಷ್ಟೇ ಅಲ್ಲ, ದೀರ್ಘ ಅನುಭವ ಹೊಂದಿರುವ, ಎಲ್ಲಾ ಪ್ರಸಂಗಗಳ ಪಾತ್ರಗಳ ನಡೆಯನ್ನು ಬಲ್ಲ, ಸಹಕಲಾವಿದರ ಪ್ರತಿಭಾ ಸಾಮರ್ಥ್ಯಗಳನ್ನರಿತು ಪಾತ್ರ ಹಂಚುವ ಸಾಮರ್ಥ್ಯವುಳ್ಳ ಕಲಾವಿದ. ನಂತರ ಮೂರನೇ ವೇಷ ಪ್ರಮುಖ ಪಾತ್ರಗಳನ್ನು ಮಾಡಬಲ್ಲ ಪುಂಡು ವೇಷಧಾರಿ. ಉಳಿದ ಸ್ಥಾನಗಳು ಬೆಳೆಯುತ್ತಿರುವ ಕಲಾವಿದರಿಗೆ. ಇನ್ನು ಸ್ತಿçà ವೇಷದಲ್ಲೂ ಪ್ರಧಾನ ವೇಷ, ಎರಡನೇ ಸ್ತಿçà ವೇಷ ಹಾಗೂ ಪೀಠಿಕೆ ಸ್ತಿçà ವೇಷ ಎಂಬ ಸ್ಥಾನಗಳುಂಟು. ಸ್ಥಾನ ಮೇಲಕ್ಕೇರುವುದು ಕಲಾವಿದನಿಗೆ ಸಿಗುವ ಗೌರವವೂ ಹೌದು, ಅದರೊಂದಿಗೆ ಸಂಭಾವನೆಯೂ ಏರಿಕೆಯಾಗುತ್ತದೆ. ಜೊತೆಗೆ ಪ್ರಸಂಗದ ಪಾತ್ರ ನಿರ್ಧರಿಸುವ ಅಧಿಕಾರವನ್ನೂ ಆ ಸ್ಥಾನದ ವೇಷಧಾರಿಗಳು ಪಡೆದುಕೊಳ್ಳುತ್ತಾರೆ. ಆದರೆ ರಂಗದಲ್ಲಿ ಇಂತಹ ವ್ಯವಸ್ಥೆಗಳು ಪ್ರೇಕ್ಷಕನ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು. ಪ್ರೇಕ್ಷಕ ನೋಡಬರುವುದು, ಕಲಾವಿದನ ಪಾತ್ರನಿರ್ವಹಣೆ ಹಾಗೂ ಪ್ರದರ್ಶನವನ್ನು. ಪಾತ್ರದಲ್ಲಿ ಕಲಾವಿದನ ತೊಡಗಿಸಿಕೊಳ್ಳುವಿಕೆ ಹೇಗಿರುತ್ತದೋ ಅದರ ಮೇಲೆ ಮೆಚ್ಚುಗೆ, ಗುರುತಿಸುವಿಕೆ ಹೆಚ್ಚಾಗುತ್ತದೆ. ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ, ರಂಗದ ನಿರ್ವಹಣೆಯೇ ಜನಾನುರಾಗಕ್ಕೆ ಕಾರಣವಾಗುವಂಥದ್ದು. ಕಲಾವಿದನಾದವನಿಗೆ ಮೇಳದಲ್ಲಿ ಪ್ರತಿದಿನವೂ ಕಲಿಯುವಂಥದ್ದಿದೆ. ಆದರೆ ಚೌಕಿಯ ವಾತಾವರಣ ಎಂದಿಗೂ ಕಲಾವಿದನ ಬೆಳವಣಿಗೆಗೆ ಪೂರಕವಾಗುವಂತಿರಬೇಕು. ಅಲ್ಲಿ ಸಮಸ್ಯೆಗಳಾದಾಗ ಕೆಲವೊಮ್ಮೆ ಅದು ಪಾತ್ರದ ಮೇಲೆ ಪ್ರಭಾವ ಬೀರುವುದೂ ಇದೆ. ರಂಗ ನಿರ್ವಹಣೆ ಬಡವಾಗುತ್ತದೆ. ಇದಾಗಬಾರದು ಎಂಬ ಬದ್ಧತೆ ಮೇಳದ ಪ್ರತಿಯೊಬ್ಬ ಕಲಾವಿದನಲ್ಲೂ ಇರಬೇಕಾಗುತ್ತದೆ. ಹಿರಿಯ ಕಲಾವಿದರೂ ನಂತರದ ಕಲಾವಿದರನ್ನು ಬೆಳೆಸುವಲ್ಲಿ ಪೂರ್ವಾಗ್ರಹವಿಲ್ಲದೆ ಅವಕಾಶ ಮಾಡಿಕೊಡಬೇಕು. ಅದನ್ನು ಹೊರತುಪಡಿಸಿ ತಾನೊಬ್ಬನೇ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ಒಟ್ಟು ಮೇಳದ ಹಿತದೃಷ್ಠಿಯಿಂದ ಆರೋಗ್ಯಕರವಲ್ಲ. ಈ ದೂರದೃಷ್ಠಿತ್ವವನ್ನು ಹೊಂದಿರುವ ಯಜಮಾನರುಗಳಾದರೆ ಇಂತಹ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಇಲ್ಲದೇ ಹೋದರೆ ಕಲಾವಿದ ಬೇರೆ ಮೇಳದತ್ತ ಮುಖ ಮಾಡುವುದು ಸಹಜವೇ. ಕಲಾವಿದನಾದವನು ತನ್ನ ಸಮಸ್ಯೆಗಳೇನೇ ಇದ್ದರೂ ಅದನ್ನೆಲ್ಲ ಮರೆತು ರಂಗದಲ್ಲಿ ಜನರನ್ನು ರಂಜಿಸುವುದೇ ಅವನ ಮುಖ್ಯ ಉದ್ದೇಶ ಹಾಗೂ ಉತ್ತಮ ಕಲಾವಿದನ ಲಕ್ಷಣವೂ ಹೌದು. ಹಾಗಾಗಿ ಆತ ಎಲ್ಲೆ ಇದ್ದರೂ ಯಾವುದೇ ಮೇಳದಲ್ಲಿದ್ದರೂ ರಂಗದ ಹಿಂದಿನ ಎಲ್ಲ ವಿಷಮತೆಗಳನ್ನು ಮರೆತು ಪಾತ್ರನಿರ್ವಹಣೆಯಲ್ಲಿ ತನ್ನನ್ನು ತಾನು ಬೆಳೆಸಿಕೊಳ್ಳುವಲ್ಲಿ ಗಮನ ಹರಿಸಿದರೆ ಸಾಕು. ನಿಮ್ಮವನೇ, ಗೋವಿಂದ ವಂಡಾರು

#Govindavandaru

#Nadanoopura #newsletter #nyt #Yakshagana #Vandaru #Udupi


Board room by govinda Vandar- March 2023


ಬೋರ್ಡ್ ರೂಂ

ನಮಸ್ಕಾರ ಓದುಗರೇ,

ನಾನು ಕಂಡAತೆ ಯಕ್ಷಗಾನ ಸಮ್ಮೇಳನ: ಉಡುಪಿಯ ಎಂಜಿಎA ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊAಡಿತು ಹಾಗೂ ಮುಖ್ಯವಾಗಿ ಎರಡು ದಿನಗಳ ಕಾಲ ಇಡೀ ಮೈದಾನ ವರ್ಣಮಯವಾಗಿತ್ತು. ಯಕ್ಷಗಾನದ ಕೀರ್ತಿಶೇಷರ ಹೆಸರಿನ ವಿವಿಧ ವೇದಿಕೆಗಳಲ್ಲಿ ಹಲವು ಗೋಷ್ಟಿಗಳು, ಪ್ರದರ್ಶನ, ತಾಳಮದ್ದಳೆ, ಪರಿಕರ ತಯಾರಿಕೆ, ಮಳಿಗೆಗಳು, ಹಳೆಯ ಮಾದರಿಯ ವೇಷಭೂಷಗಳ ಪ್ರದರ್ಶನ ಹಾಗೂ ಮಾರಾಟ, ಯಕ್ಷಗಾನ ಕೃತಿಗಳ ಪ್ರದರ್ಶನ ಮಾರಾಟ, ಸಾರ್ವಜನಿಕರಿಗೆ

ಯಕ್ಷಗಾನ ವೇಷ ಮಾಡಿಕೊಂಡು ಸಂಭ್ರಮಿಸವ ಅವಕಾಶ, ೧೦೦ಕ್ಕೂ ಹೆಚ್ಚು ಅಗಲಿದ

 ಹಿರಿಯ ಯಕ್ಷಚೇತನಗಳ ಪರಿಚಯದೊಂದಿಗೆ ಭಾವಚಿತ್ರ ಪ್ರದರ್ಶನ ಇವೆಲ್ಲವೂ ಕಾರ್ಯಕ್ರಮವನ್ನು ಕಳೆಗಟ್ಟುವಂತೆ ಮಾಡಿದ್ದು ನಿಜ. ವೃತ್ತಿಪರ ಹವ್ಯಾಸಿ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ, ಸಹಕಲೆಗಳಾದ ದೊಡ್ಡಾಟ, ಹೂವಿನಕೋಲು, ತೊಗಲು ಗೊಂಬೆ ಪ್ರದರ್ಶನ, ಹೀಗೆ ಹತ್ತು ಹಲವು ವಿಶೇಷತೆಗಳ ಐತಿಹಾಸಿಕ ಸಂಭ್ರಮಕ್ಕೆ ಈ ಸಮ್ಮೇಳನ ಸಾಕ್ಷಿಯಾಯಿತು. ಅನೇಕರಿಗೆ ಬಡಗುತಿಟ್ಟಿನ ಯಕ್ಷಗಾನದ ಕಸೆ ಸೀರೆ ಹೇಗೆ ತಯಾರಾಗುತ್ತದೆ ಎಂಬುದು ತಿಳಿದಿಲ್ಲ. ಈ ಸಮ್ಮೇಳನದಲ್ಲಿ ಕಸೆ ಸೀರೆ ತಯಾರಿಸುವುದನ್ನು ಕಣ್ಣಾರೆ ನೋಡುವ ಅವಕಾಶ ದೊರಕಿತು. ವಿವಿಧ ಮೇಳಗಳ ಕಲಾವಿದರು ಪರಸ್ಪರ ಎದುರುಗೊಳ್ಳಲು, ವಿಚಾರಗಳನ್ನು ಹಂಚಿಕೊಳ್ಳಲು ಇದೊಂದು ಸಮರ್ಪಕ ಸಂದರ್ಭ ಹಾಗೂ ವೇದಿಕೆಯೂ ಆಯಿತು. ಯಕ್ಷಗಾನ ಕಲೆಯ ಮುಖ್ಯ ಭಾಗವಾಗಿರುವ ಕಲಾವಿದರಿಗೆ ಎರಡು ದಿನಗಳ ವಿವಿಧ ಗೋಷ್ಟಿಗಳಲ್ಲಿ ಭಾಗವಹಿಸಿ ವಿಷಯ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಮೇಳಗಳ ತಿರುಗಾಟದ ಸಮಯ ಆಗಿದ್ದರಿಂದ ಅರ್ಧ ಗಂಟೆಯೋ, ಒಂದು ಗಂಟೆಯೋ ಭಾಗವಹಿಸಿ ವಿಶೇಷಗಳತೆಗಳನ್ನು ಕಣ್ತುಂಬಿÀಕೊಳ್ಳುವAತಾಯಿತು. ಇದು ಪ್ರತಿ ಕಲಾವಿದನಿಗೆ ಎದುರಾದ ಮಿತಿ ಎಂದೆನ್ನಬಹುದು. ಆದರೆ ದೊಡ್ಡ ಕಾರ್ಯಕ್ರಮದ ಭಾಗವಾದ ಹೆಮ್ಮೆ ಪ್ರತಿಯೊಬ್ಬರದೂ. ಈ ನೆನಪನ್ನು ಸ್ಮರಣೀಯವಾಗಿಸಲೆಂದೇ ಅಕಾಡೆಮಿಯ ವತಿಯಿಂದ ಪ್ರತಿಯೊಬ್ಬ ಕಲಾವಿದನಿಗೂ ಪ್ರಮಾಣ ಪತ್ರವನ್ನು ನೀಡಲಾಗಿದೆ. ಜೊತೆಗೆ ಕಿರು ಲಗೇಜ್ ಬ್ಯಾಗ್, ಹಾಗೂ ಹಾಟ್ ಬಾಕ್ಸ್ ಕೂಡಾ ಅಕಾಡೆಮಿ ವತಿಯಿಂದ ಪ್ರತೀ ಕಲಾವಿದನಿಗೂ ನೀಡಲಾಗಿದೆ. ವಿಶೇಷ ಎಂದರೆ ಕಲಾವಿದರ ಆರೋಗ್ಯದ ಬಗ್ಗೆಯೂ ಕಾಳಜಿ ತೆಗೆದುಕೊಳ್ಳುವ ಕ್ರಮ ಕೈಗೊಂಡಿದ್ದು ಪ್ರಶಂಸನೀಯ. ಸಮ್ಮೇಳನಕ್ಕೆ ಹಾಜರಾದ ಕಲಾವಿದರ ಶ್ರವಣ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿತ್ತು. ಇದೊಂದು ಅಗತ್ಯವಾದ ಕಾರ್ಯಕ್ರಮ ಏಕೆಂದರೆ, ಪ್ರತಿದಿನ ಮೈಕ್ ನ ಅಧಿಕ ಸದ್ದಿನೊಂದಿಗೇ ದಿನಗಳೆವ ಕಲಾವಿದರಿಗೆ ಶ್ರವಣ ಸಾಮರ್ಥ್ಯ ದುರ್ಬಲವಾಗುವ ಅಪಾಯ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಶ್ರವಣ ಪರೀಕ್ಷೆಗೆ ಅವಕಾಶ ಮಾಡಿದ್ದು ಮೆಚ್ಚುವಂಥದ್ದು. ಇದರಿಂದ ಅನೇಕ ಕಲಾವಿದರಿಗೆ ಅನುಕೂಲವಾಗಿದೆ. 

ನನ್ನೂರಾದ ಮಾರ್ವಿಯ ಯಕ್ಷ ಚೇತನ ಮಾರ್ವಿ ರಾಮಕೃಷ್ಣ ಹೆಬ್ಬಾರ್ ರವರ ಹನುಮಂತನ ಪಾತ್ರವೆಂದರೆ ಇಂದಿಗೂ ಅದೊಂದು ದಂತಕಥೆ. ಇಂಥಹ ಮಹಾಕಲಾವಿದರ ಬಗ್ಗೆ ಕೇಳಿದ್ದೆನಷ್ಟೆ ಹೊರತು ಅವರನ್ನು ನೋಡುವ ಯಾವುದೇ ದಾಖಲೆಗಳಿರಲಿಲ್ಲ. ಈ ಸಮ್ಮೇಳನದಲ್ಲಿ ಅವರ ಭಾವಚಿತ್ರವನ್ನು ನೋಡುವ ಅವಕಾಶ ದೊರಕಿದ್ದು ಖುಷಿಯ ವಿಚಾರ. ಜೊತೆಗೆ ಬಣ್ಣದ ವೇಷಧಾರಿಯಾಗಿದ್ದ ಸಕ್ಕಟ್ಟು ಲಕ್ಷಿö್ಮÃ ನಾರಾಯಣ, ಕುಮುಟಾ ಗೋವಿಂದ ನಾಯಕ್, ಚೆಂಡೆಯ ಮಹಾಕಲಾವಿದ ಕೆಮ್ಮಣ್ಣು ಆನಂದ, ನಾರ್ಣಪ್ಪ ಉಪ್ಪೂರ್, ಗುರು ವೀರಭದ್ರ ನಾಯಕ್, ಮೊದಲಾದವರ ಪರಿಚಯ ಸಹಿತ ಭಾವಚಿತ್ರಗಳಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಅಭಿನಂದನಾರ್ಹ. ನಿಮ್ಮವನೇ, ಗೋವಿಂದ ವಂಡಾರು

From the board- April 2023 by Govinda Vandar


ಬೋರ್ಡ್ ರೂಂ

ನಮಸ್ಕಾರ ಓದುಗರೇ,

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಮಾರ್ಚ್ ತಿಂಗಳಿಗೆ ನಾದನೂಪುರ ವಂಡಾರು ಡಿಜಿಟಲ್ ಯಕ್ಷಪತ್ರಿಕೆ ಯಶಸ್ವಿ ಒಂದು ವಸಂತವನ್ನು ಪೂರೈಸಿ ಇದೀಗ ಎರಡನೇ ವರುಷಕ್ಕೆ ಕಾಲಿಡುತ್ತಿದೆ. ಹಾಗಾಗಿ 'ನಿಮ್ಮ' ಈ ಯಕ್ಷ ಪತ್ರಿಕೆಗೆ ಪ್ರತಿ ಯುಗಾದಿಯೂ ವಾರ್ಷಿಕ ಸಂಭ್ರಮವನ್ನು ಹೆಚ್ಚಿಸುವಂತಹಾ ಸಂದರ್ಭ. ಪ್ರತಿ ತಿಂಗಳೂ ಓದುಗರಿಂದ ಬರುವ ವಾಟ್ಸಾಪ್ ಸಂದೇಶಗಳು, ಲೇಖನಗಳ ಬಗ್ಗೆ ಒಳ್ಳೆಯ ಮಾತುಗಳು, ನಮ್ಮ ಉದ್ದೇಶಕ್ಕೆ ಒಂದು ಸಾರ್ಥಕತೆಯ ಭಾವ ನೀಡಿದೆ. ಅದರೊಂದಿಗೆ 'ಪತ್ರಿಕೆಯನ್ನು ನಿಲ್ಲಿಸಬೇಡಿ. ಪತ್ರಿಕೆಯ ಗುಣಮಟ್ಟ ಚೆನ್ನಾಗಿದೆ' ಎಂಬ ಪ್ರಾಮಾಣಿಕ ಅಭಿಪ್ರಾಯಗಳು ನಮಗೆ ಪ್ರೋತ್ಸಾಹ ನೀಡುತ್ತಿದೆ. ಟ್ರಸ್ಟ್ನ ಚಟುವಟಿಕಗಳಲ್ಲಿ ಈ ಪತ್ರಿಕೆ ಮುಖ್ಯ ದಾಖಲಾರ್ಹ ಚಟುವಟಿಕೆಯಾಗಿ ಗುರುತಿಸಿಕೊಳ್ಳುವಂಥದ್ದು. ಅದಕ್ಕೆ ಕಾರಣ ಪತ್ರಿಕಾ ತಂಡದವರು ಒದಗಿಸಿಕೊಡುತ್ತಿರುವ ಮೌಲ್ವಿಕ ಲೇಖನಗಳು. ಇದರೊಂದಿಗೆ ಇದು ಡಿಜಿಟಲ್ ಪತ್ರಿಕೆಯಾದುದರಿಂದ ವೆಬ್ ಸೈಟ್ ಹಾಗು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುತ್ತಿದೆ. ಡಿಜಿಟಲ್ ರೂಪದ ಈ ಪತ್ರಿಕೆಯನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಓದಬೇಕಾಗುತ್ತದೆ. ಮೊಬೈಲ್ ಬಳಸುವವರು ೧೦-೧೨ ಪುಟಗಳ ಪತ್ರಿಕೆಯನ್ನು ಸಂಪೂರ್ಣವಾಗಿ ಓದುವುದು ಕೆಲವರಿಗೆ ಸಮಸ್ಯೆಯಾಗಬಹುದು. ಆ ಕಾರಣದಿಂದ ಪತ್ರಿಕೆಯ ರೂಪದಲ್ಲಿ ಕಳುಹಿಸಿ ಕೊಡಿ ಎಂಬ ಬೇಡಿಕೆ ಸಾಕಷ್ಟಿದೆ. ನಾವು ಅದಕ್ಕೆ ಮುಂದಾಗದೇ ಇರುವ ಕಾರಣ ಎಂದರೆ ಸಂಪನ್ಮೂಲದ ಕೊರತೆ. ಈಗ ನಮ್ಮೊಂದಿಗಿರುವ ತಂಡದ ಚಿತ್ರಣ ನೀಡುವುದಾದರೆ ನಮ್ಮ ಆಶಯಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಯಾವುದೇ ಸಂಭಾವನೆ ನಿರೀಕ್ಷೆ ಮಾಡದೆ ಲೇಖನಗಳನ್ನು ಒದಗಿಸಿ ಕೊಡುತ್ತಿದ್ದಾರೆ. ಈ ಬರಹಗಾರರಿಗೆ ಕಿಂಚಿತ್ ಸಂಭಾವನೆ ನೀಡಬೇಕೆಂಬ ಮಹದಾಶಯ ನಮ್ಮದು. ಆದರೆ ಅಂಬೆಗಾಲಿಡುತ್ತಿರುವ ಈ ಸಂದರ್ಭದಲ್ಲಿ ಅದು ತುಸು ಕಷ್ಟ ಎನಿಸಿದೆ. ಇದರೊಂದಿಗೆ ಪತ್ರಿಕೆಯ ರೂಪದಲ್ಲಿ ಪ್ರಕಟಿಸುವುದಕ್ಕೆ ಒಂದಷ್ಟು ಪ್ರಕಟಣಾ ವೆಚ್ಚವನ್ನು ಭರಿಸಬೇಕಾಗುತ್ತದೆ. ಜೊತೆಗೆ ನಮ್ಮ ನಿಯಮಿತ ಲೇಖಕರಲ್ಲದೆ ತಿಂಗಳಿಗೆ ಮೂರರಿಂದ ನಾಲ್ಕು ದಿನಗಳನ್ನು ನೀಡಬಲ್ಲ ಇಬ್ಬರು ಕಾರ್ಯಕರ್ತರ ಅವಶ್ಯಕತೆ ಬಹಳಷ್ಟಿದೆ. ಓದುಗರ ಸಂದೇಶ, ಅನಿಸಿಕೆಗಳಗೆ ಪ್ರತ್ಯುತ್ತರಿಸುವ ಹಾಗೂ ಲೇಖನ, ಟ್ರಸ್ಟ್, ಪತ್ರಿಕೆಯ ಕುರಿತಯ ಮಾಹಿತಿ ನೀಡಲೆಂದೇ ಹೆಲ್ಪ್ ಡೆಸ್ಕ್ ರೀತಿಯಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅಂತಹ ಒಂದು ವ್ಯವಸ್ಥೆಯೂ ಬರಲಿದೆ. ಅಲ್ಲಿವರೆಗೆ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಪತ್ರಿಕೆಯ ಮುಖ್ಯ ಸಂಪಾದಕರು ಆ ಕಾರ್ಯವನ್ನು ನಿಭಾಯಿಸಬೇಕಿದೆ. ಆದರೂ ಪರಿಚಯಾತ್ಮಕ 

ಲೇಖನ ಹಾಗೂ ಸಂದರ್ಶನ ನಡೆಸಿದಾಗ ಆ ವ್ಯಕ್ತಿಗಳಿಗೆ ಪ್ರಕಟಿತ ರೂಪದ ಪತ್ರಿಕೆಯನ್ನು ಕಳುಹಿಸಿ ಕೊಡುವ ತೀರ್ಮಾನ ಮಾಡಿದ್ದೇವೆ. ಇಂತಹ ಮಿತ ಸಂಪನ್ಮೂಲದಲ್ಲೂ ಗುಣಮಟ್ಟದ ವಿವಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಪತ್ರಿಕೆಯನ್ನು ಮುನ್ನಡೆಸುವ ಬದ್ಧತೆಗೆ ನಾವು ಸಿದ್ಧರಿದ್ದೇವೆ. ಮತ್ತೊಂದು ಸಂತೋಷದ ವಿಚಾರ ಎಂದರೆ ನಮ್ಮ ಟ್ರಸ್ಟ್ ಗೆ ಯಾವುದೇ ದೇಣಿಗೆ ನೀಡಿದರೂ ಅವರಿಗೆ ೮೦ ಜಿ ಕಾಯ್ದೆಯಡಿ ತೆರಿಗೆ ವಿನಾಯಿತಿ ದೊರಕುತ್ತದೆ. ಹೊಸ ವರ್ಷದಲ್ಲಿ ಹೊಸ ಹುರುಪು ಉತ್ಸಾಹದೊಂದಿಗೆ ಪತ್ರಿಕೆ ಹೊಸ ರೂಪದಲ್ಲಿ ಬರಲಿದೆ. ಕಳೆದೊಂದು ವರ್ಷದಲ್ಲಿ ಪತ್ರಿಕೆಯೊಂದಿಗಿನ ಅನುಭವಗಳ ಸಂಚಯವನ್ನು ಮುಂದಿನ ಪುಟಗಳಲ್ಲಿ ನಮ್ಮ ಲೇಖಕರು ಹಂಚಿಕೊAಡಿದ್ದಾರೆ. ಓದಿ.. ಯಕ್ಷಗಾನದ ಅಕ್ಷರ ತೋರಣ, ನಾದನೂಪುರ ಡಿಜಿಟಲ್ ಯಕ್ಷ ಪತಿಕೆಯನ್ನು ಅದೇ ಪ್ರೀತಿಯಿಂದ ನಿಮ್ಮ ಮಡಿಲಿಗೆ ಹಾಕಿಕೊಳ್ಳಿ... ನಿಮ್ಮವನೆ ಗೋವಿಂದ ವಂಡಾರು

ಸೇವಾ ಮನೋಭಾವದ ಯಕ್ಷಗಾನ ಟ್ರಸ್ಟ್ ಗಳು


ಬೋರ್ಡ್ ರೂಂ
ಆತ್ಮೀಯರೆ,
ಯಕ್ಷಗಾನ ಕಲೆಗೆ ಸಂಬAದಿಸಿದAತೆ ಅದೆಷ್ಟೋ ಸಂಘ ಸಂಘಟನೆಗಳು ಹಿಂದಿನಿAದಲೂ ಖಾಸಗಿಯಾಗಿ, ಸಾಮೂಹಿಕವಾಗಿ ರಚನೆಗೊಂಡಿವೆ. ಕಲಾವಿದರಿಗೆ ಪ್ರಾಥಮಿಕ ಸಂಘಟನೆಯೆAದರೆ ಮೇಳಗಳೇ ಎನ್ನಬಹುದು. ಆದರೆ ಅವು ದೇವಸ್ಥಾನಗಳ ಹಿನ್ನಲೆ ಹಾಗೂ ವ್ಯಾವಹಾರಿಕ ಉದ್ದೇಶಗಳಿಗಾಗಿ ಇರುವಂಥದ್ದು. ಕಲಾವಿದರಿಗೆ ಉದ್ಯೋಗ ನೀಡುವ ವ್ಯವಸ್ಥೆ ಅದು. ಆದರೆ ಕಲಾಸೇವೆಗಾಗಿಯೇ ರಚಿಸಿಕೊಂಡ ಅದೆಷ್ಟೋ ಸಂಸ್ಥೆಗಳು ವಿವಿಧ ಸಂಸ್ಥೆ, ಬ್ಯಾಂಕು, ಖಾಸಗಿ ದಾನಿಗಳಿಂದ ಹಣ ಸಂಗ್ರಹಿಸಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಕೆಲವು ಸಂಸ್ಥೆಗಳನ್ನು ನಡೆಸಲಾಗದೇ
ಕೆಲವೇ ವರ್ಷಗಳಲ್ಲಿ ನಿಲ್ಲಿಸಿದ ಉದಾಹರಣೆಗಳೂ ಇದೆ. ಎಷ್ಟೋ ಆಸಕ್ತರು ಉತ್ಸಾಹಿಗಳು ಕೈಯ್ಯಿಂದ ಹಣ ಹಾಕಿ ಸಂಸ್ಥೆಯ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಸುದೀರ್ಘ ಕಾಲದಿಂದ ಕಲಾವಿದರ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿರುವ ಕಲಾರಂಗದAತಹ ಸಂಘಟನೆಯನ್ನೂ ನೋಡಬಹುದು. ಕೆಲವೇ ಕೆಲವು ಸಂಘ ಟ್ರಸ್ಟ್ ಗಳು ಸಾಮಾಜಿಕ ಉದ್ದೇಶ, ಕಲೆಯನ್ನು ಬೆಳೆಸುವ ಉದ್ದೇಶದಿಂದ ನಡೆಸಲ್ಪಡುತ್ತಿವೆ. ಕಲಾವಿದರೇ ನಡೆಸುವಂತಹ ಸಂಸ್ಥೆಗಳ ಬಾಹುಳ್ಯ ಹೆಚ್ಚಿರುವುದನ್ನೂ ಗಮನಿಸಬಹುದು. ಹೆಚ್ಚಿನ ಸಂಘ ಸಂಸ್ಥೆಗಳ ಉದ್ದೇಶ ಲಾಭ ಮಾಡಬೇಕು ಎಂಬುದಾಗಿದೆ. ಕಲಾವಿದರಲ್ಲದೆ ಕಲೆಯ ಅಭಿಮಾನಿಗಳು ಕಲೆಯ ಮೇಲಿನ ಪ್ರೇಮದಿಂದಲೂ ನಡೆಸುವಂತಹಾ ಸಂಸ್ಥೆಗಳಿವೆ. ಹೆಚ್ಚಿನ ತಂಡ ಸಂಘಗಳು ಕಾನೂನಿನ್ವಯ ನೋಂದಾಯಿಸಲ್ಪಟ್ಟವು ಅಲ್ಲ. ನೋಂದಾವಣೆಯಾಗದೆ ಇರುವ ಹಲವಾರು ಸಂಸ್ಥೆಗಳಿವೆ. ಅವರಲ್ಲೂ ಕೆಲವರು ಉತ್ತಮ ಕೆಲಸ ಮಾಡಿರುವ ಉದಾಹರಣೆಗಳಿದೆ. ಒಳ್ಳೆಯ ಉದ್ದೇಶಕ್ಕಾಗಿ ಸ್ಥಾಪನೆಯಾದ ಯಕ್ಷಗಾನದ ಟ್ರಸ್ಟ್ ಗಳು ನೋಂದಣಿಯಾಗಲೇಬೇಕೆAಬ ನಿಯಮವೂ ಇಲ್ಲ. ಆದರೆ ಸರ್ಕಾರದೊಂದಿಗೆ ಸಹಭಾಗಿತ್ವ ಪಡೆದುಕೊಳ್ಳವ ಸಂದರ್ಭದಲ್ಲಾಗಲೀ, ಕೆಲವೊಂದು ಪ್ರತಿಷ್ಠಿತ ಸಂಸ್ಥೆಗಳ ನೆರವು ಬೇಕಾದಾಗ ಕೆಲವೊಂದು ಸರಕಾರಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಟ್ರಸ್ಟ್ ನ ನೋಂದಾವಣೆ ಮಾಡಿಸಿಕೊಂಡಿರುವುದು ಅತೀ ಮುಖ್ಯವಾಗುತ್ತದೆ. ಸಮಾಜದ ನಂಬುಗೆ ಉಳಿಸಿಕೊಳ್ಳಲು ಸಂಘ ಸಂಸ್ಥೆಗಳ ಉದ್ದೇಶ, ಚಟುವಟಿಕೆಗಳು ಪಾರದರ್ಶಕವಾಗಿರಬೇಕಾಗುತ್ತದೆ. ಆದ್ದರಿಂದಲೇ ಸಂಘ ಸಂಸ್ಥೆ ಎಂದರೆ ಅದೊಂದು ಹಣ ಮಾಡುವ ದಾರಿ ಅಲ್ಲ. ಅದೊಂದು ಜವಾಬ್ದಾರಿ! ಸಾಮಾಜಿಕ ಜವಾಬ್ದಾರಿ. ಸಂಸ್ಥೆಯನ್ನು ಕಟ್ಟುತ್ತಿದ್ದೇವೆ ಎಂದರೆ ಸಮಾಜವನ್ನು ಕಟ್ಟುತ್ತಿದ್ದೇವೆ ಎಂದರ್ಥ. ಕಲೆಗೆ ಸಂಬAಧ ಪಟ್ಟವರು, ಸಮಾಜಕ್ಕೆ ಒಳಿತಾಗುವ ಚಟುವಟಿಕೆಗಳನ್ನು ಸಂಘ ಟ್ರಸ್ಟ್ ಗಳಿಂದ ನಡೆಸಬೇಕು. ವ್ಯಕ್ತಿಗತ ಪ್ರತಿಷ್ಠೆಗಾಗಿ ಸ್ಥಾಪನೆಯಾದ ಸಂಸ್ಥೆಗಳು, ವ್ಯವಹಾರಗಳು ವೈಯುಕ್ತಿಕ ಲಾಭದ ಉದ್ದೇಶವನ್ನು ಹೊಂದಿರುತ್ತದೆ. ಇದರಿಂದ ಸಮಾಜಕ್ಕೆ ಅಷ್ಟೇನು ದೊಡ್ಡ ಕೊಡುಗೆ ಇರಲಾರದು. ಅಂತಹ ಸಂಘ ಸಂಸ್ಥೆ ಟ್ರಸ್ಟ್ ಗಳ ಮೇಲಿರುವ ಸಾರ್ವಜನಿಕ ಅಭಿಪ್ರಾಯವೂ ಬೇರೆಯದೇ ಆಗಿರುತ್ತದೆ. ವೈಯುಕ್ತಿಕ ಲಾಭ, ಕಾರ್ಯಕ್ರಮದಿಂದ ಸಂಪಾದನೆ ಮಾಡುವಂತಹಾ ಉದ್ದೇಶ ಇರುವವರಿಗೆ ಟ್ರಸ್ಟ್ ಕೆಲವೇ ವರ್ಷಗಳಲ್ಲಿ ನಿರಾಸೆ ಉಂಟು ಮಾಡಬಹುದು. ಪಟ್ಲ ಫೌಂಡೇಷನ್ ನಂತಹ ಟ್ರಸ್ಟ್ ಗಳು ಲಾಭದ ಹಾದಿಯಲ್ಲೇ ಇರಲಿ ನಷ್ಟದ ಹಾದಿಯಲ್ಲೇ ಇರಲಿ, ಸಮಾಜಕ್ಕೆ ಪ್ರತಿಷ್ಟೆ ಎನಿಸುವಂತಹಾ ಸೇವೆಗಳಿಗೆ ಬದ್ಧವಾಗಿದೆ.
ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ಹೊಂದಿರುವAತಹಾ ಟ್ರಸ್ಟ್ ಗಳು ರೂಪುಗೊಳ್ಳಬೇಕು. ಕಲಾವಿದ, ಕಲಾಭಿಮಾನಿ, ಯಾರೇ ಟ್ರಸ್ಟ್ ಸ್ಥಾಪನೆ ಮಾಡಿದರೂ ವಿವಿಧ ಕ್ಷೇತ್ರಗಳ ಪರಿಣಿತರ ಸಲಹೆ ಮಾರ್ಗದರ್ಶನ ಸ್ವೀಕರಿಸುವ ಮನೋಭಾವ ಯಕ್ಷಗಾನ ಕ್ಷೇತ್ರದ ಸಂಘ ಸಂಸ್ಥೆ ಟ್ರಸ್ಟ್ ಗಳಲ್ಲಿ
ಬರಬೇಕಿದೆ. ಈ ತಿಂಗಳಲ್ಲಿ ಕಲೆ ಮತ್ತು ಕಲಾವಿದರನ್ನು ಸಂಘಟಿಸುವ ನಿಟ್ಟಿನಲ್ಲಿ ಹಲವಾರು ಉತ್ತಮ ಗುರಿ ಉದ್ದೇಶ ಯೋಜನೆಗಳನ್ನು ಹಮ್ಮಿಕೊಂಡು ನಮ್ಮ ಸ್ನೇಹಿತರೋರ್ವರ ಟ್ರಸ್ಟ್ ಲೋಕಾರ್ಪಣೆಗೊಳ್ಳಲಿದೆ. ಯಕ್ಷಗಾನ ಕಲಾವಿದರಾಗಿರುವ ಕಿರಾಡಿ ಪ್ರಕಾಶ್ ರವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಈಗಾಗಲೇ ಸಂಪರ್ಕದಲ್ಲಿರುವ ಎಲ್ಲ ಪ್ರಮುಖರ ನೆರವು ಪಡೆದುಕೊಂಡು ಸಂಘಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಉತ್ತಮ ಮೌಲ್ಯಗಳನ್ನೇ ಬುನಾದಿಯಾಗಿ ರೂಪಿಸಿಕೊಂಡಿರುವ ಯಕ್ಷ ನಕ್ಷತ್ರ ಟ್ರಸ್ಟ್ ನ ಕನಸಿನ ಯೋಜನೆಗಳು ಯಶಸ್ವಿಯಾಗಲಿ ಹಾಗೂ ಸೆಪ್ಟೆಂಬರ್ ಮೂರರಂದು ಮಂದಾರ್ತಿಯಲ್ಲಿ ನಡೆಯುವ ಯಕ್ಷ ಪ್ರಣತಿ ಕಾರ್ಯಕ್ರಮ ಕಲಾಸೇವೆಗೊಂದು ಮಾದರಿಯಾಗಿ ಮೂಡಿ ಬರಲಿ ಎಂಬ ಆಶಯದೊಂದಿಗೆ, ನಿಮ್ಮವನೆ, ಗೋವಿಂದ ವಂಡಾರು

ಬೋರ್ಡ್ ರೂಂ


ಬೋರ್ಡ್ ರೂಂ
ಆತ್ಮೀಯರೆ,
ನಮ್ಮ ಸಮಸ್ತ ಓದುಗರಿಗೆ ನವರಾತ್ರಿ ಹಬ್ಬದ ಶುಭಾಶಯಗಳು.
ನವರಾತ್ರಿಯಲ್ಲಿ ದೇವಿಯ ಅಥವ ನವಶಕ್ತಿಯ ಆರಾಧನೆ ನಡೆಯುತ್ತದೆ. ಯಕ್ಷಗಾನ ಕಲೆಗೂ ದೇವತಾರಾಧನೆಗೂ ಅನನ್ಯ ಸಂಬAಧವಿದೆ. ದೇವಿಗೆ ಸಂಬAಧಿಸಿದ ದೇವಳಗಳಿಂದ ನಡೆಸಲ್ಪಡುವ ಯಕ್ಷಗಾನ ಮೇಳಗಳಲ್ಲಿ ಪ್ರಧಾನವಾಗಿ ದೇವಿ ಮಹಾತ್ಮೆ ಅಥವ ಕ್ಷೇತ್ರದ ಅಧಿದೇವತೆಯ ಮಹಿಮೆ ಸಾರುವ ಪುಣ್ಯ ಕಥಾನಕಗಳ ಪ್ರದರ್ಶನ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ತೆಂಕಿನಲ್ಲಿ ಕಟೀಲು ಮೇಳ ಹಾಗೂ ಬಡಗಿನಲ್ಲಿ ಮಂದಾರ್ತಿ ಮೇಳ ದೇವಿ ಆರಾಧನೆಗೆ ಸಂಬAಧಿಸಿದ ಕ್ಷೇತ್ರಗಳಿಂದ ನಡೆಸಲ್ಪಡುವ ಪ್ರಸಿದ್ಧ ಮೇಳಗಳು. ಈ ಮೇಳಗಳಲ್ಲಿ ಹೆಚ್ಚಾಗಿ ಶ್ರೀ ದೇವಿ
ಮಹಾತ್ಮೆ ಹಾಗೂ ಮಂದಾರ್ತಿ ಮೇಳದಲ್ಲಿ ದೇವಿ ಮಹಾತ್ಮೆಯೊಂದಿಗೆ ಮಂದಾರ್ತಿ ಕ್ಷೇತ್ರ ಮಹಾತ್ಮೆ ಹೆಚ್ಚಾಗಿ ನಡೆಯುವಂಥದ್ದು. ಹಾಗೆಯೇ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬAಧ ಪಟ್ಟ ಮೇಳ ಬಪ್ಪನಾಡು ಕ್ಷೇತ್ರ ಮಹಾತ್ಮೆಯನ್ನು, ಸಸಿಹಿತ್ಲು ದೇವಳದ ಮೇಳ ಭಗವತಿ ಕ್ಷೇತ್ರ ಮಹಾತ್ಮೆ ಹಾಗೂ ಕಟೀಲು ಕ್ಷೇತ್ರ ಮಹಾತ್ಮೆ ಇವು ದೇವೀ ಶಕ್ತಿಯ ಕಥೆಯನ್ನು ಸಾರುವ ಪ್ರಸಂಗಗಳು. ಈ ಪುಣ್ಯ ಪ್ರಸಂಗಗಳೇ ಹೆಚ್ಚಾಗಿ ಪ್ರದರ್ಶನವಾಗಲು ಮುಖ್ಯ ಕಾರಣ ಸೇವಾದರರ ಹರಕೆ ಎಂದೆನ್ನಬಹುದು. ಸಾಮಾನ್ಯವಾಗಿ ಮಾನವನ ಗ್ರಹಿಕೆಗೆ ಸಿಗದ ಅನೇಕ ಸಮಸ್ಯೆಗಳಿಗೆ ಮಾನವ ದೇವರ ಮೊರೆ ಹೋಗುವುದಿದೆ. ಹಾಗೆಯೇ ಆರೋಗ್ಯ ಸಮಸ್ಯೆಗಳು ಕುಟುಂಬ ಕಲಹಗಳು ಆಸ್ತಿ ವಿವಾದಗಳು ನೆನೆಸಿಕೊಂಡ ಕಾರ್ಯ ಫಲಪ್ರದವಾಗಲು ಕ್ಷೇತ್ರ ಮಹಾತ್ಮೆ ಅಥವ ದೇವಿ ಮಹಾತ್ಮೆ ಪ್ರಸಂಗವನ್ನೇ ಆಡಿಸುತ್ತೇವೆಂದು ಭಕ್ತರು ಹರಕೆ ಹೇಳಿಕೊಳ್ತಾರೆ. ಅಷ್ಟೇ ಅಲ್ಲದೆ ದೇವಿ ಮಹಾತ್ಮೆ ನೋಡುತ್ತೇವೆ ಎಂದೂ ಹರಕೆ ಹೇಳುವವರಿದ್ದಾರೆ. ವಿಶೇಷತೆ ಎಂದರೆ ಈ ಕಾಲದಲ್ಲೂ ಪವಾಡ ಎನ್ನುವಂತೆ ಹರಕೆ ಆಟಗಳು ಕಡಿಮೆ ಆಗಿದ್ದಿಲ್ಲ. ಮಂದಾರ್ತಿ ಮೇಳದಲ್ಲಿ ವರ್ಷಕ್ಕೆ ಒಂದು ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡರೆ ಅದಕ್ಕೆ ದ್ವಿಗುಣವಾಗಿ ಹರಕೆ ಆಟಗಳು ಬುಕ್ ಆಗುವುದು ಇದರ ವಿಶೇಷ. ವಿವಿಧ ಕಾಲಗಳ ವಿವಿಧ ರಸೋತ್ಪತ್ತಿ ಹೊಂದಿರುವ ಕಾರಣದಿಂದ ರಂಗದ ದೃಷ್ಟಿಯಿಂದ ಇದೊಂದು ಪರಿಪೂರ್ಣ ಪ್ರಸಂಗ ಎನಿಸಿಕೊಂಡಿದೆ.
ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ನಾನು ಕೇಳಿ ತಿಳಿದಂತೆ ಹಿಂದೆ ೯ ದಿನಗಳ ಕಾಲ ಆಡುತ್ತಿದ್ದರಂತೆ. ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ಅವತಾರಗಳೂ ರಂಗದಲ್ಲಿ ಪ್ರದರ್ಶನವಾಗುತ್ತಿತ್ತು. ಹತ್ತನೆಯ ದಿನ ಅಷ್ಟಭುಜೆಯಾಗಿ ಮಹಿಷಾಸುರನ್ನು ಮರ್ದಿಸಿದ ದೇವಿ ಮಹಿಷ ಮರ್ದಿನಿ ಎಂದು ಕರೆಸಿಕೊಳ್ಳುತ್ತಾಳೆ. ಆ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತೇವೆ. ಯಕ್ಷಗಾನದಲ್ಲೂ ದೇವಿ ಮಹಿಷಾಸುರನೊಂದಿಗೆ ಒಂಬತ್ತು ಅವತಾರಗಳಲ್ಲಿ ಒಂಬತ್ತು ಆಯುಧಗಳಿಂದ ಒಂಬತ್ತು ರಾತ್ರಿ ಸೆಣಸಾಡಿದ ಸನ್ನಿವೇಷಗಳಿವೆ. ಆದರೆ ಈಗ ದೇವಿ ಪಾತ್ರಧಾರಿ ಈ ಒಂಬತ್ತು ದುರ್ಗೆಯರ ಅವತಾರ ಹಾಗೂ ಪರಾಕ್ರಮಗಳನ್ನು ಸಂಭಾಷಣೆಯಲ್ಲಿ ಉಲ್ಲೇಖಿಸಿ ಮುಗಿಸುತ್ತೇವೆ. ಪ್ರಸ್ತುತ ನಾವು ಆಡುವ ನೋಡುವ ದೇವಿ ಮಹಾತ್ಮೆಯಲ್ಲಿ ಆದಿಮಾಯೆ, ಮಹಿಷ ಮರ್ದಿನಿ ಕದಂಬ ಕೌಶಿಕೆ, ಸಪ್ತ ಮಾತೃಕೆಯರು, ಚಂಡಿಕೆ, ರಕ್ತೇಶ್ವರಿ ಶಕ್ತಿಯ ಮಹಿಮೆಗಳನ್ನು ನೋಡಬಹುದು.
ಇನ್ನು ಮಂದಾರ್ತಿ ಕ್ಷೇತ್ರ ಮಹಾತ್ಮೆಯಲ್ಲಿ ಮಂದಾರ್ತಿ ದೇವಿ, ಕೊಲ್ಲೂರು ಮೂಕಾಂಬಿಕೆ ಹಾಗೂ ದುರ್ಗಾಪರಮೇಶ್ವರಿ ದೇವಿಯರ ಮಹಿಮೆಗಳಿವೆ. ದೇವಿ ಮಹಾತ್ಮೆ ಪ್ರಸಂಗವನ್ನು ಬೇರೆ ಬೇರೆ ಕವಿಗಳು ಬರೆದಿದ್ದಾರೆ. ತೆಂಕಿನಲ್ಲಿ ಇದು ಹೆಚ್ಚು ಬೇಡಿಕೆಯ ಪ್ರಸಂಗ. ಅಗರಿ ಶ್ರೀನಿವಾಸ ಭಾಗವತರು, ಬಲಿಪ ಭಾಗವತರು
ಸೇರಿದಂತೆ ನಾಲ್ಕು-ಐದು ಜನ ಕವಿಗಳು ದೇವಿ ಮಹಾತ್ಮೆ ಪ್ರಸಂಗವನ್ನು ಬರೆದಿದ್ದಾರೆ. ಈಗ ಹೆಚ್ಚಾಗಿ ಅಗರಿ ಭಾಗವತರು ಬರೆದ ಪ್ರಸಂಗವನ್ನು ಆಡಿ ತೋರಿಸುತ್ತಾರೆ. ಹಾಗೆಯೇ ತೆಂಕಿನ ದೇವಿ ಮಹಾತ್ಮೆ ಪ್ರಸಂಗವನ್ನೇ ಕೆಲವು ಪದ್ಯಗಳ ಬದಲಾವಣೆಗಳೊಂದಿಗೆ ಬಡಗಿನಲ್ಲಿ ಆಡಿ ತೋರಿಸುತ್ತಾರೆ. ಆದರೆ ಮಂದಾರ್ತಿ ಮೇಳದಲ್ಲಿ ಕಟೀಲು ಮೇಳದಂತೆ ದೇವಿ ಮಹಾತ್ಮೆ ಪ್ರಸಂಗದಲ್ಲಿ ಬ್ಯಾಂಡ್ ವಾದ್ಯಗಳ ಅಬ್ಬರವಿರುವುದಿಲ್ಲ.
ಸ್ತಿçà ಶಕ್ತಿಯ ಆರಾಧನೆಯ ಇನ್ನೊಂದು ಹೆಸರಾಂತ ಪ್ರಸಂಗ ಶ್ರೀ ಮಂದಾರ್ತಿ ಕ್ಷೇತ್ರ ಮಹಾತ್ಮೆ. ಹರಕೆಯ ಆಟಕ್ಕಾಗಿಯೇ ಈ ಪ್ರಸಂಗ ಮೀಸಲು. ಮಂದಾರ್ತಿ ಕ್ಷೇತ್ರ ಮಹಾತ್ಮೆ ಹಾಗೂ ಮತ್ತೊಂದು ಜನಪ್ರಿಯ ಪ್ರಸಂಗ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎರಡನ್ನೂ ಬರೆದ ಕವಿ ಸೀತಾನದಿ ಗಣಪಯ್ಯ ಶೆಟ್ಟಿಯವರು. ಬೇಸರದ ಸಂಗತಿ ಎಂದರೆ ಪುರಾಣದ ಅದೆಷ್ಟೋ ಮೌಲ್ಯಯುತವಾದ ಪ್ರಸಂಗಗಳ ಕವಿಯ ಬಗ್ಗೆ ಎಲ್ಲೂ ಉಲ್ಲೇಖ ಇರುವುದಿಲ್ಲ. ಹಾಗೆಯೇ ಮಂದಾರ್ತಿ ಕ್ಷೇತ್ರ ಪ್ರಸಂಗ ಪ್ರಸಿದ್ದಿ ಪಡೆದಷ್ಟು ಇದನ್ನು ಬರೆದ ಕವಿ ಯಾರೆಂಬುದೇ ಹೆಚ್ಚಿನವರಿಗೆ ಗೊತ್ತಿಲ್ಲ. ಹಾಗಾಗಿ ಕವಿಯನ್ನು ಸ್ಮರಿಸಿಕೊಳ್ಳುವ ಅಗತ್ಯ ಬಹಳಷ್ಟಿದೆ.
ದೇವಿ ಮಹಾತ್ಮೆ ನನ್ನಿಷ್ಟದ ಪ್ರಸಂಗ ಹಾಗೂ ಪಾತ್ರಗಳಲ್ಲೊಂದು. ಬಾಲ್ಯದ ದಿನಗಳಿಂದಲೂ ನಾನು ದೇವಿ ಮಹಾತ್ಮೆ ಪ್ರಸಂಗವನ್ನು ನೋಡಿ ಬೆಳೆದವನು ನಾನು ಮೊದಲ ಬಾರಿಗೆ ದೇವಿ ಪಾತ್ರವನ್ನು ನಿರ್ವಹಿಸಿದ್ದು ಮಾರಣಕಟ್ಟೆ ಮೇಳದಲ್ಲಿರುವಾಗ. ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಮಹಿಷಾಸುರ ವಧೆಯ ಸನ್ನಿವೇಷವಿದೆ. ಆ ಪ್ರಸಂಗದ ದೇವಿಯಾಗಿ ಮೊದಲು ನಾನು ಕಾಣಿಸಿಕೊಂಡೆ. ನಾನು ನಿರ್ವಹಿಸುವ ದೇವಿ ಪಾತ್ರಕ್ಕೆ ಮೊದಲಾಗಿ ಪ್ರೇರಣೆಯಾದವರು ಮೊಳಹಳ್ಳಿ ಕೃಷ್ಣರವರು. ಯಕ್ಷಗಾನ ಕಲೆ ಆರಾಧನೆಯಿಂದ ಕಲಾತ್ಮಕವಾಗಿ ವಾಣಿಜ್ಯಾತ್ಮಕವಾಗಿ ಸ್ಪರ್ಧಾತ್ಮಕ ಬೆಳವಣಿಗೆ ಕಾಣುತ್ತಿದ್ದರೂ ಇಂದಿಗೂ ದೇವಿ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆ ಇಂತಹ ಪುಣ್ಯ ಕಥಾನಕಗಳಿಗಿರುವ ಬೇಡಿಕೆ ಕುಸಿದಿಲ್ಲ. ಹಾಗೂ ದೇವಿ ಪಾತ್ರಧಾರಿಯನ್ನು ಭಕ್ತಿಯಿಂದ ಕಾಣುವ ಪ್ರೇಕ್ಷಕರು ಇಂದಿಗೂ ಇದ್ದಾರೆ ಎನ್ನುವುದು ಯಕ್ಷಗಾನದ ವೈಶಿಷ್ಟö್ಯತೆ. ದುಷ್ಟರ ದಮನ ಶಿಷ್ಟರ ರಕ್ಷಣೆಯ ಸಂದೇಶವನ್ನು ನೀಡುವ ನವರಾತ್ರಿ ಪರ್ವ ಸರ್ವರಿಗೂ ಸನ್ಮಂಗಳವನ್ನುAಟು ಮಾಡಲಿ ಎಂದು ಹಾರೈಸುತ್ತಾ, ನಮಸ್ಕಾರ. ನಿಮ್ಮವನೆ, ಗೋವಿಂದ ವಂಡಾರು
#Nadanoopura_Yakshothana_Trust-Nada noopura Yakshothana Trust Vandaru ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್