Women footprints in Yakshagana

T N Jyothi Kalasa - Woman Yakshagana Artist


ಧೀರ ಕಲೆಯೊಳಗೆ ಕೀರವಾಣಿಯರು - 08

ಮಲೆನಾಡ ಮಣ್ಣಿನಲ್ಲಿ ಯಕ್ಷಗಾನವನ್ನು ಬೆಳಗಿಸಿದವರು - ಶ್ರೀಮತಿ ಟಿ.ಎನ್. ಜ್ಯೋತಿ ಕಳಸ

ಸಾಧಿಸುವ ಛಲವಿದ್ದರೆ ಎಲ್ಲೂ ಏನನ್ನೂ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸಾಕ್ಷಿ ಶ್ರೀಮತಿ ಟಿ.ಎನ್. ಜ್ಯೋತಿ ಕಳಸ ಇವರು. ಹಳುವಳ್ಳಿಯಂತಹ ಸಣ್ಣ ಹಳ್ಳಿಯಲ್ಲಿ ಯಕ್ಷಗಾನವನ್ನು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಕಲಿಸುವ ಮೂಲಕ ಒಂದು ತಂಡವನ್ನು ಕಟ್ಟಿ, ಪ್ರದರ್ಶನಗಳನ್ನು ಏರ್ಪಡಿಸುವುದು ಸವಾಲಿನ ವಿಚಾರವೇ ಹೌದು.

೧೯೭೦ರ ಏಪ್ರಿಲ್ ೨೬ ರಂದು ಕಾಟಿಪಳ್ಳ ಟಿ.ಕೃಷ್ಣರಾವ್ ಮತ್ತು ರಾಧಮ್ಮ ದಂಪತಿಗೆ ಮಗಳಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಾಟಿಪಳ್ಳ ಹಾಗೂ ಕೃಷ್ಣಾಪುರದಲ್ಲಿಯೇ ಪೂರೈಸಿದರು. ಎಸ್.ಎಸ್.ಎಲ್.ಸಿವರೆಗಿನ ವಿದ್ಯಾಭ್ಯಾಸ ಇವರದು. ಆದರೆ ಇದ್ಯಾವುದೂ ಇವರನ್ನು ಯಕ್ಷಗಾನದಿಂದ ದೂರ

ಉಳಿಯುವಂತೆ ಮಾಡಲಿಲ್ಲ. ಇವರ ತಂದೆ ಟಿ.ಕೃಷ್ಣರಾವ್ ಅವರು ಹವ್ಯಾಸಿ ಭಾಗವತರು. ತಮ್ಮ ತಂದೆಯಿAದಲೇ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡ ಜ್ಯೋತಿ ಅವರು, ಸುರತ್ಕಲ್ ಪರಿಸರದಲ್ಲಿ ಅನೇಕ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ಶಿಕ್ಷಣವನ್ನು ನೀಡಿ ವೇಷ ಮಾಡಿಸುತ್ತಿದ್ದ ಶ್ರೀ ಶಿವರಾಮ ಪಣಂಬೂರುಅವರಲ್ಲಿ ಯಕ್ಷಗಾನವನ್ನುಅಭ್ಯಸಿಸಿ, ವೇಷಗಾರಿಕೆಗೆ ತೊಡಗಿಸಿಕೊಳ್ಳುವಲ್ಲಿ ಅವಕಾಶ ಪಡೆದರು. ಅವರ ತಂಡದ ಸದಸ್ಯೆಯಾಗಿ ಅನೇಕ ವೇಷಗಳನ್ನು

ಮಾಡಿದರು. ತದನಂತರದಲ್ಲಿ ಶ್ರೀರಮೇಶ್ ಶೆಟ್ಟಿ ಬಾಯಾರು ಇವರಲ್ಲಿ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿʼ ಶ್ರೀಮಹಾಗಣಪತಿ ಮಹಿಳಾ ಯಕ್ಷಗಾನ ತಂಡ ಬಾಳ, ಕಾಟಿಪಳ್ಳʼ ಇದರಲ್ಲಿ ೫-೬ ವರ್ಷಗಳಷ್ಟು ಕಾಲ ಕಲಾವಿದೆಯಾಗಿ ರಂಗದಲ್ಲಿ ಗುರುತಿಸಿಕೊಂಡರು. ೧೯೯೩ ರಲ್ಲಿ ಶ್ರೀ ಟಿ.ಕೆ. ನಾರಾಯಣ ಭಟ್ ಇವರನ್ನು ಕೈ ಹಿಡಿದು ಮಲೆನಾಡಿನ ಕಳಸದ ಹಳುವಳ್ಳಿಗೆ ಬಂದ ಬಳಿಕವೂ ಇವರ ಯಕ್ಷಗಾನ ಜೀವನ ನಿಂತ ನೀರಾಗಲಿಲ್ಲ. ಅನೇಕ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ, ಆಸಕ್ತ ಮಹಿಳೆಯರಿಗೆ ಯಕ್ಷಗಾನವನ್ನು ಕಲಿಸುವುದಕ್ಕೆ ಆರಂಭಿಸಿದರು.  ೨೦೦೫ ರಲ್ಲಿ ಹಳುವಳ್ಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ೨೫ ವಿದ್ಯಾರ್ಥಿಗಳಿಂದ ಆರಂಭವಾದ ಯಕ್ಷಗಾನ ನಾಟ್ಯಾಭ್ಯಾಸ, ಶ್ರೀ ಸುಬ್ರಹ್ಮಣ್ಯೇಶ್ವರ ಮಕ್ಕಳ ಯಕ್ಷಗಾನ ತಂಡವೆAಬ ಹೆಸರಿನಿಂದ ಅನೇಕ ಕಡೆ ಯಕ್ಷಗಾನ ಪ್ರದರ್ಶನಗಳನ್ನು ಅನೇಕ ಕಡೆಗಳಲ್ಲಿ ಕೊಡುವಷ್ಟರ ಮಟ್ಟಿಗೆ ಬೆಳೆದು ನಿಂತಿತು. ಸುಮಾರು ೪-೫ ವರುಷಗಳ ಬಳಿಕ “ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಎಂಬ ಹೆಸರಿನಿಂದ ಮಕ್ಕಳ ಜೊತೆ ಆಸಕ್ತ ಮಹಿಳೆಯರನ್ನೂ ಸೇರಿಸಿಕೊಂಡು ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದರು. ಇವತ್ತಿಗೆ ಅನೇಕ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುವಲ್ಲಿ ಈ ತಂಡ ಸಮರ್ಥವೆನಿಸಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳ, ದೆಹಲಿಯಂತಹ

ರಾಜ್ಯಗಳಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಹೆಮ್ಮೆ ಇವರದು. ಸ್ವಂತ ವೇಷಭೂಷಣದ ವ್ಯವಸ್ಥೆಯನ್ನೂ ಮಾಡಿಕೊಂಡು ಮಲೆನಾಡಿನಲ್ಲಿ ತೆಂಕುತಿಟ್ಟು ಯಕ್ಷಗಾನವನ್ನು ಬೆಳೆಸಿದ ಹಿರಿಮೆ ಜ್ಯೋತಿಯವರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಹಾಗೂ ದೆಹಲಿ ಕರ್ನಾಟಕ ಸಂಘ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಅನುಭವ ಇವರದು. ಯಕ್ಷಗಾನ ಸ್ಪರ್ಧೆಗಳು, ಯಕ್ಷೋತ್ಸವ, ನಾಟ್ಯವೈಭವ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಈ ತಂಡ ನೀಡಿದೆ. ತಂಡದ ಪಯಣ ಇಷ್ಟು ಸಾಗುವುದಕ್ಕೆ ತಂಡದ ಕಾರ್ಯದರ್ಶಿಗಳಾದ ಎಸ್.ಜೆ.ನಾಗಭೂಷಣ ಅವರ ಪಾತ್ರ ಹಿರಿದಾದ್ದು ಎನ್ನುತ್ತಾರೆ ಜ್ಯೋತಿಯವರು. ಅಷ್ಟು ಮಾತ್ರವಲ್ಲದೆ ತಂಡವು ಯಶಸ್ವೀ ಪ್ರದರ್ಶನಗಳನ್ನು ನೀಡುವುದಕ್ಕೆ ತೆಂಕುತಿಟ್ಟಿನ ಹವ್ಯಾಸಿ ಹಾಗೂ ವೃತ್ತಿಪರ ಕಲಾವಿದರ ಹಿಮ್ಮೇಳ ಸಹಕಾರ, ಊರ ಕಲಾಭಿಮಾನಿಗಳ ಪ್ರೋತ್ಸಾಹ, ಪ್ರದರ್ಶನ ನೀಡುವುದಕ್ಕೆ ಅವಕಾಶವನ್ನೊದಗಿಸಿದ ಹಲವಾರುಸಂಘ-ಸAಸ್ಥೆಗಳು ಹಾಗೂ ತಂಡಕ್ಕೆ ಅತಿಥಿ ಕಲಾವಿದರಾಗಿ ಬರುವವರ ಸಹಕಾರದಿಂದ ಇವತ್ತಿಗೂ ಯಕ್ಷಗಾನರಂಗದಲ್ಲಿ ಈ ತಂಡವು ನೆಲೆಯೂರಿದೆ ಎಂದು ಸಹಕರಿಸಿದವರನ್ನು ಸದಾ ನೆನೆಯುವುದನ್ನು ಮರೆಯುವುದಿಲ್ಲ ಇವರು. 

ವೇಷಧಾರಿಯಾಗಿ ಮಾತ್ರವಲ್ಲದೇ ಹಿಮ್ಮೇಳದಲ್ಲೂ ಆಸಕ್ತರು. ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಿಂದ ಭಾಗವತಿಕೆಯನ್ನು ಅಭ್ಯಸಿಸಿದವರು. ಚೆಂಡೆ – ಮದ್ದಳೆಯಲ್ಲೂ ಆಸಕ್ತರು. ವೇಷ ಕಟ್ಟುವುದರಲ್ಲೂ ನಿಪುಣರಿವರು. ಮಕ್ಕಳಿಗೆ ಕಲಿಸುತ್ತಾ ತಾನೂ ಕಲಿಯುತ್ತಾ ಬೆಳೆದವರು. ಪುಂಡುವೇಷ, ರಾಜವೇಷ, ಸ್ತ್ರೀವೇಷ, ಬಣ್ಣದ ವೇಷ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡವರು. ಶ್ರೀದೇವಿ ಮಹಾತ್ಮ್ಯೆಯ ಮಹಿಷಾಸುರನ ಪಾತ್ರವನ್ನೂ ಅನೇಕ ಬಾರಿ ನಿರ್ವಹಿಸಿ ಸೈ ಎನಿಸಿಕೊಂಡವರು. ಇವರ ಯಕ್ಷಗಾನ ಪ್ರತಿಭೆಯನ್ನು ಅನೇಕ ಸಂಘ-

ಸAಸ್ಥೆಗಳು ಗುರುತಿಸಿ ಸಂಮಾನಿಸಿವೆ. ಗೌರವ ಸಹಾಯ ನಿಧಿಯೂ ದೊರಕಿದೆ. ಪರಂಪರೆಯನ್ನು ಇಷ್ಟಪಡುವ ಇವರು ಅದನ್ನು ಉಳಿಸಿ ಬೆಳೆಸುವಲ್ಲಿಯೂ ಪ್ರಯತ್ನಿಸುತ್ತಿದ್ದಾರೆ. ತನ್ನ ಮಗಳಾದ ಶ್ರೀರಕ್ಷಾ ಕೂಡ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಲ್ಲಿ ಇವರ ಶ್ರಮ ಅಪಾರ. ಇವರಿಗೆ ಇನ್ನಷ್ಟು ಅವಕಾಶಗಳು ಇವರ ಕೈಗೊದಗಲಿ, ಇವರ ತಂಡ ಎಲ್ಲೆಡೆಯೂ ಗುರುತಿಸುವಂತಾಗಲಿ ಎಂದು ಹಾರೈಸೋಣ.

Writer- Sia Suma NaVuda


Malathi Venkatesh rao- Woman Yakshagana artist


ಧೀರ ಕಲೆಯೊಳಗೆ ಕೀರವಾಣಿಯರು – ೦೯

ಗಾಂಭೀರ್ಯದ ಕಿರೀಟ ವೇಷಧಾರಿ - ಶ್ರೀಮತಿ ಮಾಲತಿ ವೆಂಕಟೇಶ್ ರಾವ್
Writer- #Saisuma Navuda
ಮಹಿಳಾ ಯಕ್ಷಗಾನವೆಂದರೆ ಅಪಸ್ವರವೆತ್ತುವವರೇ ಹೆಚ್ಚು. ಇಂದು ಅವಕಾಶಗಳು ಹೇರಳವಾಗಿ ಸಿಗುತ್ತಿದ್ದರೂ ಪ್ರೋತ್ಸಾಹಿಸಿ, ನೀರೆರೆದು ಬೆಳೆಸುವವರು ಕಡಿಮೆಯೇ ಎನ್ನಬಹುದು. ಮಹಿಳಾ ಕಲಾವಿದರು ಸಮರ್ಥ ಪಾತ್ರಧಾರಿಗಳಾಗುವಲ್ಲಿ ಸೋಲುತ್ತಾರೆ ಎನ್ನುವವರು ಅನೇಕರು. ಇದಕ್ಕೆ ಮುಖ್ಯ ಕಾರಣವೆಂದರೆ ಮಹಿಳಾ ಕಲಾವಿದರ ಸ್ವರಭಾರ. ಎಷ್ಟೇ ಸಮರ್ಥವಾಗಿ ರಂಗದಲ್ಲಿ ಕುಣಿದರೂ, ಅಭಿನಯಿಸಿದರೂ ಮಾತು ಆರಂಭಿಸುವಾಗಲೇ ಪಾತ್ರದ ಘನತೆ ಇಳಿಯುತ್ತದೆ ಎನ್ನುತ್ತಾರೆ ಯಕ್ಷಗಾನವನ್ನು “ಗಂಡು” ಕಲೆ ಎಂದು ಲಿಂಗತ್ವದ ನೆಲೆಯಲ್ಲಿ ವಾದಿಸುವವರು. ಆದರೆ ಇದಕ್ಕೆ ಅಪವಾದವೆನ್ನುವಂತೆ ತನ್ನ ಸ್ವರದಿಂದ, ಗತ್ತು, ಗಾಂಭೀರ್ಯದ ಯಕ್ಷಗಾನದ ನಡೆಗಳಿಂದ ಉತ್ತಮ ಕಿರೀಟ ವೇಷಧಾರಿ ಎಂದು ಜನಮನ್ನಣೆಗೆ ಪಾತ್ರರಾದವರೇ ಶ್ರೀಮತಿ ಮಾಲತಿ ವೆಂಕಟೇಶ್ ರಾವ್.
ಶ್ರೀ ನಾರಾಯಣ ನಾವಡ ಹಾಗೂ ಶ್ರೀಮತಿ ಲಕ್ಷ್ಮೀ ನಾವಡ ದಂಪತಿಗಳ ಮಗಳಾಗಿ ಜನಿಸಿದ ಮಾಲತಿ ವೆಂಕಟೇಶ್ ಅವರು ಕೃಷ್ಣಾಪುರದ ಆಸುಪಾಸಿನಲ್ಲೇ ಪದವಿವರೆಗಿನ ವಿದ್ಯಾಭ್ಯಾಸದ ಜೊತೆಗೆ ನರ್ಸರಿ ಶಿಕ್ಷಕಿಯ ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ. ಸುಮಾರು ಹನ್ನೆರಡು ವರ್ಷಗಳ ಕಾಲ ಸ್ಥಳೀಯ ವಿದ್ಯಾಸಂಸ್ಥೆಗಳಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ಎಳವೆಯಿಂದಲೇ ಕಲಾವಲಯದಲ್ಲಿ ಆಸಕ್ತಿ ಹೊಂದಿದ ಇವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿ, ಆ ಬಳಿಕ ಹಿಂದೆ ನೋಡಿದ್ದೇ ಇಲ್ಲ. ಸುಮಾರು ಮೂವತ್ತು ವರ್ಷಗಳಿಗೂ ಮಿಕ್ಕಿದ ಅನುಭವ ಇವರಿಗೆ ಯಕ್ಷಗಾನ ಕ್ಷೇತ್ರದಲ್ಲಿದೆ. ಆರಂಭದಲ್ಲಿ ಶ್ರೀ ಗಿರೀಶ್ ನಾವಡರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿದ ಇವರು, ಮುಂದಕ್ಕೆ ಶ್ರೀ ಶಂಕರನಾರಾಯಣ ಮೈರ್ಪಾಡಿಯವರಲ್ಲಿಯೂ ಯಕ್ಷಗಾನವನ್ನು ಕಲಿತರು. ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿಯ ಮೂಲಕ ರಂಗಪ್ರವೇಶ ಮಾಡಿ, ಮುಂದಕ್ಕೆ ಪೂರ್ಣಿಮಾ ಯತೀಶ್ ರೈಯವರ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ತಂಡ, ಬಾಳ ಕಾಟಿಪಳ್ಳ, ಯಕ್ಷಾರಾಧನಾ ಕಲಾಕೆಂದ್ರ ಮಂಗಳೂರು, ಮುಂತಾದ ಅನೇಕ ತಂಡಗಳಲ್ಲಿ ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಯಕ್ಷಗಾನ ವೇಷಧಾರಿಯಾಗಿ ಮಾತ್ರವಲ್ಲದೇ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿಯಾಗಿಯೂ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ತೆಂಕುತಿಟ್ಟಿನ ಕಲಾವಿದೆಯಾಗಿರುವ ಇವರು ಕಿರೀಟ ವೇಷಗಳಲ್ಲಿ ವಿಶೇಷವಾಗಿ ಆಸಕ್ತರು ಹಾಗೂ ಅದರಲ್ಲೇ ಹೆಸರು ಪಡಕೊಂಡವರು. ಇವರ ಹೆಸರನ್ನು ಉತ್ತುಂಗಕ್ಕೇರಿಸಿದ ಪ್ರಮುಖ ಪಾತ್ರವೆಂದರೆ ʼಶ್ರೀ ದೇವಿ ಮಹಾತ್ಮ್ಯೆʼ ಪ್ರಸಂಗದ ರಕ್ತಬೀಜನ ಪಾತ್ರ. ಈ ಪಾತ್ರವನ್ನು ಕಂಡು ದಿ.ಸಂಪಾಜೆ ಶೀನಪ್ಪ ರೈಯವರೇ ಖುದ್ದಾಗಿ ಫೋನಾಯಿಸಿ ಇವರ ಪಾತ್ರ ನಿರ್ವಹಣೆಯನ್ನು ಹೊಗಳಿದ್ದರು. ಇವರ ವೇಷದ ನಡೆಯನ್ನು ಗಮನಿಸಿ ಮೆಚ್ಚಿಕೊಂಡ ಎಡನೀರು ಹಿರಿಯ ಶ್ರೀಗಳು “ನೀನು ನಮ್ಮ ಮೇಳಕ್ಕೆ ಸೇರು” ಎಂದಿದ್ದರAತೆ. ಹೀಗೆ ಅನೇಕ ಹಿರಿಯ, ಅನುಭವಿ ಕಲಾವಿದರಿಂದ ಮೆಚ್ಚುಗೆ ಪಡಕೊಂಡ ಹೆಗ್ಗಳಿಕೆ ಇವರದ್ದಾಗಿದೆ.
ಇವರ ಸ್ವರಭಾರದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದಕ್ಕೆ ಬಂದವರು ಮಹಿಳಾ ತಂಡದಲ್ಲಿರುವ ಹುಡುಗ ಯಾರು ಎಂದು ವಿಚಾರಿಸಿದ್ದರಂತೆ. “ವೀರ ಬಭ್ರುವಾಹನ”ದ ಅರ್ಜುನ ಇವರು ಮಾಡಿದ ಮೊದಲ ವೇಷ. ಆ ಬಳಿಕ ಸುಮಾರು ಐನೂರಕ್ಕೂ ಹೆಚ್ಚಿನ ಪಾತ್ರಗಳನ್ನು ದೇಶದಾದ್ಯಂತ ವಿವಿಧ ವೇದಿಕೆಗಳಲ್ಲಿ
ನಿರ್ವಹಿಸಿದ್ದಾರೆ. ʼಶ್ರೀ ದೇವಿ ಮಹಾತ್ಮ್ಯೆʼಯ ಮಧು-ಕೈಟಭ, ವಿದ್ಯುನ್ಮಾಲಿ, ರಕ್ತಬೀಜ, ವೀರಮಣಿ ಕಾಳಗದ ವೀರಮಣಿ, ಜಾಂಬವತೀ ಕಲ್ಯಾಣದ ಬಲರಾಮ, ರತಿ
ಕಲ್ಯಾಣದ ಕೌಂಡ್ಲಿಕ, ಪಾಂಚಜನ್ಯದ ಪಂಚಜನ, ದಕ್ಷಾಧ್ವರದ ದಕ್ಷ, ಸುದರ್ಶನ ವಿಜಯದ ಶತ್ರುಪ್ರಸೂದನ, ಅಗ್ರಪೂಜೆಯ ಶಿಶುಪಾಲ ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪುಂಡು ವೇಷವಾದ ಮಾರ್ತಾಂಡತೇಜನ ಪಾತ್ರವನ್ನೂ ಮಾಡಿದ್ದಾರೆ. ಇವರ ಮಾತಿನ ಧಾಟಿ, ವೇಷದ ಗತ್ತು, ಇವರು ನಿರ್ವಹಿಸುವ ಪಾತ್ರದ ಔನ್ನತ್ಯವನ್ನು ಎತ್ತಿ ಹಿಡಿದಿವೆ.
ಇವರ ಯಕ್ಷಗಾನ ಕಲಾಸೇವೆಯನ್ನು ಗುರುತಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನವರು “ಯಕ್ಷ ಧ್ರುವ ಕಲಾ ಗೌರವ”ವನ್ನು ನೀಡಿರುತ್ತಾರೆ. ಹಾಗೂ ಅನೇಕ ಸಂಘ- ಸಂಸತೆಗಳು ಇವರ ಕಲಾಸೇವೆಯನ್ನು ಗುರುತಿಸಿ, ಗೌರವಿಸಿವೆ. ತಾನು ಯಕ್ಷಗಾನ
ಕ್ಷೇತ್ರದಲ್ಲಿ ತೊಡಗಿಸಿಕೊಂಡದ್ದು ಮಾತ್ರವಲ್ಲದೇ ತಮ್ಮ ಏಕೈಕ ಪುತ್ರಿಯಾಗಿರುವ ಕೃತಿ ವಿ. ರಾವ್ ಇವರನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಆಕೆಯೂ ತಾಯಿಯಂತೆ ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಮಾಲತಿ ವೆಂಕಟೇಶ್ ಅವರ ಕಲಾಜೀವನ ಇನ್ನಷ್ಟು ಬೆಳಗಲಿ ಎಂಬ ಆಶಯ ನಮ್ಮದು.
Writer- #Saisuma Navuda

Poornima yathish Rai - Woman Yakshagana artist


ಧೀರ ಕಲೆಯೊಳಗೆ ಕೀರವಾಣಿಯರು 07

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ - ಶ್ರೀಮತಿ ಪೂರ್ಣಿಮಾ ಯತೀಶ್ ರೈ

ತೆಂಕುತಿಟ್ಟು ಯಕ್ಷಗಾನದ ಮಹಿಳಾ ಕಲಾವಿದರಲ್ಲಿ ʼಮಹಿಷʼನ ಪಾತ್ರಕ್ಕೆ ವಿಶೇಷ ಜೀವಕಳೆ ಕೊಟ್ಟವರು ಶ್ರೀಮತಿ ಪೂರ್ಣಿಮಾ ಯತೀಶ್ ರೈ. ಮಹಿಳಾ ತಂಡದ ಮುಖೇನ ಮನೆಮನೆ ಮಾತಾದವರು. ಅದೆಷ್ಟೋ ಮಹಿಳಾ ಕಲಾವಿದರನ್ನು ಮಾತ್ರವಲ್ಲದೇ ಪುರುಷ ಕಲಾವಿದರಿಗೂ ಸಮರ್ಥ ಗುರುವೆನಿಸಿ, ಶಿಷ್ಯರನ್ನು ಯಕ್ಷರಂಗಕ್ಕೆ ನೀಡಿದ ಹಿರಿಮೆ ಇವರದು. ಸದ್ಗೃಹಿಣಿಯಾಗಿ, ಕಲಾವಿದೆಯಾಗಿ, ನಿರ್ದೇಶಕಿಯಾಗಿ, ಸಂಘಟಕಿಯಾಗಿ, ಗುರುವಾಗಿ, ಉದ್ಯಮಿಯಾಗಿ, ಸಮಾಜಸೇವಕಿಯಾಗಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಾದರೂ ಒಂದಿಷ್ಟೂ ಅಹಂ ಇವರಲ್ಲಿಲ್ಲ.

ದಿ. ಸೇಸಪ್ಪ ಬಿ. ಶೆಟ್ಟಿ ಬಾಳ ಹಾಗೂ ಶಾರದಾ ಎಸ್. ಶೆಟ್ಟಿ ಇವರ ಮಗಳಾಗಿ ೦೮-೧೨-೧೯೭೪ ರಲ್ಲಿ ಮಧ್ಯ-ಕಾಟಿಪಳ್ಳದ ಬಾಳದಲಿ ್ಲಜನಿಸಿz ಇವರು ಬಿಕಾಂ ಪದವೀಧರರು. ಯಕ್ಷಗಾನ, ಜಾನಪದ ನೃತ್ಯ, ಕ್ರೀಡಾ ಚಟುವಟಿಕೆಗಳು, ನಾಟಕ ಮುಂತಾದ ಹೆಚ್ಚಿನ ಕ್ಷೇತ್ರಗಳಲ್ಲಿ ಎಳವೆಯಿಂದಲೇ ಬಹು ಆಸಕ್ತಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡವರು. ಕ್ರಮೇಣ ಹವ್ಯಾಸಿ ಯಕ್ಷಗಾನ ಕಲಾವಿದರೂ, ಉದ್ಯಮಿಯೂ, ಯಕ್ಷಗಾನ ಸಂಘಟಕರೂ, ಪೋಷಕರೂ ಆದಂತಹ, ತಮ್ಮ ಅಣ್ಣನಾದ ಬಾಳ ಮಾಧವ ಎಸ್. ಶೆಟ್ಟಿಯವರ ಪ್ರೇರಣೆ ಹಾಗೂ ಪ್ರೋತ್ಸಾಹದಿಂದ ಯಕ್ಷಗಾನ ಕ್ಷೇತ್ರದಲ್ಲಿ ವೀಶೇಷವಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ ಪೂರ್ಣಿಮಾ ರೈಯವರು.

ಶ್ರೀ ರಮೇಶ್ ಶೆಟ್ಟಿ ಬಾಯಾರು ಮತ್ತು ಶ್ರೀ ಶಿವರಾಮ ಪಣಂಬೂರು ಇವರಲ್ಲಿ ಯಕ್ಷಗಾನ ಮುಮ್ಮೇಳದ ಸರ್ವಾಂಗಗಳನ್ನೂ ಹಾಗೂ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳು ಮತ್ತು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಯಕ್ಷಗಾನದ ಹಿಮ್ಮೇಳವನ್ನೂ ಅಭ್ಯಸಿಸಿ, ತಮ್ಮ ಯಕ್ಷಗಾನದ ಆಸಕ್ತಿಯನ್ನು ಗಟ್ಟಿಗೊಳಿಸಿದರು. ೧೯೮೮ರ ಡಿಸೆಂಬರ್ ನಲ್ಲಿ ʼಪುಣ್ಯಕೋಟಿʼ ಪ್ರಸಂಗದ ಗಂಗೆʼ ಎಂಬ ಪಾತ್ರದ ಮೂಲಕ ಮೊದಲ ಬಾರಿಗೆ ಯಕ್ಷಗಾನ ರಂಗ ಪ್ರವೇಶ ಮಾಡಿದರು.

೧೯೮೯ ರಲ್ಲಿ ಶ್ರೀ ಮಾಧವ ಎಸ್. ಶೆಟ್ಟಿ ಬಾಳ ಇವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ, ಬಾಳ, ಕಾಟಿಪಳ್ಳ ತಂಡ ರೂಪುಗೊಂಡು ʼಅಭಿಮನ್ಯು ಕಾಳಗʼ ಪ್ರಸಂಗವನ್ನು ಪ್ರದರ್ಶಿಸಿತು. ಇದರಲ್ಲಿ ಸಾರಥಿಯ ಪಾತ್ರವನ್ನು ಪೂರ್ಣಿಮಾ ರೈಯವರು ನಿರ್ವಹಿಸಿದರು. ಆ ಬಳಿಕ ಯಕ್ಷಗಾನದಿಂದ ಹಿಂದೆ ಸರಿದದ್ದೇ ಇಲ್ಲ. ಅನೇಕ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನೇ ಬಾಚಿಕೊಂಡ ಹೆಗ್ಗಳಿಕೆ ಇವರದು. ಲಂಡನ್ 

ಯಕ್ಷಗಾನ ಸ್ಪರ್ಧೆಯಲ್ಲೂ ಅಂತಿಮ ಸುತ್ತಿಗೆ ಆಯ್ಕೆಯಾದ ಮಹಿಳಾ ತಂಡ ಇವರ ನೇತೃತ್ವದ್ದು ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ. 

ಚೆಲ್ಯಡ್ಕ ನುಳಿಯಾಲು ಕುಟುಂಬದ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶ್ರೀ ಯತೀಶ್ ರೈಯವರನ್ನು ಕೈ ಹಿಡಿದ ಬಳಿಕವೂ ಇವರ ಯಕ್ಷ ಪಯಣಕ್ಕೇನೂ ಅಡ್ಡಿಯಾದದ್ದಿಲ್ಲ. ಮದುವೆಯಾದ ಬಳಿಕ ಇನ್ನೂ ಹೆಚ್ಚಿನ ರೀತಿಯಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡವರಿವರು. ಶ್ರೀ ಯತೀಶ್ ರೈಯವರೂ ಯಕ್ಷಗಾನಾಸಕ್ತರು. ವೇಷ ಮಾಡಿದ ಅನುಭವವೂ ಇವರಿಗಿದೆ. ಮಕ್ಕಳಾದ ಸಾಕ್ಷ ಹಾಗೂ ಸಾತ್ವಿಕ್ ಕೂಡ ಈ ರಂಗದಲ್ಲಿ ತೊಡಗಿಸಿಕೊಂಡವರು. ತಮ್ಮ ತಾಯಿಮನೆ ಹಾಗೂ ಗಂಡನ ಮನೆಯ ಪ್ರೋತ್ಸಾಹ ಪೂರ್ಣಿಮಾ ರೈಯವರನ್ನು ಇಷ್ಟರ ಮಟ್ಟಿಗೆ ಗುರುತಿಸಿಕೊಳ್ಳುವ ಹಾಗೆ ಮಾಡಿತು ಎಂದು ಹೇಳುವುದನ್ನು ಇವರು ಎಂದೂ ಮರೆಯುವುದಿಲ್ಲ.

ಸುಧನ್ವಾರ್ಜುನ, ಬಭ್ರುವಾಹನ, ಅಭಿಮನ್ಯು, ದಕ್ಷಯಜ್ಞ, ಶ್ರೀ ದೇವಿ ಮಹಾತ್ಮ್ಯೆ, ಜಾಂಬವತೀ, ಅಂಬಾ ಶಪಥ, ವೀರಮಣಿ, ತಾರಕಾಸುರ, ಭೀಷ್ಮಪ್ರತಿಜ್ಞೆ, ಕನಕಾಂಗಿ ಕಲ್ಯಾಣ, ಪಾಂಚಜನ್ಯ, ಕರ್ಣಾರ್ಜುನ, ನರಕಾಸುರ, ಇಂದ್ರಜಿತು, ತಾಮ್ರಧ್ವಜ, ರುಕ್ಮಾಂಗದ, ಸುದರ್ಶನ, ಭಾರ್ಗವ ವಿಜಯ ಮುಂತಾದ ಅನೇಕ ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿದ್ದಲ್ಲದೇ, ಕೋಟಿ-ಚೆನ್ನಯ, ಧರ್ಮಗದ್ದಿಗೆ, ಸ್ವಾಮಿಭಕ್ತ ಮಂಜಣ್ಣೆ, ಬ್ರಹ್ಮಬೈದ್ಯೆರ್, ತುಳುನಾಡಸಿರಿ ,ಮುಂತಾದ ತುಳು ಪ್ರಸಂಗಗಳು, ಶ್ರೀಅಮೃತ ಸೋಮೇಶ್ವರ ವಿರಚಿತ ʼಪ್ರಜ್ಞಾವಿಜಯʼದಂತಹ ಸಾಮಾಜಿಕ ಪ್ರಸಂಗಗಳಲೂ ್ಲಪಾತ್ರ ನಿರ್ವಹಿಸಿ ಜನ ಮೆಚ್ಚುಗೆ ಪಡೆದವರು ಇವರು.

ದಕ್ಷ, ಅರ್ಜುನ, ಸಾಲ್ವ, ಕರ್ಣ, ಕೌರವ, ಜಾಂಬವ, ರಕ್ತಬೀಜ, ಕಾರ್ತವೀರ್ಯ, ಶಂತನು, ಇಂದ್ರಜಿತು, ಹಿರಣ್ಯಾಕ್ಷ, ಕೌಂಡ್ಲಿಕ, ವೀರಮಣಿ, ಶತ್ರುಘ್ನ ಮುಂತಾದ ಕಿರೀಟ ವೇಷಗಳು, ಮಹಿಷಾಸುರ, ಶುಂಭ, ನರಕಾಸುರ, ತಾರಕಾಸುರ,

ಶತ್ರುಪ್ರಸೂದನ, ಯಮ ಇತ್ಯಾದಿ ಬಣ್ಣದ ವೇಷಗಳು, ಅಜಮುಖಿ, ಪೂತನಿ, ಶೂರ್ಪನಖಿಯಂತಹ ಹೆಣ್ಣುಬಣ್ಣಗಳು, ಕಂಸ, ಭಸ್ಮಾಸುರನಂತಹ ನಾಟಕೀಯ ಪಾತ್ರಗಳು, ಕೋಟಿ, ಚೆನ್ನಯ, ಮಂಜಣ್ಣೆ, ಕಾಂತಣ್ಣ ಪೂಂಜನAತಹ ಪಾತ್ರಗಳು, ಮಾರ್ತಾಂಡತೇಜ, ಪ್ರದ್ಯುಮ್ನ, ವೃಷಕೇತುವಿನಂತಹ ಪಕಡಿವೇಷಗಳು, ಶ್ರೀದೇವಿ, ಕೌಶಿಕೆ, ಗಂಗೆಯAತಹ ಸ್ತ್ರೀ ಪಾತ್ರಗಳು, ಮಾಲಿನಿದೂತ, ದೇವದೂತ, ಪೊಲಿಬಾಲೆಯಂತಹ ಹಾಸ್ಯಪಾತ್ರಗಳು ಹೀಗೆ ಯಕ್ಷರಂಗದ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಅನುಭವ ಇವರಲ್ಲಿದೆ. ಪೂರ್ಣಿಮಾ ಯತೀಶ್ ರೈಯವರ ಮಹಿಷಾಸುರನನ್ನು ಕಂಡು ಸ್ವತಃ ಶ್ರೀಕುಂಬಳೆ ಸುಂದರರಾಯರೇ “ರಂಗದಲ್ಲಿ ನಿನಗೇನು ಮಹಿಷಾಸುರನ ಆವೇಶವಾಗುತ್ತದಾ? ಆ ರೀತಿಯಲ್ಲಿ ಕುಣಿಯುತ್ತಿಯಲ್ಲಾ…” ಎಂದು ಅಚ್ಚರಿ ವ್ಯಕ್ತ ಪಡಿಸಿದ್ದರಂತೆ. ದಿ. ಗೇರುಕಟ್ಟೆ ಗಂಗಯ್ಯ ಶೆಟ್ರು “ಯಕ್ಷಗಾನ ಮೇಳಗಳಲ್ಲೂ ನಿನ್ನಂತಹ ಮಹಿಷಾಸುರ ಕಾಣಸಿಗಲಾರದು” ಎಂದಿದ್ದರAತೆ. ಪ್ರೊ. ಅಮೃತ ಸೋಮೇಶ್ವರರು ಇವರ ಕಿರೀಟ ವೇಷಗಳನ್ನು ಮೆಚ್ಚಿ ಮಾತನಾಡಿದ್ದರಂತೆ. ಇವರ ಗುರುಗಳಾದ ಶ್ರೀ ರಮೇಶ್ ಶೆಟ್ಟಿ ಬಾಯಾರು ಅವರು ಇವರ ಪಾತ್ರಗಳನ್ನು ನೋಡಿ “ಗುರುವಿಗೆ ತಕ್ಕ ಶಿಷ್ಯೆ ನೀನು” ಎಂದು ಕೊಂಡಾಡಿದ್ದರAತೆ. ಪೂರ್ಣಿಮಾ ರೈಯವರು ಶ್ರೀಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ, ಕಾಟಿಪಳ್ಳ, ಯಕ್ಷಗಾನ ಅಧ್ಯಯನ ಕೇಂದ್ರ ಶ್ರೀ ಗೋವಿಂದದಾಸ ಕಾಲೇಜು ಸುರತ್ಕಲ್ ಮುಂತಾದವುಗಳ ನಿರ್ದೇಶಕಿ, ಯಕ್ಷಮಣಿ ಕಲಾತಂಡ ಚೇಳಾರು, ಕಲಾಕುಂಭ ಯಕ್ಷವೃಂದ ಕುಳಾಯಿ ಹಾಗೂ ಅನೇಕ ಶಾಲೆಗಳಲ್ಲಿ, ಮಹಿಳಾ ಮಂಡಲಗಳಲ್ಲಿ ಯಕ್ಷಗಾನ ಗುರುಗಳು, ಅಲ್ಲದೇ ಅನೇಕ ಕಡೆಗಳಲ್ಲಿ ಯಕ್ಷಗಾನ ನಿರ್ದೇಶನ, ಅತಿಥಿ ಕಲಾವಿದೆಯಾಗಿಯೂ ಅನೇಕ ತಂಡಗಳಲ್ಲಿ ಭಾಗವಹಿಸಿದವರಿವರು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮಾತ್ರವಲ್ಲದೇ, ಕುಂದಾಪುರ, ಶಿವಮೊಗ್ಗ, ಹುಬ್ಬಳ್ಳಿ, ಗದಗ, ಬೆಂಗಳೂರು, ಚೆನ್ನೈ, ಮುಂಬೈಯAತಹ ಮಹಾನಗರಗಳಲ್ಲೂ ಯಕ್ಷ ಸುಗಂಧವನ್ನು ಹರಡಿಸಿದ್ದಾರೆ. 

ಯಕ್ಷಪೂರ್ಣಿಮಾ ಎಂಬ ಬಿರುದಾಂಕಿತರು ಇವರು. ಕಿತ್ತೂರು ರಾಣಿ ಚೆನ್ನಮ್ಮ, ಕರ್ನಾಟಕ ರಾಜ್ಯ ಪ್ರಶಸ್ತಿ – ೨೦೧೫-೧೬, ಕರ್ನಾಟಕ ಯಕ್ಷ ಮಹಿಳಾರತ್ನ, ವಿಶ್ವ ತೌಳವ ಸಿರಿ. ಯಕ್ಷಲಕ್ಷ್ಮಿ, ಯಕ್ಷರಕ್ಷ, ಯಕ್ಷಧ್ರುವ, ಯಕ್ಷಕಲಾರಾಧಕಿ, ಯಕ್ಷಪ್ರತಿಭೆ, ಪ್ರೇಮನಾರಾಯಣಿ, ಯಕ್ಷಸಾಧಕಿ, ಯಕ್ಷಪ್ರಮೀಳಾ, ಬಿಮ್ಸ್ ಪ್ರಶಸ್ತಿ, ಯಕ್ಷಾನುಗ್ರಹ, ಯಕ್ಷ ಕಲಾಕೈಂಕರ್ಯ, ಗುರುದೇವಾನುಗ್ರº ಪ್ರಶಸ್ತಿ, ಮುಂತಾದ ಅನೇಕ ಪ್ರಶಸ್ತಿಗಳ ಜೊತೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ʼರಜತಸಂಭ್ರಮʼದಲ್ಲಿ “ಯಕ್ಷಶಿಕ್ಷಕಿ” ಪುರಸ್ಕಾರ ಪಡೆದವರು. ಲಯನ್ಸ್ ಇಂಟರ್ ನ್ಯಾಷನಲ್ ಅವಾರ್ಡ್, ರೋಟರಿ ಕ್ಲಬ್ ಅವಾರ್ಡ್, ಸಮಾಜಸೇವಕಿ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಇಷ್ಟು ಮಾತ್ರವಲ್ಲದೇ ಅನೇಕ ಸಂಘ- ಸಂಸ್ಥೆಗಳು ಇವರನ್ನು ಗೌರವಿಸಿವೆ, ಪುರಸ್ಕರಿಸಿವೆ. 

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕೇಂದ್ರೀಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗುರುತಿಸಿಕೊಂಡವರು, ಬಂಟರಸAಘಸುರತ್ಕಲ್ ನ ಸಕ್ರಿಯ ಸದಸ್ಯೆ ಇವರು. ಅನೇಕ ಯಕ್ಷಗಾನ ಕಲಾವಿದರಿಗೆ, ಮಹಿಳಾ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ, ಕಷ್ಟದಲ್ಲಿರುವವರಿಗೆ, ಸಹಕಾರ, ಅನೇಕ ಕಡೆಗಳಲ್ಲಿ ಉಚಿತವಾಗಿ ಯಕ್ಷಗಾನ ಶಿಕ್ಷಣವನ್ನು ಅನೇಕ ವರ್ಷಗಳಿಂದ ನೀಡುತ್ತಾ ಬಂದವರಿವರು. ಸರಳ-ಸಜ್ಜನ ಹೃದಯಿ, ಕಲಾಪೋಷಕಿಯಾದ ಇವರ ಯಕ್ಷಪಯಣ ಹೀಗೆ ಮುಂದುವರಿಯಲಿ ಎಂದು ಆಶಿಸೋಣ. -

ಸಾಯಿಸುಮಾ ಎಂ. ನಾವಡ, ಕಾರಿಂಜ


Rathnavathi H M Thalancheri- Woman Yakshagana artist


ಧೀರ ಕಲೆಯೊಳಗೆ ಕೀರವಾಣಿಯರು -  06

ಶ್ರೀಮತಿ ರತ್ನಾವತಿ ಹೆಚ್.ಎಂ. ತಲಂಜೇರಿ - ಯಕ್ಷಗಾನ ಸಂಘ ಕಟ್ಟಿದ ಗಡಿನಾಡಿನ ದಿಟ್ಟ ಮಹಿಳೆ

ಎಳವೆಯಲ್ಲಿ ಓದುವ ಆಸಕ್ತಿಯಿದ್ದರೂ ಎಲ್ಲರಿಗೆ ಅದಕ್ಕೆ ಬೇಕಾದ ಪ್ರೋತ್ಸಾಹದ ವಾತಾವರಣ ಸಿಕ್ಕುವುದಿಲ್ಲ. ಪ್ರೋತ್ಸಾಹ ದೊರೆತವರು ಓದಿ ಏನೂ ಸಾಧಿಸುವುದೂ ಇಲ್ಲ. ಪ್ರಥಮ ಪಿಯುಸಿಯಲ್ಲಿ ಇರುವಾಗಲೇ ಮದುವೆಯಾಗಬೇಕಾಗಿ ಬಂದು, ಅಧ್ಯಾಪಕರು, ಬಹಳ ಕ್ರಿಯಾಶೀಲ ವ್ಯಕ್ತಿಯೂ ಆಗಿದ್ದ ಕೃಷ್ಣಭಟ್ ಅವರ ಕೈ ಹಿಡಿಯುತ್ತಾರೆ ರತ್ನಾವತಿಯವರು. ಒಮ್ಮೆಗೆ ವಿದ್ಯಾಭ್ಯಾಸ ಮೊಟಕುಗೊಂಡರೂ ಪತಿಯ ಪ್ರೋತ್ಸಾಹ ಇವರ ಆಸಕ್ತಿಗೆ ನೀರೆರೆದು ಪೋಷಿಸುತ್ತದೆ.

ಪುತ್ತೂರು ತಾಲೂಕಿನ ಹಾಲುಮಜಲು ನಿವಾಸಿ ಈಶ್ವರಭಟ್ ಮತ್ತು ಶಂಕರಿ ಅಮ್ಮನವರ ಮಗಳಾಗಿ ಜನನ. ಬಾಲ್ಯದಲ್ಲಿ ಬಡತನವಿದ್ದರೂ ಮನೆಯವರ ಪ್ರೀತಿಗೆ ಯಾವ ಕೊರತೆಯೂ ಇರಲಿಲ್ಲ.  ತನ್ನ ನಾಲ್ಕನೇ ವಯಸ್ಸಿಗೆ ಅಕ್ಕಂದಿರ ಜೊತೆ ಶಾಲೆಯ ಮೆಟ್ಟಿಲನ್ನು ಹತ್ತಿದ ಬಹಳ ಚುರುಕಿನ ಹುಡುಗಿ. ಪ್ರಥಮ ಪಿಯುಸಿಯವರೆಗಿನ ವಿದ್ಯಾಭ್ಯಾಸವನ್ನು ಬಹಳ ಕಷ್ಟಪಟ್ಟೇ ಮಾಡಿದ್ದರೂ ೧೯೭೮ ರಲ್ಲಿ ಕೃಷ್ಣಭಟ್ಟರನ್ನು ಕೈಹಿಡಿಯುವ ಕಾಲಕ್ಕೆ ಅದು ಅರ್ಧಕ್ಕೆ ನಿಂತಿತು. ಬಳಿಕ ಸ್ವತಃ ಅಧ್ಯಾಪಕರಾಗಿದ್ದ ಕೃಷ್ಣಭಟ್ಟರು ವಿದ್ಯೆಯ ಮಹತ್ವವನ್ನರಿತವರಾದ್ದರಿಂದ ತನ್ನ ಪತ್ನಿಯನ್ನು ಮುಂದಕ್ಕೆ ಓದಿಸಿ, ಪಿಯುಸಿ, ಟಿ.ಸಿ.ಹೆಚ್., ಹಿಂದಿ ಪ್ರವೀಣ(ಖಾಸಗಿ), ಬಿ.ಎ. ಪದವಿಯನ್ನು ಪಡೆದುಕೊಳ್ಳುವಂತೆ ಮಾಡಿದರು. ವೃತ್ತಿಯಲ್ಲಿ ಶಿಕ್ಷಕಿಯಾಗಿಸಿದರು. ಪ್ರವೃತ್ತಿಯಾದ ಯಕ್ಷಗಾನಕ್ಕೆ ನೀರೆರೆದು ಪೋಷಿಸಿದರು. ಅನೇಕ ಶಾಲೆಗಳಲ್ಲಿ ಶಿಕ್ಷಕಿಯಾಗಿ ೨೦೧೭ ರವರೆಗೆ ಅನೇಕ ಮಕ್ಕಳ ಭವಿಷ್ಯವನ್ನು ಕಟ್ಟಿದರು. ೧೯೮೮ ರಲ್ಲಿ ಅನುದಾನಿತ ಪ್ರಾಥಮಿಕ ಶಾಲೆ ಅಡ್ಯನಡ್ಕದಲ್ಲಿ ಶಿಕ್ಷಕ ವೃತ್ತಿಗೆ ಸೇರಿ, ೧೯೯೪ ರಲ್ಲಿ ಸರಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಕಿಯಾಗಿ ನೇಮಕವಗೊಳ್ಳುತ್ತಾರೆ. ಎತ್ತುಗಲ್ಲು, ದೇಲಂತಬೆಟ್ಟು, ಅಮೈ, ಮುಂತಾದೆಡೆಯಲ್ಲಿ ಕರ್ತವ್ಯ ನಿರ್ವಹಿಸಿ ೨೦೧೭ ರಲ್ಲಿ ನಿವೃತ್ತಿ ಹೊಂದುತ್ತಾರೆ.  ೧೯೮೯ ರಲ್ಲಿ ಅಡ್ಯನಡ್ಕ ಮಹಿಳಾ ಮಂಡಲಿಯ ಮುಂದಾಳತ್ವ ಸ್ವೀಕರಿಸಿ ಮೊದಲ ಬಾರಿಗೆ ತನ್ನ ೩೨ ನೇ ವಯಸ್ಸಿಗೆ ʼಸುದರ್ಶನ ವಿಜಯʼ ಎಂಬ ಪ್ರಸಂಗದಲ್ಲಿ ಮಹಿಳಾ ಯಕ್ಷಗಾನದಲ್ಲಿ ದೇವೇಂದ್ರನ ಪಾತ್ರ ನಿರ್ವಹಿಸಿ ರಂಗವೇರುತ್ತಾರೆ. ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಆವಾಗಲೇ ಮಹಿಳಾ ಯಕ್ಷಗಾನ ತಂಡವನ್ನು ಸ್ಥಾಪನೆ ಮಾಡಿದರು ರತ್ನಾವತಿಯವರು. ಇದಕ್ಕೆಲ್ಲಾ ಮುಖ್ಯ ಕಾರಣ ತನ್ನ ಪತಿ ಎನ್ನುವುದನ್ನು ಮರೆಯದ ಇವರು ಅವರ ಪ್ರೋತ್ಸಾಹದಿಂದಲೇ ತಮ್ಮ ತಂಡದ ಪ್ರದರ್ಶನಗಳನ್ನು ಅನೇಕ ಕಡೆಗಳಲ್ಲಿ ಕೊಡುತ್ತಾರೆ. ಮಹಿಳಾ ಯಕ್ಷಗಾನ ಅಷ್ಟೊಂದು ಚಾಲ್ತಿಯಲ್ಲಿಲ್ಲದ ಕಾಲವದು. ಅವಕಾಶಗಳು ಬಹಳಷ್ಟು ಕಡೆಯಲ್ಲಿ ಸಿಗುತ್ತಿದ್ದವು. ಆದರೆ ದಾಖಲೀಕರಣಕ್ಕೆ ಅನುಕೂಲ ಆ  ಸಮಯದಲ್ಲಿಲ್ಲದ ಕಾರಣ ಇಂದಿನAತೆ ನಾವು ಮಾಡಿದ ವೇಷಗಳನ್ನು ಚಿತ್ರೀಕರಣಗಳನ್ನು ನೋಡುವುದಕ್ಕಾಗುವುದಿಲ್ಲ. ಇವತ್ತು ತಂತ್ರಜ್ಞಾನ ಮುಂದುವರೆದಿದೆ. ಎಲ್ಲವೂ ದಾಖಲೆಯಾಗುತ್ತದೆ ಎನ್ನುತ್ತಾರೆ ಇವರು.  ಹಳ್ಳಿ ಪ್ರದೇಶದ ಯುವತಿಯರನ್ನು,  ಮಹಿಳೆಯರನ್ನು ಒಟ್ಟು ಸೇರಿಸಿ ರಾಜ್ಯಾದ್ಯಂತ ಸುಮಾರು ಆರು ನೂರಕ್ಕೂ ಮಿಕ್ಕಿ ಯಕ್ಷಗಾನ ಪ್ರದರ್ಶನಗಳನ್ನು ಅಡ್ಯನಡ್ಕದ ಮಹಿಳಾ ಯಕ್ಷಗಾನ ಸಂಘ ಇವರ ನೇತೃತ್ವದಲ್ಲಿ ಕೊಟ್ಟಿದೆ ಎನ್ನುವುದು ಒಂದು ಹೆಮ್ಮೆಯ ವಿಷಯ. ಇವರು ಕಂಸ, ಅರ್ಜುನ, ಹಂಸಧ್ವಜ, ಶತ್ರುಪ್ರಸೂದನ, ದೇವೇಂದ್ರ, ರುಕ್ಮಾಂಗದ, ವೀರಮಣಿ, ಅಂದಕಾಸುರ, ಮುರಾಸುರ, ನರಕಾಸುರ, ಕೀರ್ತಿವರ್ಮ, ಸುಧರ್ಮ, ಕೃಷ್ಣ, ವಿಷ್ಣು, ಅನಿವಾರ್ಯತೆಯೊದಗಿದಾಗ ಕಚ್ಚೆ ಸ್ತ್ರೀವೇಷ ಹಾಗೂ ಹಾಸ್ಯಪಾತ್ರಗಳನ್ನು ಕೂಡ ನಿರ್ವಹಿಸಿ ಜನಮೆಚ್ಚುಗೆ ಪಡೆದ ಹಿರಿಮೆ ರತ್ನಾವತಿಯವರಿಗೆ ಸಲ್ಲುತ್ತದೆ. ತಮ್ಮ ತಂಡದ ಪ್ರದರ್ಶನಗಳಲ್ಲಿ ಹಾಗೂ ಅನೇಕ ಕಡೆಗಳಲ್ಲಿ ಏಕಾದಶಿ ದೇವೀಮಹಾತ್ಮ್ಯೆಯ ಮುರಾಸುರನ ಪಾತ್ರವನ್ನೇ ಸುಮಾರು ೪೨೬ ಸಲ ಹಾಕಿರುವೆ ಎಂದುಹೆಮ್ಮೆಯಿAದ ಹೇಳಿಕೊಳ್ಳುತ್ತಾರೆ. ಯಕ್ಷಗಾನ ಪಾತ್ರಧಾರಿಯಾಗಿ ಮಾತ್ರವಲ್ಲದೇ ತಾಳಮದ್ದಳೆಗಳಲ್ಲಿ ಬಾಗವಹಿಸಿ ಸುಮಾರು ೨೫೦ ಪ್ರದರ್ಶನಗಳನ್ನು ಕೊಟ್ಟಿದ್ದಾರೆ ರತ್ನ ಟೀಚರ್ ಅವರು. ಮಂಗಳೂರು ಆಕಾಶವಾಣಿಯಲ್ಲಿ ಮೊದಲು ೧೯೯೩ ರಲ್ಲಿ ಇವರ ಮಹಿಳಾ ತಾಳಮದ್ದಳೆ ತಂಡವೊAದು ಇತ್ತು. ಕಾಲಕ್ರಮೇಣ ಮನೆ, ಸಂಸಾರದ ಜವಾಬ್ದಾರಿ ಹೆಚ್ಚಾದ ಕಾರಣ ಈಗ ಹವ್ಯಾಸಿ ಕೂಡವಿದೆ. ಅದರಲ್ಲಿ ಅರ್ಥಧಾರಿಯಾಘಿ ಭಾಗವಹಿಸುತ್ತಾರೆ ಇವರು. ತಮ್ಮ ತಂಡದ ಯಕ್ಷಗಾನ ತರಬೇತಿಗಾಗಿ ಉಪ್ಪಳ ಕೃಷ್ಣಮಾಸ್ತರ್, ಉಂಡೆಮನೆ ಶ್ರೀಕೃಷ್ಣಭಟ್ ಅವರನ್ನು ಕರೆಸಿ, ತರಬೇತಿ ಕೊಡಿಸಿದ್ದಾರೆ. ಬರೀ ಮಹಿಳಾ ತಂಡ ಮಾತ್ರವಲ್ಲದೇ ಮಕ್ಕಳ ಯಕ್ಷಗಾನ ತಂಡವನ್ನೂ ಕಟ್ಟುತ್ತಾರೆ. ಈಗ ಹವ್ಯಾಸಿಗಳನ್ನು ಸಂಘಟಿಸಿಯೂ ಯಕ್ಷಗಾನ ಪ್ರದರ್ಶನಗಳನ್ನೂ ನೀಡುತ್ತಾರೆ. ಇವರ ಪ್ರತಿಭೆ ಇಷ್ಟು ಮಾತ್ರವಲ್ಲದೇ ಸಾಹಿತ್ಯಾಸಕ್ತಿಯೂಇವರಿಗಿದೆ. ಕಥೆ, ಕವನ, ಚುಟುಕು, ಶಿಶುಸಾಹಿತ್ಯ, ಗಝಲ್, ವೈಚಾರಿಕ ಲೇಖನಗಳು, ಒಳ್ನುಡಿಗಳನ್ನು ಬರೆಯುವುದರಲ್ಲೂ ನಿಸ್ಸೀಮರು. ಆಕಾಶವಾಣಿಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಮಾತ್ರವಲ್ಲದೇ ಮಹಿಳಾ ಮತ್ತು ಮಕ್ಕಳಿಗೆ ಸಂಬAಧಿಸಿದ ಕಾರ್ಯಕ್ರಮಗಳನ್ನು ಕೂಡ ನೀಡಿದ್ದಾರೆ. ವಧುವಿನ ಅಲಂಕಾರವೂ ಇವರ ವಿಶೇಷ ಹವ್ಯಾಸ. ಇಷ್ಟರವರೆಗೆ ೧೦೦೨ ವಧುಗಳಿಗೆ ಶೃಂಗಾರವನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಿದವರಿವರು. ಒಟ್ಟಾರೆಯಾಗಿ ಹೇಳುವುದಾದರೆ ಕ್ರಿಯಾಶೀಲ ವ್ಯಕ್ತಿತ್ವ ಇವರದು. ರತ್ನಾಕೆ. ಭಟ್ ಎಂದೇ ಹೆಚ್ಚಿನವರಿಗೆ ಚಿರಪರಿಚಿತರು. ಇವರ ಸಾಧನೆಗೆ ೫೦ಕ್ಕೂ ಮಿಕ್ಕಿ ವೇದಿಕೆಗಳಲ್ಲಿ ಪ್ರಶಸ್ತಿ, ಸಂಮಾನಗಳು ಅವಾಗಿಯೇ ಅರಸಿಕೊಂಡು ಬಂದಿವೆ. ಗಡಿನಾಡ ಉತ್ತಮ ಮಹಿಳಾ ಶಿಕ್ಷಕಿ-ಸಂಘಟಕಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಅಖಿಲ ಹವ್ಯಕ ಸಭಾದ ಪುರಸ್ಕಾರ, ಕನ್ನಡ-ಸಂಸ್ಕೃತಿ ಇಲಾಖೆಯ ಪುರಸ್ಕಾರ ಮುಂತಾದವು ಇವರ ಕೀರ್ತಿಯನ್ನು ಉತ್ತುಂಗಕ್ಕೇರಿಸಿವೆ. ತಮ್ಮೆಲ್ಲಾ ಯಶಸ್ಸಿನ ಹಿಂದಿನ ಶಕ್ತಿ ತಮ್ಮ ಪತಿ ಎನ್ನುವುದನ್ನು ಮರೆಯದೇ, ಒಬ್ಬ ಮಗ ಮತ್ತು ಒಬ್ಬಾಕೆ ಮಗಳನ್ನು ಹೊಂದಿದ ತುಂಬು ಸಂಸಾರ ಇವರದು. ಅವರು ಕೂಡ ಸಂಸಾರಸ್ಥರು. ಈ ಸುಖೀಸಂಸಾರದೊAದಿಗೆ ಇವರ ಬಾಳು ಹಾಗೂ ಕಲಾಜೀವನ ಇನ್ನಷ್ಟು ಬೆಳಗುವಂತಾಗಲಿ ಎಂಬ ಹಾರೈಕೆ ನಮ್ಮದು.

ಲೇಖಕರು  - ಸಾಯಿಸುಮಾ ಎಂ. ನಾವಡ, ಕಾರಿಂಜ


Rathnavathi Shiranthadka - Woman Yakshagana artist


ಧೀರ ಕಲೆಯೊಳಗೆ ಕೀರವಾಣಿಯರು - ೦೫

ಯಕ್ಷಗಾನದಲ್ಲಿ ಮುನ್ನೆಲೆಗೆ ಬರಲಾಗದೇ ಉಳಿದ ಮಹಿಳಾ ಭಾಗವತರು - ಶ್ರೀಮತಿ ರತ್ನಾವತಿ ಶಿರಂತಡ್ಕ

ಎಪ್ಪತ್ತರ ದಶಕದಲ್ಲಿ ಮಹಿಳೆಯೋರ್ವಳು ಯಕ್ಷಗಾನ ನೋಡುವುದೇ ಕಷ್ಟ, ಅಂತಹದರಲ್ಲಿ ಭಾಗವತಿಕೆಯನ್ನು ಕಲಿತು ತನ್ನ ಮನೆಯವರ ಪ್ರೋತ್ಸಾಹ, ಸಹಕಾರಗಳಿದ್ದರೂ ಪತಿಯ ಉದ್ಯೋಗದಿಂದ ಊರೂರು ತಿರುಗಬೇಕಾಗಿ ಬಂದು, ಅವಕಾಶವಂಚಿತರಾದ ಮಹಿಳಾ ಭಾಗವತರು ಶ್ರೀಮತಿ ರತ್ನಾವತಿ ಶಿರಂತಡ್ಕ. ಹೀಗಿದ್ದರೂ ತಮ್ಮ ಕಲೆಯೊಲವನ್ನು ಉಳಿಸಿಕೊಂಡವರು ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಂಡವರು,  ಆ ಮುಖೇನ ಕಲೆಯನ್ನು ಬೆಳೆಸುವುದಕ್ಕೆ ಪ್ರಯತ್ನಿಸಿದವರು.

ಇವರು ಕಾಸರಗೋಡಿನ ಪಡ್ರೆ ಗ್ರಾಮದ ಶಿರಂತಡ್ಕದಲ್ಲಿ ಜನಿಸಿದವರು. ಇವರ ತಂದೆ ಶಿರಂತಡ್ಕ ನಾರಾಯಣ ಭಟ್ ಹಾಗೂ ತಾಯಿ ರೇಣುಕ ಅಮ್ಮ. ಇವರೀರ್ವರ ಮಗಳಾಗಿ ೧೯೪೮ ಸಪ್ಟೆಂಬರ್ ೨೩ ರಂದು ಇವರ ಜನನ. ಇವರು ತಮ್ಮ ಪ್ರಾಥಮಿಕ ವಿದ್ಯಾಭಾಸವನ್ನು ಪೆರ್ಲದ ಶಾಲೆಯಲ್ಲಿಯೇ ಪೂರ್ಣಗೊಳಿಸಿದರು. ತಾವು ಹುಟ್ಟಿ, ಬೆಳೆದ ಪರಿಸರ ಯಕ್ಷಗಾನದ ಆಸಕ್ತರಿಂದಲೇ ಕೂಡಿದ್ದು, ಅಲ್ಲಿ ನಡೆಯುತ್ತಿದ್ದ ಯಕ್ಷಗಾನಗಳನ್ನು ಕಾಣುತ್ತಾ, ಮನದಲ್ಲೇ ಅದರ ಹಾಡುಗಳನ್ನು ಗುನುಗುನಿಸುತ್ತಾ ಬೆಳೆದವರು ರತ್ನಾವತಿಯವರು. ತಮ್ಮ ವಾತಾವರಣವೇ ಅವರಿಗೆ ಯಕ್ಷಗಾನದ ಆಸಕ್ತಿಗೆ ಪೂರಕವಾಯಿತೆಂದರೆ ಹೆಚ್ಚಲ್ಲ. ರತ್ನಾವತಿಯವರ ತಂದೆ ಶಿರಂತಡ್ಕ ನಾರಾಯಣ ಭಟ್ಟರು ಸ್ವತಃ ಭಾಗವತರು. ಅವರ ಭಾಗವತಿಕೆಯನ್ನು ಕೇಳುತ್ತಾ ತಾನೂ ಕಲಿಯಬೇಕೆಂಬ ಆಸಕ್ತಿಯನ್ನು ಬೆಳೆಸಿಕೊಂಡದ್ದನ್ನು ಅರ್ಥವಿಸಿಕೊಂಡ ನಾರಾಯಣ ಭಟ್ಟರು, ಮಗಳಿಗೆ ಭಾಗವತಿಕೆಯನ್ನು ಕಲಿಸುವ ಮನಮಾಡಿದರು. ಹಾಗಾಗಿ ಭಾಗವತಿಕೆಯ ಬಾಲಪಾಠ ತಮ್ಮ ಹದಿನಾಲ್ಕನೆಯ ವಯಸ್ಸಿಗೆ ರತ್ನಾವತಿಯವರಿಗಾಯಿತು.

“ತಮ್ಮ ಮಾವ, ಯಕ್ಷಗಾನ ಅರ್ಥಧಾರಿ ಪೆರ್ಲ ಕೃಷ್ಣಭಟ್ ಅವರ ಪ್ರೇರಣೆಯ ಮಾತುಗಳು ಭಾಗವತಿಕೆಯಲ್ಲಿ ಉತ್ಸಾಹವನ್ನು ತುಂಬಿದೆ ಎನ್ನುತ್ತಾರೆ” – ರತ್ನಾವತಿಯವರ ಈ ಮಾತುಗಳು ಡಾ.ನಾಗವೇಣಿ ಮಂಚಿಯವರ ಸಂಶೋಧನಾ ಪ್ರಬಂಧ ʼಯಕ್ಷಸ್ತ್ರೀʼಯಲ್ಲಿ ಸಿಗುತ್ತವೆ. ಶಿರಂತಡ್ಕ ರತ್ನಾವತಿಯವರ ತಾಯಿ ತಂದೆಯೂ ಕೂಡ ಆ ಕಾಲದಲ್ಲಿದ್ದ ಪ್ರಸಿದ್ಧ ಅರ್ಥಧಾರಿಗಳಾದ ಪಡ್ರೆ ಶ್ರೀಪತಿ ಶಾಸ್ತ್ರಿಗಳು. ಒಂದರ್ಥದಲ್ಲಿ ಇವರಿಗೆ ಯಕ್ಷಗಾನಾಸಕ್ತಿ ರಕ್ತಗತವಾಗಿಯೇ ಬಂದಿತೆನ್ನಬಹುದು. ಸುಮಾರು ಎಂಟು ವರ್ಷಗಳ ಕಾಲ ತಮ್ಮ ಮದುವೆಯಾಗುವವರೆಗೆ ತಂದೆಯವರಲ್ಲಿ ಭಾಗವತಿಯ ಅಭ್ಯಾಸ ಮಾಡುತ್ತಾ ಭಾಗವತಿಯನ್ನು ಮಾಡುತ್ತಿದ್ದರು. ಇವರು ಅನೇಕ ಯಕ್ಷಗಾನ ಬಯಲಾಟಗಳಲ್ಲಿ, ಸುಮಾರು ಐವತ್ತಕ್ಕಿಂತಲೂ ಹೆಚ್ಚು ತಾಳಮದ್ದಳೆ ಕೂಟಗಳಲ್ಲಿ ಭಾಗವತಿಕೆಯನ್ನು ಮಾಡಿದವರು. 

೧೯೭೦ರಲ್ಲಿ ಕಾಸರಗೋಡಿನ ಕೃಷ್ಣಭಟ್ ಎಂಬವರನ್ನು ಮದುವೆಯಾಗುತ್ತಾರೆ. ಆ ಬಳಿಕ ಯಕ್ಷಗಾನದಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಕಷ್ಟ ಸಾಧ್ಯವಾಯಿತು. ಕಾರಣವೆಂದರೆ, ಅವರ ಪತಿ ಕೃಷ್ಣಭಟ್ಟರು ಭಾರತೀಯ ಸೇನೆಯಲ್ಲಿ ಉದ್ಯೋಗದಲ್ಲಿದ್ದವರು. ೧೯೬೩ರಿಂದ ೧೯೭೮ ರವರೆಗೆ ಜಮ್ಮು-ಕಾಶ್ಮೀರ ಭಾಗದಲ್ಲಿ ಉದ್ಯೋಗದಲ್ಲಿದ್ದವರು. ೧೯೮೨ ರಿಂದ ೧೯೯೭ ರವರೆಗೆ ಕೇರಳದ ಆರಕ್ಷಕ ವಿಭಾಗದಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದವರು. ಇವರು ೧೯೭೭-೭೮ ರಲ್ಲಿ ಕಾಸರಗೋಡಿನ ನಿವಾಸಿಗಳಾದ ಬಳಿಕ ರತ್ನಾವತಿಯವರಿಗೆ ಯಕ್ಷಗಾನ ಭಾಗವತಿಕೆಯ ಕೆಲವೊಂದು ಅವಕಾಶಗಳು ಮತ್ತೆ ಬರಲಾರಂಭಿಸಿದವು. 

ಇವರು ಅನೇಕ ಶಾಲೆಯ ಕಾರ್ಯಕ್ರಮಗಳಲ್ಲಿ, ಸಂಘದ ಕಾರ್ಯಕ್ರಮಗಳಲ್ಲಿ, ಕರಾಡ ಬ್ರಾಹ್ಮಣರ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ತಮ್ಮ ಅಜ್ಜ ಶ್ರೀಪತಿ ಶಾಸ್ತ್ರಿಗಳು ಬರೆz Àʼಪ್ರಹ್ಲಾದಚರಿತ್ರೆʼಯನ್ನು ಬಹಳ ಸೊಸಗಾಗಿ ಹಾಡಬಲ್ಲರಂತೆ. ಕರಾಡ ಭಾಷೆಯ ಶೋಭಾನೆ ಹಾಡುಗಳನ್ನು ಕೂಡ ಹಾಡುವುದರಲ್ಲಿ ನಿಸ್ಸೀಮರಂತೆ. ತಮ್ಮ ಪತಿಯ ಪ್ರೋತ್ಸಾಹವಿದ್ದರೂ ಕಾರಣಾಂತರಗಳಿAದ ಭಾಗವತಿಕೆಯಿಂದ ದೂರ ಉಳಿದರೂ, ಬಳಿಕ ಮತ್ತೆ ಊರಿಗೆ ಬಂದ ಬಳಿಕ ಅವಕಾಶಗಳನ್ನು ಪಡೆದುಕೊಂಡು ಬೆಳೆಯುವುದಕ್ಕೆ ಪ್ರಯತ್ನಿಸಿದರು. ಇಷ್ಟು ಮಾತ್ರವಲ್ಲದೇ ಕರಾಡ ಬ್ರಾಹ್ಮಣರ ಮಹಿಳಾ ತಂಡವನ್ನು ಕಟ್ಟಿ, ಯಕ್ಷಗಾನ ಪ್ರದರ್ಶನ ನೀಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 

“ಕಾಸರಗೋಡಿನಲ್ಲಿ ಈಗಾಗಲೇ ಹೆಸರಿಸಿದ ಭಾಗವತರುಗಳಾದ ನರ್ಮದಾ, ಲೀಲಾವತಿ ಬೈಪಾಡಿತ್ತಾಯ, ದುರ್ಗಾಪರಮೇಶ್ವರಿಯವರ ಸಾಲಿನಲ್ಲಿ ರತ್ನಾವತಿಯವರ ಹೆಸರನ್ನು ಸೇರಿಸಬೇಕಾಗಿದೆ”–ಎಂಬ ಮಾತು ʼತೆಂಕನಾಡ ಯಕ್ಷಗಾನʼ ಕೃತಿಯಲ್ಲಿʼ ಕಾಸರಗೋಡಿನ ಮಹಿಳಾ ಭಾಗವತರುʼಎಂಬ ಭಾಗದಲ್ಲಿ ಬರುತ್ತದೆ. ಇಂದಿನAತೆ ಮಾಧ್ಯಮಗಳ ಭರಾಟೆ ಜೋರಾಗಿರುತ್ತಿದ್ದರೆ ಇವರಂತಹ ಕಲಾವಿದರ ಹಾಡುಗಳನ್ನು ಕೇಳಿ ಆನಂದಿಸಬಹುದಿತ್ತೇನೋ.

ಲೇಖಕರು  - ಸಾಯಿಸುಮಾ ಎಂ. ನಾವಡ, ಕಾರಿಂಜ


Mookambika Varamballi - Woman Yakshagana artist


ಶ್ರೀಮತಿ ಮೂಕಾಂಬಿಕಾ ವಾರಂಬಳ್ಳಿ - ಎಪ್ಪತ್ತರ ದಶಕದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ದಿಟ್ಟ ಕಲಾವಿದೆ -04
ಎಳವೆಯಲ್ಲೇ ಕಲಾಸಕ್ತಿಯನ್ನು ಹೊಂದಿದ್ದ ಹೆಣ್ಣೋರ್ವಳು ಸಾಮಾಜಿಕ ಕಟ್ಟುಪಾಡುಗಳಿಂದ ಕಲಾಪ್ರಪಂಚದಲ್ಲಿ ತೆರೆದುಕೊಳ್ಳುವುದಕ್ಕೆ ಅವಕಾಶ ವಂಚಿತೆಯಾಗಿದ್ದು, ವಿವಾಹಾನಂತರ ಬಾಲ್ಯದಿಂದಲೂ ಸೆಳೆತವನ್ನು ಹೊಂದಿದ್ದ ಯಕ್ಷಗಾನದಲ್ಲಿ ಕಲಾವಿದೆಯಾಗಿ ಗುರುತಿಸಿಕೊಂಡದ್ದು ಇಂದಿನ ಅನೇಕರಿಗೆ ಪ್ರೇರಕ ಸಂಗತಿಯೆAದರೆ ತಪ್ಪಲ್ಲ. ಆಕೆ ಅನೇಕರನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿರುವುದು, ತನ್ನ ನಿವೃತ್ತ ಜೀವನದಲ್ಲೂ ಈ ದಿಶೆಯಲ್ಲಿ ಪ್ರಯತ್ನಿಸುತ್ತಿರುವುದು ಸಂತಸದ ವಿಚಾರವಲ್ಲದೇ ಮತ್ತೇನಲ್ಲ.
ಪ್ರಸಿದ್ಧ ಮಾರ್ವಿ ಮನೆತನದ ಶ್ರೀಮತಿ ಮೂಕಾಂಬಿಕಾ ವಾರಂಬಳ್ಳಿ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರರ ಮೊಮ್ಮಗಳು, ಯಜ್ಞನಾರಾಯಣ ಹೆಬ್ಬಾರ್ ಹಾಗೂ ಕಾವೇರಮ್ಮ ದಂಪತಿಗಳ ಮಗಳು. ತನ್ನೂರಿನ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದಾಕೆ ತಾನೂ ವೇಷವಾಗಿ ಕುಣಿಯುವ ಬಯಕೆಯನ್ನು ಅಂದಿನಿAದಲೇ ಮನದಲ್ಲಿ ಇರಿಸಿಕೊಂಡವರು. ಅದೇ ಯಕ್ಷಗಾನದ ಹೆಜ್ಜೆಗಳನ್ನು ತನ್ನಷ್ಟಕ್ಕೇ ಹಾಕುವುದಕ್ಕೆ ಹೊರಟರೆ ʼಗಂಡ್‌ಬೀರಿ ಕುಣಿತ್ತ್ ಕಾಣ್ʼ ಎಂಬಮನೆಯವರ ಗದರಿಕೆಗೆ ಒಳಗಾಗುತ್ತಿದ್ದರುಬಿಟ್ಟರೆಮತ್ತೇನನ್ನೂಮಾಡುವುದಕ್ಕೆ ಆಗಸಾಧ್ಯವಾಗುತ್ತಿರಲಿಲ್ಲ. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾದ ಬಳಿಕ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಶ್ರೀ ಬಿ. ಗೋವಿಂದರಾಜ ವಾರಂಬಳ್ಳಿಯವರನ್ನು ಕೈಹಿಡಿಯುತ್ತಾರೆ. ಮದುವೆಯಾದ ಬಳಿಕ ಇವರ ಕನಸುಗಳೆಲ್ಲವೂ ಕೈಗೂಡುವ ಕಾಲ ಬಂತೆAದರೆ ಹೆಚ್ಚಲ್ಲ. ೧೯೭೬ ರಲ್ಲಿ ಬ್ಯಾಂಕಿನ ʼರಿಕ್ರಿಯೇಶನ್ ಕ್ಲಬ್ ಡೇʼ ಎಂಬ ಕಾರ್ಯಕ್ರಮದಲ್ಲಿಹೆಣ್ಣುಮಕ್ಕಳು ಯಕ್ಷಗಾನ ಮಾಡಬೇಕೆಂಬ ನಿರ್ಧಾರವಾದಾಗ ಮೂಕಾಂಬಿಕಾ ವಾರಂಬಳ್ಳಿಯವರ ಕನಸುಗಳಿಗೆ ರೆಕ್ಕೆ-ಪುಕ್ಕ ಬಂದಿತು. ಅದೇ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದವರು ಹವ್ಯಾಸಿ ಕಲಾವಿದರಾದ ಶ್ರೀಧರ ಐತಾಳರು. ಅವರ ನಿರ್ದೇಶನವೂ ಮಹಿಳಾ ಪಾತ್ರಧಾರಿಗಳಿಗೆ ಸಿಕ್ಕಿತು. ತನ್ನ ಪತಿಯವರ ಅಪ್ಪಣೆಯ ಜೊತೆಗೆ, ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹವೂ ಸಿಕ್ಕಿದಾಗ ವಾರಂಬಳ್ಳಿಯವರು ಯಕ್ಷರಂಗದಲ್ಲಿ ಮುಂದುವರಿಯುವ ಕನಸು ಕಟ್ಟಿಕೊಂಡರು. ಅಲ್ಲಿ ನಡೆದದ್ದು ತೆಂಕುತಿಟ್ಟು ಪ್ರದರ್ಶನ. ʼಬಭ್ರುವಾಹನ ಕಾಳಗʼ. ಅದರ ಕೃಷ್ಣನಾಗಿ ವಾರಂಬಳ್ಳಯವರ ರಂಗಪ್ರವೇಶ. ಹೀಗೆ ತೆಂಕುತಿಟ್ಟಿನ ಮೂರು ಪ್ರದರ್ಶನಗಳು.ಮುಂದೆ ಬಡಗುತಿಟ್ಟಿನಲ್ಲಿ ಮುಂದುವರಿಯುವ ಹಂಬಲ, ಎದುರು ಸಿಕ್ಕ ಅನೇಕ ಸವಾಲುಗಳು ಎಲ್ಲವನ್ನೂ ಎದುರಿಸುತ್ತಾ ಸಮರ್ಥ ಗುರುಗಳೊಬ್ಬರನ್ನು ಪಡೆಯುವಲ್ಲಿ ಸಫಲರಾದರು.ಆಗ ಗುರುಗಳಾಗಿ ಸಿಕ್ಕವರೇ ಮದ್ದಳೆ ಮಾಂತ್ರಿಕ ಶ್ರೀ ಹಿರಿಯಡಕ ಅವರು ಬ್ಯಾಂಕಿಗೆಯಕ್ಷಗಾನವನ್ನು ಕಲಿಸುವುದಕ್ಕಾರಂಭಿಸಿದರು. ಇವರ ಕೂಟಕ್ಕೆ ʼಸಿಂಡಿಕೇಟ್‌ಬ್ಯಾAಕ್ ರಿಕ್ರಿಯೇಶನ್ ಕ್ಲಬ್ ದಶಾವತಾರಿ ಮೇಳʼ ಎಂದುಹೆಸರಿಟ್ಟರು. ಪ್ರಪ್ರಥಮಬಾರಿಗೆಮಹಿಳಾ ತಂಡವೊAದುಸಮರ್ಥವಾಗಿ ಯಕ್ಷಗಾನ ಪ್ರದರ್ಶನವನ್ನು ನೀಡಿದ ಹೆಗ್ಗಳಿಕೆ ಈ ತಂಡದ್ದು. ಆ ಬಳಿಕ ಮಹಿಳಾ ಯಕ್ಷಗಾನಕ್ಕೆ ಒಂದು ಹೊಸ ಆಯಾಮ ಸಿಕ್ಕಿತು. ಶಾಲೆಗಳಲ್ಲಿ ಮುಂತಾದ ಕಡೆಗಳಲ್ಲಿ ಮಹಿಳಾ ಯಕ್ಷಗಾನ ಆರಂಭವಾಯಿತು. ಸಿಂಡಿಕೇಟ್ ಬ್ಯಾಂಕ್ ತಂಡದ ಮೊದಲ ಬಡಗುತಿಟ್ಟಿನ ಪ್ರದರ್ಶನ
ʼತಾಮ್ರಧ್ವಜ ಕಾಳಗʼಮೂಕಾಂಬಿಕಾ ಬಾರಂಬಳ್ಳಿಯರು ತಾಮ್ರಧ್ವಜನಾಗಿ ಕಾಣಿಸಿಕೊಂಡು ಜನಮನ ಸೂರೆಗೊಂಡರು. ಆ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಹೀಗೆ ಎಪ್ಪತ್ತರ ದಶಕದಲ್ಲಿ ಮಹಿಳಾ ಯಕ್ಷಗಾನಕ್ಕೊಂದು ಮುನ್ನುಡಿ ಬರೆದದ್ದೇ ಇವರ ವಿಶೇಷತೆ. ಸುಮಾರು ಹದಿನೈದು ಪ್ರಸಂಗಗಳನ್ನು ನೂರೈವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ, ಅದರಲ್ಲಿ ಮುಖ್ಯ ಪಾತ್ರಧಾರಿಯಾಗಿ ಮಿಂಚಿದವರು ವಾರಂಬಳ್ಳಿಯವರು.
ಹಿಂದೆ ಯಕ್ಷಗಾನ ಹೆಮ್ಮಕ್ಕಳಿಗೇಕೆ? ಎಂದವರೆಲ್ಲವರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು ವಾರಂಬಳ್ಳಿಯವರು. ಮನೆಯವರ ಪ್ರೋತ್ಸಾಹ ಇವರ ಉತ್ಸಾಹವನ್ನು ಹೆಚ್ಚಿಸಿತು. ಕರ್ಣ, ಸುಧನ್ವ, ತಾಮ್ರಧ್ವಜ, ಭೀಷ್ಮ, ಕೃಷ್ಣ, ಅರ್ಜುನ, ದೇವವೃತ ಮುಂತಾದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಸುಧನ್ವನ ಪಾತ್ರವನ್ನು ೩೫ ಬಾರಿ ನಿರ್ವಹಿಸಿ ಜನಮೆಚ್ಚುಗೆ ಪಡೆದರು. ಆ ಪಾತ್ರಕ್ಕೆ ಅನೇಕ ಕಡೆಗಳಲ್ಲಿ ಸನ್ಮಾನವನ್ನೂ ಪಡೆದುಕೊಂಡವರಿವರು. ನೋಟಿನ ಮಾಲೆಯನ್ನು ಹಾಕಿಸಿಕೊಂಡವರು. ಇವರ ಪಾತ್ರಗಳನ್ನು ಕಂಡು ಹಾರಾಡಿ ಕುಷ್ಠ ಗಾಣಿಗರನ್ನು, ಕೆರೆಮನೆ ಮಹಾಬಲ ಹೆಗಡೆಯವರ ಪಾತ್ರ ನೋಡಿದಂತಾಯಿತು ಎಂದು ಅನೇಕರು ಕೊಂಡಾಡಿದರು. ಇವರ ಸುಧನ್ವ, ಕರ್ಣ, ಹನೂಮಂತ, ಭೀಷ್ಮ ಪಾತ್ರಗಳನ್ನು ನೋಡುವುದಕ್ಕೆ ಅಭಿಮಾನಿಗಳು ಬರುತ್ತಿದ್ದರು.
ನಾಟ್ಯಾಭಿನಯ, ಭಾವಾಭಿವ್ಯಕ್ತಿ, ಅರ್ಥಗಾರಿಕೆ ಹೀಗೆ ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಿ ಪುರುಷ ಕಲಾವಿದರಂತೆ ಸಮರ್ಥವಾಗಿ ನ್ಯಾಯ ಒದಗಿಸಿದವರು ಎಂಬ ನೆಗಳ್ತೆಯನ್ನು ಪಡೆದವರು ಶ್ರೀಮತಿ ಮೂಕಾಂಬಿಕಾ ವಾರಂಬಳ್ಳಿಯವರು. ಕರ್ಣನ ಪಾತ್ರಧಾರಿಯಾಗಿ ಒಂಬತ್ತು ಅಟ್ಟಿಗಳಿಂದ ಕಟ್ಟಿದ ಮುಂಡಾಸನ್ನು ಹೊತ್ತು ಸಮರ್ಥವಾಗಿ ಕರ್ಣನ ಪಾತ್ರಕ್ಕೆ ನ್ಯಾಯ ಒದಗಿಸಿದವರು. ಇವರ ಸುಧನ್ವ ಪಾತ್ರದ ಪ್ರಸಿದ್ಧಿಯಿಂದಾಗಿ ಇವರನ್ನು ʼಸಿಂಡಿಕೇಟ್‌ಸುಧನ್ವʼ ಅಂತಲೇ ಕರೆಯುತ್ತಿದ್ದರು. ಶ್ರೀಯುತ ಚಿಟ್ಟಾಣಿ ರಾಮಚಂದ್ರಹೆಗಡೆಯವರೇ ಇವರಸುಧನ್ವನನ್ನುನೋಡಿ ಮನತುಂಬಿ ಹರಸಿದ್ದರಂತೆ. ಇವರ ತಂಡದ ʼಭಕ್ತಸುಧನ್ವʼ ದೂರದರ್ಶನ ಚಂದನದಲ್ಲೂಪ್ರಸಾರಗೊAಡಿದೆ. ಇವರ ತಂಡ ಕರ್ನಾಟಕದಲ್ಲಿಮಾತ್ರವಲ್ಲದೇ ಗೋವಾ, ಆಂಧ್ರಪ್ರದೇಶ, ಕೇರಳಮುಂತಾದ ಕಡೆಗಳಲ್ಲೂಪ್ರದರ್ಶನಗಳನ್ನು ಕೊಟ್ಟಿದೆ. ಶ್ರೀಮತಿ ಮೂಕಾಂಬಿಕಾ ವಾರಂಬಳ್ಳಿಯವರು ವೇಷಧಾರಿ ಮಾತ್ರವಲ್ಲ. ಭಾಗವತಿಕೆಯನ್ನೂ ನೀಲಾವರ ಲಕ್ಷ್ಮೀನಾರಾಯಣಯ್ಯನವರಿಂದ ಅಭ್ಯಸಿಸಿದವರು. ತಾಳಮದ್ದಳೆಗಳಲ್ಲಿ ಅರ್ಥಧಾರಿಗಳಾಗಿ ಕಾಣಿಸಿಕೊಂಡವರು. ಯಕ್ಷಗಾನದ ಸಮರ್ಥ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾಣಿಸಿಕೊಂಡವರು. ಯಕ್ಷಗಾನ ಮಾತ್ರವಲ್ಲದೇ ಇತರ ಕಲೆಗಳಲ್ಲಿಯೂ ಆಸಕ್ತರು. ಕತೆ, ಕವನಗಳನ್ನು ಬರೆಯುವ ಹವ್ಯಾಸ ಹೊಂದಿದವರು. ೨೦೧೨ ರಲ್ಲಿ ತನ್ನ ಪತಿಯವರ ಅಪೇಕ್ಷೆಯಂತೆ ತಾನು, ತನ್ನ ಮಗಳು ಸಹನಾ ಹಾಗೂ ಮೊಮ್ಮಕ್ಕಳ ಜೊತೆಗೆ ʼಭೀಷ್ಮೋತ್ಪತ್ತಿʼ ಯಕ್ಷಗಾನಪ್ರದರ್ಶನವನ್ನುಮೂರು ತಲೆಮಾರಿನವಿಶೇಷತೆಯೊಂದಿಗೆನೀಡಿರುತ್ತಾರೆ. ಇವರ ಕಲಾಸೇವೆಯನ್ನು ಗುರುತಿಸಿ, ೨೦೦೪ ರಲ್ಲಿ ʼಯಕ್ಷಪ್ರಮೀಳಾಪ್ರಶಸ್ತಿ, ೨೦೧೨ ರಲ್ಲಿʼಕರ್ನಾಟಕ ಯಕ್ಷಗಾನಬಯಲಾಟ ಅಕಾಡೆಮಿಪ್ರಶಸ್ತಿಮುಂತಾದ
ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ. ಇಂದಿಗೂ ಎರಡು ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ. ಇವರು ತಮ್ಮ ಮಕ್ಕಳಿಗೆ ಯಕ್ಷಗಾನವನ್ನು ದಾಟಿಸಿದ್ದಲ್ಲದೇ, ಅನೇಕ ಆಸಕ್ತರಿಗೂ ಯಕ್ಷಗಾನವನ್ನು ಧಾರೆಯೆರೆದವರು. ಇವರ ಜೀವನವನ್ನು ಕಲಾಮಾತೆ ಇನ್ನಷ್ಟು ಬೆಳಗಿಸಲಿ ಎಂದು ಆಶಿಸೋಣ.
ಲೇಖಕರು- ಎಂ ಸಾಯಿಸುಮಾ ನಾವಡ

Akkaniyamma - Woman Yakshagana artist


ಧೀರಕಲೆಯೊಳಗೆ ಕೀರವಾಣಿಯರು – 03

ಶ್ರೀಮತಿ ಅಕ್ಕಾಣಿಯಮ್ಮ -ಮಹಿಳೆ ಯಕ್ಷಗಾನಕ್ಕೆ ಪ್ರವೇಶಿಸುವುದೇ ಕಷ್ಟವಿದ್ದ ಕಾಲದಲ್ಲಿ ಮಹಿಳಾಮೇಳ ಕಟ್ಟಿದ ಗಟ್ಟಿಗಿತ್ತಿ

ಯಕ್ಷಗಾನವನ್ನು ನೋಡುವುದಕ್ಕೂ ಮನೆಯವರ ಅಪ್ಪಣೆ ಪಡೆದು ಹೋಗಬೇಕಿದ್ದ ಕಾಲವದು. ಮನೆಯ ಹಿರಿಯರ ಬೈಗುಳದೊಂದಿಗೆ ಯಕ್ಷಗಾನದ ಹುಚ್ಚನ್ನು ಹಿಡಿಸಿಕೊಳ್ಳುವುದು ಸುಲಭದ ಮಾತಲ್ಲ. ಮನೆಯವರನ್ನು ಹೇಗೋ ಒಪ್ಪಿಸಿ, ರಾತ್ರಿಯಿಡೀ ಯಕ್ಷಗಾನವನ್ನು ವೀಕ್ಷಿಸುತ್ತಿದ್ದ ಅನೇಕ ಮಹಿಳೆಯರು ತಮ್ಮ ಆಸಕ್ತಿಯನ್ನೇ ಮರೆತು ಬದುಕು ಮುಗಿಸಿದವರಿದ್ದಾರೆ. ಅಂತಹ ಮಹಿಳೆಯರ ನಡುವೆ ಎಲ್ಲೋ ಒಬ್ಬರೋ ಇಬ್ಬರೋ ತಮ್ಮ

ಆಸಕ್ತಿಯನ್ನು ಬೆಳೆಸಲು ಸಾಧ್ಯವಾಗಿಸಿಕೊಂಡವರು ಇಂದಿನ ಇತಿಹಾಸವಾಗಿದ್ದಾರೆ. ಅಂತಹ ಯಕ್ಷಗಾನಾಸಕ್ತ ಮಹಿಳೆಯರಲ್ಲಿ ಶ್ರೀಮತಿ ಅಕ್ಕಾಣಿಯಮ್ಮ ಅವರೂ ಒಬ್ಬರು. ೧೯೨೫ ರಲ್ಲಿ ಅಂದಿನ ದಕ್ಷಿಣಕನ್ನಡ ಜಿಲ್ಲೆಯ ಕೋಟದ ಕಾರ್ಕಡ ಗ್ರಾಮದ ಹಂದಟ್ಟು ಎಂಬಲ್ಲಿನ ಹಂದೆ ಮನೆತನದ ಕಾರ್ಕಡ ನಾಗಪ್ಪ ಉಪಾಧ್ಯ ಹಾಗೂ ವಾಗ್ದೇವಿ ದಂಪತಿಗಳಿಗೆ ಮಗಳಾಗಿ ಜನಿಸಿದವರು ಅಕ್ಕಾಣಿಯಮ್ಮ. ಯಕ್ಷಗಾನದ ಬಗೆಗೆ ಎಳವೆಯಿಂದಲೇ ಅತೀವ ಆಸಕ್ತಿಯನ್ನು ಬೆಳೆಸಿಕೊಂಡಿದ್ದವರು. ತಾಯಿಯನ್ನು ಬಹಳ ಬೇಗನೇ ಕಳಕೊಂಡರೂ ಅಜ್ಜನ ಮಮತೆಯಲ್ಲಿ ಬೆಳೆದರು. ಇವರ ಅಜ್ಜ ಹಂದೆಯವರು ಯಕ್ಷಗಾನದ ಮಹಾ ಪೋಷಕರಾಗಿದ್ದವರು. ಅನೇಕ ಮೇಳಗಳ ಆಟಗಳನ್ನು ವರ್ಷಂಪ್ರತಿ ಆಡಿಸಿ ಪ್ರೋತ್ಸಾಹಿಸುತ್ತಿದ್ದವರು. ಹಾಗಾಗಿ ಅಕ್ಕಾಣಿಯಮ್ಮನವರ ಪರಿಸರವೇ ಇವರ ಕಲಾಸಕ್ತಿಗೆ ಪ್ರೇರಕವಾಯಿತೆನ್ನಬಹುದು. ಅಂದಿನ ಹಿರಿಯ, ಪ್ರಸಿದ್ಧ ಕಲಾವಿದರ ವೇಷಗಳನ್ನು ಕಣ್ತುಂಬಿಸಿಕೊಳ್ಳುತ್ತಾ ತಾನೂ ಗೆಜ್ಜೆ ಕಟ್ಟಿ ಕುಣಿಯಬೇಕೆಂಬ ಕನಸು ಕಂಡ ಅಕ್ಕಾಣಿಯಮ್ಮ, ಮುಂದೊAದು ದಿನ ಅದನ್ನು ನನಸು ಮಾಡಬೇಕೆಂದು ಪಣವನ್ನೂ ತೊಟ್ಟ ಧೀಮಂತ ಮಹಿಳೆ.ಅಂದಿನ ಸಾಮಾಜಿಕ ಪದ್ಧತಿಗನುಗುಣವಾಗಿ ಬಾಲ್ಯದಲ್ಲೇ ನರಸಿಂಹ ಉರಾಳ ಎಂಬವರನ್ನು ವಿವಾಹವಾದರೂ, ಹೆಚ್ಚು ಸಮಯ ಸುಖದಿಂದ ಬದುಕಲಾಗಲಿಲ್ಲ. ಕಾರಣ ಮದುವೆಯಾಗಿ ಎರಡು ವರ್ಷದಲ್ಲೇ ಬದುಕಿಗೆ ಬಂದೊದಗಿದ ವೈಧವ್ಯ. ಇದರಿಂದಾಗಿ ಸಾಮಾಜಿಕ ಕಟ್ಟುಪಾಡುಗಳಿಂದ ಮರಳಿ ತವರನ್ನೇ ಸೇರಬೇಕಾಯಿತು. ಅಂದಿನ ಸಮಾಜದ ಸ್ಥಿತಿಯೇ ಹಾಗಿತ್ತು. ಹೆಣ್ಣೋರ್ವಳು ಕಲಿಯುವಂತಿಲ್ಲ, ಓದುವಂತಿಲ್ಲ, ಬರೆಯುವಂತಿಲ್ಲ, ಯಾವುದೇ ಆಸಕ್ತಿಗಳನ್ನು ಬೆಳೆಸಿಕೊಳ್ಳುವಂತಿಲ್ಲ. ಆದರೆ ರಕ್ತಗತವಾಗಿ ಬಂದ ಕಲೆಯೊಲವು ಎಲ್ಲಾ ಬಂಧಗಳನ್ನು ಮೀರಿ ಬೆಳೆಯುತ್ತದೆ ಎಂಬುದಕ್ಕೆ ಇವರು ಉದಾಹರಣೆಯಾದರು. ಕಲೆಯ ಒಲವು ಎಲ್ಲಾ ಬಂಧಗಳನ್ನು ಬೇರ್ಪಡಿಸಿ ಇವರು ತಂಗಿಯ ಮನೆಗೆ ಬೆಂಗಳೂರಿಗೆ ಬರುವಂತೆ ಮಾಡಿತು. ಊರವರ, ಮನೆಯವರ ಕಟ್ಟುನಿಟ್ಟಿನ ನಿಯಮಗಳನ್ನು ಮುರಿದ ಇವರನ್ನು ಮನೆಯ ಬೇರೆ ಯಾರೂ   ಆದರಿಸಲಿಲ್ಲ. ಅದಕ್ಕೆ ಇವರು ಎದೆಗುಂದಲೂ ಇಲ್ಲ. ಬದಲಾಗಿ ಮಾನಸಿಕ ದೃಢತೆಯಿಂದ ಬೆಳೆದರು. ಅವರನುಭವಿಸಿದ ಕಷ್ಟ ಕಾರ್ಪಣ್ಯಗಳೇ ಅವರನ್ನು ಅಷ್ಟು ಗಟ್ಟಿಗೊಳಿಸಿದ್ದವು. ಅಣ್ಣ ಗಣಪಯ್ಯ ಉಪಾಧ್ಯರಂತೆ ಯಕ್ಷಗಾನದತ್ತ ಮನವನ್ನು ಹರಿಸಿದರು. ಯಕ್ಷಗಾನದ ಮೇಳ ಕಟ್ಟಬೇಕೆಂಬ ಕನಸನ್ನು ಹೊತ್ತರು. ಆದರೆ ಅದು ಸಾಕಾರವಾಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂದಿನ ಕಾಲದಲ್ಲಿ ಮಹಿಳೆಯೋರ್ವಳು ಮೇಳ ಕಟ್ಟುತ್ತಾಳೆ ಎಂದರೆ ಪ್ರೋತ್ಸಾಹಿಸುವುದಕ್ಕೆ ಒಬ್ಬ ವ್ಯಕ್ತಿಯೂ ಇರಲಿಲ್ಲ. ಎಲ್ಲರದೂ ಆಸೆಗೆ ತಣ್ಣೀರೆರಚುವಂತಹ ಮಾತುಗಳೇ. ಆದರೂ ಬಹಳ ವರುಷಗಳ ಶ್ರಮದಿಂದ ಕೆಲವು ಕಲಾಪ್ರೋತ್ಸಾಹಕರ ಕಾರಣದಿಂದ ಮಹಿಳಾ ಮೇಳ ಕಟ್ಟುವ ಕನಸು ೧೯೭೯-೮೦ ರಲ್ಲಿ ಕೈಗೂಡಿತು. ಬೆಂಗಳೂರಿನಲ್ಲಿ “ಮಹಿಳಾ ಯಕ್ಷಗಾನ ಕಲಾಮಿತ್ರ ಮಂಡಳಿ” ಎಂಬ ಹೆಸರಿನಿಂದ ಅಕ್ಕಾಣಿಯಮ್ಮನವರ ಮುಂದಾಳತ್ವದಲ್ಲಿ ಮಹಿಳಾ ಯಕ್ಷಗಾನ ಮೇಳವೊಂದು ಸ್ಥಾಪಿಸಲ್ಪಟ್ಟಿತು. ಈ ಮಹಿಳಾಮೇಳಕ್ಕೆ ಗುಂಡ್ಮಿ ಸದಾನಂದ ಐತಾಳರ ನಿರ್ದೇಶನ ಮತ್ತು ಅದ್ಭುತ ಭಾಗವತಿಯಿತ್ತು. ಅದ್ಭುತ ಹಿಮ್ಮೇಳದ ಸಹಕಾರದಿಂದ ಮೊದಲ ಬಾರಿಗೆ ಮಹಿಳೆಯರನ್ನೇ ಸೇರಿಸಿಕೊಂಡು “ರಾಣಿ ಶಶಿಪ್ರಭೆ” ಎಂಬ ಪ್ರಸಂಗವನ್ನು ಬೆಂಗಳೂರು ನಗರದ ಪುರಭವನದಲ್ಲಿ ಪ್ರದರ್ಶಿಸಿ ಜನಮೆಚ್ಚುಗೆ ಪಡೆದರು. ಶ್ರೀಕೃಷ್ಣ ವಿವಾಹ, ಮೀನಾಕ್ಷಿ ಕಲ್ಯಾಣ, ಲವಕುಶ, ಪ್ರಮೀಳಾರ್ಜುನ, ಕರ್ಣಾರ್ಜುನ ಕಾಳಗ, ದ್ರೌಪದಿ ಪ್ರತಾಪ ಮೊದಲಾದ ಪ್ರಸಂಗಗಳನ್ನು ತಮ್ಮ ತಂಡದ ಮೂಲಕ ಪ್ರದರ್ಶಿಸಿದರು. ತಮ್ಮ ತಂಡದ ಕಲಾವಿದರು ಬಾರದೇ ಇದ್ದಾಗ ತಮ್ಮ ಇಳಿವಯಸ್ಸಿನಲ್ಲಿಯೂ ಅನಿವಾರ್ಯತೆಗಾಗಿ ವೇಷ ಧರಿಸುತ್ತಿದ್ದರು.ಮಿಸ್ ಇಂಡಿಯಾ ಖ್ಯಾತಿಯ ರೇಖಾ ಹಂದೆ, ಸಿನಿಮಾ ತಾರೆ ಕಾವೇರಿ, ಸುಜಾತ ಐತಾಳ್, ನೃಪಾಂಗಿ ಅಯ್ಯಂಗಾರ್ ಮುಂತಾದ ಅನೇಕರನ್ನು ಯಕ್ಷಗಾನ ಕ್ಷೇತ್ರಕ್ಕೆ ಪರಿಚಯಿಸಿದವರು. ಇವರ ಶಿಷ್ಯೆಯರಾದ ಸುಜಾತ ಐತಾಳ್ ಹಾಗೂ ನೃಪಾಂಗಿ ಅಯ್ಯಂಗಾರ್ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮೇಳವಾದ ಶ್ರೀ ಅಮೃತೇಶ್ವರಿ ಮೇಳದವರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡವರು. ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶ , ಪಾಂಡಿಚೇರಿಯಲ್ಲೂ ಪ್ರದರ್ಶನವಿತ್ತು ಜನಮನ್ನಣೆ ಗಳಿಸಿದರು. ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಮತ್ತೆ ಇವರನ್ನು ಕರೆಯಿಸಿ, ಪ್ರದರ್ಶನಕ್ಕೆ ಅವಕಾಶವಿತ್ತರು. ಅನೇಕರು ಇವರನ್ನು ಗುರುತಿಸಿ ಸನ್ಮಾನಿಸಿದರು. ಕರ್ನಾಟಕ ಸರಕಾರವು ಬೆಳಿಹಬ್ಬದಂದು ಇವರಿಗೆ ಮಾಸಿಕಧನವನ್ನಿತ್ತು ಗೌರವಿಸಿತು. ಯಕ್ಷಗಾನದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ಎರಡರಲ್ಲೂ ಮಹಿಳೆಯರೇ ಪೂರ್ಣಮಟ್ಟದಲ್ಲಿ ಭಾಗವಹಿಸುವಂತೆ ಮಾಡುವುದು ಇವರ ಬಯಕೆಯಾಗಿತ್ತು. ಆ ಬಯಕೆಯನ್ನು ಇಂದಿನ ಮಹಿಳೆಯರು ಸಾಕಾರಗೊಳಿಸುವತ್ತ ಪ್ರಯತ್ನಿಸುತ್ತಲೇ ಇದ್ದಾರೆ.ಅಕ್ಕಾಣಿಯಮ್ಮ ಅವರ ಇಚ್ಛಾಶಕ್ತಿ, ಆಸಕ್ತಿ ಕಲೆ, ಕಲಾವಿದರಿಗೆ ಪ್ರೇರಣೆ ಎಂದರೆ ತಪ್ಪಾಗುವುದಿಲ್ಲ. ಅನೇಕ ಮಹಿಳಾ ಸಂಘಟಕರಿಗೆ ಪ್ರೇರಕರಾದ ಅಕ್ಕಾಣಿಯಮ್ಮನವರ 


Narmada Shibarooraya - Woman Yakshagana artist


ಧೀರಕಲೆಯೊಳಗೆ ಕೀರವಾಣಿಯರು – ೦೨ 

ಯಕ್ಷರಂಗದಲ್ಲಿ ಸ್ವರ ಹೊರಡಿಸಿದ ಮೊದಲ ಮಹಿಳಾ ಭಾಗವತರು - ದಿ. ನರ್ಮದಾ ಶಿಬರೂರಾಯ

ʼಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ, ಪೆಣ್ಣಲ್ಲವೆ ಪೊರೆದವಳುʼ ಎಂದುಸAಚಿಯ ಹೊನ್ನಮ್ಮ ಹದಿನಾರನೇ ಶತಮಾನದಲ್ಲೇ ಪ್ರಶ್ನಿಸಿದ್ದರೂ ಕೂಡ ಹೆಣ್ಣು ಹೊರ ಜಗತ್ತಿಗೆ ತೆರೆದುಕೊಳ್ಳುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಆಕೆಗಿದ್ದ ಜವಾಬ್ದಾರಿಗಳ ಕಾರಣವೋ, ಸಾಮಾಜಿಕ ಸಮಸ್ಯೆಗಳೋ ಹೆಣ್ಣನ್ನು ಮನೆಗಷ್ಟೇ ಸೀಮಿತವಾಗಿರಿಸಿದ್ದವು. ಸಂಗೀತದAತಹ ವಿದ್ಯೆಗಳನ್ನು ಕಲಿತರೂ ಅದು ಮನೆಯಲ್ಲಿ ಭಜನೆಗೋ, ಮಕ್ಕಳಿಗೆ ಕಲಿಸಿ, ಹಾಡಿಸುವುದಕ್ಕೋ ಅವಕಾಶವಿತ್ತಷ್ಟೇ. ಯಕ್ಷಗಾನ ರಂಗ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಂದಾಗಿ ಅನೇಕರಿಗೆ ಸುಲಭದಲ್ಲಿ ಪರಿಚಿತವಾದರೂ ಹಿಂದೆ ಮನೆ-ಮನೆಗಳಲ್ಲಿನಡೆಯುತ್ತಿದ್ದಂತಹ ಕೂಟಗಳಿಂದ ಅಥವಾ ಆಟಗಳಿಂದಷ್ಟೇ ಪರಿಚಿತ. ಆದರೆ ಆ ಆಟ-ಕೂಟಗಳು ಅಂದಿನವರಲ್ಲಿ ಯಕ್ಷಗಾನ ಕಲೆಯ ಮೇಲೆ ಹುಟ್ಟಿಸಿದ ಆಸಕ್ತಿ ಮಾತ್ರ ಅದ್ಭುತ. ಆ ಆಸಕ್ತಿಗಳೇ ಯಕ್ಷಗಾನಕ್ಕೊಂದು ಭದ್ರ ಬುನಾದಿಯನ್ನು ಒದಗಿಸುತ್ತಾ ಬಂದದ್ದAತೂ ಸುಳ್ಳಲ್ಲ.ಇಂತಹ ವಾತಾವರಣದಲ್ಲಿದ್ದು ಕೂಟಗಳನ್ನು ಕೇಳುತ್ತಾ, ಕಲಿತುಕೊಂಡು ಪ್ರಥಮ ಮಹಿಳಾ ಭಾಗವತರು

 ಎಂದೆನಿಸಿಕೊAಡವರು ನರ್ಮದಾ ಶಿಬರೂರಾಯರು. ಕಲಾಪ್ರಪಂಚಕ್ಕೆ ಚಿರಪರಿಚಿತವೆನಿಸಿದ, ಸುಮಾರು ೫೦೦ ವರ್ಷಗಳ ಇತಿಹಾಸವನ್ನು ಹೊಂದಿದ ಕಾಸರಗೋಡಿನ ಪುಂಡೂರು ಮನೆತನದಲ್ಲಿ ೧೯೪೩ ಮೇ ೧೨ ರಂದು ದಾಮೋದರ ಪುಣಿಂಚಿತ್ತಾಯ ಹಾಗೂ ಸರಸ್ವತಿ ದಂಪತಿಗಳ ಪುತ್ರಿಯಾಗಿ ನರ್ಮದಾ ಶಿಬರೂರಾಯರ ಜನನ. ಐದನೇ ತರಗತಿವರೆಗಿನ ವಿದ್ಯಾಭ್ಯಾಸವಷ್ಟೇ ಅವರಿಗೆ ದೊರಕಿತು. ಜೀವನ ಶಿಕ್ಷಣವೆಲ್ಲವೂ ಮನೆಯಲ್ಲಿಯೇ. ಅಂದಿನ ಕಾಲಕ್ಕೆ ಇಷ್ಟಾದರೂ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವುದೇ ದೊಡ್ಡ ವಿಚಾರ. ಯಕ್ಷಗಾನ ಕೂಟಗಳು ನಿರಂತರವಾಗಿ ನಡೆಯುತ್ತಿದ್ದ ಮನೆತನ ಪುಂಡೂರು ಮನೆತನ. ಮನೆಯ ಹೆಮ್ಮಕ್ಕಳಿಗೆ ನೇರವಾಗಿ ಕುಳಿತು ಕೂಟಗಳನ್ನು ಆಸ್ವಾದಿಸುವುದು ಕಷ್ಟಸಾಧ್ಯವಾದರೂ ಕಿವಿಯಾರೆ ಕೇಳಿಯಾದರೂ ಕಲೆಯ ಮೇಲಿನ ಒಲವನ್ನು ಬೆಳೆಸಿಕೊಂಡ ಕಲಾಪ್ರೇಮಿ ಮಹಿಳೆಯರು ಅದೆಷ್ಟೋ ಮಂದಿ ಆಗಿಹೋಗಿದ್ದಾರೆ. ಹೀಗೆ ಆಸಕ್ತಿ ಬೆಳೆಸಿಕೊಂಡವರಲ್ಲಿ ಒಬ್ಬರು ನರ್ಮದಾ ಶಿಬರೂರಾಯರು. ಬೇರೆ ಬೇರೆ ಕ್ಷೇತ್ರಗಳಲ್ಲಿ ಅನೇಕ ಕಲಾವಿದರಿದ್ದ ಮನೆತನ ಇವರದು. ಕೂಟಗಳು ಮನೆಯಲ್ಲೇ ನಡೆಯುತ್ತಿದ್ದ ಕಾರಣ ಅದುವೇ ಇವರ ಯಕ್ಷಗಾನ ಪ್ರೀತಿಗೆ ಮೂಲ ಕಾರಣವಾಯಿತು. ತಾನೂ ಯಕ್ಷಗಾನದಲ್ಲಿ ಹಾಡುವುದಕ್ಕೆ ಕಲಿಯಬೇಕು ಎನ್ನು ತುಡಿತ ಹೆಚ್ಚಾಯಿತು. ಇವರ ಯಕ್ಷಗಾನ ಪ್ರೀತಿಗೆ ನೀರೆರೆದು ಗುರುಗಳಾದವರು ಇವರ ದೊಡ್ಡಪ್ಪನ ಮಗ ಅಣ್ಣ ಶ್ರೀ ಗೋಪಾಲಕೃಷ್ಣ ಪುಣಿಂಚಿತ್ತಾಯರು. ತನ್ನ ಮಗನಿಗೆ ಕಲಿಸುತ್ತಾ ಇದ್ದಾಗಲೇ ನರ್ಮದಾ ಅವರ ಆಸಕ್ತಿಯನ್ನು ಕಂಡು, ಅವರಿಗೂ ತೆಂಕುತಿಟ್ಟು ಭಾಗವತಿಕೆಯ ಸಂಗತಿಗಳನ್ನು 

ಕಲಿಸಿಕೊಡುತ್ತಾ ಬಂದರು. ಎಲ್ಲವನ್ನು ಸಾವಧಾನದಿಂದಲೇ ಕಲಿತುಕೊಂಡು ತಾಳಮದ್ದಳೆಗಳಲ್ಲಿ ತೊಡಗಿಸಿಕೊಳ್ಳುವವರೆಗೆ ಬೆಳೆದರು.ತಮ್ಮ ಹದಿನೈದನೇ 

ವಯಸ್ಸಿನಲ್ಲಿಯೇ ಮುಳ್ಳೇರಿಯಾ ಶಾಲೆಯಲ್ಲಿ ನಡೆದ “ಮಾಗಧ ವಧೆ” ಪ್ರಸಂಗದ ತಾಳಮದ್ದಳೆಯೊಂದರಲ್ಲಿ ಅಣ್ಣಂದಿರ ಹಿಮ್ಮೇಳದ ಸಹಕಾರದೊಂದಿಗೆ ಮೊದಲ 

ಬಾರಿಗೆ ರಂಗಪ್ರವೇಶ ಮಾಡಿದರು. ಈ ಸಂದರ್ಭ ಇವತ್ತು ಸ್ತ್ರೀಯರು ಯಕ್ಷರಂಗದ ಹಿಮ್ಮೇಳದಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಾಂದಿಯಾಯಿತು. ಯಕ್ಷರಂಗದಲ್ಲಿ 

ಪ್ರಥಮ ಮಹಿಳಾ ಭಾಗವತೆಯಾಗುತ್ತೇನೆ ಎಂಬ ಯೋಚನೆಯೂ ಅವರಿಗೆ ಆ ಕಾಲದಲ್ಲಿ ಇದ್ದಿರಲಿಕ್ಕಿಲ್ಲ. ಕಲ್ಲಿಕೋಟೆ ಆಕಾಶವಾಣಿಯಲ್ಲಿ ಅವರ ಭಾಗವತಿಕೆಯ 

ʼಶರಸೇತುಬಂಧನʼ ತಾಳಮದ್ದಳೆಹಾಗೂಮಂಗಳೂರು ಆಕಾಶವಾಣಿಯಲ್ಲಿʼಬಭ್ರುವಾಹನ ಕಾಳಗʼ ಎಂಬ ತಾಳಮದ್ದಳೆಪ್ರಸಾರಗೊಂಡಿದೆ.ರಾತ್ರಿ ಹೊತ್ತು 

ನಡೆಯುವ ಯಕ್ಷಗಾನಗಳಲ್ಲಿ ಇವರು ಭಾಗವಹಿಸಿದ್ದು ಕಡಿಮೆ. ಹೆಚ್ಚಾಗಿ ತಮ್ಮ ಅಣ್ಣಂದಿರೋ ಅಥವಾ ಮನೆಯವರು ಯಾರಾದರೂ ಹಿಮ್ಮೇಳದಲ್ಲಿ ಇರುವ ಕೂಟಗಳಲ್ಲಿ 

ಇವರು ಭಾಗವಹಿಸುತ್ತಾ ಇದ್ದರು. ಎಡನೀರು ಈಶ್ವರಾನಂದ ಭಾರತೀ ಸ್ವಾಮಿಗಳ ಕಾಲದಲ್ಲಿ ಅನೇಕ ಕೂಟಗಳು ನರ್ಮದಾ ಶಿಬರೂರಾಯರ ಭಾಗವತಿಕೆಯಲ್ಲಿ 

ನಡೆದಿವೆ. ದಾಮೋದರ ಮಂಡೆಚ್ಚರು ಕೂಡ ಇವರಿಗೆ ಭಾಗವತಿಕೆಯ ಕೆಲವು ಸೂಕ್ಷ್ಮಗಳನ್ನು ಕಲಿಸಿದ್ದರಂತೆ. ಪುರುಷೋತ್ತಮ ಶಿಬರೂರಾಯರನ್ನು ಕೈ ಹಿಡಿದ ಬಳಿಕ 

ಪ್ರೋತ್ಸಾಹ ದೊರಕಿದರೂ ಮನೆಯ ಜವಾಬ್ದಾರಿಗಳಿಂದ ನರ್ಮದಾರಿಗೆ ಹೆಚ್ಚಾಗಿ ಭಾಗವತಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಗಿರಲಿಲ್ಲ. ಜೊತೆಗೆ ಸಾಮಾಜಿಕ 

ನಿರ್ಬಂಧಗಳೂ ಇತ್ತಲ್ಲ. ಆದರೂ ಕೆಲವು ಅವಕಾಶಗಳು ದೊರೆತಾಗ ಅದನ್ನು ಸದುಪಯೋಗಪಡಿಸಿಕೊಂಡರು. ಆಟ- ಕೂಟಗಳು ಸಿಗದೇ 

ಹೋದರೂ ಮನೆಯ ಕಾರ್ಯಕ್ರಮಗಳಲ್ಲಿ ಹಾಡುವ ಮುಖೇನವಾದರೂ ತಮ್ಮೊಳಗಿನ ಭಾಗವತಿಕೆಯನ್ನು ಜೀವಂತವಾಗಿರಿಸುವ

ಪ್ರಯತ್ನವನ್ನು ಅವರು ಸದಾ ಮಾಡುತ್ತಲೇ ಇದ್ದರು. ಅವಕಾಶಗಳು ಕಡಿಮೆ ಇದ್ದರೂ ಸುಮಾರು ೩೦೦ ಕ್ಕಿಂತಲೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ

ಭಾಗವತಿಕೆ ಮಾಡಿದ ಹೆಗ್ಗಳಿಕೆ ನರ್ಮದಾ ಶಿಬರೂರಾಯರದು. ಕೀರಿಕ್ಕಾಡು ಪ್ರಶಸ್ತಿಯನ್ನು ಪಡೆದುಕೊಂಡವರು ಇವರು.ಸಾಮಾಜಿಕವಾಗಿ 

ಹೊರಪ್ರಪಂಚಕ್ಕೆ ತೆರೆದುಕೊಳ್ಳುವುದು ಅಸಾಧ್ಯವೇ ಆಗಿದ್ದ ಕಾಲಘಟ್ಟದಲ್ಲಿ ಭಾಗವತಿಕೆಯನ್ನು ಕಲಿತು, ಮಹಿಳೆಯರಲ್ಲೊಂದು ಯಕ್ಷಗಾನ 

ಉÀಂಗದ ಬಗೆಗೆ ಆಶಾಕಿರಣವನ್ನು ಸದ್ದಿಲ್ಲದೇ ಮೂಡಿಸಿ ಹೋದ ನರ್ಮದಾ ಶಿಬರೂರಾಯರು ೨೦೧೬ ನೇ ಜೂನ್ ೭ ರಂದುತಮ್ಮ

ಇಹಲೋಕಯಾತ್ರೆಯನ್ನು ಮುಗಿಸಿದರು. ಅವರು ಹಾಕಿದ ಅಡಿಪಾಯ ಇಂದು ಭದ್ರವಾಗಿದೆ. ಮಹಿಳಾ ಕಲಾವಿದರು ಯಕ್ಷಗಾನವನ್ನು ಉಳಿಸಿ, ಬೆಳೆಸುವ 

ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂಬುವುದೇ ಸಂತಸದ ವಿಷಯ.


Leelavathi baipadithaya


ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ - ಗಂಡುಮೆಟ್ಟಿನ ಕಲೆಯ ಪರಿಧಿಯಿಂದೆತ್ತರಕೆ ಬೆಳೆದವರು

ಮನೆಯ ಪರಿಧಿಯೊಳಗೆ ಹೆಂಗಸರ‍್ವಳು ಜೀವನವಡೀ ಸವೆಯುತ್ತಲೇ ಇದ್ದ ಕಾಲವದು. ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದು ಬಿಡಿ, ಆಟ ನೋಡುವುದಕ್ಕೂ ಅನುಮತಿಯಿರಲಿಲ್ಲ. ಅಂತಹ ಸಂರ‍್ಭದಲ್ಲಿ ʼಹೆಂಗಸು ಹಾಡುವುದಾ?ʼ ಎಂದು ಜನರೆಲ್ಲಾ ಮೂಗಿಗೆ ಬೆರಳಿಟ್ಟ ಗಳಿಗೆಯಲ್ಲಿ, ಗಂಡುಮೆಟ್ಟಿನ ಕಲೆಯ ಪರಿಧಿಯಿಂದೆತ್ರಕೆ ಬೆಳೆದವರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು. ಸಂಗೀತದತ್ತ ಒಲವನ್ನು ಹೊಂದಿದ್ದ ಶ್ರೀಗಂಗಾ ಯಕ್ಷಗಾನವನ್ನು ಅಷ್ಟಾಗಿ ನೋಡದ, ಯಕ್ಷಗಾನದ ಯಾವ ಕೌಟುಂಬಿಕ ಹಿನ್ನೆಲೆಯೂ ಇಲ್ಲದ ಹೆಣ್ಣುಮಗಳು ಕೈಹಿಡಿದವರ ಪ್ರೋತ್ಸಾಹದಿಂದಾಗಿ ಲೀಲಾವತಿ ಬೈಪಾಡಿತ್ತಾಯರಾಗಿ ಯಕ್ಷರಂಗದಲ್ಲಿ ಸರ‍್ಥ ಪ್ರಥಮ ವ್ಯವಸಾಯಿ ಭಾಗವತರಾಗಿ ಎಪ್ಪತ್ತರ ದಶಕದಿಂದ ಕಾಣಿಸಿಕೊಂಡದ್ದೇ ಒಂದು ಸೋಜಿಗ. ೧೯೪೭ ರ ಮೇ ೨೩ ರಂದು ದಿ. ಪುಂಡರೀಕಾಕ್ಷ ಹೆಬ್ಬಾರ್ ಹಾಗೂ ದಿ. ಮಹಾಲಕ್ಷ್ಮಿ ಅಮ್ಮ ಇವರ ಮಗಳಾಗಿ ಜನಿಸಿದ ಲೀಲಾವತಿ ಬೈಪಾಡಿತ್ತಾಯರು ಶಾಲೆಗೆ ಹೋಗದೆ ಓದಲು ಕಲಿತವರು. ಬಹಳ ಬೇಗನೇ ಅಪ್ಪ ಇಹಲೋಕ ತ್ಯಜಿಸಿದಾಗ, “ನಿನ್ನ ಸ್ವರ ಚೆನ್ನಾಗಿದೆ ಮಗಾ, ಸಂಗೀತ ಕಲಿ” ಎಂಬ ಅಪ್ಪನ  ಮಾತನ್ನು ಮನದಲ್ಲಿರಿಸಿಕೊಂಡು, ಸಂಬಂಧಿಕರಾದ ಪಿಟೀಲು ವಾದಕ ಮಧೂರು ಪದ್ಮನಾಭ ಸರಳಾಯರಲ್ಲಿ ಸೀನಿಯರ್ ವರೆಗಿನ ಸಂಗೀತಾಭ್ಯಾಸವನ್ನು ಮಾಡುತ್ತಾರೆ. ಶಾಲೆಗೆ ಹೋಗಿ ಅಕ್ಷರಾಭ್ಯಾಸವನ್ನು ಮಾಡುವುದಕ್ಕಾಗದಿದ್ದರೂ ಸ್ವ- ಅಭ್ಯಾಸದಿಂದಲೇ ʼರಾಷ್ಟ್ರಭಾಷಾ ವಿಶಾರದʼ ಪರೀಕ್ಷೆಯಲ್ಲಿ ತರ‍್ಗಡೆ ಹೊಂದಿ ಭೇಷ್ ಎನಿಸಿಕೊಂಡವರು. ೧೯೭೦ ರಲ್ಲಿ ತನ್ನ ೨೩ ನೇ ವಯಸ್ಸಿನಲ್ಲಿ ಯಕ್ಷರಂಗದ ಹಿಮ್ಮೇಳವಾದಕರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ವಿವಾಹವಾದ ಬಳಿಕ ಇವರ ಜೀವನ ಹೊಸ ತಿರುವೊಂದನ್ನು ಪಡೆದುಕೊಳ್ಳುತ್ತದೆ. ಯಜಮಾನರ ಪ್ರೋತ್ಸಾಹಭರಿತ ಮಾತಿನಿಂದಾಗಿ, ಅಷ್ಟಾಗಿ ಯಕ್ಷಗಾನದತ್ತ ಆರ‍್ಷಣೆಯಿಲ್ಲದಿದ್ದರೂ ಜಾಗಟೆ ಕೋಲು ಹಿಡಿದ ಲೀಲಮ್ಮನವರು ಮತ್ತೆ ಬರೆದದ್ದೆಲ್ಲಾ ಇತಿಹಾಸ. ಹೆಣ್ಣನ್ನು ತನಗಿಂತ ಕೆಳಗೆ ಎಂದು ಪುರುಷ ಸಮಾಜ ಕಾಣುತ್ತಿದ್ದ ವೇಳೆಯಲ್ಲಿ ತಾನೇ ಇದ್ದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಕೈ ಹಿಡಿದವಳನ್ನು ಜೊತೆಜೊತೆಗೆ ಕರಕೊಂಡು ಮುಂದೆ ಸಾಗಿದ ಸಹೃದಯಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಗೆ ನಾವು ಶಿರಬಾಗಲೇಬೇಕು. ಪತಿಯ ಸಹಕಾರದಿಂದ ಭಾಗವತಿಕೆ ಕಲಿತು, ಆರಂಭದಲ್ಲಿ ಕಡಬದ ತನ್ನ ಮನೆಯಲ್ಲಿ, ಅಲ್ಲೇ ಸಮೀಪದ ಸ್ಥಳಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ತನ್ನ ಪತಿ ಹಾಗೂ ಮೈದುನಂದಿರ ಸಹಕಾರದೊಂದಿಗೆ ಹಾಡುತ್ತಿದ್ದ ಲೀಲಮ್ಮ, ೧೯೭೬ ರಲ್ಲಿ ಪುತ್ತೂರಿನಲ್ಲಿ ಲಕ್ಷ್ಮೀಶ ತೋಳ್ಪಾಡಿ ಹಾಗೂ ದಾಸರಬೈಲು ಚನಿಯ ನಾಯ್ಕರು ರ‍್ಪಡಿಸಿದ್ದ ತಾಳಮದ್ದಳೆಯೊಂದರಲ್ಲಿ ಸರ‍್ವಜನಿಕವಾಗಿ ಅದೇ ಮೊದಲಬಾರಿಗೆ “ಕೃಷ್ಣಸಂಧಾನ ಪ್ರಸಂಗ”ದಲ್ಲಿ ಹಾಡಿದ್ದರು. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಂತಹ ಘಟಾನುಘಟಿಗಳ ಎದುರು ಹಾಡುವ ಅವಕಾಶ ದೊರೆತಿತ್ತು. ಮಹಿಳಾ ಭಾಗವತರಿದ್ದಾರೆ ಎಂದು ವಿಶೇಷ ಪ್ರಚಾರವೂ ಆರಂಭವಾಯಿತು. ೧೯೭೭ ರಲ್ಲಿ ಆದಿಸುಬ್ರಹ್ಮಣ್ಯ ಮೇಳದ ಮಾಲೀಕರಾದ ಪುತ್ತೂರು ಶೀನಪ್ಪ ಭಂಡಾರಿ “ನಮ್ಮ ಮೇಳಕ್ಕೆ ಭಾಗವತಿಕೆಗೆ ಬರಬಹುದಾ?” ಎಂದು ಪ್ರಸ್ತಾಪವಿತ್ತಿದ್ದರು. ಆ ಬಳಿಕ ಒಮ್ಮೆ ಕಡಬ ಸಮೀಪದ ಕಲ್ಲುಗುಡ್ಡೆಯಲ್ಲಿ ದಿ. ಮುಳಿಯ ಕೇಶವಯ್ಯ ವಿರಚಿತ ʼಯೇಸುಕ್ರಿಸ್ತ ಮಹಾತ್ಮ್ಯೆʼಯಲ್ಲಿ ಅದೇ ಮೊದಲ ಬಾರಿಗೆ ತಾಳಮದ್ದಳೆಗಳಲ್ಲಿ ಹಾಡುತ್ತಿದ್ದ ಲೀಲಮ್ಮ ಯಕ್ಷಗಾನದಲ್ಲಿ ಹಾಡಿದ್ದರು. ಮಹಿಳೆಯರ‍್ವಳು ಹಾಡುತ್ತಿದ್ದಾಳೆ ಎಂದು ತಿಳಿಯುತ್ತಿದ್ದ ಕಾಲದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ, ಸರ‍್ಥ ಭಾಗವತರಾಗಿ ಹೊರಹೊಮ್ಮಿದವರು ಲೀಲಮ್ಮ. ಬಿಟ್ಟಿ ಪ್ರಚಾರಕ್ಕಾಗಿ ಗಂಡಸನ್ನು ಸ್ತ್ರೀವೇಷ ಹಾಕಿಸಿ ಹಾಡುವುದಕ್ಕೆ ಕೂರಿಸುತ್ತಿರಬೇಕು ಎನ್ನುವವರು ಕೆಲವರು, ಹೆಣ್ಣು ಹಾಡಿದರೆ ಎಷ್ಟು ಹಾಡಿಯಾಳು ಎನ್ನುವವರು ಹಲವರು, ಪ್ರಚಾರಕ್ಕೆ ಬೇಕಾಗಿ ಹೆಣ್ಣರ‍್ವಳನ್ನು ಕರೆದುಕೊಂಡು ತಿರುಗಾಟ ಮಾಡುವ ಕಾಲ ಬಂತು ಎಂದು ಹಂಗಿಸುವವರು ಅನೇಕರು. ಇವುಗಳೆಡೆಯಲ್ಲಿ ಹಾಡುವ ಹೆಂಗಸು ಯಾರು? ಎಂದು ಅಚ್ಚರಿಯಿಂದ ನೋಡಿ ಪ್ರೋತ್ಸಾಹಿಸುವ ಕೈಗಳೂ ಇರುತ್ತಿದ್ದವು. ಭಾಗವತರೆಂದರೆ ನರ‍್ದೇಶಕರು. ರ‍್ವ ಮಹಿಳೆ ಸರ‍್ಥವಾಗಿ ನರ‍್ದೇಶನದ ಸ್ಥಾನವನ್ನು ತುಂಬಿದ್ದಾರೆಂದರೆ ಅದು ಸಣ್ಣ ಮಾತಲ್ಲ. ಮೊದಲ ಬಾರಿಗೆ ಯಕ್ಷಗಾನಕ್ಕಾಗಿ ಹಾಡುವಾಗಲೇ ದೊಡ್ಡ ಸಾಮಗರ ಪ್ರೋತ್ಸಾಹ, ಬಳಿಕ ಬಲಿಪರಂತಹ ಅನೇಕರ ಮರ‍್ಗರ‍್ಶನ ಹೀಗೆ ಅನೇಕರ ಸಹಕಾರದಿಂದ ಪ್ರಥಮ ವ್ಯವಸಾಯಿ ಭಾಗವತರಾಗಿ ಕಾಣಿಸಿಕೊಂಡವರು ಲೀಲಮ್ಮ. ಪೇಜಾವರ ಶ್ರೀಗಳಿಂದಲೂ “ಆಹಾ ಭಾರೀ ಪದ್ಯ ಪಂಡರ್” ಎಂದು ಹೊಗಳಿಸಿಕೊಂಡ ಹಿರಿಮೆ ಇವರದು. ತೆಂಕಿನಲ್ಲಿ ಮಾತ್ರವಲ್ಲದೇ ಬಡಗಿನಲ್ಲೂ ತೆಂಕಿನ ಧ್ವನಿಯನ್ನು ಕೇಳಿಸಿದವರು. ೧೯೭೧ ರಿಂದೀಚೆಗೆ ಸುಮಾರು ಐವತ್ತು ರ‍್ಷಗಳ ಸಮಗ್ರ ಅನುಭವ ಹೊಂದಿದ ಇವರು ಅಳದಂಗಡಿ, ಕುಂಬಳೆ, ಬಪ್ಪನಾಡು, ತಲಕಳ ಮೇಳಗಳಲ್ಲಿ ಸುಮಾರು ೨೦-೨೫ ರ‍್ಷಗಳ ಕಾಲ  ಪರ‍್ಣ ತಿರುಗಾಟವನ್ನೂ, ಆದಿಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್, ರ‍್ನಾಟಕ, ಕದ್ರಿ ಮೇಳಗಳಲ್ಲಿ ಅತಿಥಿ ಭಾಗವತರಾಗಿ ತಿರುಗಾಟವನ್ನು ಮಾಡಿ ಸೈ ಎನಿಸಿಕೊಂಡವರು. ದೇಶದಾದ್ಯಂತ ಅನೇಕ ಯಕ್ಷಗಾನ ಕರ‍್ಯಕ್ರಮಗಳಲ್ಲಿ ಭಾಗವಹಿಸಿದವರು. ರ‍್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ. ʼಯಕ್ಷಪ್ರಮೀಳಾʼ ಪುರಸ್ಕಾರ ಮುಂತಾದ ಅನೇಕ ಪ್ರಶಸ್ತಿ, ಸಂಮಾನಗಳು ಇವರನ್ನು ಅರಸಿ ಬಂದಿವೆ. ಇತ್ತೀಚೆಗಷ್ಟೇ ತಮ್ಮ ಶಿಷ್ಯವೃಂದದವರಿಂದ ತಮ್ಮ ಪತಿಯ ಜೊತೆಗೆ “ಶ್ರೀಹರಿಲೀಲಾ” ಅಭಿನಂದನೆಯನ್ನು  ಸ್ವೀಕರಿಸಿದವರು. ಕೆಲವು ಸಿನಿಮಾಗಳಿಗೆ ಹಾಡಿದ ಇವರು ಅನೇಕ ಟಿವಿ ಸಂರ‍್ಶನಗಳಲ್ಲಿ ಭಾಗವಹಿಸಿದವರು, ಕ್ಯಾಸೆಟ್, ಸಿಡಿಗಳಿಗಾಗಿಯೂ ಹಾಡಿದವರು. ಸಂಪರ‍್ಣ ಯಕ್ಷಕುಟುಂಬ ಇವರದು. ಸತಿ-ಪತಿಯರು ಯಕ್ಷರಂಗದಲ್ಲಿ ತೊಡಗಿಸಿಕೊಂಡದ್ದರ ಜೊತೆಗೆ, ಮಕ್ಕಳಾದ ಗುರುಪ್ರಸಾದ್ ಬೈಪಾಡಿತ್ತಾಯ ಹಾಗೂ ಅವಿನಾಶ ಬೈಪಾಡಿತ್ತಾಯರಿಗೂ ಕಲಾಸಕ್ತಿಯನ್ನು ಮೂಡಿಸಿ, ಮೊಮ್ಮಕ್ಕಳ ಮೂಲಕ ಮುಂದಿನ ಪೀಳಿಗೆಗೂ ದಾಟಿಸಿದವರು.ರ‍್ಮಸ್ಥಳ ಲಲಿತಕಲಾ ಕೇಂದ್ರ ಹಾಗೂ ಅನೇಕ ಕಡೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿ ತಮ್ಮ ಪತಿಯ ಜೊತೆಗೂಡಿ ಯಕ್ಷಗಾನ ಕಲೆಯನ್ನು ನಿಂತ ನೀರಾಗಿಸದೇ ಹರಿಸುತ್ತಿರುವವರು ನಮ್ಮ ಲೀಲಮ್ಮ.  ಪರಂಪರೆಯ ಸೊಗಡನ್ನು ತನ್ನದೇ ಅಸ್ತಿತ್ವದೊಂದಿಗೆ ಉಳಿಸಿಕೊಂಡು, ಬೆಳೆಸಿದ ಯಕ್ಷರಂಗದ ಅದ್ಭುತ ಮಹಿಳೆ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು ೭೦ ರ ದಶಕದಲ್ಲೇ ಮಹಿಳೆ ಹೊರಜಗತ್ತಿಗೆ ತೆರೆದುಕೊಳ್ಳಲಾರಂಭಿಸಿದ್ದಾಳೆ ಎಂಬುದನ್ನು ಸಾಬೀತುಪಡಿಸಿದವರು. ಅನೇಕ ಹೆಮ್ಮಕ್ಕಳ ಮನದಲ್ಲಿ ಯಕ್ಷರಂಗದ ಆಸೆಯನು ಬಿತ್ತಿದವರು. ದೂರದಿಂದಲೇ ಯಕ್ಷಗಾನದ ಅಂದವನ್ನು ಕಣ್ತುಂಬಿಕೊಳ್ಳುತ್ತಿದ್ದವರು ಸ್ವತಃ ಭಾಗವಹಿಸುವ ಮನ ಮಾಡುವಂತಾದುದಕ್ಕೆ ಇವರು ನಾಂದಿಯಾದವರೆಂದರೆ ಹೆಚ್ಚಲ್ಲ. 

ಸಾಯಿಸುಮಾ ಎಂ. ನಾವಡ, ಕಾರಿಂಜ

Women yakshagana artist - Vid. Smt Sumangala ratnakar Rao


ಧೀರ ಕಲೆಯೊಳಗೆ ಕೀರವಾಣಿಯರು – ೧೦

ಕಲೆ ಎಲ್ಲರಿಗೂ ಒಲಿಯುವಂಥದ್ದಲ್ಲ. ಕಲೆಯೇ ಕಲೆಯ ಒಲವಿನ ಆತ್ಮವುಳ್ಳ ಕಲಾವಿದರನ್ನು ತನ್ನತ್ತ ಕೈಬೀಸಿ ಕರೆದು ಬೆಳೆಸುತ್ತದೆಯಂತೆ. ಇದಕ್ಕೆ ಉದಾಹರಣೆಯೆಂಬAತೆ ಕಲಾಜೀವನವನ್ನೇ ತನ್ನದ್ದಾಗಿಸಿಕೊಂಡು ಬೆಳೆದು, ಇತರರನ್ನೂ ಬೆಳೆಸುತ್ತಿರುವ ಕಲಾವಿದೆ ನೃತ್ಯ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರರಾವ್. ತಂದೆ ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ. ಶ್ರೀ ರಾಮರಾವ್ ಸುರತ್ಕಲ್, ತಾಯಿ ಎನ್. ಐ.ಟಿ.ಕೆ. ಸುರತ್ಕಲ್ ನ ಹಿರಿಯ ಅಧೀಕ್ಷಕರಾಗಿ ನಿವೃತ್ತರಾದ ದಿ. ಶ್ರೀಮತಿ ಹೀರಾ ಎಚ್. ಇವರೀರ್ವರ ಒಲವ ಕುಡಿಯಾಗಿ ಬೆಳೆದ ಸುಮಂಗಲಾರಿಗೆ ಎಳವೆಯಲ್ಲೇ ಇದ್ದ ಕಲಾ ಪರಿಸರ ಇವರನ್ನು ಓರ್ವ ಕಲಾವಿದೆಯನ್ನಾಗಿಸಿತೆಂದರೆ ತಪ್ಪಲ್ಲ.

ಬಿ.ಬಿ.ಎಂ., ಎಂ.ಡಾನ್ಸ್, ಎಂ.ಎ.(ಕನ್ನಡ) ಪದವೀಧರರಲ್ಲದೇ, ಭರತನಾಟ್ಯದಲ್ಲಿ ವಿದ್ವತ್ ಪದವಿ, ಜೊತೆಗೆ ದೂರದರ್ಶನ ಕಲಾವಿದೆ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ವರೆಗಿನ ಶಿಕ್ಷಣ, ಯಕ್ಷಗಾನ ಮುಮ್ಮೇಳ-ಹಿಮ್ಮೇಳದ ಅಭ್ಯಾಸ, ಕೂಚುಪುಡಿ ನೃತ್ಯದ ಪ್ರಾಥಮಿಕ ಅಭ್ಯಾಸ – ಇವಿಷ್ಟು ಇವರ ವಿಶೇಷ ವಿದ್ಯಾರ್ಹತೆಗಳು. ಕಳೆದ ೨೭ ವರ್ಷಗಳಿಂದ ಭರತನಾಟ್ಯ ಕಲಾವಿದೆಯಾಗಿ ಕಾಣಿಸಿಕೊಂಡದ್ದು ಮಾತ್ರವಲ್ಲದೇ ನೃತ್ಯಶಿಕ್ಷಕಿ, ನೃತ್ಯ ನಿರ್ದೇಶಕಿಯಾಗಿ ಅನೇಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದಾರೆ.  

ನಾಟ್ಯಾರಾಧನಾ ಕಲಾಕೇಂದ್ರ(ರಿ) ಉರ್ವ, ಮಂಗಳೂರು ಇದು ಇವರ ಕನಸಿನ ಕೂಸು. ಈ ಸಂಸ್ಥೆಯಲ್ಲಿ ಅನೇಕ ಆಸಕ್ತ ವಿದ್ಯಾರ್ಥಿಗಳು ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಯಕ್ಷಗಾನಕ್ಕೆ ಸಂಬAಧಿಸಿದ ಇವರ ಕೂಸು ಯಕ್ಷಾರಾಧನಾ ಕಲಾಕೇಂದ್ರ (ರಿ) ಉರ್ವ, ಮಂಗಳೂರು. ಈ ಸಂಸ್ಥೆಯಲ್ಲೂ ಅದೆಷ್ಟೋ ವಿದ್ಯಾರ್ಥಿಗಳು ಉಚಿತವಾಗಿ ಯಕ್ಷಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಸಂಸ್ಥೆಯ ಇನ್ನೊಂದು ಅಂಗವೆAದರೆ, ಮಹಿಳಾ ತಾಳಮದ್ದಳೆ ತಂಡ. ಅದೂ ಕೂಡ ಸಕ್ರಿಯವಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ಇವರು ಯಕ್ಷಗಾನ ಚೆಂಡೆ-ಮದ್ದಳೆಯ ಪ್ರಾಥಮಿಕ ಅಭ್ಯಾಸವನ್ನು ಗುರು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಲ್ಲಿಯೂ, ಭಾಗವತಿಕೆಯನ್ನು ಶ್ರೀ ಪ್ರಸಾದ್ ಚೇರ್ಕಾಡಿಯವರಲ್ಲಿಯೂ, ಯಕ್ಷಗಾನ ಮುಮ್ಮೇಳವನ್ನು ಶ್ರೀ ಸೂರಿಕುಮೇರು ಗೋವಿಂದ ಭಟ್, ಶ್ರೀ ದಿವಾಣ ಶಿವಶಂಕರ ಭಟ್, ಶ್ರಿ ರಾಕೇಶ್ ರೈ ಅಡ್ಕ ಇವರಲ್ಲಿ ಅಭ್ಯಾಸ ಮಾಡಿದ್ದಾರೆ. ಯಕ್ಷಗಾನ ತಾಳಮದ್ದಳೆಯ ಕುರಿತು ಮಾರ್ಗದರ್ಶನವನ್ನು ಶ್ರೀ ಹರೀಶ್ ಬಳಂತಿಮುಗರು ಇವರಲ್ಲಿ ಪಡೆಯುತ್ತಿದ್ದಾರೆ. 

ಕಳೆದ ಹನ್ನೊಂದು ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡ ಇವರು ಉಚಿತವಾಗಿ ಯಕ್ಷಗಾನ ಶಿಕ್ಷಣವನ್ನು ನೀಡುತ್ತಿದ್ದಾರೆ. ಸುಮಾರು ೩೦ ಮಕ್ಕಳು ಹಾಗೂ ೮ ಮಹಿಳೆಯರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಸುಮಂಗಲಾ ಇವರು ಇದುವರೆಗೆ ಸುಮಾರು ೨೦೦ಕ್ಕೂ ಮಿಕ್ಕಿ ಯಕ್ಷಗಾನ  ಪ್ರದರ್ಶನಗಳನ್ನು ದೇಶದ ಹಲವೆಡೆ ನೀಡಿರುತ್ತಾರೆ. ಯಕ್ಷಗಾನದ ಸಾತ್ವಿಕ ಪಾತ್ರಗಳನ್ನು ಬಹಳ ಔಚಿತ್ಯಪೂರ್ಣವಾಗಿ ನಿರ್ವಹಿಸುವ ಕಲಾವಿದೆ ಇವರು.  ಶ್ರೀ ದೇವೀ ಮಹಾತ್ಮ್ಯೆಯ ಶ್ರೀದೇವಿ, ಹಲವು ಪ್ರಸಂಗಗಳಲ್ಲಿ ಕೃಷ್ಣ, ಸುಧನ್ವಾರ್ಜುನ, ಕೃಷ್ಣಾರ್ಜುನಗಳಲ್ಲಿ ಅರ್ಜುನ, ಶ್ರೀ ಕೃಷ್ಣ ಪಾರಿಜಾತ, ನರಕಾಸುರ ಮೋಕ್ಷದ ಸತ್ಯಭಾಮೆ, ಅಲ್ಲದೇ ದಾಕ್ಷಾಯಿಣಿ. ಸುಭದ್ರೆ, ಮಾಲಿನಿ, ದ್ರೌಪದಿ, ಸರಮೆ, ರತಿ, ಜಮದಗ್ನಿ, ಮೃಕಂಡುಮುನಿ, ವಿಷ್ಣು, ಹನೂಮಂತ, ಬಲರಾಮ, ಕಿರಾತ, ದೇವೇಂದ್ರನAತಹ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದ ಹಿರಿಮೆ ಇವರದು. ಅನೇಕ ಹಿರಿಯ, ವೃತ್ತಿಪರ ಕಲಾವಿದರಾದ ಸೂರಿಕುಮೇರು, ಉಬರಡ್ಕ, ಸುಣ್ಣಂಬಳ ಮುಂತಾದವರೊAದಿಗೆ ವೇದಿಕೆ ಹಂಚಿಕೊAಡು, ಮೆಚ್ಚುಗೆ ಪಡಕೊಂಡವರು ಇವರು. “ತುಳುಕೂಟ ಕುವೈಟ್” ಆಯೋಜಿಸಿರುವ “ತುಳು ಪರ್ಬ-೨೦೧೫” ಕಾರ್ಯಕ್ರಮದಲ್ಲಿ ಬಡಗಿನ ಹೆಸರಾಂತ ಕಲಾವಿದರಾದ ಶ್ರೀ ಸುಜಯೀಂದ್ರ ಹಂದೆಯವರೊAದಿಗೆ ತೆಂಕು-ಬಡಗು ಯಕ್ಷಗಾನ ಜುಗಲ್ಬಂದಿ ಕಾರ್ಯಕ್ರಮ ನೀಡಿರುತ್ತಾರೆ.  ಇವರು ತಮ್ಮ ಸಂಸ್ಥೆಯಾದ ಯಕ್ಷಾರಾಧನಾ ಕಲಾಕೇಂದ್ರದ ಮೂಲಕ, ಇತರ ಸಂಸ್ಥೆಗಳ ಸಹಯೋಗದೊಂದಿಗೆ “ಯಕ್ಷೋಪಾಸನಾ“ಎನ್ನುವ

ಶಿಬಿರವನ್ನೂ ಆಯೋಜಿಸಿಕೊಂಡು ಬಂದಿರುವುದು ಉಲ್ಲೇಖನೀಯ. ೨೦೧೩ ರಲ್ಲಿ ಭರತನಾಟ್ಯ ಮತ್ತು ಯಕ್ಷಗಾನ ಕುರಿತ ತೌಲನಿಕ ಅಧ್ಯಯನವನ್ನು “ತೆಂಕುತಿಟ್ಟು ಯಕ್ಷಗಾನದಲ್ಲಿ ಅಭಿನಯ ದರ್ಪಣ” ಎಂಬ ಕಿರು ಸಂಶೋಧನೆಯನ್ನು ಮಾಡಿರುತ್ತಾರೆ. ೨೦೧೩ರ ಆಗಸ್ಟ್ ೧೮ರಂದು ಐತಿಹಾಸಿಕ ಮಹಿಳಾ ಯಕ್ಷಗಾನ “ಶ್ರೀದೇವೀಮಹಾತ್ಮ್ಯೆ” ಯನ್ನು ಸಂಯೋಜಿಸಿ, ಸಂಘಟಿಸಿ, ಮೊದಲ ಬಾರಿಗೆ ಮಹಿಳಾ ಯಕ್ಷಗಾನದ ಡಿವಿಡಿಯನ್ನು ಹೊರತಂದ ಹೆಗ್ಗಳಿಕೆ ಇವರದು. 

೨೦೧೪ರಲ್ಲಿ ಯಕ್ಷಾರಾಧನಾ ಮಹಿಳಾ ತಾಳಮದ್ದಳೆ ತಂಡವನ್ನು ಆರಂಭಿಸಿ, ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಪಡೆದಿರುತ್ತಾರೆ. ಪ್ರಸ್ತುತ ಈ ತಂಡದಲ್ಲಿ ೧೦ ಮಂದಿ ಸದಸ್ಯರಿದ್ದಾರೆ. ಸುಮಾರು ೧೦೦ಕ್ಕೂ ಹೆಚ್ಚಿನ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸಿ, ಮೆಚ್ಚುಗೆ ಪಡೆದಿದ್ದಾರೆ. ಆಕಾಶವಾಣಿಯ ಶ್ರೇಣೀಕೃತ(ಬಿ) ತಾಳಮದ್ದಳೆ ತಂಡವನ್ನೂ ಮುನ್ನಡೆಸುತ್ತಿದ್ದಾರೆ. ಧುರವೀಳ್ಯದ ಕೌರವ, ಕರ್ಣಾರ್ಜುನದ ಶಲ್ಯ, ಕೃಷ್ನಾರ್ಜುನದ ಕೃಷ್ಣ, ಅರ್ಜುನ, ದಾರುಕ, ಸುಭದ್ರೆ, ಜಾಂಬವತೀ ಕಲ್ಯಾಣದ ಕೃಷ್ಣ, ಬಲರಾಮ, ಕದಂಬ ಕೌಶಿಕೆಯ ಸುಗ್ರೀವ, ರಕ್ತಬೀಜ, ಸುಧನ್ವಾರ್ಜುನದ ಸುಧನ್ವ, ಅರ್ಜುನ, ಪ್ರಭಾವತಿ, ಘೋಷ ಯಾತ್ರೆಯ ಕೌರವ ಮುಂತಾದ ಅನೇಕ ಪಾತ್ರಗಳನ್ನು ಅರ್ಥಧಾರಿಯಾಗಿ ನಿರ್ವಹಿಸಿದ್ದಾರೆ. ವಿಟ್ಲ ಶಂಭುಶರ್ಮ, ಸುಣ್ಣಂಬಳ, ಕಲ್ಚಾರ್, ಬಳಂತಿಮುಗರು, ಮುಂತಾದ ಅನೇಕರೊಂದಿಗೆ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದಾರೆ.

ʼಬಲ್ಲಿರೇನಯ್ಯ ʼಯಕ್ಷಗಾನಪತ್ರಿಕೆಯಲ್ಲಿ ಇವರ ʼ”ದಕ್ಷಿಣಾದಿ ಯಕ್ಷಮಾರ್ಗ” ಎಂಬ ಅಂಕಣ ಪ್ರಕಟವಾಗಿದೆ.  ಹೀಗೆ ಯಕ್ಷಗಾನ ಕಲಾವಿದೆಯಾಗಿ, ತಾಳಮದ್ದಳೆ ಅರ್ಥದಾರಿಯಾಗಿ ದೇಶಾದ್ಯಂತ ಕಾರ್ಯಕ್ರಮ ನೀಡಿದಂತಹ ಕಲಾವಿದೆ ಇವರು. ಇಷ್ಟು ಮಾತ್ರವಲ್ಲದೇ ನಿರೂಪಕಿಯಾಗಿ, ನಟುವಾಂಗ ಕಲಾವಿದೆಯಾಗಿ, ಲೇಖಕಿಯಾಗಿ ಗುರುತಿಸಿಕೊಂಡದ್ದು ಮಾತ್ರವಲ್ಲದೇ, ಭರತನಾಟ್ಯ ಮಾರ್ಗದ ನೃತ್ಯಬಂಧಗಳ ಸಾಹಿತ್ಯವನ್ನು ರಚಿಸುವ ಸಾಮರ್ಥ್ಯವಂತೆ ಈಕೆ. ಅನೇಕ ಸಾಮಾಜಿಕ ಸಂಘ-ಸAಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವಾಕೆ.

ಇವರ ಸಾಧನೆಗೆ ತುಳುಕೂಟ ಕುವೈಟ್ನಲ್ಲಿ ಭಾರತೀಯ ರಾಯಭಾರಿಗಳ ಮೂಲಕ ಗೌರವ ದೊರೆತಿದೆ. ಡಾ. ರಾಜಕುಮಾರ್ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಗುರು ದೇವಾನುಗ್ರಹ ಪ್ರಶಸ್ತಿ, ರೆಡ್ಎಫ್. ಎಮ್. ಮಂಗಳೂರು ಇದರ ʼಸೂಪರ್ ಸಾಧಕಿʼ ಪ್ರಶಸ್ತಿ. ಶ್ರೀಮತಿ ಚಂದ್ರಮ್ಮ ವಾಸುಭಟ್ಟ ಸ್ಮಾರಕ ಪ್ರಶಸ್ತಿ, ಯಕ್ಷದೇವ ಮಿತ್ರಕಲಾ ಮಂಡಳಿ ಪ್ರಶಸ್ತಿ,, ಸಂಕ್ರಾAತಿ ಪುರಸ್ಕಾರ, ನಂದಗೋಕುಲ ಪುರಸ್ಕಾರ, ಯಕ್ಷಕಲಾ ಪುರಸ್ಕಾರ, ಕಲಾ ಕೈಂಕರ್ಯ ಪುರಸ್ಕಾರ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ, ಸಂಮಾನಗಳಿಗೆ ಇವರು ಭಾಜನರಾಗಿದ್ದಾರೆ. ಪತಿಯಾದ ಶ್ರೀ ರತ್ನಾಕರರಾಯರ ಸಹಕಾರ ಇದಕ್ಕೆಲ್ಲಾ ಕಾರಣ ಎಂದು ಹೇಳುವುದನ್ನು ಸುಮಂಗಲಾ ಅವರು ಮರೆಯುವುದಿಲ್ಲ. ಇವರ ಕಲಾ ಜೀವನ ಇನ್ನಷ್ಟು ಭವಿತವ್ಯದಲ್ಲಿ ಬೆಳಗಲಿ ಎಂಬ ಆಶಯ ನಮ್ಮದು.

ಸಾಯಿಸುಮಾ ಎಂ. ನಾವಡ

The lady having the leadership and management of a Yakshagana Mela - Yogakshi ganesh Talakala


ಯಕ್ಷಗಾನ ಕಲಾವಿದೆ, ಯಕ್ಷ ಶಿಕ್ಷಕಿ, ತಾಳಮದ್ದಳೆ ಅರ್ಥಧಾರಿ, ಯಕ್ಷಗಾನ ಭಾಗವತಿಕೆ ಅಭ್ಯಾಸಿ, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಮಕ್ಕಳ ಮೇಳದ ಸಂಚಾಲಕಿ, ಪ್ರಸ್ತುತ ಶ್ರೀಕಾಶೀ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿ, ತಲಕಳದ ಯಜಮಾನಿಕೆ ಉಳ್ಳಾಕೆ, ನಾಟಕ ಕಲಾವಿದೆ. ಅಷ್ಟೇ ಅಲ್ಲದೇ ವೃತ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ ಇವರು ಶ್ರೀಮತಿ ಯೋಗಾಕ್ಷಿ ಗಣೇಶ್ ತಲಕಳ.

ಉಳ್ಳಾಲ ಮತ್ತು ತಲಕಳ ಮೇಳದ ಯಜಮಾನರಾಗಿದ್ದ, ಸ್ವತಃ ಯಕ್ಷಗಾನ ಕಲಾವಿದರಾಗಿದ್ದ ದಿ. ಕೆ.ತಿಮ್ಮಪ್ಪ ಗುಜರನ್ ಹಾಗೂ ಶ್ರೀಮತಿ ಗುಲಾಬಿ ದಂಪತಿಗಳ ಮಗಳಾಗಿ ದಿನಾಂಕ ೧೮-೦೭-೧೯೭೮ ರಲ್ಲಿ ಕೊಳಂಬೆ ಗ್ರಾಮದ ತಲಕಳದಲ್ಲಿ ಜನಿಸಿದ ಯೋಗಾಕ್ಷಿಯವರು ಬಜ್ಪೆಯಲ್ಲಿ ತಮ್ಮ ಹತ್ತನೇ ತರಗತಿವರೆಗಿನ ಶಿಕ್ಷಣವನ್ನು ಪೂರೈಸಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ದಿ. ಬಜ್ಪೆ ದೇರಣ್ಣರಲ್ಲಿ ಯಕ್ಷಗಾನದ ಆರಂಭಿಕ ಹೆಜ್ಜೆಗಾರಿಕೆಯನ್ನು ಕಲಿತು, ʼಬಪ್ಪನಾಡು ಕ್ಷೇತ್ರ ಮಹಾತ್ಮ ʼಸಪ್ತದೇವಿಯರಲ್ಲಿ ಓರ್ವಳಾಗಿ ರಂಗಪ್ರವೇಶ ಮಾಡಿದರು.  ಆ ಬಳಿಕ ಬೆಳ್ಳಾರೆ ಮಂಜುನಾಥ ಭಟ್ಟರಲ್ಲಿ ಯಕ್ಷಗಾನದ ಹೆಚ್ಚಿನ ನಾಟ್ಯಾಭ್ಯಾಸ ಮಾಡಿದ ಇವರು ಇವತ್ತಿಗೂ ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ನಾಟ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಎನ್ನುವುದು ಕಲಿಕೆ ಯಾವತ್ತಿಗೂ ಮುಗಿಯುವಂಥದ್ದಲ್ಲ ಎಂಬುದನ್ನು ತೋರಿಸುತ್ತದೆ. ಇದು ಇವರ ಕಲಿಯುವುದಕ್ಕೆ ಬಹಳಷ್ಟಿದೆ ಎಂಬ ಮನೋಭಾವವನ್ನೂ ತೋರಿಸುತ್ತದೆ.

ʼದಕ್ಷಾಧ್ವರʼದ ದಾಕ್ಷಾಯಿಣಿ ಇವರ ಬಹಳ ಹೆಸರು ತಂದುಕೊಟ್ಟ ಪಾತ್ರ. ಈಗಿನ ಹಾಗೆ ಮಾಧ್ಯಮಗಳ ವ್ಯವಸ್ಥೆ ಆವತ್ತೂ ಇದ್ದಿದ್ದರೆ ಬಹುಶಃ ಇವರಂಥಹ ಅನೇಕ ಕಲಾವಿದರ ಪಾತ್ರದ ಪರಿಚಯ ನಮಗಾಗುತ್ತಿತ್ತೋ ಏನೋ. ʼಭಸ್ಮಾಸುರ ಮೋಹಿನಿʼಯ ಮೋಹಿನಿ, ಸುದರ್ಶನ ವಿಜಯದ ವಿಷ್ಣು, ಲಕ್ಷ್ಮಿ ಇವುಗಳು ಇವರ ನೆಚ್ಚಿನ ಪಾತ್ರಗಳು. ಇನ್ನುಇವರುನಿರ್ವಹಿಸಿದ ಪಾತ್ರಗಳು ಅನೇಕ. ಮಾಯಾ ತಿಲೋತ್ತಮೆಯ ಬ್ರಹ್ಮ, ಶ್ರೀ ದೇವೀ ಮಹಾತ್ಮೆಯ ದೇವಿ, ಮಾಲಿನಿ, ಬ್ರಹ್ಮ, ಆದಿಮಾಯೆ, ದೇವೇಂದ್ರ, ಮುಂಡ, ಸುಗ್ರೀವ, ನಳದಮಯಂತಿಯ ದಮಯಂತಿ, ವೀರಮಣಿಯ ಈಶ್ವರ, ರುಕ್ಮಾಂಗ, ಬಭ್ರುವಾಹನ ಕಾಳಗದ ಬಭ್ರುವಾಹನ, ಚಿತ್ರಾಂಗದೆ, ರತಿಕಲ್ಯಾಣದ ರತಿ, ದ್ರೌಪದಿ, ಕುಶಲವದ ಕುಶ, ಸೀತೆ, ಭಾರ್ಗವ ವಿಜಯದ ಭಾರ್ಗವ, ಜಾಂಬವತೀ ಕಲ್ಯಾಣದ ಬಲರಾಮ, ಕೃಷ್ಣ, ಶಶಿಪ್ರಭಾ ಪರಿಣಯದ ಶಶಿಪ್ರಭೆ, ಭ್ರಮರ ಕುಂತಳೆ, ಕಮಲಗಂಧಿನಿ, ಶರಸೇತುಬಂಧನದ ಕೃಷ್ಣ, ವೃದ್ಧಬ್ರಾಹ್ಮಣ, ಹನೂಮಂತ, ಬೇಡರ ಕಣ್ಣಪ್ಪದ ಈಶ್ವರ, ಪಂಚವಟಿಯ ಮಾಯಾ ಶೂರ್ಪನಖಿ, ಸೀತೆ, ಭೀಷ್ಮ ವಿಜಯದ ಅಂಬೆ, ಭೃಗುಲಾಂಛನದ ಲಕ್ಷ್ಮಿ, ತುಳಸೀ ಜಲಂಧರದ ವೃಂದೆ, ಕೃಷ್ಣಾರ್ಜುನದ ಕೃಷ್ಣ, ಪ್ರಮೀಳಾರ್ಜುನದ ಪ್ರಮೀಳೆ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ರಂಭಾಮಣಿ, ರಾವಣ ವಧೆಯ ಮಂಡೋದರಿ ಇಂತಹ ವೈವಿಧ್ಯಮಯ ಪಾತ್ರಗಳ ಜೊತೆಗೆ

ಇನ್ನೂ ಅನೇಕ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. ತಮ್ಮ ಮೇಳದ ಯಕ್ಷಗಾನಗಳಲ್ಲಿಯೂ ಕನ್ನಡ-ತುಳು ಪ್ರಸಂಗಗಳಲ್ಲಿಯೂ ಅನೇಕ ಪಾತ್ರಗಳನ್ನು ನಿರ್ವಹಿಸಿದ ಸುಮಾರು ೨೯ ವರ್ಷಗಳ ಅನುಭವ ಇವರದ್ದು. ಅನೇಕ ಯಕ್ಷಗಾನ ತಾಳಮದ್ದಳೆಗಳಲ್ಲಿಯೂ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರಲ್ಲಿ ಯಕ್ಷಗಾನ ಭಾಗವತಿಕೆಯ ಅಭ್ಯಾಸವನ್ನೂಇವರು ಮಾಡಿದ್ದಾರೆ. ಇವರ ತಂದೆಯ ವ್ಯವಸ್ಥಾಪಕತ್ವದ ಶ್ರೀ ತಲಕಳ ಮೇಳದಲ್ಲಿ ಮೂರು ವರ್ಷ, ಶ್ರೀ ಉಳ್ಳಾಲ ಮೇಳದಲ್ಲಿ ಹತ್ತು ವರ್ಷಕ್ಕೂ ಮಿಕ್ಕಿ ಸಂಗೀತಗಾರಳಾಗಿ ಸೇವೆ ಸಲ್ಲಿಸಿದ್ದಾರೆ. 

ತಂದೆಯ ಮರಣಾ ನಂತರ ೨೦೨೧ ರಿಂದ ಆರಂಭದಲ್ಲಿ ತಲಕಳ ಮತ್ತು ಉಳ್ಳಾಲ ಮೇಳಗಳೆರಡನ್ನೂ ಇವರೇ ನೋಡಿಕೊಳ್ಳುತ್ತಿದ್ದರು. ಮರು ವರ್ಷದಿಂದ ತಲಕಳ ಮೇಳ ಒಂದನ್ನು ತಮ್ಮ ವ್ಯವಸ್ಥಾಪಕತ್ವದಲ್ಲಿ ನಿಭಾಯಿಸುತ್ತಿದ್ದಾರೆ.  ತಮ್ಮ ತಮ್ಮನಾದ ದಿವಂಗತ ಶ್ರೀಶ ತಲಕಳರ ನೆನಪಿನಲ್ಲಿ “ಶ್ರೀಶ ಯಕ್ಷೋತ್ಸವ”ವನ್ನು ೨೦೦೯ ರಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮನ ಹೆಸರಿನಲ್ಲಿ ಹಾಗೂ ೨೦೨೦ ರಲ್ಲಿ ನಿಧನರಾದ ತಮ್ಮ ತಂದೆಯ ಹೆಸರಿನಲ್ಲೂ ಅರ್ಹ ಕಲಾವಿದರನ್ನು ಗುರುತಿಸಿ, ಸಂಮಾನಿಸುವ ಕಾರ್ಯವೂ ಈ ಯಕ್ಷೋತ್ಸವದಲ್ಲಿ ನಡೆಯುತ್ತದೆ. ತನ್ನ ತಮ್ಮನ ಹೆಸರಿನಲ್ಲೇ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರವನ್ನೂ ಸ್ಥಾಪಿಸಿ, ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಉಚಿತವಾಗಿ ಕಲಿಸುವ ಹೊಣೆ ಹೊತ್ತವರಿವರು. ಇಲ್ಲಿ ಪ್ರಸ್ತುತ ಕರ್ಗಲ್ಲು ವಿಶ್ವೇಶ್ವರ ಭಟ್ಟರು ಗುರುಗಳು. ಹಿಮ್ಮೇಳ ವಿದ್ಯಾರ್ಥಿಗಳೂ ಇಲ್ಲಿದ್ದಾರೆ. ಬೈಪಾಡಿತ್ತಾಯ ದಂಪತಿಗಳಲ್ಲಿ ಹಿಮ್ಮೇಳ ಆಸಕ್ತರಿಗೂ ತರಗತಿ ಇಲ್ಲಿ ನಡೆಯುತ್ತದೆ. ಇಲ್ಲಿ ಕಲಿತ ಮಕ್ಕಳದ್ದೇ ಒಂದು ತಂಡವನ್ನೂ ಕಟ್ಟಿದ್ದಾರೆ. ಇದರಿಂದ ಮೊದಲು ಒಂದು ಮಹಿಳಾ ಯಕ್ಷಗಾನ ತಂಡವನ್ನೂ ಕಟ್ಟಿ, ಅನೇಕ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಇವರ ಮಕ್ಕಲ ತಂಡದ ವಿಶೇಷತೆಯೆಂದರೆ, ಇಲ್ಲಿ ಹಿಮ್ಮೇಳ ಮತ್ತು ಮುಮ್ಮೇಳವನ್ನು ಮಕ್ಕಳೇ ನಿಭಾಯಿಸುತ್ತಾರೆ. ಮಕ್ಕಳೇ ಸ್ವತಃ ಮುಖವರ್ಣಿಕೆಯನ್ನೂ ಮಾಡುತ್ತಾರೆ. 

೨೦೧೦ ರ ಶ್ರೀಶ ಯಕ್ಷೋತ್ಸವದಲ್ಲಿ ಮೊದಲ ಬಾರಿಗೆ ೩೫ ಮಹಿಳಾ ಕಲಾವಿದೆಯರನ್ನು ಒಗ್ಗೂಡಿಸಿ, ಸಂಪೂರ್ಣ ʼಶ್ರೀ ದೇವಿ ಮಹಾತ್ಮೆʼ ಯಕ್ಷಗಾನವನ್ನು ಪ್ರದರ್ಶಿಸಿದ ಹಿರಿಮೆ ಇವರದ್ದು. ಇವರ ಮಕ್ಕಳಾದ ಶ್ರಾವ್ಯ ಹಾಗೂ ಶಮಾ ಕೂಡ ಯಕ್ಷಗಾನ ಕಲಾವಿದರಾದದ್ದು ವಿಶೇಷ. ಇವರು ಎಳವೆಯಲ್ಲೇ ತಮ್ಮ ಅಜ್ಜನ ಮೇಳದಲ್ಲಿ ಪೂರ್ವರಂಗದ ವೇಷಗಳನ್ನು ಮಾಡುತ್ತಿದ್ದರು. ಈಗ ಶ್ರಾವ್ಯ ಪದವಿ ವಿದ್ಯಾರ್ಥಿ. ಯಕ್ಷಗಾನ ವೇಷಧಾರಿ, ಭಾಗವತಿಕೆ ಅಭ್ಯಾಸಿ, ಚೆಂಡೆ-ಮದ್ದಳೆ ವಾದಕಿ. ಶಮಾ ಪ್ರೌಢಶಾಲಾ ವಿದ್ಯಾರ್ಥಿ, ವೇಷಧಾರಿ, ಚೆಂಡೆ-ಮದ್ದಳೆ ವಾದಕಿ.  ಯೋಗಾಕ್ಷಿಯವರು ಸ್ವತಃ ಯಕ್ಷ ಶಿಕ್ಷಕಿಯೂ ಹೌದು. ನಿರಂಜನ ಸ್ವಾಮಿ ಕಾಲೇಜು, ಚೈತನ್ಯ ಮಹಿಳಾ ಮಂಡಲ ಮುರನಗರ, ಜಿ.ಎಸ್.ಬಿ ಸಂಘ ಬಜ್ಪೆಯಲ್ಲಿ ಯಕ್ಷಗಾನ ಕಲಿಸಿದವರು. 

ಇವಿಷ್ಟೇ ಅಲ್ಲದೇ ಯೋಗಾಕ್ಷಿಯವರು ನಾಟಕರಂಗದಲ್ಲೂ ತೊಡಗಿಸಿಕೊಂಡವರು. ಇವರ ನಾಟಕ ರಂಗದ ಗುರುಗಳು ನಿರಂಜನ್ ಸಾಲಿಯಾನ್ ಕದ್ರಿ, ನಾಗೇಶ್ ದೇವಾಡಿಗ ಕದ್ರಿ. ಕದ್ರಿ ನವನೀತ ಶೆಟ್ಟಿ ವಿರಚಿತ “ಸತ್ಯೊದಸಿರಿ”ಯ ದಾರುಪಾತ್ರ ಇವರಿಗೆ ನೆಚ್ಚಿನದ್ದು. ಅಷ್ಟೇ ಅಲ್ಲದೇ ಮಹಿಳಾ ತಂಡದೊAದಿಗೆ ಸಮೂಹ ಜಾನಪದ ನೃತ್ಯಗಳನ್ನು ಜಿಲೆಯಾದ್ಯಂತ ಪ್ರದರ್ಶಿಸಿದ್ದಾರೆ. ಮಹಿಳಾ ಮಂಡಲಗಳಲ್ಲಿಯೂ ಇವರು ಸಕ್ರಿಯರು. 

ಸುಮಾರು ಹತ್ತು ವರ್ಷಗಳ ಕಾಲ ಮಕ್ಕಳಿಗೆ “ಬೇಸಿಗೆ ಶಿಬಿರ”ಗಳನ್ನು ಆಯೋಜಿಸಿದವರು ಇವರು.  ಇಂತಹ ಸರಳ, ಸಜ್ಜನ ಮಹಿಳೆ 

 ಯೋಗಾಕ್ಷಿಯವರಿಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸನ್ಮಾನಗಳು ದೊರೆತಿವೆ. ಪಟ್ಲ ಫೌಂಡೇಶನ್ ನಿಂದಲೂ ಗೌರವಿಸಲ್ಪಟ್ಟವರು ಇವರು. ತಮ್ಮ ಪತಿ ಹಾಗೂ ಮನೆಯವರೆಲ್ಲರ ಸಹಕಾರದಿಂದ ಇಷ್ಟೆಲ್ಲಾ ಮಾಡುವುದಕ್ಕಾಯಿತು ಎನ್ನುವ ಇವರನ್ನು ಕಲಾಮಾತೆ ಇನ್ನಷ್ಟು ಹರಸಿ, ಬೆಳಗಿಸಲಿ ಎಂಬ ಆಶಯ ನಮ್ಮದು.

ಲೇಖಕರು - ಸಾಯಿಸುಮ ಎಂ ನಾವುಡ  ಕಾರಿಂಜ 


Woman yakshagana artist - Kiran R pai


ಧೀರ ಕಲೆಯೊಳಗೆ ಕೀರವಾಣಿಯರು – ೧೨
ಯಕ್ಷಕಲಾ ಸಂಪನ್ನೆ; ಶ್ರೀಮತಿ ಕಿರಣ್ ಆರ್ ಪೈ ಶಿವಮೊಗ್ಗ
ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದೇ ವಿಶೇಷವಾಗಿದ್ದ ಕಾಲದಲ್ಲಿ ಯಕ್ಷಗಾನದಲ್ಲಿ ವೇಷ ಕಟ್ಟಿ ಕುಣಿದವರು ಶ್ರೀಮತಿ ಕಿರಣ್ ಆರ್. ಪೈ ಶಿವಮೊಗ್ಗ ಇವರು. ವಿವಾಹಾನಂತರ ಇವರ ತೊಡಗಿಸುವಿಕೆ ನಿಂತ ನೀರಾಗಲಿಲ್ಲ. ಬದಲಾಗಿ ಹರಿದು ಹೋಗಿ ಅನೇಕರಿಗೆ ಯಕ್ಷಗಾನವನ್ನು ಕಲಿಸಿಕೊಟ್ಟಿತು. ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅದನ್ನು ಬೇರೆಯವರಿಗೂ ದಾಟಿಸುವುದು ಸಣ್ಣ ಕೆಲಸವೇನಲ್ಲ. ತನ್ನ ಕಲ್ಪನೆಯ ಕೂಸಿಗೆ “ಸುಮುಖ ಕಲಾಕೇಂದ್ರ” ಎಂದು ಹೆಸರಿರಿಸಿ, ಅನೇಕರಿಗೆ ಯಕ್ಷಕಲೆಯನ್ನು ಉಣಬಡಿಸುತ್ತಿದ್ದಾರೆ. ಹಳ್ಳಾಡಿಯ ದಿ. ಶ್ರೀ ಹೆಚ್.ಸುಬ್ರಾಯ ಮಲ್ಯ ಹಾಗೂ ಶ್ರೀಮತಿ ಶೋಭಾ ಮಲ್ಯ ಮಗಳಾಗಿ ೧೭-೦೮-೧೯೯೮ರಂದು ಕುಂದಾಪುರದ ಹಳ್ಳಾಡಿಯಲ್ಲಿ ಜನಿಸಿದ ಕಿರಣ್ ಪೈ ಯವರು ಬಿ.ಕಾಂ., ಎಂ.ಎ.(ಕನ್ನಡ) ಪದವೀಧರರು. ತನ್ನ ತಂದೆಯಿAದಲೇ ಇವರಿಗೆ ಯಕ್ಷಗಾನದ ಪ್ರಾಥಮಿಕ ಅಭ್ಯಾಸ. ಮುಂದೆ ಶ್ರೀ ಪರಮೇಶ್ವರ ಹೆಗ್ಡೆಯವರಲ್ಲಿ ಯಕ್ಷಗಾನದ ಹೆಚ್ಚಿನ ಅಭ್ಯಾಸವನ್ನು ಮಾಡುತ್ತಾರೆ ಕಿರಣ್ ಪೈಯವರು. ʼಮನೆಯೇ ಮೊದಲ ಪಾಠಶಾಲೆʼ ಎನ್ನುವುದು ಇದಕ್ಕೆ ಇರಬೇಕು. ಎಳವೆಯಲ್ಲಿ ಕಲಿತ ವಿದ್ಯೆ ಯಾವತ್ತೂ ಗಟ್ಟಿಯೇ. ತಂದೆಯಿAದ ಕಲಿತ ಯಕ್ಷಗಾನ, ಕಾಲೇಜು ದಿನಗಳಲ್ಲಿ ಮುಂದುವರೆದು ಇನ್ನಷ್ಟು ತೊಡಗಿಸಿಕೊಳ್ಳುವುದಕ್ಕೆ ಕಾರಣವಾಯಿತು. ತಮ್ಮ ೯-೧೦ ನೇ ವಯಸ್ಸಿನಲ್ಲಿ ಗೆಜ್ಜೆಕಟ್ಟಿ, ಹೆಜ್ಜೆಯಿಟ್ಟ ಇವರು, ಇವತ್ತಿಗೂ ಬಡಗುತಿಟ್ಟಿನ ಮಹಿಳಾ ಯಕ್ಷಗಾನದಲ್ಲಿ ಬಹು ಬೇಡಿಕೆಯ ಕಲಾವಿದೆ. ಕಾರಣ ಇವರು ಮಾಡುವ ಪಾತ್ರದ ಪರಕಾಯ ಪ್ರವೇಶ. ತನಗೊದಗಿದ ಯಾವುದೇ ಪಾತ್ರಕ್ಕೂ ಜೀವತುಂಬುವ ಸಾಮರ್ಥ್ಯ ಇರುವಂತಹ ಕಲಾವಿದೆ. ಸಾಧಾರಣ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಅನುಭವ ಇವರದು. ಶ್ರೀಕೃಷ್ಣ, ಶ್ರೀದೇವಿ, ಹನೂಂAತ ಇವರ ನೆಚ್ಚಿನ ಪಾತ್ರಗಳು. ಭಾರತದಾದ್ಯಂತ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಇವರ ಕಾರ್ಯಕ್ರಮಗಳು ಚಂದನ ವಾಹಿನಿ, ಶಂಕರ ವಾಹಿನಿ, ಆಕಾಶವಾಣಿಯಲ್ಲಿಯೂ ಪ್ರಸಾರಗೊಂಡಿವೆ. ಕೊಂಕಣಿ ಭಾಷೆಯ ಯಕ್ಷಗಾನದ ಸಿಡಿ ಅಮೇರಿಕಾದಲ್ಲೂ ಬಿಡುಗಡೆಗೊಂಡಿದೆ. ಕನ್ನಡ ಮತ್ತು ಕೊಂಕಣಿ ಎರಡೂ ಭಾಷೆಗಳಲ್ಲಿಯೂ ಯಕ್ಷಗಾನ ಪ್ರದರ್ಶನವನ್ನು ನೀಡಿ, ನಿರ್ದೇಶಿಸಿ, ವಿದ್ಯಾರ್ಥಿಗಳ ಮೂಲಕವೂ ಪ್ರದರ್ಶನವನ್ನು ಮಾಡಿಸಿದ್ದಾರೆ. ಇವರ ಕನಸಿನ ಕೂಸು “ಸುಮುಖ ಕಲಾಕೇಂದ್ರ”. ಈ ಕೇಂದ್ರದಲ್ಲಿ ೨೫-೩೦ ಮಕ್ಕಳು ಮತ್ತು ಮಹಿಳೆಯರು ಯಕ್ಷಗಾನ ಕಲಿಯುತ್ತಿದ್ದಾರೆ, ಕಲಿತು ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ತಮ್ಮ ಕಲಾಕೇಂದ್ರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ತಂದೆಯವರ ನೆನಪಿನಲ್ಲಿ “ದಿವಂಗತ ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ”ಯನ್ನು ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದ ಹಿರಿಯ ವ್ಯಕ್ತಿಗಳಿಗೆ ನೀಡುತ್ತಾ ಬಂದಿದ್ದಾರೆ. ಶ್ರೀಮತಿ ಕಿರಣ್ ಪೈ ಯವರ ಮತ್ತೊಂದು ಹಿರಿಮೆ ಎಂದರೆ, ಯಕ್ಷಗಾನ ಪ್ರಸಂಗಗಳನ್ನು ಕನ್ನಡದಿಂದ ಕೊಂಕಣಿ ಭಾಷೆಗೆ ಅನುವಾದ ಮಾಡಿದ್ದು. ಇವರು ಅಭಿಮನ್ಯು ಕಾಳಗ, ಸುಧನ್ವ ಕಾಳಗ, ಉತ್ತರನ ಪೌರುಷ, ಸೀತಾ ಸ್ವಯಂವರ, ಜಾಂಬವತೀ ಕಲ್ಯಾಣ, ಕಾಲಯವನ ಕಾಳಗ ಮುಂತಾದ ಪ್ರಸಂಗದ ಪದ್ಯಗಳನ್ನು ಅನುವಾದಿಸಿದ್ದಾರೆ. ಇವರು ಯಕ್ಷಗಾನದ ಕಲೆಯಲ್ಲಿ ಗುರುತಿಸಿಕೊಂಡದ್ದು ಮಾತ್ರವಲ್ಲದೇ, ತಬಲಾದಲ್ಲಿಯೂ ಪರಿಣತಿ ಹೊಂದಿದವರು. ತಬಲಾ ವಾದನವನ್ನೂ ಕೂಡ ಅನೇಕ ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದಾರೆ. ತಬಲಾ ವಾದನದಲ್ಲಿ ಸೀನಿಯರ್ ಕೋರ್ಸನ್ನು ಮಾಡುತ್ತಿದ್ದಾರೆ. ಈಕೆ ತ್ರೋಬಾಲ್ ಆಟಗಾತಿಯೂ ಹೌದು. ಇವರ ಸಾಧನೆಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು, ಸಂಮಾನಗಳು ಸಂದಿವೆ. ಕೊಂಕಣಿ ಸಾಹಿತ್ಯ ಸಮ್ಮೇಳನದ ರಂಗರತ್ನ ಪ್ರಶಸ್ತಿ, ಉಡುಪಿ ಪಲಿಮಾರು ಮಠದಿಂದ ಅನುಗ್ರಹಿಸಿದ ಶ್ರೀಕೃಚ್ಣ ನೃಸಿಂಹಾನುಗ್ರಹ ಪ್ರಶಸ್ತಿ, ಯಕ್ಷ ಮಹಿಳಾ ರತ್ನ ಪ್ರಶಸ್ತಿ ಹೈದರಾಬಾದ್ ಮುಂತಾದವು. ಪತಿ ಡಾ.ಎಂ.ಬಿ. ರವಿ ಪೈ ಮತ್ತು ಮಕ್ಕಳಾದ ನಿವೇದಿತಾ ಪೈ ಹಾಗೂ ಅರ್ಜುನ್ ಪೈ ಇವರ ಸಹಕಾರ ತಮ್ಮ ಬೆಳವಣಿಗೆಗೆ ಪೂರಕ ಎನ್ನುವ ಕಿರಣ್ ಪೈ, ಯಕ್ಷಗಾನ ಯುವ ಪ್ರೇಕ್ಷಕರಿಂದಾಗಿ ಇನ್ನಷ್ಟು ಬೆಳೆಯುವಂತಾಗಲಿ ಎಂದು ಆಶಿಸುತ್ತಾರೆ. -
ಸಾಯಿಸುಮಾ ಎಂ. ನಾವಡ, ಕಾರಿಂಜ

ಧೀರ ಕಲೆಯೊಳಗೆ ಕೀರವಾಣಿಯರು - ಶ್ರೀಮತಿ ಗೀತಾ ಹೆಗಡೆ ಸಾಲ್ಕಣಿ


ಧೀರ ಕಲೆಯೊಳಗೆ ಕೀರವಾಣಿಯರು – ೧೫
ಯಕ್ಷಗಾನ ಕಲಾವಿದೆ, ಯಕ್ಷಶಿಕ್ಷಕಿ - ಶ್ರೀಮತಿ ಗೀತಾ ಹೆಗಡೆ ಸಾಲ್ಕಣಿ
ಸುತ್ತಲಿನ ಪರಿಸರ ಅರ್ಥಾತ್ ವಾತಾವರಣ ಎನ್ನವುದು ಯಾವತ್ತಿಗೂ ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಪೂರಕವೇ ಆಗಿರುತ್ತದೆ. ಆ ಪರಿಸರದಲ್ಲಿ ಬಿತ್ತಿ, ಬೆಳೆದದ್ದು ಅಲ್ಲಿದ್ದವರ ವ್ಯಕ್ತಿತ್ವ ಬೆಳವಣಿಗೆಗೆ ಪೋಷಕಾಂಶವಾಗುತ್ತದೆ. ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಊರು, ಮನೆ ಅಲ್ಲಿನ ಮಕ್ಕಳನ್ನು ಸಾಂಸ್ಕೃತಿಕ ವ್ಯಕ್ತಿತ್ವಗಳನ್ನಾಗಿ ರೂಪಿಸುತ್ತದೆ. ಹೀಗೆ ಎಳವೆಯಲ್ಲಿ ಯಕ್ಷಗಾನದ ಪೂರಕ ವಾತಾವರಣದಲ್ಲಿ ಬೆಳೆದು, ಒಬ್ಬಾಕೆ ಸಮರ್ಥ ಕಲಾವಿದೆಯಾಗಿ ತಂಡ ಕಟ್ಟಿ, ಒಳ್ಳೆಯ ಯಕ್ಷಶಿಕ್ಷಕಿಯಾದವರು ಶ್ರೀಮತಿ ಗೀತಾ ಹೆಗಡೆಯವರು.
ಗೀತಾ ಹೆಗಡೆಯವರು ಹುಟ್ಟಿದ್ದು ೧೯೭೩ ಫೆಬ್ರವರಿ ೧೫ರಂದು, ಶಿರಸಿ ಸಮೀಪದ ಸಾಲ್ಕಣಿಯ ಶ್ರೀ ಕೇಶವ ಹೆಗಡೆ ಹಾಗೂ ಶ್ರೀಮತಿ ವಿಲಾಸಿನಿ ದಂಪತಿಯ ಮಗಳಾಗಿ. ಅಜ್ಜ ಮತ್ತು ದೊಡ್ಡಪ್ಪನಿಗಿದ್ದ ಯಕ್ಷಗಾನದ ಮೇಲಿನ ವಿಶೇಷ ಆಸಕ್ತಿ ಇವರನ್ನು ಬಾಲ್ಯದಲ್ಲಿಯೇ ಯಕ್ಷಗಾನದೆಡೆಗೆ ಸೆಳೆಯಿತು. ತನ್ನೂರ ಸಮೀಪ ಎಲ್ಲೇ ಯಕ್ಷಗಾನವಿದ್ದರೂ ಹೋಗಿ ಸಂಪೂರ್ಣ ರಾತ್ರಿ ನೋಡಿ, ಮುಂಜಾವಿಗೆ ಮನೆಗೆ ಹಿಂತಿರುಗಿ ಬರುತ್ತಿದ್ದವರು ಗೀತಾ. ಮನೆಗೆ ಬಂದ ಬಳಿಕವೂ ತನ್ನ ಒಡನಾಡಿಗಳಾಗಿದ್ದ ಕೆಲವು ಮಕ್ಕಳ ಜೊತೆಗೂಡಿ ರಾತ್ರೆಯ ಆಟದ್ದೇ ಸುದ್ದಿ. ಎಳೆಯ ಮನಸ್ಸುಗಳಿಗೆ ತೋಚಿದ ಮನೆಯಲ್ಲೇ ಇವರದ್ದೊಂದು ಆಟ. ಹೀಗೆ ಯಕ್ಷಗಾನವನ್ನು ಪ್ರೀತಿಸಿ ಇನ್ನಷ್ಟು ಆಪ್ತತೆಯಿಂದ ಅದನ್ನು ಕಂಡವರು ಗೀತಾ ಹೆಗಡೆಯವರು. ಶಿರಸಿಯ ಎಮ್.ಇ.ಎಸ್ ಕಲಾ ಮತ್ತು ವಿಜ್ಙಾನ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಮಾನಸ ಗಂಗೋತ್ರಿ ಮೈಸೂರಿನಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರಿವರು. ಇವರು ವಿದ್ಯಾರ್ಥಿನಿಯಾಗಿರುವಾಗಲೇ ಬಹಳಷ್ಟು ಏಕಪಾತ್ರಾಭಿನಯಗಳಲ್ಲಿ ಭಾಗವಹಿಸಿ, ಪ್ರಥಮ ಬಹುಮಾನವನ್ನು ಪಡೆದುಕೊಳ್ಳುತ್ತಿದ್ದವರು. ಮನೆಯಲ್ಲಿದ್ದ ಹಿರಿಯರು ಇವರಲ್ಲಿದ್ದ ಯಕ್ಷಗಾನದಲ್ಲಿದ್ದ ಆಸಕ್ತಿಯನ್ನು ಗಮನಿಸಿ, ಯಕ್ಷಗಾನದ ಮೇರು ಪ್ರತಿಭೆ ಹೊಸ್ತೋಟ ಮಂಜುನಾಥ ಭಾಗವತರಿಂದ ಅಲ್ಲಿದ್ದ ಒಂದಿಷ್ಟು ಮಕ್ಕಳನ್ನೂ ಸೇರಿಸಿ ತರಬೇತಿ ಕೊಡಿಸಿದರು. ತಾಳ, ಲಯ, ಕುಣಿತಗಳ ಶಿಸ್ತುಬದ್ಧ ತರಬೇತಿಸಹಾಯಕ ಗುರುಗಳಾದ ಪರಮೇಶ್ವರ ಹೆಗಡೆ ಐನಬೈಲ್ ಹಾಗೂ ನಾಗರಾಜ ಜೋಶಿ ಸೋಂದಾ ಇವರಿಂದಲೂ ಆಯಿತು. ಹೆಮ್ಮಕ್ಕಳು ಯಕ್ಷಗಾನ ಕಲಿಯಬಾರದೆಂಬ ನಿರ್ಬಂಧವೇನೂ ಇವರ ಮನೆತನದ ಹಿರಿಯರು ಹೇರಲಿಲ್ಲ ಎಂಬುದು ಅಂದಿನ ಕಾಲಕ್ಕದು ವಿಶೇಷ ಸಂಗತಿಯಾಗಿತ್ತು. ಹೀಗೆ ಸಾಲ್ಕಣಿಯಲ್ಲಿ ಪ್ರಾರಂಭವಾದದ್ದು ಶ್ರೀ ಲಕ್ಷ್ಮೀ ನರಸಿಂಹ ಮಕ್ಕಳ ಯಕ್ಷಗಾನ ಮಂಡಳಿ. ತನ್ನ ಹದಿಮೂರನೇ ವಯಸ್ಸಿಗೆ ಗೀತಾ ಗೆಗಡೆಯವರು ಏಕಲವ್ಯನಾಗಿ ರಂಗವೇರಿದರು. ವೀರವರ್ಮ, ಕರ್ಣ, ಕಂಸ, ಮಾಗಧ, ಸುಧನ್ವ, ಭೀಷ್ಮ, ಅರ್ಜುನ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡರು. ಶ್ರೀ ಜಯರಾಮ ಹೆಗಡೆಯವರನ್ನು ಮದುವೆಯಾಧ ಬಳಿಕ, ಮಗ ʼಮನುʼವಿನ ಜನನವಾದ ಮೇಲೆ ೮-೧೦ ವರ್ಷಗಳ ಕಾಲ ಪ್ರೇಕ್ಷಕಿಯಾಗಿಯೇ ಉಳಿಯಬೇಕಾಗಿ ಬಂದರೂ, ಮತ್ತೆ ಪುನಃ ಪತಿ, ಅತ್ತೆ-ಮಾವನ ಪ್ರೋತ್ಸಾಹ ಸಹಕಾರದಿಂದ ಗೆಜ್ಜೆ ಕಟ್ಟಿದರು. ಮತ್ತೆ ಇಂದಿನವರೆಗೆ ಹಿಂತಿರುಗಿ ನೋಡಿದ್ದಿಲ್ಲ.
ದಕ್ಷ, ವಿಷ್ಣು, ಅಭಿಮನ್ಯು, ಕರ್ಣ, ಅರ್ಜುನ, ಸುಧನ್ವ, ಭೀಷ್ಮ, ಕಂಸ, ಮಾಗಧ. ವೀರವರ್ಮ, ಬಲರಾಮ, ರಕ್ತಬೀಜ, ಸಾಲ್ವ, ಭೀಮ ಮುಂತಾದ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದರೂ ಇವರು ಇಷ್ಟ ಪಡುವ ವೇಷ ಕೇದಗೆ ಮುಂದಲೆಯ ಕೃಷ್ಣ. ಆರಂಭಿಕ ಗುರುಗಳಿದ್ದರೂ ಬೆಂಗಳೂರಿಗೆ ಬಂದಮೇಲೆ ಅದೂ ಹತ್ತು ವರುಚಗಳ ನಂತರ ಇವರ ಯಕ್ಷಗಾನ ಕಲಿಕೆ ಎಳವೆಯಲ್ಲಿ ಇದ್ದ ಹಾಗೆ ಇರಲಿಲ್ಲ. ಇಲ್ಲಿ ಸ್ವಂತಿಕೆ ಬೇಕಿತ್ತು. ನಿರಂತರ ಹೊಸ ಕಲಿಕೆಯ ಅಗತ್ಯವಿತ್ತು. ಹಾಗಾಗಿ ಅನೇಕ ಅನುಭವಿಗಳ, ಹಿರಿಯ ಕಲಾವಿದರ ವೇಷಗಳನ್ನು ನೋಡುತ್ತಾ ಗೀತಾ ಹೆಗಡೆಯವರು ಹೊಸ ಹೊಸ ಯಕ್ಷಗಾನದ ವಿಚಾರಗಳನ್ನು ಬೆಂಗಳೂರಿನಲ್ಲೂ ಜನಮನ್ನಣೆಗಳಿಸತೊಡಗಿದರು. ಯಕ್ಷಗಾನ ಕಲಿತ ಆರಂಭದಿAದ ಇಂದಿನವರೆಗೆ ಇವರಿಗೆ ಅವಕಾಶವನ್ನಿತ್ತು ಪ್ರೋತ್ಸಾಹಿಸಿದ, ಡಾ.ವಿಜಯ ನಳಿನಿ ರಮೇಶ್ ಅವರ ಸಮಯ ಸಮೂಹ, ಬೆಂಗಳೂರಿನ ವಿ.ಆರ್.ಹೆಗಡೆ
ಹಾಘೂ ಸುರೇಶ್ ಹೆಗಡೆ ಕಡತೋಕಾ ವರ ಸಿರಿಕಲಾ ಮೇಳ, ಮಯೂರಿ ಉಪಾಧ್ಯಾಯ ಅವರ ಯಕ್ಷಸಿರಿ ಬೆಂಗಳೂರು ತಂಡವನ್ನು ಸದಾ ಸ್ಮರಿಸುವ ಇವರ ಬದ್ಧತೆ ಮೆಚ್ಚತಕ್ಕದ್ದಾಗಿದೆ. ಯಕ್ಷಗಾನ ಕಲಾವಿದೆಯಾಗಿ ಕರ್ನಾಟಕ ಮಾತ್ರವಲ್ಲದೇ ದೆಹಲಿ, ಮುಂಬಯಿ, ಹೈದರಾಬಾದ್ ಮುಂತಾದ ಕಡೆಗಳಲ್ಲೂ ಪ್ರದರ್ಶನ ನೀಡಿದ್ದಲ್ಲದೇ, ಯಕ್ಷಗಾನಾಸಕ್ತಿಯಿಂದ ಬಂದವರಿಗೆ ಯಕ್ಷಗಾನವನ್ನೂ ಕಲಿಸಿಕೊಡುತ್ತಿದ್ದಾರೆ. ಉತ್ತರಕನ್ನಡ ಪತ್ರಿಕೆಯೊಂದರಲ್ಲಿ ವರದಿಗಾರಳಾಗಿ ಕೆಲಸ ಮಾಡಿದ ಅನುಭವವಿರುವ ಇವರು ಚೆನ್ನಾಗಿ ಬರೆಯಬಲ್ಲರು ಕೂಡ.
ಶ್ರೀಮತಿ ಗೀತಾ ಹೆಗಡೆ ಸಾಲ್ಕಣಿಯವರ ಯಕ್ಷಪ್ರತಿಭೆಯನ್ನು ಗುರುತಿಸಿ, ಬೆಂಗಳೂರಿನ ಗಾನಸೌರಭ ಯಕ್ಷಗಾನ ಶಾಲೆಯವರು ʼಯಕ್ಷಾಭಿವಂದನAʼ, ಅಕ್ಕನಮನೆ ಪ್ರತಿಷ್ಠಾನ ಬೆಂಗಳೂರು ಇವರು ʼದೇಸೀ ದಿಬ್ಬಣ ಕಲಾಸಿರಿ ಪ್ರಶಸ್ತಿʼ, ಹೈದರಾಬಾದಿನ ಕರಾವಳಿ ಮೈತ್ರಿ ಸಂಘದವರು ʼ ಯಕ್ಷನಾಟ್ಯ ಸರಸ್ವತಿʼ ಹಾಗೂ ಕಾಣಿಯೂರು ಮಠ ಉಡುಪಿ ಯವರಿಂದ ʼ ಶ್ರೀಕೃಷ್ಣ ನೃಸಿಂಹಾನುಗ್ರಹ ಪ್ರಶಸ್ತಿʼ ಗಳನ್ನು ನೀಡಿ ಗೌರವಿಸಿದ್ದಲ್ಲದೇ ಅನೇಕ ಸಂಘ-ಸAಸ್ಥೆಗಳು ಇವರನ್ನು ಗೌರವಿಸಿ, ಸಂಮಾನಿಸಿವೆ. ಮನೆಯವರೆಲ್ಲರ ಪ್ರೋತ್ಸಾಹದಿಂದ ಇನ್ನು ಮುಂದೆಯೂ ಕೂಡ ಗೀತಾ ಹೆಗಡೆ ಸಾಲ್ಕಣಿಯವರು ಯಕ್ಷಗಾನ ಕಲಾಸೇವೆ ಮಾಡುವಂತಾಗಲಿ ಎಂಬುದೇ ನಮ್ಮ ಆಶಯ.
ಲೇಖಕರು- ಸಾಯಿಸುಮಾ ಎಂ. ನಾವಡ, ಕಾರಿಂಜ
https://nyt.1ngo.in ವೆಬ್ ಸೈಟ್ ನಲ್ಲೂ ಲಭ್ಯವಿದೆ.. ಓದಿ ಅಭಿಪ್ರಾಯ ಹಂಚಿಕೊಳ್ಳಿ..
ಸಂಪಾದಕರು

ಯಕ್ಷಗಾನ ಸಂಘಟನೆಯಲ್ಲಿ ಸ್ತ್ರೀ ಶಕ್ತಿ


#ಯಕ್ಷಗಾನ ಸಂಘಟನೆಯಲ್ಲಿ ಸ್ತ್ರೀ ಶಕ್ತಿ
“ಸಂಘೇ ಶಕ್ತಿ ಕಲೌಯುಗೇ” ಎಂಬ ಮಾತೊಂದಿದೆ. ಅಂತೆಯೇ ಈ ಸಂಘವನ್ನು ಮಾಡುವುದು ಸುಲಭವಲ್ಲ. ಅರ್ಥಾತ್ ಅನೇಕರನ್ನು ಒಗ್ಗೂಡಿಸಿ ಆಗಬೇಕಾದ್ದನ್ನು ಮಾಡುವುದಕ್ಕೆ ತಾಳ್ಮೆ ಮುಖ್ಯ ಅಸ್ತ್ರ. ಇದು ಯಾವುದೇ ಕ್ಷೇತ್ರವಿರಲಿ, ಸಂಘಟನೆ ಸುಲಭದ ಕಾರ್ಯವಲ್ಲ. ಎಲ್ಲರನ್ನೂ ಸೇರಿಸುವುದೇ ಒಂದು ಸಾಹಸವಾದರೆ, ಅನೇಕ ವಿಭಿನ್ನ ಮನಸ್ಥಿತಿಯಿರುವ ಮನಸ್ಸುಗಳನ್ನು ಒಗ್ಗೂಡಿಸುವುದು ಮತ್ತೊಂದು ಸಾಹಸ. ಅವರೆಲ್ಲರನ್ನು ಸೇರಿಸಿ ಒಂದು ಕಾರ್ಯಕ್ರಮ ಮಾಡುವುದು ಇನ್ನೊಂದು ಸಾಹಸ. ಯಾಕೆಂದರೆ ಎಲ್ಲರೂ ಒಂದೇ ಅಭಿಪ್ರಾಯಕ್ಕೋ, ಮನಸ್ಥಿತಿಗೋ ಬದ್ಧರಾಗುವುದಿಲ್ಲವಲ್ಲ. ಹಾಗಾಗಿ ಇಂತಹ ಸಂಘಟನಾ ಕ್ಷೇತ್ರಕ್ಕೆ ಇಳಿಯುವವರನ್ನು ಮೆಚ್ಚಬೇಕಾದ್ದೇ.
ಯಕ್ಷಗಾನ ಕ್ಷೇತ್ರದಲ್ಲಿ ಸಂಘಟನೆ ಎನ್ನುವುದು ಸುಲಭವಲ್ಲ. ಕಾರ್ಯಕ್ರಮವನ್ನು ಆಯೋಜಿಸುವುದು, ಕಲಾವಿದರನ್ನು ಸೇರಿಸುವುದು, ಅಥವಾ ಬೇರೆಯವರು ಆಯೋಜಿಸಿದ ಕಾರ್ಯಕ್ರಮಕ್ಕೆ ಅವರ ಆಹ್ವಾನದ ಮೇರೆಗೆ ತಂಡವನ್ನು ಕಟ್ಟಿ ಕರೆದೊಯ್ಯುವುದು. ಇದೆಲ್ಲವೂ ಒಂದು ಕಡೆಯಾದರೆ, ಅನಿವಾರ್ಯ ಕಾರಣಗಳಿಂದ ಕೊನೆಗಳಿಗೆಗೆ ಕಲಾವಿದರು ಬಾರದಿದ್ದಾಗ ಬೇರೊಬ್ಬ ಕಲಾವಿದರನ್ನು ಕರೆಯುವುದು, ಅದೂ ಕೊನೆಕ್ಷಣಕ್ಕೆ ಕರೆದದ್ದು ಎಂಬ ಆ ಕಲಾವಿದನ ಮನದ ನೋವಿಗೆ ಕಾರಣರಾಗುವುದು, ಕಾರ್ಯಕ್ರಮವನ್ನು ಆಯೋಜಿಸಿದವನು ಸರಿಯಾಗಿ ಕಲಾವಿದರ ಗೌರವಧನವನ್ನು ನೀಡದಿದ್ದಾಗ ತನ್ನ ಕೈಸುಟ್ಟುಕೊಳ್ಳುವುದು. ಅದೆಷ್ಟೋ ಬಾರಿ ತನ್ನ ಖರ್ಚಿನಿಂದಲೇ ಕಾರ್ಯಕ್ರಮ ಮಾಡಬೇಕಾಗಿ ಬರುವುದು. ಎಲ್ಲೋ ಒಂದಿಬ್ಬರು ಕಾರ್ಯಕ್ರಮವನ್ನು ಸಂಘಟಿಸಿ ದುಡ್ಡು ಮಾಡಿದ ಕಾರಣದಿಂದ, ಎಲ್ಲಾ ಸಂಘಟಕರೂ ಹಣ ಮಾಡುವುದಕ್ಕಾಗಿಯೇ ಕಾರ್ಯಕ್ರಮ ಮಾಡುವುದು ಎಂಬ ವೃಥಾ ಅಪವಾದಕ್ಕೆ ಗುರಿಯಾಗುವುದು. ಇದೆಲ್ಲವೂ ಸಂಘಟಕನಾದವ ಅನುಭವಿಲೇಬೇಕಾದ ವಿಷಯಗಳು. ಇದನ್ನು ಬಿಟ್ಟರೆ ಆತ ಸಂಘಟಕನಲ್ಲ. ಯಾಕೆಂದರೆ ಸಂಘಟನೆ ಎನ್ನುವಂತದ್ದೇ ಅಂತಹದ್ದು. ಇವತ್ತು ಅನೇಕ ಪುರುಷ ಯಕ್ಷಗಾನ ಸಂಘಟಕರನ್ನು ನಾವು ಕಾಣುತ್ತೇವೆ. ಮಹಿಳೆಯೋರ್ವಳು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ.
ಅಂತಹ ಮಹಿಳಾ ಸಂಘಟಕಿಯರ ಕುರಿತಾಗಿ ನನ್ನ ಮಿತಿಯಲ್ಲಿ ಒಂದಿಷ್ಟು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಮುಖ್ಯವಾಗಿ ಮಹಿಳಾ ಕಲಾವಿದೆಯರನ್ನು ಸೇರಿಸಿ ಮಾಡಿದ ಸಂಘವೋ ಅಥವಾ ತಂಡವೋ ಅದರ ಬಗ್ಗೆ ಮತ್ತೆ ಅನಿವಾರ್ಯತೆಗೋ ಅಥವಾ ಉದ್ದೇಶಪೂರ್ವಕವೋ ಪುರುಷ ಕಲಾವಿದರನ್ನು ಸಂಘಟಿಸಿ ಮಾಡಿದ ಯಕ್ಷಗಾನ ಕಾರ್ಯಕ್ರಮಗಳೂ ಇರಬಹುದು. ಒಟ್ಟಾರೆಯಾಗಿ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸಂಘಟನೆಯನ್ನು ಇಲ್ಲಿ ಕಾಣಿಸುತ್ತಿದ್ದೇನೆ. ತಾಳಮದ್ದಳೆ ಕ್ಷೇತ್ರವನ್ನು ನಾನಿಲ್ಲಿ ಪ್ರವೇಶಿಸಿಲ್ಲ.
ಶ್ರೀಮತಿ ಅಕ್ಕಾಣಿಯಮ್ಮ – ೧೯೭೯-೮೦ ರಲ್ಲಿ ಮಹಿಳಾ ಯಕ್ಷಗಾನ ಕಲಾಮಿತ್ರ ಮಂಡಳಿಯನ್ನು ಹುಟ್ಟುಹಾಕಿದರು. ಮಹಿಳೆಯರನ್ನೇ ಒಗ್ಗೂಡಿಸಿ, ಅನೇಕ ಪ್ರದರ್ಶನಗಳನ್ನು ಏರ್ಪಡಿಸಿದರು. ಮಿಸ್ ಇಂಡಿಯಾ ಖ್ಯಾತಿಯ ರೇಖಾ ಹಂದೆ, ಸಿನಿಮಾ ತಾರೆ ಕಾವೇರಿ, ಸುಜಾತ ಐತಾಳ್, ನೃಪಾಂಗಿ ಅಯ್ಯಂಗಾರ್ ಮುಂತಾದ ಅನೇಕರನ್ನು ಯಕ್ಷಗಾನ ಕ್ಷೇತ್ರಕ್ಕೆ ಪರಿಚಯಿಸಿದವರು.
ಡಾ.ವಿಜಯನಳಿನಿ ರಮೇಶ್ - ೧೯೮೦ ರಲ್ಲಿ ಶಿರಸಿಯಲ್ಲಿ ಸಹ್ಯಾದ್ರಿ ಮಕ್ಕಳ ಯಕ್ಷಗಾನನ ಸಮೂಹವನ್ನು ಆರಂಭಿಸಿದರು. ಇದು ಸುಮಾರು ಆರೇಳು ವರ್ಷ ನಡೆಯಿತು. ಮುಂದಕ್ಕೆ ಇದೇ ತಂಡದಲ್ಲಿದ್ದ ಹೆಮ್ಮಕ್ಕಳನ್ನು ಸೇರಿಸಿ ಸಹ್ಯಾದ್ರಿ ಮಹಿಳಾ ಯಕ್ಷಗಾನ ಸಮೂಹವನ್ನು ಕೂಡ ಆರಂಭಿಸಿದರು. ಈ ಸಮಯ ಸಮೂಹ ಇವತ್ತಿಗೂ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ಹೊಸ್ತೋಟ ಮಂಜುನಾಥ ಭಾಗವತರು ಇದಕ್ಕೆ ನಿರ್ದೇಶಕರಾಗಿದ್ದರು.
ಶ್ರೀಮತಿ ಶೀಲಾ ಕೆ. ಶೆಟ್ಟಿ – ಲೇಖಕಿ ಹಾಗೂ ಕವಯಿತ್ರಿಯಾಗಿರುವ ಇವರು ಎರ್ಮಾಳಿನಲ್ಲಿ ʼಶ್ರೀನಿಧಿ ಮಹಿಳಾ ಯಕ್ಷಕಲಾರಂಗʼ ವನ್ನು ಸ್ಥಾಪಿಸಿ, ಅನೇಕೆಡೆಗಳಲ್ಲಿ ಪ್ರದರ್ಶನಗಳನ್ನು ನೀಡಿದವರು.
ಶ್ರೀಮತಿ ರತ್ನಾವತಿ ಕೆ. ಭಟ್ ತಲಂಜೇರಿ – ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ರತ್ನಾ ಭಟ್ ೧೯೮೯ ರಲ್ಲಿ ಅಡ್ಯನಡ್ಕದಲ್ಲಿ ಮಹಿಳಾ ಮಂಡಲಿಯವರನ್ನು ಸೇರಿಸಿ ಯಕ್ಷಗಾನ ತಂಡವನ್ನು ಕಟ್ಟುತ್ತಾರೆ. ಹಳ್ಳಿ ಪ್ರದೇಶದ ಯುವತಿಯರನ್ನು, ಮಹಿಳೆಯರನ್ನು ಒಟ್ಟುಸೇರಿಸಿ ರಾಜ್ಯಾದ್ಯಂತ ಸುಮಾರು ಆರುನೂರಕ್ಕೂ ಮಿಕ್ಕಿ ಯಕ್ಷಗಾನ ಪ್ರದರ್ಶನಗಳನ್ನು ಅಡ್ಯನಡ್ಕದ ಮಹಿಳಾ ಯಕ್ಷಗಾನ ಸಂಘ ಇವರ ನೇತೃತ್ವದಲ್ಲಿ ಕೊಟ್ಟಿದೆ ಎನ್ನುವುದು ಒಂದು ಹೆಮ್ಮೆಯ ವಿಷಯ.
ಶ್ರೀಮತಿ ಪೂರ್ಣಿಮಾ ಯತೀಶ್ ರೈ – ೧೯೮೯ ರಲ್ಲಿ ಇವರ ಅಣ್ಣ ಮಾಧವ ಎಸ್ ಶೆಟ್ಟಿ ಬಾಳ ಇವರು ೧೯೮೯ ರಲ್ಲಿ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಸಂಘ, ಬಾಳ, ಕಾಟಿಪಳ್ಳ ವನ್ನು ಸ್ಥಾಪಿಸುತ್ತಾರೆ. ಮುಂದಕ್ಕೆ ಸುಮಾರು ೨೫ ವರ್ಷಗಳಿಂದೀಚೆಗೆ ಆ ತಂಡವನ್ನು ಮುನ್ನಡೆಸುತ್ತಿರುವವರು ಪೂರ್ಣಿಮಾ ರೈ ಯವರು. ಇವರ ತಂಡ ಯಕ್ಷಗಾನ ಸ್ಪರ್ಧೆಯಲ್ಲಿ ೯೦ ರ ದಶಕದಲ್ಲೇ ಪ್ರಶಸ್ತಿ ವಿಜೇತ ತಂಡ. ಅನೇಕ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಯಕ್ಷಗಾನವನ್ನು ಕಲಿಸಿ, ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದವರು ಇವರು. ಇವತ್ತಿಗೂ ಮಹಿಳಾ ತಂಡಗಳಲ್ಲಿ ತೆಂಕುತಿಟ್ಟಿನಲ್ಲಿ ಮೇಲ್ ಸ್ತರದಲ್ಲಿ ಈ ತಂಡ ನಿಲ್ಲುತ್ತದೆ.
ಶ್ರೀಮತಿ ವಿದ್ಯಾ ಕೋಳ್ಯೂರು - ʼಯಕ್ಷಮಂಜೂಷಾʼ (ರಿ) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ, ನಮ್ಮ ದೇಶ ಮಾತ್ರವಲ್ಲದೇ ಹೊರದೇಶಗಳಲ್ಲೂ ಪುರುಷ ಕಲಾವಿದರನ್ನು ಕರೆದುಕೊಂಡು ಹೋಗಿ ಪ್ರದರ್ಶನ ನೀಡಿ ಸೈ ಅನಿಸಿಕೊಂಡ ಗಟ್ಟಿಗಿತ್ತಿ.
ಶ್ರೀಮತಿ ಗೀತಾ ಎಲ್.ಭಟ್ - ಬಂಟ್ವಾಳ ಬಿಸಿರೋಡಿನವರಾದ ಗೀತಾ ಭಟ್ ಅವರು ಮದುವೆಯಾಗಿ ಮುಂಬಯಿಗೆ ಹೋದಾಗ ಅಲ್ಲಿ ಪತಿ ಲಕ್ಷ್ಮೀಶ ಅವರ ಸಹಕಾರದಿಂದ ೧೯೯೭ ರಲ್ಲಿ ಮಕ್ಕಳ ಮತ್ತು ಮಹಿಳೆಯರ ತಂಡ ಕಟ್ಟಿ ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ.
ಶ್ರೀಮತಿ ಜ್ಯೋತಿ ಟಿ.ಎನ್.ಕಳಸ - “ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ (ರಿ)” ಯನ್ನು ಕಳಸದ ಹಳುವಳ್ಳಿಯಲ್ಲಿ ಸ್ಥಾಪಿಸಿ, ಮಕ್ಕಳ ಜೊತೆ ಆಸಕ್ತ ಮಹಿಳೆಯರನ್ನೂ ಸೇರಿಸಿಕೊಂಡು ಅವರಿಗೆ ಯಕ್ಷಗಾನವನ್ನು ಕಲಿಸಿ, ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದರು.
ಶ್ರೀಮತಿ ಯೋಗಾಕ್ಷಿ ಗಣೇಶ್ ತಲಕಳ – ಪ್ರಸ್ತುತ ತಲಕಳ ಮೇಳದ ಸಂಚಾಲಕಿ, ಶ್ರೀಶ ಯಕ್ಷಗಾನ ಕಲಾ ತರಬೇತಿ ಕೇಂದ್ರ ಎನ್ನು ಸಂಸ್ಥೆಯನ್ನು ಸ್ಥಾಪಿಸಿ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳ ತರಬೇತಿ ನೀಡಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.
ಶ್ರೀಮತಿ ನಾಗವೇಣಿ ಮಂಚಿ – ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಇವರು ಮಹಿಳಾ ತಂಡವನ್ನು ಕಟ್ಟಿ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿರುತ್ತಾರೆ.
ಶ್ರೀಮತಿ ಸುಮಾ ಗಡಿಗೆಹೊಳೆ – ʼಕಾಶ್ಯಪ ಪ್ರತಿಷ್ಠಾನ ಮಹಿಳಾ ಯಕ್ಷಗಾನ ಮಂಡಳಿ ಗಡಿಗೆಹೊಳೆʼ ಯ ಪ್ರಮುಖ ಪಾತ್ರಧಾರಿ. ʼಯಕ್ಷಕಲಾಸಂಗಮ ಶಿರಸಿ (ರಿ) ಎಂಬ ತರಬೇತಿ ಕೇಂದ್ರದ ಮೂಲಕ ಅನೇಕರಿಗೆ ಯಕ್ಷಗಾನವನ್ನು ಕಲಿಸುತ್ತಿದ್ದಾರೆ.
ಶ್ರೀಮತಿ ಕಿರಣ್ ಆರ್ ಪೈ ಶಿವಮೊಗ್ಗ - ಇವರ ಕನಸಿನ ಕೂಸು “ಸುಮುಖ ಕಲಾಕೇಂದ್ರ”. ಈ ಕೇಂದ್ರದಲ್ಲಿ ೨೫-೩೦ ಮಕ್ಕಳು ಮತ್ತು ಮಹಿಳೆಯರು ಯಕ್ಷಗಾನ ಕಲಿಯುತ್ತಿದ್ದಾರೆ, ಕಲಿತು ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ.
ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ – ೨೦೧೭ ರ ಜೂನ್ ೨೫ ಕ್ಕೆ “ಯಕ್ಷಗೆಜ್ಜೆ(ರಿ)” ಮಹಿಳಾ ಮತ್ತು ಮಕ್ಕಳ ತರಬೇತಿ ಕೇಂದ್ರವನ್ನು ಸ್ಥಾಪಿಸುತ್ತಾರೆ. ಈ ಕೇಂದ್ರದಡಿಯಲ್ಲಿ ಆಸಕ್ತರಿಗೆ ಸಾಂಪ್ರದಾಯಿಕ ಯಕ್ಷಗಾನ ಕುಣಿತಗಳ ತರಬೇತಿಯನ್ನು ನೀಡುತ್ತಾರೆ. ಇವರ ತಂಡ ಪ್ರದರ್ಶನಗಳನನು ಕೂಡ ನೀಡುತ್ತಾ ಬಂದಿದೆ.
ಶ್ರೀಮತಿ ಮಯೂರಿ ಉಪಾಧ್ಯಾಯ – ಹದಿನೈದು ವರ್ಷಗಳ ಹಿಂದೆ ಸ್ವತಃ ಮಯೂರಿ ಉಪಾಧ್ಯಾಯ ಅವರು ಆರಂಭಿಸಿದ “ಯಕ್ಷಸಿರಿ ಬೆಂಗಳೂರು (ರಿ)” ಎಂಬ ಮಹಿಳಾ ತಂಡ ಇಂದಿಗೂ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಇದೆ.
ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ - ʼಯಕ್ಷಾರಾಧನಾ ಕಲಾಕೇಂದ್ರ (ರಿ) ʼ ಸಂಸ್ಥೆಯ ಸ್ಥಾಪಕಿ. ಮಕ್ಕಳು ಮತ್ತು ಮಹಿಳೆಯರನ್ನು ಸೇರಿಸಿಕೊಂಡು ಯಕ್ಷಗಾನವನ್ನು ಕಲಿಸಿ, ತಂಡಕಟ್ಟಿ, ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.
ಶ್ರೀಮತಿ ಆರತಿ ಪಟ್ರಮೆ – ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು, ಪ್ರವೃತ್ತಿಯಲ್ಲಿ ಲೇಖಕಿ, ಯಕ್ಷಗಾನ ಕಲಾವಿದೆಯಾಗಿರುವ ಇವರು ಯಕ್ಷದೀವಿಗೆ (ರಿ) ತುಮಕೂರು ಎನ್ನುವ ಸಂಸ್ತೇಯುನ್ನು ಸ್ಥಾಪಿಸಿ, ತರಬೇತಿ ನೀಡಿ, ಮಕ್ಕಳು, ಮಹಿಳೆಯರು ಮತ್ತು ಪುರುಷ ಕಲಾವಿದರನ್ನು ಸೇರಿಸಕೊಂಡು ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಶ್ರೀಮತಿ ಅನಸೂಯಾ ಈಶ್ವರಚಂದ್ರ ರಾವ್ - ೧೯೯೫ ರಲ್ಲಿ. ಮಂಚಿಯಲ್ಲಿ ಶ್ರೀ ಕಲಶವೆಂಬ ಮಹಿಳಾ ಯಕ್ಷಗಾನ ಸಂಘದ ಸ್ಥಾಪನೆ ಮಾಡುತ್ತಾರೆ. ನಾಡಿನ ಅನೇಕ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ
ಶ್ರೀಮತಿ ಸುಮಂಗಲಾ ದೇಸಾಯಿ – ಇವರು ಜನನಿಬಿಡ ಪ್ರದೇಶದಲ್ಲಿ ʼಸಪ್ತಸ್ವರ ಸೇವಾ ಸಂಸ್ಥೆ ಜೊಯ್ಡಾ, ದಾಂಡೇಲಿ.ʼ ಎನ್ನುವ ಮಹಿಳಾ ತಂಡವನ್ನು ಸ್ಥಾಪಿಸಿ, ಮಹಿಳೆಯರನ್ನು ಸೇರಿಸಿ, ಆನಂದ ಅಂಕೋಲಾ ಅವರ ನಿರ್ದೇಶನದಲ್ಲಿ ಯಕ್ಷಗಾನ ಕಲಿತು ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ.
ಶ್ರೀಮತಿ ನಾಗರತ್ನ ಹೇರಳೆ – ಲಹರಿ ಕಲಾ ರಂಗ ಮೂಡುಗಿಳಿಯಾರು ಎನ್ನುವ ಮಕ್ಕಳು ಮತ್ತು ಮಹಿಳಾ ತಂಡವನ್ನು ಕಟ್ಟಿದವರು ಇವರು. ಸುಮಾರು ಎಂಟು ವರ್ಷಗಳಿಂದ ಈ ತಂಡ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ.
ಶ್ರೀಮತಿ ಪ್ರೇಮಾ ಕಿಶೋರ್ - ʼಸಾಯಿ ಕಲಾ ಯಕ್ಷ ಬಳಗ ಬಾಲವನ, ಪುತ್ತೂರುʼ ಇದನ್ನು ಸ್ಥಾಪಿಸಿ, ಮಕ್ಕಳು ಮತ್ತು ಮಹಿಳೆಯರನ್ನು ಸೇರಿಸಿ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.
ಶ್ರೀಮತಿ ಉಷಾ ಸುಬ್ರಹ್ಮಣ್ಯ ಶೆಟ್ಟಿ ಒಡಿಯೂರು – ಮಕ್ಕಳು ಮತ್ತು ಮಹಿಳೆಯರನ್ನು ಸೇರಿಸಿ ಸಾತ್ವಿಕ ತೇಜ ಕಲಾಕೇಂದ್ರ (ರಿ) ಒಡಿಯೂರು ತಂಡವನ್ನು ಸ್ಥಾಪಿಸಿ ಪ್ರದರ್ಶನ ನೀಡಿಕೊಂಡು ಬರುತ್ತಿದ್ದಾರೆ.
ಶ್ರೀಮತಿ ಅರ್ಪಿತಾ ಹೆಗಡೆ – ಬೆಂಗಳೂರಿನ ಸಿರಿಕಲಾ ಮೇಳ (ರಿ) ಅನ್ನು ಮುನ್ನಡೆಸುವುದರ ಜೊತೆಗೆ ಅನೇಕ ಮಹಿಳಾ ಹಾಗೂ ಪುರುಷ ಕಲಾವಿದರನ್ನು ಆಹ್ವಾನಿಸಿ ಯಕ್ಷಗಾನ ಪ್ರದರ್ಶನಗಳನ್ನು ಸಂಘಟಿಸಿದ್ದಾರೆ.
ನಾಗಶ್ರೀ ಜಿ.ಎಸ್. - ಶ್ರೀ ಕಾಳಿಂಗ ಯಕ್ಷಕಲಾ ವೈಭವ ಎನ್ನುವ ಸಂಸ್ಥೆಯ ಜೊತೆಗೆ ಟೀಮ್ ಉತ್ಸಾಹಿ ಎನ್ನುವ ತಂಡದ ನೇತೃತ್ವವನ್ನೂ ವಹಿಸಿದ್ದಾರೆ.
ಶ್ರೀಮತಿ ಪುಷ್ಪಾ ಪ್ರಭಾಕರ್ ಕುಕ್ಕಾಜೆ – ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿಯ ಸ್ಥಾಪಕಿ. ಮಕ್ಕಳು ಮತ್ತು ಮಹಿಳೆಯರನ್ನು ಸೇರಿಸಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ.
ಶ್ರೀಮತಿ ಸಾಯಿಸುಮಾ ನಾವಡ -ಯಕ್ಷಾವಾಸ್ಯಮ್ ಕಾರಿಂಜ (ರಿ) ಅನ್ನುವ ಸಂಸ್ಥೆಯನ್ನು ಸ್ಥಾಪಿಸಿ, ಹಿಮ್ಮೇಳ ಮತ್ತು ಮುಮ್ಮೇಳ ತರಬೇತಿಯ ಜೊತೆಗೆ , ಮಕ್ಕಳು ಮತ್ತು ಮಹಿಳೆಯರು ಜೊತೆಗೆ ಪುರುಷ ಕಲಾವಿದರನ್ನು ಸಂಘಟಿಸಿ ಯಕ್ಷಗಾನ ಪ್ರದರ್ಶನಗಳನ್ನು ಸಂಯೋಜಿಸಿದ ಅನುಭವ.
ಇವಿಷ್ಟು ನನ್ನ ಮಿತಿಯೊಳಗಿನ ಮಾಹಿತಿ. ಇನ್ನೂ ಮುನ್ನೆಲೆಗೆ ಬಾರದ ಅದೆಷ್ಟೋ ಮಹಿಳಾ ಸಂಘಟಕಿಯರಿದ್ದಾರೆ. ಅವರೆಲ್ಲರ ಪರಿಚಯವೂ ಯಕ್ಷಲೋಕಕ್ಕಾಗಲಿ ಎಂದು ಆಶಿಸೋಣ.
Write: Smt. #Sai_Suma_M_Navuda
https://nyt.1ngo.in ವೆಬ್ ಸೈಟ್ ನಲ್ಲೂ ಲಭ್ಯವಿದೆ.. ಓದಿ ಅಭಿಪ್ರಾಯ ಹಂಚಿಕೊಳ್ಳಿ..

ಧೀರ ಕಲೆಯೊಳಗೆ ಕೀರವಾಣಿಯರು – ೧೭ - ಶ್ರೀಮತಿ ಸುಮಾ ಗಡಿಗೆಹೊಳೆ


ಧೀರ ಕಲೆಯೊಳಗೆ ಕೀರವಾಣಿಯರು – ೧೭
ಹೊರದೇಶದಲ್ಲೂ ಯಕ್ಷಗಾನವನ್ನು ಕಲಿಸಿದ ಕಲಾವಿದೆ - ಶ್ರೀಮತಿ ಸುಮಾ ಗಡಿಗೆಹೊಳೆ
ತನ್ನೂರಲ್ಲಿ ಯಕ್ಷಗಾನವನ್ನು ಕಲಿತು, ಕಲಿಸಿ, ತಂಡಕಟ್ಟಿ ಪ್ರದರ್ಶನ ನೀಡಿ ಪ್ರಸಿದ್ಧರಾದ ಅನೇಕ ಮಹಿಳಾ ಕಲಾವಿದೆಯರು ನಮ್ಮಲ್ಲಿದ್ದಾರೆ. ಆದರೆ ದೂರದ ಹೊರದೇಶಕ್ಕೆ ಹೋಗಲು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಅಲ್ಲಿಯ ನೆಲದಲ್ಲಿ ಯಕ್ಷಗಾನವನ್ನು ಬಿತ್ತುವುವುದಿದೆಯಲ್ಲಾ, ಅದೂ ಮಹಿಳೆಯಾಗಿ ಒಂದು ವಿಶೇಷ ಸಾಧನೆಯೇ ಸರಿ. ಇಂತಹ ವಿಶೇಷ ಸಾಧಕಿ, ಯಕ್ಷಗಾನ ಕಲಾವಿದೆ, ಯಕ್ಷಶಿಕ್ಷಕಿ ಶ್ರೀಮತಿ ಸುಮಾ ಗಡಿಗೆಹೊಳೆ.
ಶಿರಸಿಯ ನಡುಗೋಡಿನ ಜಿ. ಮಹಾಬಲೇಶ್ವರ ಭಟ್ ಹಾಗೂ ಲಲಿತಾ ಭಟ್ ಇವರ ಮಗಳಾಗಿ ೧೯೭೩ ರ ಡಿಸೆಂಬರ್ ೧೪ ರಂದು ಜನಿಸಿದ ಸುಮಾ ಗಡಿಗೆಹೊಳೆಯವರು ಪಡೆದದ್ದು ಪಿಯುಸಿ ಶಿಕ್ಷಣ. ೧೯೯೨ ರಲ್ಲಿ ಉತ್ತಮ ಕೃಷಿಕರಾದ ಶ್ರೀ ವೆಂಕಟರಮಣ ಹೆಗಡೆಯವರನ್ನು ಕೈ ಹಿಡಿದ ಸುಮಾ ಅವರ ಯಕ್ಷಗಾನವನ್ನು ಕಲಿತದ್ದು ತನ್ನ ೩೨ ನೇ ವಯಸ್ಸಿನಲ್ಲಿ. ೨೦೦೭ನೇ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದು ಕಾಶ್ಯಪ ಪ್ರತಿಷ್ಠಾನ ಮಹಿಳಾ ಯಕ್ಷಗಾನ ಮಂಡಳಿ ಗಡಿಗೆಹೊಳೆಯ ಮೂಲಕ ಕಲಿತು, ಕಲಾವಿದೆಯಾದದ್ದು. ʼಭಸ್ಮಾಸುರ ಮೋಹಿನಿʼಯ ಭಸ್ಮಾಸುರ ಇವರ ಮಾಡಿದ ಮೊದಲ ವೇಷ.
ಹಿರಿಯ ಸವ್ಯಸಾಚಿ ಕಲಾವಿದರಾದ ಶ್ರೀ ಗಣಪತಿ ಭಾಗ್ವತ್ ಕವ್ವಾಳೆಯವರಲ್ಲಿ ಯಕ್ಷಗಾನ ನೃತ್ಯಾಭ್ಯಾಸವನ್ನು ಮಾಡಿದ ಸುಮಾ ಗಡಿಗೆಹೊಳೆಯವರು ಶ್ರೀ ಸುಬ್ರಾಯ ಭಟ್ ಗಡಿಗೆಹೊಳೆಯವರಲ್ಲಿ ಸಾಹಿತ್ಯವನ್ನೂ ಅಭ್ಯಾಸ ಮಾಡಿದರು. ಭಸ್ಮಾಸುರ, ಭೀಷ್ಮ, ಕರ್ಣ, ಭೀಮ, ಈಶ್ವರ, ವಿಕ್ರಮಾದಿತ್ಯ, ಅರ್ಜುನ, ರಾಮ, ಕೃಷ್ಣ, ಶಿಶುಪಾಲ, ರಾವಣ, ವಿಕ್ರಮಾದಿತ್ಯ, ದಶರಥ, ದುಷ್ಟಬುದ್ಧಿ ಮುಂತಾದ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿ, ಸೈ ಎನಿಸಿಕೊಂಡವರು ಸುಮಾ ಅವರು. ಸ್ವರ್ಣವಲ್ಲೀ ಸಂಸ್ಕೃತೋತ್ಸವದಲ್ಲಿ ಎಂ.ರಾಜಗೋಪಾಲಾಚಾರ್ಯ ವಿರಚಿತ ಸಂಸ್ಕೃತ ಯಕ್ಷಗಾನ ʼಗದಾಯುದ್ಧʼ ದ ಪ್ರದರ್ಶನದಲ್ಲಿಯೂ ಭಾಗವಹಿಸಿದವರು ಇವರು. ಚಂದನವಾಹಿನಿಯಲ್ಲಿ, ಆಕಾಶವಾಣಿ ಕಾರವಾರದಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಗದಗ, ಹೊರರಾಜ್ಯಗಳಾದ ಮುಂಬಯಿ, ದೆಹಲಿ, ೨೦೨೩ ರಲ್ಲಿ ಅಂದರೆ ಈ ವರ್ಷ ಅಮೇರಿಕಾದಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು. ಹೀಗೆ ನಾಲ್ಕುನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ದೇಶ-ವಿದೇಶಗಳಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದ ಹೆಮ್ಮೆ ಇವರದು. ೨೦೧೮ ರಲ್ಲಿ ಶಿರಸಿಯ ಆದರ್ಶ ವನಿತಾ ಸಮಾಜದಲ್ಲಿ “ಯಕ್ಷಕಲಾಸಂಗಮ (ರಿ) ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ಎಂಬ ಕಲಿಕಾ ಕೇಂದ್ರವನ್ನು ಸ್ಥಾಪಿಸಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಕ್ಷಗಾನದ ಪಾರಂಪರಿಕ ಕುಣಿತಗಳನ್ನು ಕಲಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸುತ್ತಿದ್ದಾರೆ. ಇವರ ಸಂಸ್ಥೆಯಲ್ಲಿ ೬ ವರ್ಷದಿಂದ ೬೬ ವರ್ಷದವರೆಗಿನವರೂ ಕಲಿಯತ್ತಿದ್ದಾರೆ ಎಂಬುವುದೇ ವಿಶೇಷ. ಯಕ್ಷಗಾನದ ಜೊತೆಗೆ ತಾಳಮದ್ದಳೆಯ ಅಭ್ಯಾಸವನ್ನು ಮಾಡಿ, ಪ್ರದರ್ಶನ ನೀಡುತ್ತಿದ್ದಾರೆ.
೨೦೨೨ರಲ್ಲಿ ಸುಮಾ ಗಡಿಗೆಹೊಳೆಯವರ ಕನಸಿನ ಕೂಸು ʼಯಕ್ಷಕಲಾಸಂಗಮ(ರಿ)ಕ್ಕೆ ನಾಡಿನ ಹಲವು ಮಹನೀಯರನ್ನು ಮಾರ್ಗದರ್ಶಕರನ್ನಾಗಿಸಿ ʼಯೋಜನೆ-ಯೋಚನೆʼ ಎಂದು ಕಲಿಕೆಗೆ ಒತ್ತುಕೊಟ್ಟು ಹಲವಾರು ಕಾರ್ಯಕ್ರಮಗಳನ್ನು ಮಾಡಿಸುವುದರ ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಚೆಂಡೆ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಮತ್ತೊಂದು ಸಂಗತಿಯೆAದರೆ ಈ ವರ್ಷ ಅಮೇರಿಕಾದಲ್ಲಿ ಆಸಕ್ತ ಕನ್ನಡಿಗರಿಗೆ ಯಕ್ಷಗಾನವನ್ನು ಕಲಿಸಿ, ಪ್ರದರ್ಶನಕೊಡಿಸಿದ
ಸಂತೋಷ ಇವರದ್ದು. ಪ್ರತೀ ವರ್ಷ ಇವರ ಸಂಸ್ಥೆಯ ವಾರ್ಷಿಕೊತ್ಸವದಲ್ಲಿ ಹಿರಿಯ ಸಾಧಕರೋರ್ವರನ್ನು ಗುರುತಿಸಿ, ಗೌರವಿಸುವ ಪರಿಪಾಠವನ್ನೂ ಬೆಳೆಸಿಕೊಂಡು ಬಂದಿದ್ದಾರೆ. ʼಜನಪದ ರತ್ನʼ ಎಂಬ ರಾಜ್ಯಮಟ್ಟದ ಪ್ರಶಸ್ತಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ಕನ್ನಡ ಕೂಟದವರ ಸನ್ಮಾನ, ಅಮೇರಿಕಾ ಹವ್ಯಕ ಸಂಘದವರಿAದ ಸನ್ಮಾನ, ದೆಹಲಿ ಗೋಕರ್ಣ ಮಂಡಲದವರಿAದ ಸನ್ಮಾನ, ಮುಂಬಯಿ ಹವ್ಯಕ ವೆಲ್ಫೇರ್ ನವರಿಂದ ಸನ್ಮಾನ ಹಾಗೂ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಸಂಘ-ಸAಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿವೆ. ಇವರ ಕಲಾಸೇವೆ ಹೀಗೆಯೇ ಮುಂದುವರಿದು, ಅನೇಕ ಕಲಾಕುಸುಮಗಳು ಇವರ ಸಂಸ್ಥೆಯಿAದ ಹೊರಬರಲಿ ಎಂದು ಆಶಿಸೋಣ.
ಲೇಖಕರು- #ಸಾಯಿಸುಮಾ ಎಂ. ನಾವಡ, ಕಾರಿಂಜ
#Nadanoopura_Yakshothana_Trust-Nada noopura Yakshothana Trust Vandaru ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್