interviews

Siddakatte Sadashiva Shetty| Yakshagana artisy| hiriyadka mela


Audio interview link - https://youtu.be/Jr93njuD1jA 

Pookala Lakshmi Narayana Bhat - Yakshagana artist


Audio interview link - https://youtu.be/mgvhOq7_vq4 


Comedy journey Kyadagi to Bangalore (Kyadagi mahabaleshwara bhat Interview)


Audio Interview link - https://youtu.be/d-fQnQ4ZJmE


Gopal Ganiga Ajri in teview - Yakshagana artist


Audio interview link - https://youtu.be/m3F3wrHDFFs 


Dayananda Nagur Interview - Yakshagana Artist


Audio interview link - https://youtu.be/zx8BHZCQx3o 


Ambaprasad Pathala interview - Yakshagana Artist


Audio interview link - https://youtu.be/aFFPvSQebmc 


Channappa gouda Sajipa Yakshagana Artist


Audio interview link - https://youtu.be/gRn_AzryZ5Y 


Kedila Jayaram B hat - Yakshagana artist


Audio interview link - https://youtu.be/Y5SCbKYnJRo 


Chandra Kumar Nerjeddu - Yakshagana artist


Audio interview link - https://youtu.be/VdB3tTCz7p4 


janardhana Mandagaru - Yakshagana artist


Audio interview link- https://youtu.be/nwjv2vrSCaM 


Naradi Bhojaraja Shetty - Yakshagana artist


Audio interview link - https://youtu.be/EDZzZll0L1A 


Situru Anantha Padmanabha -Yakshagana artist


Audio interview link - https://youtu.be/rIWVvaiHWa0 


Dinesh Ammannaya bhagavath


Audio interview link - https://youtu.be/YoNylBoJzzc 


Kumuta Ganapathi Nayak -Yakshagna Artist


Audio interview link - https://youtu.be/GPD4a_y4FPU 


Mukhyaprana Kinnigoly - Yakshagana Comedy Artist


Audi interview link - https://youtu.be/mqeEYeo1IyI 


Padyana Shankara Narayana Bhat - Yakshagana Bhagavatha


Audio interview link - https://youtu.be/0HynPpqWoO8 


Halladi Jayaram Shetty - Yakshagna Comedy Artist


Audio interview link - https://youtu.be/SlbPoynHusk 


Devadas Eshwaramangala - Yakshagana Prasangakartha


Audio interview link - https://youtu.be/vaYqRYZGkdo 


Yakshagana artist Belthuru Ramesh - Interview


ಕಲಾವಿದರು: ಶ್ರೀ ರಮೇಶ್ ಬೆಲ್ತೂರು 

ಹುಟ್ಟೂರು: ಕುಂದಾಪುರ ತಾಲೂಕಿನ ಕಟ್ಬೆಲ್ತೂರು

ತಂದೆ : ಶ್ರೀ ರಾಮ ನಾಯ್ಕ 

ತಾಯಿ: ಶ್ರೀಮತಿ ರುಕ್ಕು

ಧರ್ಮಪತ್ನಿ: ಶ್ರೀಮತಿ ಮುತ್ತು 

ಸೇವೆ ಸಲ್ಲಿಸಿದ ಮೇಳಗಳು: ಮಾರಣಕಟ್ಟೆ, ಹಾಲಾಡಿ, ಸಾಲಿಗ್ರಾಮ, ಕಳವಾಡಿ, ಬಗ್ವಾಡಿ, ಮಡಾಮಕ್ಕಿ, ಮಂದಾರ್ತಿ, ಅಮೃತೇಶ್ವರಿ, ಅಜ್ರಿ ಶನೀಶ್ವರ ಮೇಳ

ಯಕ್ಷಗಾನದ ಗುರುಗಳು: ದಶಾವತಾರಿ ಗುರು ವೀರಭದ್ರ ನಾಯಕ್, ಶಿರಿಯಾರ ಮಂಜು ನಾಯ್ಕ, ಗುರು ಹೆರಂಜಾಲು ವೆಂಕಟರಮಣ ಗಾಣಿಗ 

ಪ್ರಶಸ್ತಿಗಳು: ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ, ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಮೊಗವೀರ ಸಮಾಜದ ಪ್ರಶಸ್ತಿ, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸನ್ಮಾನ


ಪ್ರಶ್ನೆ: ಯಕ್ಷಗಾನಕ್ಕೆ ನಿಮ್ಮ ಪ್ರವೇಶ ಆಗಿದ್ದು ಹೇಗೆ? ಯಕ್ಷಗಾನ ಯಾನದ ಅನುಭವ ಹೇಗಿತ್ತು? 

ಬೆ.ರ: ನಾನು ಬಡಕುಟುಂಬದಲ್ಲಿ ಹುಟ್ಟಿದವ. ೫ನೆ ಕ್ಲಾಸ್ ಮುಗಿದ ಕೂಡಲೇ ಬೆಲ್ತೂರಿನ ಬಣ್ಣದ ರಾಮ ಬಳೆಗಾರರು ನನಗೆ ಹೂವಿನ ಕೋಲಿನ ಗೀಳನ್ನು ಹಿಡಿಸಿದರು. ಎರಡು ವರ್ಷ ನಾನು ಹೂವಿನ ಕೋಲಿನ ಗೀಳಿನಲ್ಲಿ ಇರುವಾಗ ಅವರು ನೀನು ಯಕ್ಷಗಾನಕ್ಕೆ ರ‍್ತೀಯಾ ಎಂದು ಕೇಳಿದ್ರು. ನಮ್ಮ ಮನೆಯವ್ರಿಗೆ ಯಕ್ಷಗಾನಕ್ಕೆ ಕಳುಹಿಸಿಕೊಡಲು ಮನಸ್ಸಿರಲಿಲ್ಲ. ನಾನು ಹೇಗಾದರೂ ಹೋಗಲೇಬೇಕು ಎಂಬ ಹಠ ಹಿಡಿದು ಹೋದೆ. ಮಾರಣಕಟ್ಟೆ ಮೇಳದಲ್ಲಿ ಪ್ರಥಮವಾಗಿ ಗೆಜ್ಜೆ ಕಟ್ಟಿದೆ. ಘಟಾನುಘಟಿ ಕಲಾವಿದರಾದ ಗುರು ವೀರಭದ್ರ ನಾಯಕರು, ಉಡುಪಿ ಬಸವ ನಾಯ್ಕರು, ಶ್ರೀನಿವಾಸ ನಾಯಕರು ಮೊದಲಾದವರು ಆ ಮೇಳದಲ್ಲಿದ್ದಿದ್ರು. ಒಂದು ವರ್ಷ ಕೋಡಂಗಿ ನಿತ್ಯ ವೇಷಗಳನ್ನು ಮಾಡಿಕೊಂಡು ಬಂದೆ. ಆದರೆ ಹೆಜ್ಜೆ ಪರಿಣತಿ ಆಗಲಿಲ್ಲ ಆಗ ವೀರಭದ್ರ ನಾಯಕರ ಶಿಷ್ಯ ಹೇರಂಜಾಲು ವೆಂಕಟರಮಣ ಗಾಣಿಗರಲ್ಲಿ ಹೆಜ್ಜೆ ಕಲಿಯುವುದಕ್ಕಾಗಿ ಅವರ ಮನೆಗೆ ಹೋದೆ. ಒಂದೂವರೆ ತಿಂಗಳು ಅಲ್ಲೇ ನಾನು ಹೆಜ್ಜೆ ಕಲಿತೆ. ಅಲ್ಲಿ ನನ್ನ ಕಲಿಕೆಯನ್ನು ಮುಗಿಸಿ ಪುನಃ ಮಾರಣಕಟ್ಟೆ ಮೇಳದಲ್ಲಿಯೇ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ನಂತರ ನನ್ನ ಚುರುಕುತನ ನೋಡಿ ಆರೇಳು ವರ್ಷದಲ್ಲಿ ಮಾರಣಕಟ್ಟೆ ಮೇಳದವರು ಸೇರಿ ಕುಂದಾಪುರದಲ್ಲಿ ಪ್ರಚಂಡ ಜೋಡಾಟ ನಡೆಸಿದಾಗ ಬಬ್ರುವಾಹನನ ಪಾತ್ರ ಮಾಡುವ ಅವಕಾಶ ದೊರಕಿತು. ಪ್ರಸಿದ್ಧ ಕಲಾವಿದರಾದ ಹಳ್ಳಾಡಿ ಮಂಜಯ್ಯ ಶೆಟ್ರ ಎದುರುಗಡೆ ಪುಂಡು ವೇಷ ಮಾಡಿದ್ದು ನಾನು. ಆಗ ನನ್ನ ಬಬ್ರುವಾಹನ ಪಾತ್ರವನ್ನು ನೋಡಿದ ಸಾಲಿಗ್ರಾಮ ಮೇಳದ ಯಜಮಾನರಾದ ಸೋಮನಾಥ ಹೆಗಡೆಯವರು ಆ

ಹುಡುಗ ಯಾರು ಅವ ನಮ್ಮ ಮೇಳಕ್ಕೆ ಬೇಕು ಎಂದು ಮಂಜಯ್ಯ ಹೆಗಡೆಯವರಲ್ಲಿ ಹೇಳಿದಾಗ ನಿಂಜೂರು ಪಟೇಲರು, ಡಾ. ಉಮೇಶ್ ಹೆಗ್ಡೆಯವರು ಇವರೆಲ್ಲ ಸೇರಿ ಸಾಲಿಗ್ರಾಮ ಮೇಳಕ್ಕೆ ಕರೆದುಕೊಂಡು ಹೋದರು. ೧೯೬೯ ರಿಂದ ೭೯ ರವರೆಗೆ ೧೦ ವರ್ಷ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸಿದೆ. ಅಲ್ಲಿ ಸಮರ್ಥ ಕಲಾವಿದರ ಒಡನಾಟ ಸಿಕ್ಕಿತು. ಒಳ್ಳೆ ವೇಷ ಮಾಡಲು ಅವಕಾಶ ಸಿಕ್ಕಿತು. ಕೆರೆಮನೆ ಜಗನ್ನಾಥ ಹೆಗಡೆ, ಶಂಭು ಹೆಗಡೆ ಮಹಾಬಲ ಹೆಗಡೆ, ನನ್ನ ಗುರುಗಳಾದ ವೀರಭದ್ರ ನಾಯಕರು, ಶಿರಿಯಾರ ಮಂಜು ನಾಯ್ಕರು, ಹಳ್ಳಾಡಿ ಮಂಜಯ್ಯ ಶೆಟ್ರು, ಮೊಳಹಳ್ಳಿ ಕೃಷ್ಣ ನಾಯಕರು ಇವರೆಲ್ಲ ಇದ್ದಿದ್ರು. ನನ್ನ ಬೆಳವಣಿಗೆಗೆ ಅವರೆಲ್ಲ ಬಹಳ ಸಹPರಿಸಿ ಸೂಕ್ತ ಸಲಹೆಗಳನ್ನು ನೀಡ್ತಿದ್ರು. ನಂತರ ಅಮೇರಿಕಾದಿಂದ ಮಾರ್ಥನ್ ಅವರು ಊರಿಗೆ ಬಂದ್ರು. ಅವರು ಬಡಗಿನಿಂದ ಉತ್ತಮ ಕಲಾವಿದರನ್ನು ಆಯ್ಕೆ ಮಾಡಿ ಮಾಡಿ ೧೯೭೯ ರಲ್ಲಿ ಅಮೇರಿಕಾಕ್ಕೆ ಯಕ್ಷಗಾನ ಪ್ರದರ್ಶನಕ್ಕೆ ಕರೆದುಕೊಂಡು ಹೋದ್ರು. ಆ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ನಾವು ಮಾರ್ಥನ್ ಅವರೊಂದಿಗೆ ಅಮೆರಿಕ ಕೆನಡದಲ್ಲಿ ಒಂದೂವರೆ ತಿಂಗಳು ನಾವು ಯಕ್ಷಗಾನ ಸೇವೆಯನ್ನು ಮಾಡಿದೆವು. ಮತ್ತೆ ನಾಲ್ಕು ವರ್ಷ ಹಾಂಗ್ ಕಾಂಗ್ ಜರ್ಮನಿ ಪ್ಯಾರಿಸ್ ಇಸ್ರೇಲ್ ವಿದೇಶ ತಿರುಗಾಟ ಮಾಡಿದೆ. ಊರಿಗೆ ಬಂದಾಗ ಸೌಕೂರು ಮೇಳ ಪ್ರಥಮ ಏಳುವ ವರ್ಷ. ಅಲ್ಲಿ ಮೂರು ವರ್ಷ ನನ್ನ ಸೇವೆ ಸಲ್ಲಿಸಿದೆ. ನಂತರ ಮಂದಾರ್ತಿ ಮೇಳದಲ್ಲಿ ಮೂರು ವರ್ಷ, ಹಾಲಾಡಿಯಲ್ಲಿ ೮ ವರ್ಷ, ಮಡಾಮಕ್ಕಿಯಲ್ಲಿ ೫ ವರ್ಷ, ಬಗ್ವಾಡಿಯಲ್ಲಿ ೬ ವರ್ಷ, ಶನೀಶ್ವರ ಮೇಳದಲ್ಲಿ ೮ ವರ್ಷ, ಸೇವೆ ಸಲ್ಲಿಸಿದೆ. ನನಗೆ ಕಾಲು ಗಂಟು ನೋವು ಉಂಟಾದಾಗ ಸೌಕೂರು ಮೇಳದಲ್ಲಿ ೨ ವರ್ಷ ಸೇವೆ ಸಲ್ಲಿಸಲು ಯಜಮಾನರು ಅವಕಾಶ ಮಾಡಿಕೊಟ್ಟರು. ಹೀಗೆ ಒಟ್ಟು ೫೪ ವರ್ಷಗಳ ಅನುಭವ ನನ್ನದು. 

ಹಿಂದಿನ ಯಕ್ಷಗಾನ ಜೀವನದ ಬಗ್ಗೆ ಹೇಳುವುದಾದರೆ, ಕಲಾವಿದನಿಗೆ ಆಗ ತುಂಬ ಕಷ್ಟವಿತ್ತು. ಪ್ರತಿ ನಿತ್ಯ ೧೨ ಮೈಲಿ ದೂರ ನಡೆದುಕೊಂಡು ಹೋಗಿ ವೇಷ ಮಾಡಿದ್ದು ಊಟ ಇಲ್ಲದೇ ಇದ್ದದ್ದೂ ಉಂಟು. ೮ ಗಂಟೆಗೆ ವೇಷ ಕಟ್ಟಿದ್ರೆ, ಮೂರು ನಾಲ್ಕು ವೇಷ ಮಾಡಿ ಬೆಳಗ್ಗಿನವರೆಗೆ ನಿಭಾಯಿಸುತ್ತಿದ್ದೆ. ಆಗ ಕಿರೀಟಕ್ಕೆ ಝರಿ ಸುತ್ತಿ ಪಗಡೆ ಅಟ್ಟೆ ಕಟ್ಬೇಕು. ಮುಕ್ಕಾಲು ಗಂಟೆ ಕೆಲಸ, ಈಗ ೧೫ ನಿಮಿಷಕ್ಕೆ ವೇಷ ಆಗಿಬಿಡುತ್ತದೆ. ಹಿಂದಿನ ಕಲಾವಿದರಿಗೂ ಇಂದಿನ ಕಲಾವಿದರಿಗೂ ಕಲಿಕೆ ಅಧ್ಯಯನಗಳು ಪಾತ್ರಕ್ಕೆ ತೊಡಗಿಸುವಂತಹಾ ರೀತಿಯಲ್ಲಿ ಏನು ವ್ಯತ್ಯಾಸ.

ಆಗ ನಮಗೆಲ್ಲ ಹಿರಿಯ ಕಲಾವಿದರ ಬಗ್ಗೆ ತುಂಬ ಅಭಿಮಾನ ಇತ್ತು. ಅವರು ಏನು ಹೇಳ್ತಾರೆ ಕೇಳ್ಬೇಕು. ಅವರ ಸೇವೆ ಮಾಡ್ಬೇಕು. ಕಲೀಬೇಕು ಎಂಬ ಶ್ರದ್ಧೆ ಇತ್ತು. ಹಿಂದೆ ಪ್ರತಿಯೊಂದು ಮೇಳದಲ್ಲೂ ಪೌರಾಣಿಕ ಪ್ರಸಂಗವೇ ಆಗ್ತಿತ್ತು. ದಿನದಿಂದ ದಿನಕ್ಕೆ ಜ್ಞಾನ ಅಭಿವೃದ್ಧಿಯಾಗ್ತಿತ್ತು. ಈಗ ಹೆಚ್ಚಿನ ಮೇಳಗಳಲ್ಲಿ ಹೊಸ ಪ್ರಸಂಗ ಇಟ್ಟುಕೊಳ್ತಾರೆ. ಬಾಯಿಪಾಠ ಮಾಡಿದ ಹಾಗೆ ಕಾಲ ಕಳೆಯುವಂತಹ ಪರಿಸ್ಥಿತಿ ಬಂದಿದೆ ಈವಾಗ, ಎಂದು ನನ್ನ ಅನಿಸಿಕೆ. ಆದ್ರಿಂದ ಹಿಂದಿನ ವಿದ್ವತ್ ಯಕ್ಷಗಾನದ ದಾರಿ ಈಗಕ್ಕೆ ಹೋಲಿಸಿದ್ರೆ ಹಿಂದೆ ಯಕ್ಷಗಾನ ಕಲಿಯುವದು ಅತೀ ಕಷ್ಟ. ಈಗ ಕೇಂದ್ರದಲ್ಲಿ ಕೆಲಕಾಲ ಕಲಿತುಕೊಂಡು ರ‍್ತಾರೆ. ಆರಂಭದಲ್ಲೇ ಪ್ರಧಾನ ವೇಷ ಕೊಡ್ಬೇಕು ಅಂತ ಹೇಳ್ತಾರೆ. ಹಿಂದೆ ಸಂಗೀತ ಮಾಡುವವರಾಗ್ಲಿ ಭಾಗವತಿಕೆ ಮಾಡುವವರಾಗ್ಲಿ ಒಂದು ಹಂತಕ್ಕೆ ಮುಟ್ಟಬೇಕೆಂದರೆ ಸಾಧಾರಣ ೧೦-೧೨ ವರ್ಷ ಪರಿಶ್ರಮ ಪಡಬೇಕಿತ್ತು. ೧೨-೧೫ ವರ್ಷದ ನಂತ್ರ ಭಾಗವತಿಕೆಯ ಸ್ಥಾನ ಸಿಗಬೇಕು. ಒಬ್ಬ ಕಲಾವಿದ ಬಬ್ರುವಾಹನ ಅಭಿಮನ್ಯು ಪಾತ್ರವನ್ನು ಸರಿಯಾಗಿ ನಿಭಾಯಿಸಬೇಕಿದ್ರೆ ಕೋಡಂಗಿ, ಬಾಲಗೋಪಾಲ ಮಾಡಿ ೧೫ ವರ್ಷ ಆದ್ರೂ ಯಕ್ಷಗಾನದಲ್ಲಿ ಅಭ್ಯಾಸ ಮಾಡಬೇಕು. ಅದಲ್ಲದೆ ರಂಗತAತ್ರವನ್ನು ಕಲಿಯುವುದಕ್ಕಾಗಿ ಬಿಡುವಿದ್ದಾಗ ಮಕ್ಕಳಿಗೆ ಚೆಂಡೆಗಾರರತ್ರ ಹೋಗಿ ಕುಳಿತುಕೊಳ್ಳಿ ಎಂದು ಹೇಳ್ತಾ ಇದ್ರು. ಈಗ ಬಣ್ಣ ಒರೆಸಿದ ಕೂಡಲೇ ಮನೆಗೆ ಹೋಗುವ ಮಾರ್ಗ ಯಾವುದು ಅಂತ ಯೋಚನೆ ಮಾಡ್ತಾ ರ‍್ತಾರೆ. 

ಪ್ರಶ್ನೆ: ಯುವ ಕಲಾವಿದರು ಹಿರಿಯ ಕಲಾವಿದರಲ್ಲಿ ಕೇಳಿ ಕಲಿಯುವ ಪರಿಸ್ಥಿತಿ ಹೇಗಿದೆ?

ಬೆ.ರ: ಏನೂ ಗೊತ್ತಿಲ್ಲದೇ ಇರುವ ಸಂದರ್ಭದಲ್ಲಿ ಅಪರೂಪಕ್ಕೆ ಕೇಳುವ ಗುಣ ಬಿಟ್ರೆ ಶ್ರದ್ಧೆಯಿಂದ ಕೇಳುವ ಗುಣ ಇಲ್ಲ ಈಗ. ಹಿಂದೆ ಕಲಾವಿದರಲ್ಲಿ ರಂಗಸ್ಥಳದ ಹೆದರಿಕೆ, ಹಿರಿಯ ಕಲಾವಿದರ ಹೆದರಿಕೆ ಇತ್ತು. ಹಗಲಿನಲ್ಲಿ ಮಾರ್ಗ ಮಧ್ಯೆ ಹೋಗುವಾಗ ಹಿರಿಯ ಕಲಾವಿದರಲ್ಲಿ ಅರ್ಥ ಕೇಳ್ತಾ ಇದ್ದೆವು. ಬಿಡಾರದಲ್ಲೂ ಎಷ್ಟೇ ಕಷ್ಟವಾದರೂ ಹೆಜ್ಜೆ ಅಭ್ಯಾಸ ಮಾಡುತ್ತಿದ್ದೆವು. ಈಗ ಬಿಡಾರಕ್ಕೆ ಬರುವವರೇ ಇಲ್ಲ. ಬಣ್ಣ ಕಳಚಿದ ಕೂಡಲೇ ಮನೆಗೆ ಹೋಗ್ತಾರೆ ಸಾಂಯAಕಾಲ ಚೌಕಿಗೆ ಬರುವುದು ಬಿಟ್ರೆ ಟೆಂಟ್ ಕೆಲಸ ಮಾಡುವವರು ಮಾತ್ರ ಬಿಡಾರದಲ್ಲಿ ರ‍್ತಾರೆ. ಆಗ ಕಲಾವಿದರೆಲ್ಲ ಒಂದು ಸ್ಥಳದಿಂದ ಮತ್ತೊಂದು ಬಿಡಾರಕ್ಕೆ ಕಲಾವಿದರೆಲ್ಲ ಸೇರಿ ಹೋಗುವ ಚೆಂದವೇ ಬೇರೆ. 

ಪ್ರಶ್ನೆ: ಈಗಿನ ಯುವಜನತೆಗೆ ಬಿಡಾರದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದ ಕಾರಣ ಬಿಡಾರದ ರೊಟೀನ್, ವ್ಯವಹಾರಗಳು ಹೇಗಿರುತ್ತದೆ? ಕಲಾವಿದರ ದಿನನಿತ್ಯ ಜೀವನ ಬಿಡಾರದಲ್ಲಿ ಹೇಗರ‍್ತಿತ್ತು?


ಬೆ.ರ: ಒಂದು ಸ್ಥಳದಲ್ಲಿ ಆಟ ನಿಗದಿಯಾಗಿದ್ದರೆ, ಮುಂಚಿತವಾಗಿ ಬಿಡಾರದ, ಮನೆಗೆ ಸೂಚನೆ ಕೊಡ್ತೇವೆ. ಅಲ್ಲಿ ಆಟ ಮಾಡಿಸುವವರು ಮನೆ ಸ್ವಚ್ಛತೆಯೋ ದೇವಸ್ಥಾನ ಸ್ವಚ್ಛತೆಯೋ ಮಾಡಿ ಬಿಡಾರಕ್ಕೆ ಸಿದ್ಧ ಪಡಿಸ್ತಾರೆ. ನಮಗೆ ಸ್ನಾನಕ್ಕೆ, ಮಲಗಲಿಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಡ್ತಾರೆ. ಮಲಗುವ ಮುಂಚೆ ಹಿರಿಯ ಕಲಾವಿದರಿಂದ ಕಲಿಯುವ ಪರಿಪಾಠ ಇತ್ತು. ಹಿಂದೆ ಮಂದಾರ್ತಿ, ಮಾರಣಕಟ್ಟೆ, ಸೌಕೂರು ಮೇಳಗಳಿಗೆ ಹರಕೆಯಾಟದ ಬೇಡಿಕೆಯೇ ಇರಲಿಲ್ಲ. ವೀಳ್ಯವೂ ಹೆಚ್ಚಿರಲಿಲ್ಲ. ಸಂಬಳವೂ ಕಡಿಮೆ. ನಾನು ಮೂರು ವರ್ಷದ ವರೆಗೆ ಬರೀ ನಾಲ್ಕಾಣೆ ಸಂಬಳದಲ್ಲಿ ದಿನಗಳೆದಿದ್ದೇನೆ. ವೀಳ್ಯವೇ ೧೫೦ ರಿಂದ ೨೦೦. ಇದರಲ್ಲಿ ಕಲಾವಿದರಿಗೆ ಸಂಬಳ ಹೇಗೆ ಕೊಡ್ತಾರೆ ಯಜಮಾನರು. ಆದ್ರೆ ಯಕ್ಷಗಾನದ ಗೀಳು. ಎಷ್ಟೇ ಕಷ್ಟವಾದರೂ ಕಲೆಯಲ್ಲಿ ತೊಡಗಿಸಿಕೊಂಡಿದ್ದೆವು. ಸಂಭಾವನೆಯ ದೃಷ್ಟಿಯಿಂದ ಅಲ್ಲ. 

ಪ್ರಶ್ನೆ: ಯಜಮಾನರ ಮನೋಸ್ಥಿತಿಗಳು

ಬೆ.ರ: ಯಜಮಾನ್ರು ಒಗ್ಗಟ್ಟಾಗಿ ರ‍್ತಾರೆ. ಬೇರೆ ಮೇಳಕ್ಕೆ ಸೇರಿ ಜಾಸ್ತಿ ಸಂಬಳ ಪಡೆಯುವ ಆಸೆ ಹೇಳಿದ್ರೆ ಮುಂಚಿತವಾಗಿ ಆ ಮೇಳದ ಯಜಮಾನರಿಗೆ ಸೂಚನೆ ನೀಡ್ತಾರೆ. ಕಲಾವಿದನ ಏಳಿಗೆಯನ್ನು ಕಾಣುವ ಗುಣ ಹೆಚ್ಚಿನ ಯಜಮಾನರಿಗೆ ಇರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. 

ಪ್ರಶ್ನೆ: ಕಲಾವಿದರಾಗಿ ೫೪ ಸೇವೆ ಸಲ್ಲಿಸಿದ್ದೀರಿ. ಇಷ್ಟು ದಿರ್ಘ ಕಾಲ ಯಕ್ಷಗಾನದಲ್ಲೇ ಉಳಿದುಕೊಳ್ಳಲು ಬಲವಾದ ಕಾರಣ ಏನು?

ಬೆ.ರ: ಕಲಾಮಾತೆ ನನಗೆ ಸಾಕಷ್ಟು ನೀಡಿದ್ದಾಳೆ. ಟೆಂಟ್ ಮೇಳಕ್ಕೆ ಹೋದ ಮೇಲೆ ವರ್ಷದಿಂದ ವರ್ಷಕ್ಕೆ ಸಂಭಾವನೆ ಏರಿಸುವ ಗುಣ ಯಜಮಾನರಲ್ಲಿತ್ತು. ಪ್ರೀತಿಯೂ ಇತ್ತು. ಮಳೆಗಾಲದಲ್ಲಿ ಬೆಂಗಳೂರು ಬಾಂಬೆ ಡೆಲ್ಲಿ ವಿದೇಶ ಪ್ರವಾಸ ಮಾಡಲು ಅವಕಾಶ ಸಿಕ್ಕಿದವು. ಪ್ರಾಯ ಮುಗಿಯುವ ಹೊತ್ತಿಗೆ ಒಳ್ಳೆ ಸಂಭಾವನೆ ಸಿಕ್ತು ನಮ್ಮ ಕಾಲ ಮುಗೀತು, ಕಲಾವಿದರ ಸಂಭಾವನೆ ಹೆಚ್ಚಾಯಿತು. ಆದರೆ ಈಗ ನನ್ನ ಕಲಾಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ ಸನ್ಮಾನಗಳು ಪಾಲಿಗೆ ಒದಗಿ ಬಂದಿವೆ. ಯಕ್ಷಸಿರಿ ಪ್ರಶಸ್ತಿ, ಮೊಳಹಳ್ಳಿ ಪ್ರಶಸ್ತಿ ಅರಾಟೆ ಮಂಜುನಾಥ ಪ್ರಶಸಿಪ್ರಿವೆಲ್ಲ ಕಲಾಮಾತೆಯ ಕೃಪೆಯಿಂದ ದೊರೆಕಿದ್ದು.

ಪ್ರಶ್ನೆ: ಯಕ್ಷಗಾನ ಅಂದ್ರೆ ಭಕ್ತಿಯನ್ನು ಬಿಂಬಿಸುವAಥಹ ಕತೆಗಳು ಪೌರಾಣಿಕ ಕತೆಗಳೇ ಹೆಚ್ಚಾಗಿ ಪ್ರದರ್ಶನ ಆಗುತ್ತಿತ್ತು. ಹಾಗೂ ಇದನ್ನು ಆರಾಧನಾ ಕಲೆಯಾಗಿ ನೋಡ್ತಾ ಇದ್ರು. ಆ ಸಮಯದಲ್ಲಿ ಕಾಲ್ಪನಿಕ ಪ್ರಸಂಗಗಳು ಪ್ರವರ್ಧಮಾನಕ್ಕೆ ಬರುವಂತಹಾ ಸಮಯ ಜನ ಅದನ್ನು ಹೇಗೆ ಸ್ವೀಕರಿಸ್ತಿದ್ರು? ಅದನ್ನು ಯಾವ ರೀತಿ ಸ್ವೀಕರಿಸ್ತಿದ್ರು. 

ಬೆ.ರ: ಹಿಂದಿನ ಕಲಾಸಕ್ತರು ಪೌರಾಣಿಕ ಪ್ರಸಂಗಗಳನ್ನೇ ಇಷ್ಟ ಪಡ್ತಿದ್ರು. ಯುವಕರಿಗೆ ಮಾತ್ರ ಕಾಲ್ಪನಿಕ ಪ್ರಸಂಗಗಳ ಒಲವಿತ್ತು. ಪೌರಾಣಿಕ ಪ್ರಸಂಗಗಳಿಗೇ ಆಗ ೩೦೦೦ ದಷ್ಟ ಜನ ನೆರೆದದ್ದು ಇದೆ. ಈಗ ಬಯಲಾಟದ ಪ್ರೇಕ್ಷಕರು ೧೧ ಗಂಟೆಯೊಳಗೆ ಮನೆಗೆ ರ‍್ತಾರೆ. ಪ್ರೇಕ್ಷಕರೇ ಇಲ್ಲದಿದ್ದರೆ ಏನು ಮಾಡಲು ಸಾಧ್ಯ?

ಪ್ರಶ್ನೆ: ಯಕ್ಷಗಾನಕ್ಕೆ ಜಾನಪದ ಶೈಲಿಯ ಸೌಂದರ್ಯವೂ ಇದೆ, ಶಾಸ್ತಿçÃಯ ಸೌಂದರ್ಯವೂ ಇದೆ. ಇದರಲ್ಲಿ ಪಂಡಿತರೂ ಜನಸಾಮಾನ್ಯರೂ ಸೇರಿದ್ದಾರೆ. ಅಂಥದ್ದರಲ್ಲಿ ಇಂದಿನ ಕೆಲ ಬೆಳವಣಿಗೆಗಳಿಂದ ಯಕ್ಷಗಾನ ತನ್ನ ಮೂಲ ಸೌಂದರ್ಯ ಉಳಿಸಿಕೊಳ್ಳುವಲ್ಲಿ ಸೋಲ್ತಿದ್ಯಾ?

ಬೆ.ರ: ಯಕ್ಷಗಾನಕ್ಕೆ ವೀಕ್ಷಕರು ಕಡಿಮೆ ಆದ್ರೂ ಯಕ್ಷಗಾನ ದಿನದಿಂದ ದಿನಕ್ಕೆ ಬೆಳವಣಿಗೆ ಆಗ್ತಾ ಬಂತು. ಇಂದಿನ ಯುವಕರಲ್ಲಿ ಯಕ್ಷಗಾನ ಕಲಿಯುವ ಆಸಕ್ತಿಯೂ ಇದೆ. ಕೇಂದ್ರಗಳಲ್ಲಿ ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುತ್ತಿದ್ದಾರೆ. ಹಾಗಾಗಿ ಯಕ್ಷಗಾನ ಎಂದಿಗೂ ಬಿದ್ದು ಹೋಗುವುದಿಲ್ಲ ಎಂಬ ಭರವಸೆ ಇದೆ. 

ಆದರೆ, ಹಿಂದಿನ ಯಕ್ಷಗಾನಕ್ಕೂ ಇಂದಿನ ಯಕ್ಷಗಾನಕ್ಕೂ ಬದಲಾವಣೆ ಇದೆ. ಕೆಲ ಪೌರಾಣಿಕ ಪ್ರಸಂಗಗಳಿಗೆ ಅದರದೇ ಆದ ಒಂದು ನಡೆ ಇದೆ. ಆ ನಡೆಯಲ್ಲಿ ಈಗಿನ ಕಲಾವಿದರು ಹೋಗುವುದಿಲ್ಲ. ಉದಾಹರಣೆಗೆ ಬಬ್ರುವಾಹನ ಪ್ರಸಂಗದಲ್ಲಿ ಮಂತ್ರಿ ಬಂದು ನಮ್ಮ ವಿರೋಧಿ ಪಕ್ಷದಿಂದ ಪತ್ರ ಬಂದಿದೆ ಎಂದು ಹೇಳುವಾಗ ಬಬ್ರುವಾಹನನಿಗೆ ಸಿಟ್ಟು ಬರುವಂತಹಾ ಸಂದರ್ಭ. ಚಿತ್ರಾಂಗದೆಯ ನಂದನ ಎಂಬ ಪದ್ಯಕ್ಕೆ ಈಗಿನ ಕಲಾವಿದರು ಲಾಲಿತ್ಯಪೂರ್ಣವಾಗಿ ಅರ್ಧ ಘಂಟೆ ಕುಣೀತಾರೆ. ನನ್ನ ದೃಷ್ಟಿಯಲ್ಲಿ ಅದು ಅಭಾಸವಾಗಿ ಕಾಣ್ತದೆ. ಪ್ರೇಕ್ಷಕರಿಗೆ ಅದು ಬೇಕು. ಆದ್ರೆ ಹಿಂದಿನ ನಡೆ ಅದಲ್ಲ ಎಂಬುದು ತೀರ್ಮಾನ ನನ್ನದು. 

ಪ್ರಶ್ನೆ: ನಿಮ್ಮಂತಹಾ ಹಿರಿಯ ಕಲಾವಿದರು ಯಕ್ಷಗಾನವನ್ನು ತಪಸ್ಸಿನ ರೀತಿ ಆರಾಧಿಸಿದವರಿದ್ದಾರೆ. ಉಸಿರಾಗಿ ಬಾಳಿದವರಿದ್ದಾರೆ ಆ ಸಾಲಿನಲ್ಲಿ ನೀವೂ ರ‍್ತೀರಿ. ಯುವಕಲಾವಿದರಿಗೆ ನಿಮ್ಮ ಕಿವಿ ಮಾತೇನು?

ಬೆ.ರ: ಕಲಾವಿದರಲ್ಲಿ ರಂಗದ ಮಟ್ಟಿಗೆ ಶ್ರದ್ಧೆಯಿಂದ ಕೆಲಸ ಮಾಡುವ ಗುಣವೂ ಬೇಕು ರಂಗಸ್ಥಳದ ಹೆದರಿಕೆಯೂ ಬೇಕು ಹಿಂದಿನ ಕಲಾವಿದರ ನಡೆಯನ್ನೇ ಇವರು ಪಾಲಿಸಿದರೆ ಒಳ್ಳೆಯದು ಅಂತ ನಾನು ಅವರಿಗೆ ಸಲಹೆ ಕೊಡಬಲ್ಲೆ. ಒಂದು ಪದ್ಯಕ್ಕೆ ಮುಗಿಯಷ್ಟರೊಳಗೆ ಮುಗಿದದ್ದೇ ಆದ್ರೆ ಅದಕ್ಕೊಂದು ಸೊಗಸುಂಟು. ಪದ್ಯ ೧೦ ನಿಮಿಷ ಅರ್ತಗಾರಿಕೆ ಅರ್ಧ ಗಂಟೆ ಆದ್ರೆ ಏನು ಚೆಂದ ಹೇಳಿ? ರಂಗಸ್ಥಳದ ಬಿಸಿ ಉಳಿಯುವುದಿಲ್ಲ. 

ಮೆಚ್ಚಿನ ಪಾತ್ರಗಳು - ಅಭಿಮನ್ಯು, ಬಾಲ ಪರಶುರಾಮ, ಬಬ್ರುವಾಹನ, ಸುಧನ್ವ, ಚಿತ್ರಕೇತು, ಕಮಲಧ್ವಜ, ರುಕ್ಮಾವತಿ ಕಲ್ಯಾಣ, ಕರ್ಣಾವಸಾನ, ರತಿ ಕಲ್ಯಾಣದ ಕೃಷ್ಣ ಲೀಲೆಯ ಕೃಷ್ಣ. ದೊಡ್ಡ ಪಾತ್ರವನ್ನು ಮಾಡುವ ಆಸಕ್ತಿ ಇದ್ರೂ ಅದಕ್ಕೆ ಬೇಕಾದ ಆಳ್ತನ ಇರಲಿಲ್ಲ. ಆದರೂ ಒಂದು ಸಂದಿಗ್ಧ ಪರಿಸ್ಥಿಯಲ್ಲಿ ಹಿರಣ್ಯ ಕಶಿಪುವಿನ ಪಾತ್ರವನ್ನು ನಿಭಾಯಿಸಿದ್ದೆ.  ಮೇಳದಲ್ಲಿ ಅಂತಹಾ ಆಳ್ತನ ಇದ್ದವರಿದ್ದರೂ ಅವರಿಗೆ ಪ್ರಸಂಗದ ಸರಿಯಾದ ನಡೆ ಗೊತ್ತರ‍್ಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಆ ಪಾತ್ರವನ್ನು ಮಾಡಬೇಕಾಯಿತು.  


Yakshagana artist Bellare manjunath Bhat - interview


೨೦೨೨-೨೩ ನೇ ಸಾಲಿನ ಯಕ್ಷ ತಿರುಗಾಟವನ್ನು ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ಳಾರೆ ಮಂಜುನಾಥ ಭಟ್ ರವರು ಯಕ್ಷಗಾನ ಕ್ಷೇತ್ರದ ಮೇರು ಪ್ರತಿಭೆ, ಕೊಡಗರಸರ ಕಾಲದಲ್ಲಿ ಇವರ ಕುಟುಂಬದ ಹಿರಿಯರು ರಾಜಪುರೋಹಿತರಾಗಿ ಕೊಡಗಿಗೆ ಬಂದರAತೆ. ಪಂಜ ಸೀಮೆಯಲ್ಲಿ ೧೦೦ ಮನೆಯ ಪೌರೋಹಿತ್ಯಕ್ಕಾಗಿ ಬಂದವರು ಕುಞÂ ಹಿತ್ತಲಿನಲ್ಲಿ ನೆಲೆಸುತ್ತಾರೆ. ಮಂಜುನಾಥ ಭಟ್ ರವರ ತಂದೆಯವರು ಬೆಳ್ಳಾರೆಯಲ್ಲಿ ನೆಲೆಸಿದ ಕಾರಣ ಇವರ ಹುಟ್ಟು ಬಾಲ್ಯ ವಿದ್ಯಾಭ್ಯಾಸ ಎಲ್ಲ ಅಲ್ಲೇ ನಡೆಯಿತು. 

ಇವರ ಶಾಲಾ ಜೀವನದಲ್ಲಿ ಶಿಕ್ಷಕರಾಗಿದ್ದ ಬಾಬು ಗೌಡ ಎಂಬವರಿAದ ಕೆಲವು ಪಾತ್ರಗಳಿಗೆ ಬೇಕಾದ ಹೆಜ್ಜೆ ಅಭ್ಯಾಸಗಳು ನಡೆದಿರುತ್ತವೆ. ನಂತರ ಶಿವರಾಮ ಕಾರಂತರ ಒಡನಾಡಿಯಾಗಿದ್ದ ಮಾಳಂಗಾಯಿ ಕೃಷ್ಣ ಭಟ್ ಮಾಲಿಕತ್ವದ ಗೋಪಾಲಕೃಷ್ಣ ಯಕ್ಷ ಮಂಡಳಿ ಕೂಡ್ಲು ಮೇಳ ಬೆಳ್ಳಾರೆಗೆ ಬಂದಿದ್ದಾಗ ಮೇಳ ಸೇರಿ ವೇಷ ಮಾಡುವ ಆಸೆಯನ್ನು ವ್ಯಕ್ತ ಪಡಿಸುತ್ತಾರೆ. ಹಾಗೆ ಅಡ್ಕಸ್ಥಳ ಕೃಷ್ಣ ಭಂಡಾರಿ ಅವರಿಂದ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಕೃಷ್ಣಾರ್ಜುನದಲ್ಲಿ ಮೊದಲ ಅಭಿಮನ್ಯುವಿನ ಪಾತ್ರ ನಿರ್ವಹಿಸುತ್ತಾರೆ. ನಂತರ ಸಂಗಮ ಕಲಾಸಂಘದ ಮುಖ್ಯಸ್ಥರಾದ ಗಣಪತಿ ಭಟ್ ಕೆರೆಕೋಡಿಯವರು ಮಂಜುನಾಥ್ ಭಟ್ ರವರನ್ನು ಆದಿ ಸುಬ್ರಹ್ಮಣ್ಯ ಮೇಳಕ್ಕೆ ಸೇರಿಕೊಳ್ಳುವಂತೆ ಪತ್ರ ಬರೆದು ಕಳುಹಿಸುತ್ತಾರೆ. ಶೀನ ಭಂಡಾರಿಯವರ ವ್ಯವಸ್ಥಾಪಕತ್ವದ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಕೆಲ ಕಾಲ ಸೇವೆ ಸಲ್ಲಿಸಿ ಮತ್ತೆ ಧರ್ಮಸ್ಥಳ ಲಲಿತಾ ಕಲಾ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮೂರನೇ ಬ್ಯಾಚ್ ನಲ್ಲಿ ಸೇರಿಕೊಳ್ಳುತ್ತಾರೆ. ಅಲ್ಲಿ ಯಕ್ಷ ದಿಗ್ಗಜರಾದ ಕುರಿಯ ವಿಠಲ ಶಾಸ್ತಿçಗಳು ಮತ್ತೆ ಫಡ್ರೆ ಚಂದುರವರ ಗರಡಿಯಲ್ಲಿ ಇವರ ಯಕ್ಷಗಾನಾಭ್ಯಾಸ ಮುಂದುವರೆಯುತ್ತದೆ. ಇವರಿಗೆ ಫಡ್ರೆ ಚಂದುರವರೊAದಿಗೆ ಹೆಚ್ಚಿನ ಹಾಗೂ ಆತ್ಮೀಯ ಒಡನಾಟವಿದ್ದು ಹೊಂದಿದ್ದು ಅವರನ್ನು ಅಣ್ಣ ಎಂದೇ ಸಂಬೋಧಿಸುವಷ್ಟು ಆಪ್ತತೆಯಿತ್ತು. ಧರ್ಮಸ್ಥಳ ಕೇಂದ್ರದಲ್ಲಿ ಅನೇಕ ಶಿಷ್ಯರನ್ನು ಕಲಾವಿದರನ್ನಾಗಿ ರೂಪಿಸಿದ ಕೀರ್ತಿ ಫಡ್ರೆ ಚಂದುರವರಿಗೆ ಸಲ್ಲುತ್ತದೆ ಎಂದು ಮಂಜುನಾಥ್ ಭಟ್ ರವರ ನುಡಿ. ಕೇಂದ್ರದ ಪ್ರಥಮ ಬ್ಯಾಚ್ ನಲ್ಲಿ ಚನ್ನಪ್ಪ ಶೆಟ್ರು, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ನಿಡ್ಲೆ ಗೋವಿಂದ ಭಟ್ ವಿದ್ಯಾರ್ಥಿಗಳಾಗಿದ್ದರು, ಎರಡನೆ ಬ್ಯಾಚ್ ನಲ್ಲಿ ಗಂಗಯ್ಯ ಶೆಟ್ಟಿ, ಉಮೇಶ್ ಹೆಬ್ಬಾರ್, ಲಕ್ಷö್ಮಣ ಗೌಡ, ಹಾಗೂ ಮೂರನೆಯ ಬ್ಯಾಚ್ ನಲ್ಲಿ ಮಂಜುನಾಥ್ ಭಟ್, ಕೇಶವ ಬೈಪಡಿತ್ತಾಯರು, ಬಂಡಿಹೊಳೆ ವಿಷ್ಣು ಭಟ್ ಮೊದಲಾದವರು ಕೇಂದ್ರದ ವಿದ್ಯಾರ್ಥಿಗಳಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ನಂತರ ೧೯೭೪-೭೫ರಲ್ಲಿ ಕಟೀಲು ಕ್ಷೇತ್ರದ ಎರಡನೇ ಮೇಳ ಪ್ರಾರಂಭವಾದಾಗ ಸೂಚನೆ ನೀಡಿ ಅಲ್ಲಿ ವೇಷ ಮಾಡಲು ಅವಕಾಶ ಇದೆ ಎಂದು ಹೇಳಿ ಫಡ್ರೆ ಚಂದುರವರು ಮಂಜುನಾಥ್ ಭಟ್ ರವರು ಕಟೀಲು ಮೇಳಕ್ಕೆ ಸೇರಲು ಕಾರಣವಾಗುತ್ತಾರೆ. ಒಟ್ಟು ೪೭ ವರ್ಷಗಳ ಕಲಾ ಜೀವನವನ್ನು ಕಟೀಲು ಮೇಳದಲ್ಲೇ ಪೂರೈಸುತ್ತಾರೆ. ಈ ಅವಧಿಯಲ್ಲಿ ಇರಾ ಗೋಪಾಲಕೃಷ್ಣ ಭಾಗವತರು, ನರಸಿಂಹ ಭಟ್ ರವರು, ಹಾಲಾಡಿ ಹಾಸ್ಯಗಾರರು, ಬಲಿಪ ನಾರಾಯಣ ಭಾಗವತರು, ಕುರಿಯ ಗಣಪತಿ ಶಾಸ್ತಿçಗಳು, ಪ್ರಸಾದ್ ಬಲಿಪರು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಮತ್ತು ಪಟ್ಲ ಸತೀಶ್ ಶೆಟ್ಟಿ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಬಳ್ಳಮಂಜ ಶ್ರೀನಿವಾಸ ಗೌಡ, ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದಾರೆ. ಬಳಿಕ ೨೦೨೧ನೆ ಇಸವಿಗೆ ಕಟೀಲು ಮೇಳದಿಂದ ನಿವೃತ್ತಿಯಾಗುತ್ತದೆ. ಆ ಬಳಿಕ ಶ್ಯಾಮ್ ಭಟ್ ವ್ಯವಸ್ಥಾಪಕರಾದ ದೇಂತಡ್ಕ ಮೇಳದಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಅಂಬಿಕಾ ಅನ್ನ ಮೇಳದಲ್ಲಿ ೪೯ ನೆಯ ವರ್ಷದ ತಿರುಗಾಟ ನಡೆಸ್ತಾ ಇದ್ದಾರೆ.

ಯಕ್ಷಗಾನ ಕಾಲಮಿತಿ ವ್ಯವಸ್ಥೆಗೆ ಬಂದು ನಿಂತಿರುವುದರ ಕುರಿತು ಅವರ ಅಭಿಪ್ರಾಯ 

ರಾತ್ರಿಯಿಂದ ಬೆಳಿಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನದ ಸೌಂದರ್ಯ ಕಾಲಮಿತಿ ಆಟದಲ್ಲಿ ಕಾಣಸಿಗದು. ಅಕಾಲದಲ್ಲಿ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ೮ ಗಂಟೆಯ ಪ್ರಸಂಗವನ್ನು ನಾಲ್ಕು ಗಂಟೆ ಮುಗಿಸ್ತಾರೆ. ಕಾಲಮಿತಿ ಯಕ್ಷಗಾನದಲ್ಲಿ ಕಾಲ ವ್ಯತ್ಯಾಸಗಳಿಲ್ಲ, ೧ನೆ ಹಂತ, ೨ನೆ ಹಂತ, ೩ನೆ ಹಂತ, ೪ನೇ ಹಂತ ಈ ಕಾಲವ್ಯತ್ಯಾಸ ದಲ್ಲಿ ಹಂತಹAತವಾಗಿ ಪ್ರಸಂಗಗಳು ನಡೆಯುವುದು. ಈಗ ಪೀಠಿಕೆಯೇ ನಾಲ್ಕನೆ ಕಾಲದಲ್ಲಿ ಹೋಗುತ್ತದೆ. ಕಾಲವ್ಯತ್ಯಾಸಗಳು ಕಾಣುವುದಿಲ್ಲ. ಆದ್ರೆ ಕಾಲ ಬದಲಾದ ಹಾಗೆ ಅದಕ್ಕೆ ಹೊಂದಿಕೊಳ್ಳಬೇಕು ಎಂದು ಅವರು ಅಭಿಪ್ರಾಯಿಸುತ್ತಾರೆ.

ಪ್ರಾರಂಭದಲ್ಲಿ ಕೆಲ ವರ್ಷಗಳ ಕಾಲ ನಿತ್ಯ ವೇಷಗಳನ್ನು ನಿರ್ವಹಿಸಿಯೇ ಹಂತ ಹಂತವಾಗಿ ಬೆಳವಣಿಗೆ ಕಂಡವರು ಬೆಳ್ಳಾರೆ ಮಂಜುನಾಥ್ ರವರು. ಕಟೀಲಿನ ಮೂರನೆ ಸೆಟ್ ನಲ್ಲಿ ಪೀಠಿಕೆ ವೇಷಧಾರಿಯಾಗಿ ಎರಡನೆ ವೇಷದವರಾದ ಗುಂಡಪ್ಪ ಗೌಡರ ಎದುರಿಗೆ ಪಾತ್ರ ನಿರ್ವಹಿಸುತ್ತಿದ್ದರು. ಒಂದನೆ ಪುಂಡು ವೇಷಗಳಾದ ನಳ, 

ಹರಿಶ್ಚಂದ್ರ, ಬ್ರಹ್ಮ ಕಪಾಲದ ಈಶ್ವರ, ವಿಕ್ರಮಾದಿತ್ಯ, ಮಾನಿಷಾದದ ವಾಲ್ಮೀಕಿ ಇಂಥ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸಿದ್ದಾರೆ. ಇವರ ಇಷ್ಟದ ಪಾತ್ರ ದೇವಿ ಮಹಾತ್ಮೆಯ ಸುಗ್ರೀವ. ರಕ್ತ ಬೀಜನ ಪಾತ್ರವನ್ನು ೨೫೦೦ ಹೆಚ್ಚು ನಿಭಾಯಿಸಿದ್ದೇನೆ ಎಂದು ಹೆಮ್ಮೆ ಪಟ್ಟುಕೊಳ್ಳುಕೊಳ್ಳುವ ಇವರಿಗೆ ವೀರರಸಕ್ಕಿಂತಲೂ ಕೃಷ್ಣ ಲೀಲೆಯ, ಕಂಸ ವಧೆಯ ಅಕ್ರೂರ, ಸುಗ್ರೀವ, ಇಂತಹ ಸೌಮ್ಯ ಸಾತ್ವಿಕ, ಭಾವನಾತ್ಮಕ, ಭಕ್ತಿಯುತ ಪಾತ್ರಗಳು ಅಚ್ಚುಮೆಚ್ಚು. ಇನ್ನು ಇವರ ಜಾಂಬವAತನ ಪಾತ್ರದ ವೈಶಿಷ್ಟö್ಯತೆ ಎಂದರೆ, ಇವರು ಜಾಂಬವತಿ ಕಲ್ಯಾಣದಲ್ಲಿ ವೃದ್ಧ ಜಾಂಬವAತನಾಗಿ ಬಿಳಿ ಗಡ್ಡದ ವೇಷ ಮಾಡಿಕೊಳ್ಳುತ್ತಾರೆ. ಉಳಿದ ಹೆಚ್ಚಿನ ಕಲಾವಿದರು ಜಾಂಬವಬAತನ ವೇಷವನ್ನು ಕಪ್ಪು ಗಡ್ಡ ಧರಿಸಿ ಮಾಡುತ್ತಾರೆ. ಕೃತ ಯುಗ ಹಾಗೂ ತ್ರೇತಾಯುಗದ ಆದಿಯವನು ಜಾಂಬವAತ. ತ್ರೇತಾಯುಗದ ರಾಮಾಯಣದಲ್ಲಿ ಜಾಂಬವನ ಪಾತ್ರವನ್ನು ವೃದ್ಧನಾಗಿ ಮಾಡುತ್ತಾರೆ. ಜಾಂಬವತಿ ಕಲ್ಯಾಣದ ಕಥೆ ದ್ವಾಪರದ ಯುಗದ್ದು. ಇದಕ್ಕಾಗುವಾಗ ಗಡ್ಡ ಕಪ್ಪಾಗುವುದು ಹೇಗೆ? ಮಧ್ಯದಲ್ಲಿ ಬಿಳಿ ಗಡ್ಡ ಕಟ್ಟಿ, ದ್ವಾಪರಕ್ಕಾಗುವಾಗ ಕಪ್ಪು ಗಡ್ಡ ಕಟ್ಟಿ, ರೌಡಿಸಂ ನ ಹಾಗೆ ಜಾಂಬವAತನ ಪಾತ್ರವನ್ನು ತೋರಿಸ್ತಾರೆ ಅದು ಸರಿಯಾದ ಕ್ರಮವಲ್ಲ ಎಂಬ ವಿವರಣೆ ನೀಡುತ್ತಾರೆ. ಅವರ ಒಡನಾಟದಲ್ಲಿದ್ದ ಈಗಿನ ಕಲಾವಿದರಾದ ಮೋಹನ್ ಕುಮಾರ್ ಅಮ್ಮುಂಜೆಯವರು ಅವರನ್ನೇ ಅನುಸರಿಸಿ ಬಿಳಿ ಗಡ್ಡದ ಜಾಂಬವAತನನ್ನು ಮಾಡುತ್ತಾರೆ. 

ಪ್ರಸಂಗಕ್ಕೆ ಪದ್ಯ ರಚನೆಯ ಅನುಭವ

ಯಕ್ಷಗಾನ ಪ್ರಸಂಗದ ಪದ್ಯ ಬರೆಯಲು ದೇವರ ಅನುಗ್ರಹ ಬೇಕು. ಹಲವಾರು ಪ್ರಸಂಗಗಳಿಗೆ ನಾನು ಪದ್ಯ ರಚಿಸಿ ನೀಡಿದ್ದೇನೆ. ಎಂದು ಹೇಳುವ ಇವರು ದೇವಿ ಮಹಾತ್ಮೆಯಲ್ಲಿ ವಿದ್ಯುನ್ಮಾಲಿಯ ಒಡ್ಡೋಲಗದ ಸನ್ನಿವೇಶಕ್ಕೆ, ಯಕ್ಷನಲ್ಲಿ ಯುದ್ಧದ ಸಂದರ್ಭಕ್ಕೆ ಪದ್ಯ ರಚಿಸಿದ್ದಾರೆ. ಅಲ್ಲದೆ, ವಿಘ್ನ ವಿನೋದನ ಮಹಿಮೆ ಮತ್ತು ಸತೀ ಹೇಮಾವತಿ ಎಂಬ ಸ್ವತಂತ್ರ ಪ್ರಸಂಗ ರಚನೆ ಮಾಡಿದ್ದಾರೆ. ಸತೀ ಹೇಮಾವತೀ ಪ್ರಸಂಗದಲ್ಲಿ ದಾಕ್ಷಾಯಣಿಯ ಹುಟ್ಟು, ಮದುವೆ, ದೇಹತ್ಯಾಗ, ಪಾರ್ವತಿ ಕಲ್ಯಾಣದವರೆಗಿನ ಸನ್ನಿವೇಶಗಳಿದ್ದರೆ, ವಿಘ್ನ ವಿನೋದನ ಮಹಿಮೆ ಪ್ರಸಂಗದಲ್ಲಿ ಶಿವ ಪಾರ್ವತಿಯರ ಒಡ್ಡೋಲಗದಿಂದ ಶ್ರೀರಾಮಾಶ್ವಮೇಧದ ಕೊನೆಗೆ ಶ್ರಿ ರಾಮ ಸ್ವಸ್ತಿಕ ಕೊಡಲಿಲ್ಲವೆಂದು ಗಣಪತಿ ಕೋಪಿಸಿಕೊಳ್ಳುವ ಕಥಾಭಾಗವಿದೆ. ಈ ಪ್ರಸಂಗಗಳಿಗೆ ಬಲಿಪರು ಮುನ್ನುಡಿ ಬರೆದಿದ್ದು ಹಿರಿಯ ಸಾಹಿತಿಗಳಾದ ಅಮೃತ ಸೋಮೇಶ್ವರರು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಪ್ರಸಂಗಗಳನ್ನು ಪ್ರೊ ವಿವೇಕ್ ರೈರವರು ಪ್ರಕಟಣೆಯ ವೆಚ್ಚ ಭರಿಸಿ ಪ್ರಕಟಿಸಿದ್ದಾರೆ. ಕುರಿಯ ಗಣಪತಿ ಶಾಸ್ತಿçಯವರು ಕಟೀಲು ಮೇಳದಲ್ಲಿ ಈ ಎರಡೂ ಪ್ರಸಂಗಗಳನ್ನು ಆಡಿಸಿದ್ದಾರೆ. ಇವರ ಪದ್ಯ ರಚನೆಗಳಲ್ಲಿ ಹಿಮಪತಿ ಎಂಬ ಕಾವ್ಯನಾಮವನ್ನು ಬಳಸಿಕೊಂಡಿದ್ದಾರೆ. ಪೌರಾಣಿಕ ಪ್ರಸಂಗಗಳ ನಡೆಯಲ್ಲಿ ಸುಮಾರು ಬದಲಾವಣೆಗಳಾಗಿವೆ. ಮೊದಲಿದ್ದ ಕಲಾವಿದರು ಈಗ ಇಲ್ಲ. ಹಳೆಯ ಪ್ರಸಂಗಗಳನ್ನು ಆಡಿಕೊಂಡು ಹೋಗಲು ಕಷ್ಟ. ಯಕ್ಷಗಾನದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿವೆ ಎಂದೆನ್ನುವ ಮಂಜುನಾಥರು ಕಲೆಗೆ ಅಪಚಾರ ಆಗದಂತೆ, ಹೊಸತನ್ನು ಯಕ್ಷಗಾನದಲ್ಲಿ ರೂಢಿಸಿಕೊಂಡಲ್ಲಿ, ಅದು ಎಂದಿಗೂ ತಪ್ಪಾಗುವುದಿಲ್ಲ ಹಳೆ ಸಂಪ್ರದಾಯಕ್ಕೆ ಚ್ಯುತಿ ಆಗದ ಹಾಗೆ ಹೊಸತನ್ನು ರೂಪಿಸಿಕೊಳ್ಳುವುದು ತಪ್ಪಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. 

ಯಕ್ಷಗಾನ ತರಬೇತಿ - ಮಂಜುನಾಥ ಭಟ್ಟರು ಮಂಗಳೂರಿನ ಕದ್ರಿ ವಿಷ್ಣು ಸ್ಮಾರಕ ಗೆಳೆಯರ ಬಳಗದವರು ನಡೆಸುತ್ತಿದ್ದ ತರಬೇತಿ ಕೇಂದ್ರದಲ್ಲಿ ೧೯೮೩-೮೪-೮೫ ನೆ ಇಸವಿಯಲ್ಲಿ ೩ ವರ್ಷ ಯಕ್ಷಗಾನ ಗುರುಗಳಾಗಿ ತರಬೇತಿ ನೀಡುತ್ತಿದ್ದರು. ಅಲ್ಲದೆ ಮಲ್ಲೂರು, ಮಳಲಿ, ಕುಪ್ಪೆಪದವು, ತಳಕಳ, ಶೇಣಿ ಶಾಲೆಯಲ್ಲಿ ಯಕ್ಷಗಾನ ನಾಟ್ಯವನ್ನು ಅನೇಕ ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟಿದ್ದಾರೆ. ಇವರ ಕೌಟುಂಬಿಕ ಹಿನ್ನಲೆಯೂ ಯಕ್ಷಗಾನದ ಬಗ್ಗೆ ಸದಭಿರುಚಿಯನ್ನು ಹೊಂದಿದ್ದು ಇವರ ಅಜ್ಜಂದಿರಾದ ಪುತ್ತೂರು ಕೃಷ್ಣ ಭಟ್, ಅಜ್ಜ ಶಂಕರ ನಾರಾಯಣ ಭಟ್ ರವರು ಕಲೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದವರಾಗಿದ್ದರು. ತಂದೆ ಗೋವಿಂದ ಭಟ್ ರವರು ತಾಳಮದ್ದಳೆ ಕಾರ್ಯಕ್ರಮಗಳಿಗೆ ಕಂದ ಭಾಮಿನಿ ಷಟ್ಪದಿಯಲ್ಲಿ ಪದ್ಯ ರಚನೆ ಮಾಡುತ್ತಿದ್ದರಂತೆ. ಕೆಲವೊಂದು ವೇಷಗಳನ್ನೂ ಮಾಡಿದ್ದೂ ಇದೆ. ಇವರ ಸಹೋದರ ಸೂರ್ಯ ನಾರಾಯಣ ಭಟ್ ಬೆಳ್ಳಾರೆ ಇವರು ಜಲಜ ಸಖ ಎಂಬ ಕಾವ್ಯನಾಮದಲ್ಲಿ ಅನೇಕ ಗೀತೆಗಳು ನಾಟಕ, ಪ್ರಸಂಗ ಕಥೆ ಕವನಗಳ ಬರಹಗಾರರು, ನಾಟಕ ಕಲಾವಿದರು ಹಾಗೂ ಯಕ್ಷಗಾನ ಕಲಾವಿದರಾಗಿ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ನಿಡ್ಲೆ ಗೋವಿಂದ ಭಟ್ ರವರ ಕಿರಿಯ ತಂಗಿಯನ್ನು ಇವರು ವಿವಾಹವಾಗಿದ್ದು ಬೆಳ್ಳಾರೆ ಮಂಜುನಾಥ ಭಟ್ಟರಿಗೆ ಶ್ರೀಹರಿ ಮತ್ತು ಶ್ರೀರಾಮ ಗಂಡು ಇಬ್ಬರು ಮಕ್ಕಳು ಹಾಗೂ ಸಾಯಿಸುಮಾ ಎಂ ನಾವುಡ ಎಂಬ ಮಗಳಿದ್ದು ಸಂತೃಪ್ತ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.

Interviewed by - Shubh
#Shubhashayajain
#shubhashayaadiraj
#Bellaremanjunathbhat
#Nadanoopura #Vandaru #nyt
#Yakshagana

ಯಕ್ಷಗಾನ ಸಮ್ಮೇಳನ- ಅಧ್ಯಕ್ಷರ ಮನದಾಳ


ಪ್ರಶ್ನೆ: ಯಕ್ಷಗಾನ ಸಮ್ಮೇಳನಕ್ಕೆ ತಾವು ಆಯ್ಕೆಯಾಗಿದ್ದು ಹೇಗೆ? ಈ ಜವಾಬ್ದಾರಿಯನ್ನು ನೀವು ಒಪ್ಪಿಕೊಳ್ಳಲು ಪ್ರಮುಖವಾದ ಕಾರಣ ಏನು?

ಡಾ. ಜೋಶಿ: ಆಯ್ಕೆ ಪ್ರಕ್ರಿಯೆ ಎನ್ನುವುದು ಆಯ್ಕೆಯ ಸಮಿತಿಗೆ ಸಂಬAಧಿಸಿದ ವಿಚಾರ. ಅದಕ್ಕಾಗಿಯೇ ಸಂಸ್ಕೃತಿ ಇಲಾಖೆ, ಸಂಘಟನಾ ಸಮಿತಿ ಇದೆ. ಅವರು ನನಗೆ ದೊಡ್ಡ ಗೌರವ ಕೊಟ್ಟಿದ್ದಾರೆ ಅದನ್ನು ನಾನು ಸ್ವೀಕರಿಸಿದ್ದೇನೆ. ಬೇರೆ ಅರ್ಹರೂ ಇರಬಹುದು. ಬೇರೆ ಬೇರೆ ಪರಿಗಣನೆಯಿಂದ ನನ್ನನ್ನು ಆಯ್ಕೆ ಮಾಡಿಬಹುದು ಎಂದು ಭಾವಿಸ್ತೇನೆ. ಸಾಹಿತ್ಯ ಸಹಿತ ಯಕ್ಷಗಾನದಲ್ಲಿ ವಿವಿಧ ವಿಭಾಗಗಳಿವೆ. ಯಕ್ಷಗಾನವನ್ನು ಕೇವಲ ಸಾಹಿತ್ಯವಾಗಿ ನೋಡಲು ಆಗುವುದಿಲ್ಲ. ಇದು ಕಲೆಯೂ ಹೌದು, ಹಿಮ್ಮೇಳ, ಮುಮ್ಮೇಳ, ಸಂಘಟನೆ ಹೀಗೆ ಹತ್ತಾರು ವಿಷಯಗಳಿದೆ ಅದರಲ್ಲಿ. ಅದರ ಕೆಲ ಅಂಶಗಳನ್ನು ಆಯ್ದು ಮುಖ್ಯವಾಗಿ ಸಾಂಕೇತಿಕವಾದAತಹಾ ಸಂದರ್ಭ ಇದು. ಇದು ನನಗೆ ಒಬ್ಬನಿಗೆ ಸಿಕ್ಕಿದ ಅಧ್ಯಕ್ಷತೆ ಅಲ್ಲ, ಇಡೀ ಯಕ್ಷಗಾನ ಸಮುದಾಯಕ್ಕೆ ಸಿಕ್ಕ ಮಾನ್ಯತೆಯನ್ನು ನಾನು ಸ್ವೀಕರಿಸಿದ್ದೇನೆ. 

 

ಪ್ರಶ್ನೆ: ಈ ಸಮ್ಮೇಳನದ ಅಧ್ಯಕ್ಷರಾಗಿ ಯಕ್ಷಗಾನ ಕ್ಷೇತ್ರದ ಅಭಿವೃದ್ಧಿಗೆ ಸಂಬAಧಿಸಿದAತೆ ನಿಮ್ಮ ಪ್ರಯಾರಿಟಿಗಳೇನು? 

ಡಾ. ಜೋಶಿ: ಇದನ್ನು ಆ ರೀತಿಯಾಗಿ ನೋಡಲು ಆಗಲಾರದು. ರೆಸೊಲ್ಯುಷನ್ ಬಂದ ಹಾಗೆ ಪಾಸ್

ಮಾಡೋದು ನನ್ನ ಕರ್ತವ್ಯ ಆಗಿರುತ್ತದೆ. ನಾನು ಮುಖ್ಯವಾಗಿ ಅಧ್ಯಕ್ಷೀಯ ಭಾಷಣ ಮಾಡಲಿಕ್ಕಿದೆ. ಯಕ್ಷಗಾನ ರಂಗ ಮುಂದೆ ಹೇಗೆ ಸಾಗಬೇಕು ಈಗ ಹೇಗಿದೆ ಎಂಬುದರ ಬಗ್ಗೆ ಐತಿಹಾಸಿಕ ನೋಟವನ್ನು ಕೊಟ್ಟು ಮುಂದೆ ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶಿಯಾಗುವಂತಹ ಭಾಷಣ ಮಾಡಬೇಕಿದೆ. 

ವ್ಯವಸಾಯ ರಂಗಭೂಮಿ ಸ್ವತಂತ್ರ. ಕಲಾವಿದರ ಮೇಲೆ ನಮಗೇನೂ ಹಿಡಿತ ಇಲ್ಲ. ಅದನ್ನು ಸಂಸ್ಕೃತಿ ಇಲಾಖೆ ಹಿಡಿತಕ್ಕೆ ತರುವ ಪ್ರಶ್ನೆಯೂ ಅಲ್ಲ. ಒಂದು ಚರ್ಚೆಗೆ ವಿಷಯಗಳನ್ನು ಒಡ್ಡುವಂಥದ್ದು. ಹೇಗೆ ಮುಂದೆ ಅದರ ವೇಷಭೂಷಣ ಹಿಮ್ಮೇಳ ಸಂಘಟನೆ ಪ್ರೋತ್ಸಾಹ ಸಹಕಾರ ಮಾಡಬೇಕಾದ ಕೆಲಸ ಇಂತಹಾ ವಿಚಾರಗಳಲ್ಲಿ ಏನು ಮಾಡಬಹುದು ಎಂದು ವಿದ್ವಾಂಸರು ಮಂಡಿಸ್ತಾರೆ. ಮಂಡನೆಗಳನ್ನು ಒಟ್ಟುಗೂಡಿಸಿ ಪರಿಶೀಲಿಸಿ, ಮುಂದೆ ಹೇಗೆ ಎಂಬುದಾಗಿ ನಾನೂ ಕೆಲವು ವಿಷಯಗಳನ್ನು ಮಂಡಿಸುವವನಿದ್ದೇನೆ. ಈಗಾಗಲೇ ಹೇಳಿದ ಹಾಗೆ ಇದರಲ್ಲಿ ೩ ವಿಷಯಗಳಿವೆ. ಒಂದು ಕಲೆಯ ಅಭಿಮಾನವನ್ನು ವಿಸ್ತರಿಸುವ ಪ್ರಚೋದಿಸುವ, ಜನರಲ್ಲಿ ಅಭಿಮಾನವನ್ನು ಉಂಟು ಮಾಡುವ ವಾತಾವರಣ. ಫೆಸ್ಟಿವಲ್ ಕೂಡಾ ಇದೆ ಇದರಲ್ಲಿ. ಇನ್ನೊಂದು ಅಭಿಯಾನ, ಯಕ್ಷಗಾನದಲ್ಲಿ

ಮುಂದೆ ಏನಾಗಬೇಕು, ಎಂಬುದು. ಮೂರನೆಯದು ಅಭಿಜ್ಞಾನ- ಯಕ್ಷಗಾನದಲ್ಲಿ ಏನಾಗಿದೆ ಏನಾಗಬೇಕು ಎಂಬುದಾಗಿ ಕಲೆಯನ್ನು ನೆನಪಿಟ್ಟುಕೊಂಡು ಬರೇ ಶ್ರೇಷ್ಠವಾದ ಕಲೆ, ಅದ್ಭುತವಾದ ಕಲೆ ಎಂದು ಹೇಳುವುದಕ್ಕಿಂತ ಅಲ್ಲಿರುವ ಸಮಸ್ಯೆಗಳೇನು? ಅದೊಂದು ಶೈಲಿ ಬದ್ಧವಾದ ಕಲೆಯಾದ್ದರಿಂದ ಅದನ್ನು ಹೇಗೆ ನಡೆಸಬೇಕು, ಹೇಗೆ ತಗೊಳ್ಬೋದು. ಕಲೆಗೆ ವಸ್ತು ಹೇಗೆ? ಶೈಲಿ ಹೇಗೆ? ಕಲೆಯಲ್ಲಿ ಪ್ರಯೋಗವೋ ಬದಲಾವಣೆಯೋ ಆಗುವುದಿದ್ದರೆ ಅದಕ್ಕೆ ಪಾರಾಮೀರ‍್ಸ್ ಏನು ಎಂಬುದಾಗಿ ವಿಮರ್ಶಾತ್ಮಕವಾದ ಮಾನದಂಡಗಳ ಮೇಲೆ ನಾವು ನೋಡಬೇಕಾಗುತ್ತದೆ. ಈ ಎಲ್ಲಾ ವಿಷಯಗಳನ್ನು ನಾವು ಅಲ್ಲಿ ಪರಿಶೀಲನೆ ಮಾಡಲಿದ್ದೇವೆ. 


ಪ್ರಶ್ನೆ: ಸಮ್ಮೇಳನ ಮುಗಿದ ಬಳಿಕ ಇದರಿಂದ ಕಲಾಕ್ಷೇತ್ರದಲ್ಲಿ ಯಾವ ಬದಲಾವಣೆಗಳನ್ನು ನಾವು ನಿರೀಕ್ಷೆ ಮಾಡಬಹುದು? 

ಡಾ. ಜೋಶಿ: ಕೂಡಲೇ ಬದಲಾವಣೆ ಸಾಧ್ಯವಿಲ್ಲ. ಅಧ್ಯಕ್ಷ ಭಾಷಣದಲ್ಲಿರುವ ಎಲ್ಲವನ್ನೂ ನಾನು ಈಗ ಹೇಳಲಿಕ್ಕೂ ಆಗುವುದಿಲ್ಲ. ಮೊದಲನೆಯದು ಯಕ್ಷಗಾನ ರಂಗಭೂಮಿಯಲ್ಲಿರುವ ಸಮಸ್ಯೆಗೇನು? ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಭಾವನಾತ್ಮಕವಾಗಿ ಯಕ್ಷಗಾನದೊಟ್ಟಿಗೆ ಬೆಸೆದುಕೊಳ್ಳುವ ರೀತಿಯಲ್ಲಿ ಕಲಾವಿದರು ಮತ್ತು ಕಲಾಭಿಮಾನಿಗಳನ್ನು ಜೋಡಿಸುವುದು. ಈ ಥರದ ಸಮ್ಮೇಳನದಿಂದ ಜಿನುಗಿದ ಜಿನುಗು ಪರಿಣಾಮ, ಅರಿವಿನ ಮತ್ತು ಎಚ್ಚರದ ಪ್ರಜ್ಞೆ ವಿಸ್ತರಿಸಿ ನಿಧಾನವಾಗಿ ಯಕ್ಷಗಾನ ರಂಗದಲ್ಲಿ ಬದಲಾವಣೆಗಳಾಗಬೇಕು ಪರಿಣಾಮಗಳಾಗಬೇಕು. ಸಮ್ಮೇಳನಗಳು ಹಿಂದೆಯೂ ಆಗಿವೆ, ಉತ್ಸವಗಳೂ ಆಗಿವೆ. ಡಾ. ಕಾರಂತರು ೧೯೫೮ ರಲ್ಲಿಯೇ ಗೋಷ್ಠಿಗಳನ್ನು ನಡೆಸಿದ್ದರು. ಅದಕ್ಕಿಂತಲೂ ಮೊದಲು ೧೯೩೬ನೇ ಇಸವಿಯಿಂದಲೇ ಇಂತಹ ಸಮ್ಮೇಳನಗಳು ನಡೆದಿವೆ. ಅದಕ್ಕೆ ೮೯ ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಬೇರೆಬೇರೆ ಕಲೆಗಳಿದ್ದಾವೆ. ಅವು ಹೇಗೆ ಪ್ರಗತಿ ಸಾಧಿಸಿದ್ದಾವೆ. ಯಕ್ಷಗಾನದ ಪ್ರಗತಿಗೆ ನಾವು ಏನು ಮಾಡ್ಬೇಕು? ನಾವು ನಮ್ಮ ಕಲೆಯನ್ನು ಉನ್ನತೀಕರಣ ಮಾಡಲು ಪ್ರಸರಣಗೊಳಿಸಲು ಮತ್ತು ಬೇರೆಬೇರೆ ಲೆವೆಲ್ ನಲ್ಲಿ ರಾಜ್ಯ, ರಾಷ್ಟç, ಅಂತರಾಷ್ಟಿçÃಯ ಮಟ್ಟದಲ್ಲಿ ಇದನ್ನು ಪ್ರಾಜೆಕ್ಟ್ ಮಾಡಲು ಏನೆಲ್ಲಾ ಮಾಡಬೇಕು? ಇಂತಹ ಯೋಚನೆಗಳು ಇಂತಹ ಸಮ್ಮೇಳನದಿಂದ ಸಾಧ್ಯ.

 ಎರಡು ದಿನದ ಸಮ್ಮೇಳನದಲ್ಲಿ ಏನೂ ಆಗುವುದಿಲ್ಲ. ಸರಣಿಯಾಗಿ ಅದರ ಫಾಲೋ ಅಪ್ ಗೋಷ್ಟಿಗಳು ಚಿಂತನೆಗಳು ನಡೆಯಬೇಕು. ಈ ಸಮ್ಮೇಳನ ಅದಕ್ಕೊಂದು ಚಾಲನೆ ಅಷ್ಟೆ. 


ಪ್ರಶ್ನೆ: ಯಕ್ಷಗಾನದ ವಿವಿಧ ವಿಭಾಗ ಪ್ರಕಾರಗಳ ಅಧ್ಯಯನ, ಸಮ್ಮೇಳನ, ಸಂಘಟನೆಗಳನ್ನು ನೀವೇ ಹೇಳಿದಂತೆ ಖಾಸಗಿ ಸಂಸ್ಥೆಗಳು ಸಾಕಷ್ಟು ಕೆಲಸ ಮಾಡಿದ್ದಾವೆ. ಯಕ್ಷಗಾನ ಉಚ್ಚಾçಯ ಸ್ಥಿತಿಯಲ್ಲಿರುವಾಗ ಇಂತಹ ಸಮ್ಮೇಳನ ಸರ್ಕಾರದಿಂದ ನಡೆಸಲ್ಪಡುತ್ತಿರುವುದು ಎಷ್ಟು ಪ್ರಾಮುಖ್ಯ ಎಂದೆನಿಸುತ್ತದೆ ನಿಮಗೆ? 

ಡಾ. ಜೋಶಿ: ಉಚ್ಛಾçಯ ಸ್ಥಿತಿಯಲ್ಲಿರೋವಾಗ್ಲೇ ಸಮ್ಮೇಳನಗಳು ಆಗಬೇಕು. ಯಕ್ಷಗಾನ ಸಂಖ್ಯಾಮಾನದಲ್ಲಿ ಉನ್ನತವಾಗಿ ಹಾಗೂ ಕಮರ್ಶಿಯಲ್ ಆಗಿ ಇರಬಹುದು. ಆದ್ರೆ ರಂಗಭೂಮಿಯಲ್ಲಿ ಅನೇಕ ಸಮಸ್ಯೆಗಳೂ ಇದ್ದಾವೆ,  

ಯಕ್ಷಗಾನವನ್ನು ಕಲಾ ದೃಷ್ಟಿಯ ವಿಮರ್ಶಕರು ನೋಡುವುದು ಬೇರೆ, ಮುಗ್ಧವಾಗಿ ಖುಷಿಯಿಂದ ನೋಡುವುದು ಬೇರೆ. ರಂಗದಲ್ಲಿ ಅನೌಚಿತ್ಯಗಳು ದಿನದಿನ ಬರುತ್ತವೆ. ಎಷ್ಟೋ ವಿಷಯದಲ್ಲಿ ಶೈಲಿ ಬದಲಾಗಿದೆ ಕೆಟ್ಟು ಹೋಗಿದೆ. ಯಕ್ಷಗಾನ ಎಷ್ಟೇ ಪ್ರಸಿದ್ಧವಾದರೂ ಒಳಗಿನಿಂದ ಅದರದೇ ಆದ ಗಂಭೀರವಾದ ಸಮಸ್ಯೆಗಳನ್ನು ಎದುರಿಸ್ತಾನೇ ಇವೆ. ಆದ್ರಿಂದ ಅವುಗಳ ಚರ್ಚೆ ಯಾವಾಗ್ಲೂ ಬೇಕು ಮತ್ತು ರಂಗಭೂಮಿಯ ನಿಜವಾದ ಅರ್ಥದ ಉಚ್ಛಾçಯ ಸ್ಥಿತಿ ಸಾಧಿಸಲ್ಪಡಬೇಕು. ಇದು ಸತತವಾಗಿ ಆಗಬೇಕಾದ ಕೆಲಸ. ಈ ಸಮ್ಮೇಳನದಿಂದ ಸ್ಪೂರ್ತಿ ಪಡೆದು ಒಂದು ಹೊಸ ಎಚ್ಚರ ಜಾಗೃತೆ ನಿರ್ಮಾಣ ಆಗಬೇಕು. 


ಪ್ರಶ್ನೆ: ಕಲಾವಿದರ ಮತ್ತು ವಿದ್ವಾಂಸರ ನಡುವೆ ಒಂದು ಗ್ಯಾಪ್ ಇದೆ. ಕಲಾವಿದ ಮತ್ತು ವಿಮರ್ಶಕರನ್ನು ಬೆಸೆಯುವಂತಹಾ ಪ್ರಯತ್ನ ಈ ಸಮ್ಮೇಳನದಲ್ಲಿ ಎಷ್ಟರ ಮಟ್ಟಿಗೆ ನಡೆಯುತ್ತೆ? 

ಡಾ. ಜೋಶಿ: ಕಲಾವಿದರ ಮತ್ತು ವಿಸ್ವಾಂಸರ ಒಟ್ಟುಗೂಡುವಿಕೆ ನಡೆದಿಲ್ಲ ಎಂದಿಲ್ಲ. ನಡೆದಿದೆ. ಪ್ರತೀ ಗೋಷ್ಟಿಯಲ್ಲೂ ಕಲಾವಿದರನ್ನು ಕರೆದಿದ್ದೇವೆ. ಎಷ್ಟೋ ಕಡೆ ಕಲಾವಿದರೆ ಸ್ವತಃ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಚಾರ ಮಂಡನೆ ಮಾಡಿದ್ದಾರೆ. ಆದ್ರೆ ಯಕ್ಷಗಾನ ವ್ಯವಸಾಯ ಹೇಗಿದೆ ಎಂದರೆ ಕಲಾವಿದರನ್ನೆಲ್ಲ ಕರೆಯಬೇಕೆಂದರೆ ಇಡೀ ಬೇಸಗೆಯಲ್ಲಿ ನಾವು ಸಮ್ಮೇಳನವನ್ನು ಮಾಡುವ ಹಾಗೇ ಇಲ್ಲ. ನಿಜವಾಗಿ ಈ ಸಮ್ಮೇಳನ ಮಳೆಗಾಲದಲ್ಲಿ ಮಾಡಬೇಕು. ಬೇಸಗೆಯಲ್ಲಿ ಇಡೀ ಸೀಸನ್ ತಿರುಗಾಟ ರ‍್ತದೆ. ಕಲಾವಿದರಲ್ಲಿ ಕೆಲವರು ಆಸಕ್ತರಿದ್ದಾರೆ. ಆಸಕ್ತಿ ಇದ್ದರೂ ಬರಲು ಸಾಧ್ಯವಾಗದವರೂ ಇದ್ದಾರೆ. ಅನೇಕ ಕಲಾವಿದರು ಅಲ್ಲಿ ಬಂದು ಕೂತ್ರೆ ಮೇಳಕ್ಕೆ ರಜೆ ಮಾಡಬೇಕು. ಅವರಿಗೆ ರಜೆ ಮಾಡಲು ಆಗುವುದಿಲ್ಲ. ಮಳೆಗಾಲದಲ್ಲೂ ಸೀಸನ್ ಇರುತ್ತದೆ. ಮತ್ತೆ ಕಲಾವಿದರೂ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವ ಪ್ರಯತ್ನ ಮಾಡ್ಬೇಕು. ಯಜಮಾನರು, ದೇವಸ್ಥಾನಗಳು, ತಜ್ಞರು, ಸಂಘಟಕರು ಎಲ್ಲರೂ ಸೇರಿ ಕಲಾವಿದರನ್ನು ಹತ್ತಿರ ತರಬೇಕು. ಎಷ್ಟೋ ಜನ ಕಲಾವಿದರಿಗೆ ವಿಮರ್ಶೆಯನ್ನು ಸ್ವೀಕರಿಸೋ ಮನೋಧರ್ಮ ಇಲ್ಲ. ಕೆಲವ್ರಿಗೆ ಇದೆ. ಯಕ್ಷಗಾನ ಕಲಾವಿದರ ಮತ್ತು ತಜ್ಞರ ಮಧ್ಯದ ಅಂತರ ಕಡಿಮೆ ಮಾಡಲು ಇದು ಮುಖ್ಯ ವೇದಿಕೆ. ನಾಡಿದ್ದಿನ ಸಮ್ಮೇಳನಕ್ಕೆ ಎಲ್ಲಾ ಕಲಾವಿದರಿಗೂ ಆಹ್ವಾನ ಇದೆ. ಅವರಿಗೆ ಪ್ರಯಾಣದ ವ್ಯವಸ್ಥೆಯನ್ನೂ ನಾವೇ ಮಾಡಿದ್ದೇವೆ ಯಾಕಂದ್ರೆ ಎಲ್ಲೋ ಪ್ರದರ್ಶನ ಇರುವಲ್ಲಿಂದ ಸಮ್ಮೇಳನಕ್ಕೆ ಬಂದು ಹೋಗಲು ಆರ್ಥಿಕವಾಗಿ ಅವರಿಗೆ ಹೊರೆ ಆಗ್ತದೆ. ಅದಕ್ಕಾಗಿ ಸಂಘಟನಾ ಸಮಿತಿಯವರೇ ಕಲಾವಿದರು ಬಂದು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಮುಂದೆ ಇಂತಹಾ ಕಾರ್ಯಕ್ರಮಗಳಲ್ಲಿ ಕಲಾವಿದರು ಹೆಚ್ಚು ಭಾಗವಹಿಸುವಂತೆ ಆಗಬಹುದು.


ಪ್ರಶ್ನೆ: ಕಲಾವಿದರ ಭಾಗವಹಿಸುವ ಆಸಕ್ತಿ ಹೇಗಿದೆ. 

ಡಾ. ಜೋಶಿ: ಕಲಾವಿದರು ಆಸಕ್ತಿ ತೋರಿದ್ದಾರೆ. ತಿರುಗಾಟದ ಮಧ್ಯದಲ್ಲಿ ಕಷ್ಟ ಆದರೂ ಬಂದು ಹೋಗುತ್ತೇವೆ ಎಂದು ಹೇಳಿದ್ದಾರೆ. ಕೆಲವು ಕಲಾವಿದರು ಹಿಂದೆಯೂ ಭಾಗಿ ಆಗಿದ್ದಾರೆ. ಈ ಸಲವೂ ಆಗ್ತಾರೆ. 


ಪ್ರಶ್ನೆ: ಯಕ್ಷಗಾನದಲ್ಲಿ ಕೆಲವೊಂದಕ್ಕೆ ಗೈಡ್ ಲೈನ್ಸ್/ಪ್ಯಾರಾಮೀರ‍್ಸ್ ಬೇಕು, ಅದು ಪ್ರದರ್ಶನ, ಕಥೆ, ಹಿಮ್ಮೇಳ ಮುಮ್ಮೇಳ ಎರಡೂ ತಿಟ್ಟುಗಳಲ್ಲಿ, ಎಂದು ಹೇಳಿದಿರಿ. 

ಈ ಹಿನ್ನಲೆಯಲ್ಲಿ ಗೈಡ್ ಲೈನ್ಸ್ ತಯಾರಿಕೆಗೆ ಇದು ಪೂರ್ವ ವೇದಿಕೆ ಒದಗಿಸಿಕೊಡುತ್ತಾ? 

ಡಾ. ಜೋಶಿ: ಇದರ ಮುಖ್ಯ ಉದ್ದೇಶವೇ ಅದು. ಒಂದು ಅಭಿಮಾನವನ್ನು ನಿರ್ಮಿಸುವುದು, ಎಚ್ಚರವನ್ನು ನಿರ್ಮಿಸುವುದು ಮತ್ತು ಯಕ್ಷಗಾನದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಸಣ್ಣ ರೂಪದಲ್ಲಿ ಒಂದು ದಿಕ್ಸೂಚಿಯನ್ನು ನಿರ್ಮಾಣ ಮಾಡುವುದು. 


ಪ್ರಶ್ನೆ: ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಕವಿ/ಸಾಹಿತಿಗಳನ್ನು ಪರಿಗಣಿಸಬೇಕು ಎಂಬ ಹಿನ್ನಲೆಯಲ್ಲಿ ಈ ಸಮ್ಮೇಳನಕ್ಕೆ ಹೆಚ್ಚುವರಿ ತೂಕ ಬರಲಿದೆಯೇ? ಯಕ್ಷಕವಿಗಳ ಸಮಾವೇಶ ನಡೆಯಲಿದೆಯೇ? 

ಡಾ. ಜೋಶಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಕವಿಗಳನ್ನು ಸೇರಿಸುವುದು ಬೇಡಿಕೆಯಾಗಬಾರದು. ಅವರಿಗೆ ಬೇಕೆಂದರೆ ಪರಿಗಣಿಸಲಿ. ಕನ್ನಡ ಸಾಹಿತ್ಯದ ಅಧ್ಯಯನ ಪರಿಪೂರ್ಣವಾಗಬೇಕಾ? ಅದರಲ್ಲಿ ಪ್ರಸಂಗ ಸಾಹಿತ್ಯವನ್ನು ಅರ್ಥಗಾರಿಕೆಯನ್ನು ತೆಗೆದುಕೊಳ್ಳಲಿ. ಬೇಡಿಕೆ ಎಂಬ ಪದವನ್ನು ಯಕ್ಷಗಾನದವರು ಬಳಸಲೇ ಬಾರದು. ಕಳೆದ ೫೦ ವರ್ಷಗಳಲ್ಲಿ ೧೯೭೨ನೇ ಇಸವಿಯಲ್ಲಿ ಕಾರ್ಕಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಇವತ್ತಿನವರೆಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನವನ್ನು ಪರಿಗಣಿಸಿದ್ದಾರೆಯೇ. ಇದರ ಉಲ್ಲೇಖವನ್ನು ಆರ್ ನರಸಿಂಹಾಚಾರ್ ಕನ್ನಡ ಸಾಹಿತ್ಯ ಚರಿತ್ರೆ ಕವಿಚರಿತೆಯಲ್ಲಿ ಹೇಳಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಗಾನದ ಬಗ್ಗೆ ವಿಸ್ತಾರವಾದ ಮಾಹಿತಿ ಇದೆ. ಎನ್ ಎಸ್ ಲಕ್ಷಿö್ಮÃ ನಾರಾಭಟ್ ರವರ ಸಂಕ್ಷಿಪ್ತ ಸಾಹಿತ್ಯ ಚರಿತ್ರೆ ಕೃತಿಯಲ್ಲಿಯೂ ಇದೆ. ಇದೊಂದು ಜನಪ್ರಿಯವಾದ ಭಾವನೆ.

 ಅವರು ನಮಗೆ ಚಾನ್ಸ್ ಕೊಟ್ಟು ಏನು ಆಗುವುದು ಬೇಡ. ಯಾವ ಸಾಹಿತಿಯೂ ಯಕ್ಷಗಾನಕ್ಕೆ ಚಾನ್ಸ್ ಕೊಡುವ ಧಾಟಿಯಲ್ಲಿ ಮಾತನಾಡಲೇಬಾರದು. ಕಾವ್ಯ, ಕಾದಂಬರಿ, ವಿಮರ್ಶೆ ಸಂಶೋಧನೆ, ಪ್ರಬಂಧ, ಕವಿತೆ ಇದ್ದ ಹಾಗೇ ಯಕ್ಷಗಾನ ಕೂಡಾ. ಯಕ್ಷಗಾನದಲ್ಲಿ ಭಾರತದ ಯಾವ ಭಾಷೆಯಲ್ಲೂ ಇಲ್ಲದಷ್ಟು ದೊಡ್ಡ ಗೀತ ಸಾಹಿತ್ಯ ಇದೆ. ಆರೇಳು ಲಕ್ಷ ಯಕ್ಷಗಾನದ ಪದ್ಯಗಳಿವೆ. ೫ ಸಾವಿರದ ಹತ್ತಿರದಷ್ಟು ಪ್ರಸಂಗಗಳಿವೆ. ಯಾವ ಭಾಷೆಯಲ್ಲಿ ಇಷ್ಟು ದೊಡ್ಡ ಸಾಹಿತ್ಯ ಸಂಪತ್ತಿದೆ? ಸಾಹಿತ್ಯದ ಪರಿಪೂರ್ಣ ಅಧ್ಯಯನ ಆಗಬೇಕಾದ್ರೆ ಯಕ್ಷಗಾನ ಸಾಹಿತ್ಯವೂ ಬೇಕು. ಸಿನಿಮಾ ಸಾಹಿತ್ಯವೂ ಬೇಕು. ಸಿನಿಮಾದಲ್ಲಿ ಹೆಸರು ಪಡೆದ ಬೇರೆ ಕೃತಿಗಳನ್ನು ಬರೆದ ಡಾ. ದೊಡ್ಡರಂಗೇಗೌಡರನ್ನು ಸಾಹಿತಿಯನ್ನಾಗಿ ಮಾಡಿದ್ರು. ಸಮ್ಮೇಳನದ ಅಧ್ಯಕ್ಷ ಮಾಡಿದ್ರು. ಆಗಲೂ ಅವರು ಸಿನಿಮಾದವರು ಎಂದು ಮಾತುಗಳು ಬಂದವು. ಆದ್ರೆ ಸಿನಿಮಾ ಸಾಹಿತ್ಯ, ಸಾಹಿತ್ಯ ಅಲ್ವೇ? ಅತ್ಯುತೃಷ್ಟ ಗೀತೆಗಳು ಸಂಭಾಷಣೆಗಳನ್ನು ಸಿನಿಮಾಗಾಗಿ ಬರೆದಿದ್ದಾರೆ. ಈ ವಿಷಯಗಳಲ್ಲಿ ನಮ್ಮ ಮೆಂಟಲ್ ಫ್ರೇಮ್ ಬದಲಾಗಬೇಕು. ಇದರಲ್ಲಿ ಕ್ಲೇಮ್ ಮಾಡುವ ಪ್ರಶ್ನೆಯೇ ಇಲ್ಲ. ಯಾರೇ ಒಪ್ಪಲಿ ಒಪ್ಪದಿರಲಿ ಅದರ ಬಗ್ಗೆ ನಾವು ತಲೆಕೆಡಿಸುವುದಲ್ಲ. ಯಕ್ಷಗಾನ ಸಾಹಿತ್ಯದ ಒಂದು ಪ್ರಕಾರ ಎಂದು ಪರಿಗಣಿಸಲ್ಪಡ್ತಾ ಇದೆ ಮತ್ತು ಬದಲಾವಣೆಗಳು ಆಗ್ತಾ ಬಂದಿದ್ದಾವೆ. ಎಲ್ಲ ವಿಭಾಗಗಳೂ ಹೀಗೆಯೇ ಒಂದೊAದು ಕಾಲದಲ್ಲಿ ಸರ‍್ತಾ ಬಂದವುಗಳು. ಆದ್ದರಿಂದ ಇದೆಲ್ಲಾ ಸಹಜವೇ. ಇದೊಂದು ವಿವಾದದ ವಿಷಯ ಎಂದು ನಾನು ಭಾವಿಸುವುದಿಲ್ಲ.  


ಪ್ರಶ್ನೆ: ಸಮ್ಮೇಳನದ ಅಧ್ಯಕ್ಷರಾಗಿ ನಿಮ್ಮ ಆಶಯ ಏನು?

ಡಾ. ಜೋಶಿ: ಯಕ್ಷಗಾನದ ವ್ಯವಸಾಯ ರಂಗಭೂಮಿಗೆ ಇರುವ ಬೇರೆ ಬೇರೆ ಸಮಸ್ಯೆಗಳು, ಕಲಾವಿದರ ಸಮಸ್ಯೆ, ಯಜಮಾನರ ಸಮಸ್ಯೆ ಇದನ್ನು ಯಕ್ಷಗಾನಕ್ಕೆ ಸಂಬAಧಪಟ್ಟ ಎಲ್ಲರೂ ಆಲೋಚನೆ ಮಾಡಬೇಕು. ಇದು ನನ್ನ ಸಮಸ್ಯೆ ಅಲ್ಲ ಅವನ ಸಮಸ್ಯೆ, ಅದು ಅವ ನೊಡ್ಬೇಕು, ಇವ ನೊಡ್ಬೇಕು ಎಂದು ಜವಾಬ್ದಾರಿ ತಪ್ಪಿಸುವುದಲ್ಲ. ಇದರಲ್ಲಿ ಮುಖ್ಯ ಜವಾಬ್ದಾರಿ ವ್ಯವಸಾಯಿ ಕಲಾವಿದರದ್ದು. ಯಾಕೆಂದರೆ ಅದರಿಂದಲೇ ಅವನ ಜೀವನ. ಈಗ ನಾನು ಸಹಿತ ತಜ್ಞರೇನೋ ಹೇಳ್ತೇವೆ, ಹೋಗ್ತೇವೆ. ನಮಗೆ ನಮ್ಮ ವ್ಯವಸಾಯ ಬೇರೆ ಇದೆ. ಆದರೆ ತನಗೆ ಅನ್ನ ಕೊಡುವ ತನ್ನನ್ನು ಪೋಷಿಸುವ ಕಲೆಯ ಬಗ್ಗೆ ತಾನೇನಾದ್ರೂ ಮಾಡಬೇಕೆನ್ನುವ ತುಡಿತ ಕಲಾವಿದರಿಗೆ ಬೇಕು. ವಿಮರ್ಶಕರು, ಮೇಳದ ಯಜಮಾನರು ದೇವಸ್ಥಾನಗಳು, ಸರಕಾರ, ಕಲಾಪೋಷಕರು, ಯಕ್ಷಗಾನದ ಸುತ್ತ ಮುತ್ತ ಯಾರಿದ್ದಾರೋ, ವಲಯವನ್ನು ಪೋಷಿಸಿಕೊಂಡು ಹಾಗೂ ಅಭಿಮಾನಪಟ್ಟು ಅದರಿಂದ ಪ್ರಯೋಜನ ಪಡೆಯುವ ಅಥವ ಅದನ್ನು ಕಲೆಯಾಗಿ ಎಂಜಾಯ್ ಮಾಡುವವರು, ಅವರೆಲ್ಲರೂ ಇದರ ಬಗ್ಗೆ ಆಲೋಚನೆ ಮಾಡಬೇಕು. ಯಕ್ಷಗಾನ ಒಳ್ಳೆಯದಾಗಬೇಕು, ವಿಸ್ತರಣೆಯಾಗಬೇಕು.  ರಾಷ್ಟಿçÃಯ ಮಟ್ಟದಲ್ಲಿ ಯಕ್ಷಗಾನವನ್ನು ಕೊಡುವಾಗ ಇಲ್ಲಿ ಪ್ರೆಸೆಂಟ್ ಮಾಡುವುದಕ್ಕಿಂತ ಬೇರೆ ರೀತಿಯಲ್ಲಿ ಪ್ರೆಸೆಂಟ್ ಮಾಡಬೇಕು. ರಂಗಸ್ಥಳಕ್ಕೆ ಅಚ್ಚುಕಟ್ಟು ಸಿಸ್ಟಮ್ ಬೇಕು. ಹಿಮ್ಮೇಳದ ಮೂಮೆಂಟ್ ಕೂಡಾ ರಿಸ್ಟಿçಕ್ಟ್ ಆಗಬೇಕು. ನಮ್ಮ ವ್ಯವಸಾಯಿ ಮೇಳಗಳಲ್ಲಿ ಹಿಮ್ಮೇಳಕ್ಕೆ ಇಂದಿಗೂ ಯುನಿಫಾರ್ಮ್ ಮಾಡಲು ನಾವು ತಯಾರಾಗಿಲ್ಲ. ಬಡಗು ತಿಟ್ಟಿನಲ್ಲಿ ತಕ್ಕ ಮಟ್ಟಿಗಾದರೂ ಮುಂಡಾಸಾದರೂ ಇದೆ. ದೇಶವಿದೇಶಗಳಲ್ಲಿ ರಂಗಭೂಮಿಯಲ್ಲಿ ಒಪ್ಪಿತವಾದ ಕೆಲವು ತತ್ವಗಳನ್ನು ನಾವು ಒಪ್ಪಕೊಳ್ಳಲೇಬೇಕು. ಧ್ವನಿ, ಬೆಳಕು, ರಂಗಸ್ಥಳದಲ್ಲಿ ಪ್ರೆಸೆಂಟ್ ಮಾಡುವ ರೀತಿ ಇದೆಲ್ಲ ತುಂಬ ಅಚ್ಚುಕಟ್ಟು, ಶಿಸ್ತಿಗೆ ಒಳಪಡಬೇಕು. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಇಡೀ ಯಕ್ಷಗಾನಕ್ಕೆ ಅದನ್ನು ವಿತರಣೆ ಮಾಡಬೇಕಾದರೆ ಅದರ ಸ್ವರೂಪದಲ್ಲಿ, ವಿನ್ಯಾಸದಲ್ಲಿ ಮತ್ತು ವಿತರಣೆಯಲ್ಲಿ ಒಂದು ಸರಿಯಾದ ಪ್ಯಾಕೇಜಿಂಗ್ ಬೇಕು. ಆ ಪ್ಯಾಕೇಜಿಂಗ್ ಇಲ್ಲದೆ ಯಾರೋ ಒಬ್ಬ ಮಾತುಗಾರನಿಗಾಗಿ ಜನ ಬರುತ್ತಾರೆ, ಹೋಗುತ್ತಾರೆ. ರಂಗಸ್ಥಳದಲ್ಲಿ ಚಾ ಕುಡಿದ್ರೂ ದೊಡ್ಡ ವಿಷಯ ಅಲ್ಲ ಅದು. ಅದು ರಂಗಭೂಮಿಯ ಲಕ್ಷಣ ಅಲ್ಲ. ವ್ಯವಸಾಯಿ ಹಾಗೂ ಹವ್ಯಾಸಿಗಳೊಂದಿಗೆ ಸಂಪರ್ಕ ಏರ್ಪಡಬೇಕು. ವಿಮರ್ಶಕ ಮತ್ತು ಕಲಾವಿದರೊಡನೆ ಸಂಪರ್ಕ ಏರ್ಪಡಬೇಕು. ಯಜಮಾನರು ಕಲಾಭಿವೃದ್ಧಿಗೆ ಬೇಕಾಗಿ ಗಂಭೀರವಾಗಿ ಚಿಂತನೆ ಮಾಡಬೇಕು. ಕಾಲಮಿತಿಯ ಚಿಂತನೆ ಇದೆ ಈಗ. ಕಾಲಮಿತಿ ಬೇಡ ಎಂದು ಹೇಳುವವರಿದ್ದಾರೆ. ಮಿತ ಕಾಲದೊಳಗೆ ಒಂದು ಉತ್ತಮ ಪ್ರದರ್ಶನವನ್ನು ಹೇಗೆ ನೀಡಬೇಕು ಎಂಬುದರ ಬಗ್ಗೆ ನಾವು ಚಿಂತಿಸಬೇಕು. ಇಂತಹ ವಿಷಯಗಳು ಒಂದೇ ಸಲ ಸಮ್ಮೇಳನದಲ್ಲಿ ತೀರ್ಮಾನ ಆಗುವುದಿಲ್ಲ. ಅದು ಒಂದೊAದಾಗಿ ತೀರ್ಮಾನ ಆಗುವಂಥದ್ದು. ಆ ಹಿನ್ನಲೆಯಲ್ಲಿ ಇದೊಂದು ಆರಂಭ. 

Interviewed by - Shubh
#Shubhashayajain
#shubhashayaadiraj
#prabhakarjoshi #Yakshaganasammelana #udupi #2023 Feb
#Nadanoopura #Vandaru #nyt
#Yakshagana

Interview Sanjay kumar Shetty Gonibeedu - Tenku Yakshagana artist


ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡುರವರು ಮೂಲತಃ ಮಂಗಳೂರಿನವರಾದರೂ ಹುಟ್ಟಿ ಬೆಳೆದದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ. ಇವರ ವಿದ್ಯಾರ್ಥಿ ದೆಸೆಯಲ್ಲಿ ಬೇಸಗೆಯಲ್ಲಿ ಇವರ ಪರಿಸರದಲ್ಲಿ ತಿರುಗಾಟಕ್ಕೆಂದು ಯಕ್ಷಗಾನ ಮೇಳಗಳು ಬರುತ್ತಿದ್ದವಂತೆ. ಹಾಗೆಯೇ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನಕ್ಕೆ ಬಂದಿದ್ದಾಗ ಪುಂಡು ವೇಷದ ಸಿಡಿಲಮರಿ ಗಂಡುಗಲಿ ಎಂದೇ ಪ್ರಸಿದ್ಧರಾದ ಶ್ರೀಧರ ಭಂಡಾರಿಯವರ ವೇಷವನ್ನು ನೋಡಿ ಇವರಿಗೆ ಯಕ್ಷಗಾನದಲ್ಲಿ ಕುತೂಹಲ ಮೂಡಿತ್ತು ಹಾಗೆ ಕಲಾವಿದ ಆಗಬೇಕು ಎನ್ನುವ ಆಸೆಯೂ ಮೂಡುತ್ತೆ. ಒಂದೊಮ್ಮೆ ಕುಂಡಾವು ಮೇಳ ಈ ಊರಿಗೆ ಪ್ರದರ್ಶನಕ್ಕೆ ಬಂದಾಗ ಸಿಡಿಲ ಮರಿ ಎಂದು ಕರೆಸಿಕೊಂಡಿದ್ದ ಮತ್ತೊಬ್ಬ ಪುಂಡು ವೇಷಧಾರಿ ಕ್ರಿಶ್ಚಿಯನ್ ಬಾಬುರವರು ಇವರ ಸಂಬAಧಿಕರ ಮನೆಗೆ ಅತಿಥಿಯಾಗಿ ಆಗಮಿಸುತ್ತಾರೆ. ಅವರು ಈ ಯುವಕನಲ್ಲಿ ಯಕ್ಷಗಾನದ ಆಸಕ್ತಿ ಇದೆಯಾ ಎಂದು ಕೇಳಿದಾಗ ಇವರ ಆಸಕ್ತಿಗೆ ಪುಷ್ಠಿ ನೀಡಿದಂತಾಗುತ್ತದೆ. ಅದಕ್ಕುತ್ತರವಾಗಿ ಹೌದೆಂದು ತಲೆಯಾಡಿಸಿದ ಸಂಜಯ್ ಕುಮಾರ್ ರವರನ್ನು ಅವರೊಂದಿಗೆ ಊರಿಗೆ ಕರೆದುಕೊಂಡು ಬರುತ್ತಾರೆ. ನಂತರ ಧರ್ಮಸ್ಥಳ ಕಲಾಕೇಂದ್ರದಲ್ಲಿ ತರಬೇತಿಗೆ ಅರ್ಜಿ ಸಲ್ಲಿಸುತ್ತಾರೆ. ಇವರು ಅರ್ಜಿ ಸಲ್ಲಿಸುವ ಸಮಯಕ್ಕೆ ಆಯ್ಕೆ ಪ್ರಕ್ರಿಯೆ ಮುಗಿದಿರುತ್ತದೆ. ಆಗ ಖಾವಂದರನ್ನು ಭೇಟಿಯಾಗಿ ನಾನು ಶ್ರೀಧರ ಭಂಡಾರಿಯವರ ತಮ್ಮ ಎಂದು ತಿಳಿಸಿ ಯಕ್ಷಗಾನ ಕಲಿಯುವ ಆಸಕ್ತಿಯನ್ನು ಹೇಳಿಕೊಳ್ಳುತ್ತಾರೆ. ಆಗ ಶ್ರೀಧರ ಭಂಡಾರಿಯವರು ಧರ್ಮಸ್ಥಳ ಮೇಳದಲ್ಲಿ ಪ್ರಸಿದ್ಧ ವೇಷಧಾರಿಯಾಗಿದ್ದರು. ಶ್ರೀಧರ ಭಂಡಾರಿಯವರ ತಮ್ಮನರಂದು ತಿಳಿದು ಸಂಜಯ್ ಕುಮಾರ್ ರವರನ್ನು ಲಲಿತಾ ಕಲಾ ಕೇಂದ್ರದಲ್ಲಿ ನೇರವಾಗಿ ತರಬೇತಿಗೆ ಆಯ್ಕೆ ಮಾಡಿಕೊಂಡರು. ಯಕ್ಷಗಾನದ ದ್ರೋಣಾಚಾರ್ಯ ಫಡ್ರೆ ಚಂದುರವರಲ್ಲಿ ಇವರು ನಾಟ್ಯಭ್ಯಾಸವನ್ನ ಮಾಡಿದರು.  

ಧರ್ಮಸ್ಥಳ ಲಲಿತಾ ಕಲಾ ಕೇಂದ್ರದಲ್ಲಿ ನಾಟ್ಯ ಕಲಿಯುತ್ತಿರುವಾಗ ಸಂಜಯ್ ಕುಮಾರ್ ರವರ ಚಿಕ್ಕಪ್ಪ ದಿ. ಶೀನಪ್ಪ ಭಂಡಾರಿಯವರು ನೋಡಿ ಅಭ್ಯಾಸ ಮುಗಿದ ಮೇಲೆ ಸುಬ್ರಹ್ಮಣ್ಯ ಮೇಳಕ್ಕೆ ಬರುವುದಕ್ಕೆ ಹೇಳುತ್ತಾರೆ. ಆಗ ದಿ. ಶೀನಪ್ಪ ಭಂಡಾರಿಯವರು ಆದಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ನಡೆಸುತ್ತಿದ್ದರು. ಅವರ ಮೇಳದಲ್ಲಿ ಬಾಲಗೋಪಾಲನ ವೇಷಕ್ಕೆ ಸೇರಿಕೊಂಡು ನಂತರ ಪ್ರಧಾನ ಪುಂಡು ವೇಷಗಳ ನಿರ್ವಹಣೆಗೆ ಅತೀ ಬೇಗನೆ ಅವಕಾಶ ಸಿಗುತ್ತದೆ. ಮೊದಲಿಗೆ ಭಾರ್ಗವ ವಿಜಯದ ಪರಶುರಾಮ, ಚಂಡ ಮುಂಡರು, ಅಭಿಮನ್ಯು, ಅಯ್ಯಪ್ಪ, ಕೃಷ್ಣ ಮೊದಲಾದ ಪಾತ್ರಗಳನ್ನು ನಿರ್ವಹಿಸಕಲು ಅವಕಾಶ ಲಭಿಸಿತು. ನಾಲ್ಕು ವರ್ಷ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಮಾಡಿದ ಬಳಿಕ ಇವರ ಸಹೋದರ ಶ್ರೀಧರ ಭಂಡಾರಿಯವರು ಪುತ್ತೂರು ಮಹಾಲಿಂಗೇಶ್ವರ ಮೇಳ ಪ್ರಾರಂಭಿಸುತ್ತಾರೆ. ಆ ಮೇಳಕ್ಕೆ ಬರುವಂತೆ ಇವರಿಗೆ ಆಹ್ವಾನವಿರುತ್ತದೆ. ಹೀಗೆ ಪುತ್ತೂರು ಮೇಳದಲ್ಲೂ ನಾಲ್ಕು ವರ್ಷ ತಿರುಗಾಟ ನಡೆಸುತ್ತಾರೆ. 

ಪ್ರ: ಪುಂಡುವೇಷದೊAದಿಗೆ ಸ್ತ್ರೀಪಾತ್ರಗಳನ್ನು ನಿರ್ವಹಿಸುವ ಅನುಭವ ಹೇಗಿತ್ತು? ಅದಕ್ಕೆ ಸಿದ್ಧತೆ ಮತ್ತು ಎದುರಿಸಿದ ಸವಾಲುಗಳ ಬಗ್ಗೆ ಅನುಭವ ಹೇಳಿ 

ಸಂ.ಗೋ: ನನಗೆ ಜನಮನ್ನಣೆ ಸಿಕ್ಕಿದ್ದು ಸ್ತ್ರೀ ವೇಷದಲ್ಲಿ. ಆದರೆ ೯೯% ನಾನು ಮನಸ್ಸಿಲ್ಲದೆ ಸ್ತ್ರೀ ವೇಷ ಮಾಡುವ ಪರಿಸ್ಥಿತಿ ಒದಗಿ ಬಂತು. ನನ್ನ ಮುಖಚರ್ಯೆ ಆಕರ್ಷಕವಾಗಿದ್ದರಿಂದ ಮತ್ತು ಮೇಳದಲ್ಲಿ  ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಸಂಗದಲ್ಲಿ ಮೋಹಿನಿ ಪಾತ್ರ ಮಾಡುವುದಕ್ಕೆ ಪಾತ್ರಧಾರಿಯ ಕೊರತೆ ಇತ್ತು. ಅದರಲ್ಲಿ ನನಗೆ ಮಣಿಕಂಠನ ಪಾತ್ರ ನಿಗದಿಯಾಗಿತ್ತು. ಸ್ತಿçà ವೇಷಕ್ಕೆ ಕೊರತೆ ಇದ್ದದ್ದರಿಂದ ಮೋಹಿನಿ ಪಾತ್ರವನ್ನು ನಾನು ಮಾಡಬೇಕು ಎಂದು ಚಿಕ್ಕಪ್ಪ ಹೇಳಿದ್ದರು. ಮೊದಲಿಗೆ ಈ ಪಾತ್ರ ಮಾಡುವುದರಿಂದ ತಪ್ಪಿಸಿಕೊಳ್ಳಲು, ಹೊಟ್ಟೆನೋವು ತಲೆ ನೋವು ಎಂಬ ಕಾರಣ ನೀಡುತ್ತಿದ್ದೆ. ಆದ್ರೆ ಯಾವಾಗಲೂ ಹಾಗೆ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅನಿವಾರ್ಯವಾಗಿ ಪಾತ್ರಕ್ಕೆ ಒಪ್ಪಿಕೊಳ್ಳಬೇಕಾಯಿತು 

ಪ್ರ: ಸ್ತಿçà ವೇಷ ಮಾಡಿದವರಿಗೆ ಪುರುಷ ವೇಷ ನಿಭಾಯಿಸುವುದು ಒಬ್ಬ ಕಲಾವಿದನಿಗೆ ಸವಾಲಿನ ಕೆಲಸ ಎಂದು ಕೆಲವರು ಹೇಳ್ತಾರೆ ಇದನ್ನು ನೀವು ಹೇಗೆ ನಿಭಾಯಿಸುತ್ತಿದ್ದಿರಿ?

ಸಂ.ಗೋ: ನಾನು ಪುಂಡುವೇಷ ಮಾಡ್ತಾ ಇದ್ದುದರಿಂದ ಅಲ್ಲಿ ಧ್ವನಿಯ ವೇರಿಯೇಷನ್ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಸ್ತಿçà ಪಾತ್ರಗಳಿಗೆ ನಾವು ಧ್ವನಿಯನ್ನು ಅಳವಡಿಸಿಕೊಳ್ಳುವುದಲ್ಲ ಆ ವೇಷ ಮಾಡಿದಾಗ ಅದು ತನ್ನಿಂತಾನೆ ಆ ಪಾತ್ರಕ್ಕೆ ಒಗ್ಗಿಕೊಳ್ಳಬೇಕು. ಆ ಸ್ತಿçÃಯ ಗುಣ ವೇಷ ಮಾಡಿಕೊಂಡಾಗ ತನ್ನಿಂದ ತಾನೇ ಬರುತ್ತಿತ್ತು. ಸೀರೆಯ ಗುಣವು ಏನೋ ಗೊತ್ತಿಲ್ಲ ಕಲಾವಿದನಾದವನು ಪೂರ್ಣ ಪ್ರಮಾಣದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಾಗ ತನಗರಿವಿಲ್ಲದಂತೆ ಸ್ವರಗಳು ಮತ್ತು ನಡೆ-ನುಡಿ ಲಾಲಿತ್ಯಗಳೆಲ್ಲ ಪಾತ್ರಕ್ಕೆ ಅನುಗುಣವಾಗಿ ಹೊಂದಿಕೊAಡು ಬರುತ್ತದೆ. 

ಪ್ರ: ಪೌರಾಣಿಕ ಪಾತ್ರಗಳಷ್ಟೇ ಅಲ್ಲದೆ ಕಾಲ್ಪನಿಕ ಪ್ರಸಂಗಗಳಲ್ಲೂ ನೀವು ಸಾಕಷ್ಟು ಹೆಸರು ಮಾಡಿದ್ದೀರಿ ಪೌರಾಣಿಕ ಹಾಗೂ ಕಾಲ್ಪನಿಕ ಪಾತ್ರಗಳ ಸಿದ್ಧತೆಗೆ ನಿಮ್ಮ ತಯಾರಿಗಳು ಹೇಗಿತ್ತು? 

ಸಂ.ಗೋ: ಕಾಲ್ಪನಿಕ ಪಾತ್ರಗಳಿಗೆ ನಾಟಕವಾದಂತಹ ಅಭ್ಯಾಸಗಳು ಬೇಕಾಗುತ್ತೆ. ನಾಟಕೀಯತೆ ಅನ್ನೋದು ತನ್ನಿಂದ ತಾನಾಗಿ ಬರುವಂತದ್ದು. ಪೌರಾಣಿಕ ಪಾತ್ರಗಳಿಗೆ ಇತಿಮಿತಿ, ಹಿರಿಯರು ಹಾಕಿದಂತಹ ದಾರಿ ಇದೆ. ಮಾತನಾಡುವುದಕ್ಕೂ, ಅಭಿನಯಕ್ಕೂ, ರಸಭಾವ ವ್ಯತ್ಯಾಸಕ್ಕೂ ಒಂದು ದಾರಿ ಇದೆ. ಕಾಲ್ಪನಿಕ ಪಾತ್ರಗಳನ್ನು ಹೇಗೆ ಅಭಿವ್ಯಕ್ತಿಗೊಳಿಸಬಹುದು ಎಂಬ ಚಿಂತನೆ ಪಾತ್ರಧಾರಿ ನಡೆಸಬೇಕಾಗುತ್ತದೆ. ನಾನು ಕರ್ನಾಟಕ ಮೇಳದಲ್ಲಿದ್ದಾಗ ಕಚ್ಚೂರ ಮಾಲ್ದಿ ಪ್ರಸಂಗದ


ಮಾಲ್ದಿಯ ಪಾತ್ರ, ಕಾಡಮಲ್ಲಿಗೆಯ ಪಾತ್ರ, ಡಾಕ್ಟರ್ ಚಂದ್ರ ಶೇಖರ್ ಶೆಟ್ಟಿಯವರ ಸ್ತಿçà ಪಾತ್ರವೇ ಪ್ರಧಾನವಾಗಿರುವಂತಹ ಹಲವು ಪ್ರಸಂಗಗಳಲ್ಲಿ ಪ್ರಸಂಗಗಳಲ್ಲಿ ಅಭಿನಯಿಸಿದ್ದೇನೆ. ಗರತಿ ಗಂಗಾ, ನೀಲಾಂಬರಿ, ದುರ್ಗದ ಸಿರಿ ಬಾಲೆ ಇಂತಹಾ ಆಧುನಿಕ ಪಾತ್ರಗಳನ್ನು ಕವಿ ಬರೆದಂತಹ ಆಶಯಕ್ಕೆ ಸರಿಯಾಗಿ ಪ್ರಸ್ತುತ ಪಡಿಸಬೇಕಾಗುತ್ತದೆ. ದಿನದಿಂದ ದಿನಕ್ಕೆ ಯಾವ ರೀತಿ ಚೆನ್ನಾಗಿ ಅಭಿನಯಿಸಬೇಕು ಎಂಬುದನ್ನು ಚಿಂತನೆ ಮಾಡಬೇಕಾಗುತ್ತದೆ ಕಾಲ್ಪನಿಕ ಪ್ರಸಂಗಗಳಲ್ಲಿ ಸೃಜನಶೀಲತೆಯನ್ನು ತೋರಿಸಲು ಸಾಧ್ಯವಾಗುತ್ತದೆ.

ಪ್ರ: ಕಲಾವಿದನಿಗೆ ಹೆಚ್ಚು ಸ್ವಾತಂತ್ರ‍್ಯ ಅನ್ನುವಂಥದ್ದು ಕಾಲ್ಪನಿಕ ಪ್ರಸಂಗಗಳಲ್ಲಿಯೇ? ಪೌರಾಣಿಕ ಪ್ರಸಂಗಗಳಲ್ಲಿಯೇ?

ಸA.ಗೋ: ಕಲಾವಿದ ಹೆಚ್ಚು ಇಷ್ಟಪಡುವಂತದ್ದು ಪೌರಾಣಿಕ ಪಾತ್ರಗಳೇ. ಆಧುನಿಕ ಪಾತ್ರಗಳಲ್ಲಿ ಎಷ್ಟೇ ವಿಜೃಂಭಿಸಿದರೂ ಜನ ಮಾನಸದಲ್ಲಿ ಅದುಳಿಯುವುದು ಒಂದು ವರ್ಷ ಮಾತ್ರ. ಮುಂದಿನ ವರ್ಷಕ್ಕೆ ಅದು ಮರೆತು ಹೋಗುತ್ತದೆ. ಆದರೆ ಪೌರಾಣಿಕ ಪ್ರಸಂಗದ ಪಾತ್ರಗಳು ಎಷ್ಟೇ ಸಮಯವಾದರೂ ಹಚ್ಚಹಸುರಾಗಿ ಉಳಿಯುವಂತದ್ದು. ಅದಕ್ಕೆ ಕಾರಣ ಪೌರಾಣಿಕ ಪಾತ್ರಗಳನ್ನು ಪ್ರತಿಪಾದಿಸಿದ ಹಿರಿಯ ಕಲಾವಿದರು. ಪ್ರತಿ ಪಾತ್ರಕ್ಕೆ ದೇಣಿಗೆಯನ್ನು ಕೊಟ್ಟು ರಂಗದಲ್ಲಿ ಚಿರಸ್ಥಾಯಿಯಾಗಿ ಉಳಿಸಿ ಹೋಗಿದ್ದಾರೆ. ಪೌರಾಣಿಕ ಪಾತ್ರಗಳನ್ನು ಹಿರಿಯ ಕಲಾವಿದರು ಮಾಡುತ್ತಿದ್ದ ರೀತಿಯೊಂದಿಗೆ ಹೋಲಿಕೆ ಮಾಡುತ್ತಾರೆ. ಕೋಳ್ಯೂರು ರವರ ಪಾತ್ರ ಈ ರೀತಿಯಾಗಿರುತ್ತಿತ್ತು. ಅದು ಹೀಗಾಗಬೇಕಿತ್ತು, ಎಂಕೆ ರಮೇಶ್ ಆಚಾರ್ ಹೀಗೆ ಮಾಡುತ್ತಿದ್ದರು ಎಂಬುದಾಗಿ ತುಲನೆ ಮಾಡುತ್ತಾರೆ. ಚೆನ್ನಾಗಿ ಆಗಿದೆ ಹೋದಾಗ ಅದನ್ನು ಜನ ಹೇಳುತ್ತಾರೆ.

ಒಂದೊಮ್ಮೆ ಕಲಾ ರಂಗದ ವತಿಯಿಂದ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ನಡೆಯಿತು. ಆವತ್ತು ದ್ರೌಪದಿ ಪಾತ್ರ ನನ್ನದೇ. ಈ ಪಾತ್ರದಲ್ಲಿ ಸಿದ್ಧಿ ಪ್ರಸಿದ್ಧಿಯನ್ನು ಪಡೆದಂತಹ ಕಲಾವಿದರು ನನ್ನ ಗುರುಗಳು ರಾಮಚಂದ್ರರಾಯರು. ಮುಂಭಾಗದಲ್ಲೇ ಕುಳಿತು ನನ್ನ ಪಾತ್ರ ನಿರ್ವಹಣೆಯನ್ನು ವೀಕ್ಷಿಸುತ್ತಿದ್ದರು. ಆ ಪಾತ್ರ ಮುಗಿದ ಮೇಲೆ ಚೌಕಿಗೆ ಬಂದು ಬೆನ್ನು ತಟ್ಟಿ ನನ್ನನು ಪ್ರೋತ್ಸಾಹಿಸಿದರು. ನಾನು ಕೇಳಿದೆ ಗುರುಗಳೇ ನನ್ನಿಂದ ಏನಾದರೂ ತಪ್ಪಾಗಿದೆಯಾ ಇಂದು ಇಲ್ಲ ಮಗ ಒಳ್ಳೇದಾಗಿದೆ ಎಂದು ಹೇಳಿದರು. ಅವರ ಜೊತೆಯೇ ಕುಳಿತು ಈ ಪ್ರಸಂಗ ವೀಕ್ಷಿಸಿದ್ದ ಹಿರಿಯ ಸಾಹಿತಿಗಳಾದ ಅಂಬಾತನಯ ಮುದ್ರಾಡಿಯವರು ಕೋಳ್ಯೂರ್ ರವರಲ್ಲಿ ಹೇಳಿದ್ದರಂತೆ "ಕೋಳ್ಯೂರರೇ ಇನ್ನು ನೀವು ದ್ರೌಪದಿ ಮಾಡುವುದು ಸಾಕು ನಿಲ್ಲಿಸಿ. ನಿಮ್ಮ ಪರ್ಯಾಯವಾಗಿ ಒಂದು ಜನ ತಯಾರಾಗಿದೆ" ಎಂದು. ಅದು ನನಗೆ ಒಂದು ಹೆಮ್ಮೆಯ ವಿಚಾರ. ಇನ್ನು ನಾನು ಅಭಿಮಾನದಿಂದ ಹೇಳುವ ನನ್ನ ಸ್ತ್ರೀ ಪಾತ್ರದ ಗುರುಗಳು ಎಂಕೆ ರಮೇಶ್ ಆಚಾರ್. ಅವರಿಗೆ ಹೆಚ್ಚಾಗಿ ಕರೆ ಮಾಡಿ ನಾನು ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಾ ಇರುತ್ತೇನೆ ಅವರ ತಾಳ್ಮೆ ಮೆಚ್ಚುವಂಥದ್ದು. ಎಂತಹ ಸಂದರ್ಭದಲ್ಲೂ ಅವರು ಪಾತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಪದ್ಯ ಮತ್ತು ಅರ್ಥವನ್ನು ಪೂರ್ಣವಾಗಿ ತಿಳಿಸುತ್ತಾರೆ. ಸಹ ಕಲಾವಿದರಿಗೆ ಕಿರಿಯರಿಗೆ ಜ್ಞಾನವನ್ನು ತಿಳಿಸಕೊಡುವ ವಿಶೇಷ ಕೌಶಲ್ಯ ಅವರಿಸಿ ಸಿದ್ಧಿಸಿದೆ. ಎಂಕೆ ರಮೇಶರು ಪಾತ್ರವನ್ನು ಜನರಿಗೆ ಮುಟ್ಟುವ ರೀತಿಯಲ್ಲಿ ಅಭಿನಯಿಸ್ತಾ ಇದ್ರು ಅಲ್ಲದೆ

 ಹೇಳಿಕೊಡುವುದರಲ್ಲೂ ಸಿದ್ಧ ಹಸ್ತರು ಕಲಾವಿದ ಚೆನ್ನಾಗಿ ಅಭಿನಯಿಸಿದ್ರೆ ಅದನ್ನು ಒಳ್ಳೆಯದಾಗಿದೆ ಎಂದು ಹೇಳುವ ಮನಸ್ಥಿತಿ ಅವರದ್ದು. 'ಅವ ಒಳ್ಳೆಯದಾದರೆ ನನಗೆಲ್ಲಿ ನಷ್ಟ, ಎಂದು ಭಾವಿಸುವ ವರ್ಗ ಅವರಲ್ಲ'. 

ಪ್ರ: ಹಿಂದಿನ ಹಾಗೂ ಇಂದಿನ ಕಾಲ್ಪನಿಕ ಪ್ರಸಂಗಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗಿವೆ? ಕಥೆಗಳ ಮೌಲ್ಯ ಕಡಿಮೆ ಆಗಿದೆಯಾ ಅಥವ ಜನರ ಅಭಿರುಚಿ ಬದಲಾಗಿದೆಯಾ?

ಸಂ.ಗೋ: ಕಾಲ್ಪನಿಕ ಪ್ರಸಂಗಗಳಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿನ ಕಾಲ್ಪನಿಕ ಪ್ರಸಂಗಗಳಲ್ಲಿ ಒಂದು ಮೋರಲ್ ಇರುತ್ತಿತ್ತು. ಪ್ರಸಂಗಕರ್ತರು ಕೇವಲ ರಂಜನೆಗಾಗಿಯೇ ಪ್ರಸಂಗಗಳನ್ನು ಬರೆಯುತ್ತಿದ್ದಲ್ಲ ಕೊನೆಗೆ ಸಂದೇಶ ನೀಡುತ್ತಿದ್ದರು. ಅದಲ್ಲದೆ ಐತಿಹಾಸಿಕ ಪ್ರಸಂಗಗಳನ್ನು ಆಡುತ್ತಿದ್ದೆವು ಕೋಟಿ ಚೆನ್ನಯ್ಯ, ಕಾಂತಬಾರೆ-ಬೂದಬಾರೆ, ದೇವಪುಂಜ ಪ್ರತಾಪ, ತುಳುನಾಡ ಸಿರಿ, ಇವೆಲ್ಲ ಐತಿಹಾಸಿಕ ಪ್ರಸಂಗಗಳು. ಅದಕ್ಕೆ ಅದರದೇ ಆದ ಚೌಕಟ್ಟಿತ್ತು ಕಾಲ್ಪನಿಕ ಪ್ರಸಂಗಗಳಲ್ಲೂ ಒಂದು ಸಂದೇಶದ ಎಳೆಯನ್ನು ಹಿಡಿದು ಅದನ್ನು ಬೆಳೆಸಿ ಜನ ಮಾನಸದಲ್ಲಿ ಉಳಿಯುವಂತೆ ಮಾಡುತ್ತಿದ್ದರು. ಈಗ ಜನಗಳ ಅಭಿರುಚಿ ಬದಲಾಗಲು ಸಿನಿಮಾದ ಪ್ರಭಾವವು ಇದೆ. ಸಿನಿಮಾದ ಕಥೆಗಳು ಪ್ರಸಂಗಗಳಾಗಿ ಬಂದವು. ಪ್ರಸಂಗಕರ್ತರು ಜನರ ಅಭಿರುಚಿಗೆ ಸರಿಯಾಗಿ ಪ್ರಸಂಗ ಬರೆಯುತ್ತಾರೆ. ಪ್ರಸಂಗಕರ್ತರು ಬರೆದ ಕಥೆಗೆ ಸರಿಯಾಗಿ ಕಲಾವಿದ ತೊಡಗಿಸಿಕೊಳ್ಳಬೇಕಾಗುತ್ತದೆ. ಕಲಾವಿದನಿಗೆ ಬೇರೆ ದಾರಿ ಇಲ್ಲ. ಆಗಿನ ಹಾಗೂ ಈಗಿನ ವ್ಯತ್ಯಾಸಕ್ಕೆ ಪ್ರೇಕ್ಷಕನೇ ಕಾರಣ

ಪ್ರ: ಪ್ರಸಂಗದಲ್ಲಿ ಹಿಡಿತ ಅನುಭವ ಪಾಂಡಿತ್ಯ ಇರುವವರು ಇದ್ದಾರೆ, ಯಕ್ಷಗಾನದ ಒಳ ಹೊರಗೆ ಬಲ್ಲವರಿದ್ದಾರೆ, ಎಲ್ಲ ವಿಭಾಗಗಳಲ್ಲಿ ನುರಿತವರಿದ್ದಾರೆ. ಇಂತಹವರು ಪ್ರಸಂಗ ಬರೆಯಲು ಮನಸು ಮಾಡುವುದಿಲ್ಲ ಯಾಕೆ?  

ಸಂ.ಗೋ: ಸಣ್ಣ ಸಣ್ಣ ಕ್ಷÄಲ್ಲಕ ಕಥೆಗಳನ್ನು ಹಿಡಿದು ಪ್ರಸಂಗ ಬರೆಯಲು ಅನುಭವಿ ಪ್ರಸಂಗಕರ್ತರಿಗೆ ಮನಸಾಗುವುದಿಲ್ಲ  ಸ್ಟ್ಯಾಂಡರ್ಡ್ ಪ್ರಸಂಗ ಬರೆಯುವ ಪ್ರಸಂಗಕರ್ತನಿಗೆ ಜನಮನ್ನಣೆ ಗಳಿಸಬೇಕು ಅಥವಾ ಆರ್ಥಿಕ ಕಾರಣಕ್ಕೋಸ್ಕರ ಚಿಕ್ಕ ಕಥೆಯನ್ನು ಬರೆಯುವ ಆಸಕ್ತಿ ಇರುವುದಿಲ್ಲ ಅವರು ಒಳ್ಳೆ ರೀತಿಯ ಪ್ರಸಂಗಗಳನ್ನು ಕೊಡುವ ಆಲೋಚನೆ ಇರುವವರು ಈ ರೀತಿಯ ತೊಡಕು ಬಂದಾಗ ಅವರಿಗೆ ಇಂತಹ ಪ್ರಸಂಗಗಳನ್ನು ಬರೆಯುವುದು ಬೇಡ ಎಂದೆನಿಸುತ್ತದೆ '

ಪ್ರ: ಯಕ್ಷಗಾನದಲ್ಲಿ ಸಾಕಷ್ಟು ಪಲ್ಲಟಗಳಾಗಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಸಾಹಿತ್ಯ ಸಮ್ಮೇಳನ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಬಹುದು ಒಬ್ಬ ಪ್ರೇಕ್ಷಕರಾಗಿ ನೀವು ಅದನ್ನ ಯಾವ ರೀತಿ ಅವಲೋಕನ ಮಾಡುತ್ತೀರಿ?  

ಸಂ.ಗೋ: ಸಮ್ಮೇಳನ ನಡೆದಿರುವುದು ಬಹಳ ಸಂತೋಷದ ವಿಷಯ. ಇದಕ್ಕಿಂತ ಮೊದಲೇ ಈ ಕಾರ್ಯಕ್ರಮ ನಡೆಯಬೇಕಿತ್ತು. ನಮ್ಮ ನಾಡಿನ ಹೆಮ್ಮೆಯ ಕಲೆ ಇದು. ಇದನ್ನು ರಾಜ್ಯದ ಕಲೆಯಾಗಿ ಗುರುತಿಸಬೇಕೆನ್ನುವುದೇ ಹಲವರ ಒಕ್ಕೊರಲ ಅಭಿಪ್ರಾಯ. ಕಲಾವಿದನಾದವನಿಗೆ ಇದು ಒಂದು ಅಭಿಮಾನ ಅಥವಾ ಸಂತೋಷಪಡುವ ವಿಚಾರ. ಸಂಸ್ಕೃತಿ ಇಲಾಖೆಯ ಸಚಿವರು ನಮ್ಮವರೇ ಆದಂತಹ ಸುನಿಲ್ ಕುಮಾರ್ ರವರು ಮುಂದಾಳತ್ವ ವಹಿಸಿದ್ದು ಸಂತೋಷದ ವಿಚಾರ.


ಬಹಳ ಪ್ರೀತಿಯಿಂದ ಇದು ಆಗಲೇಬೇಕು ಎನ್ನುವ ಹಠ ತೊಟ್ಟು ಅವರು ಇದನ್ನು ನಡೆಸಿದ್ದಾರೆ. ಈ ಸಮ್ಮೇಳನದಲ್ಲಿ ಎಳೆಯರು ಮುದುಕರು ಎಲ್ಲ ಕಲಾವಿದರು ಭಾಗವಹಿಸಲು ಸಾಧ್ಯವಾಯಿತು. 

ಪ್ರ: ಯಕ್ಷಗಾನ ರಂಗಸ್ಥಳದಲ್ಲಿ ಪ್ರಸ್ತುತ ಪಡಿಸಲು ಹಿತಮಿತವಾದ ಜ್ಞಾನ ಸಾಕಾಗುತ್ತದೆ. ಪದ್ಯಕ್ಕೆ ತಕ್ಕಷ್ಟು ಅರ್ಥ ಹೇಳಿದರೆ ಸಾಕು. ತಾಳಮದ್ದಳೆ ಪ್ರೊಲಾಂಗ್ ಆಗಿ ನಡೆಯುವ ಪ್ರೊಸೆಸ್. ಈ ವಿಭಾಗದಲ್ಲಿ ನಿಮ್ಮ ಸಿದ್ಧತೆಗಳು ಮತ್ತು ಅನುಭವಗಳ ಬಗ್ಗೆ ಹೇಳಿ 

ಸಂ.ಗೋ: ಯಕ್ಷಗಾನದಲ್ಲಾದರೆ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ರೂಪದಲ್ಲಿ, ನಾಟ್ಯದಲ್ಲಿ, ಅಭಿನಯದಲ್ಲಿ, ಮಾತಿನಲ್ಲಿ, ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಳ್ಳಬಹುದು. ತಾಳಮದ್ದಳೆಯಲ್ಲಿ ತನ್ನ ಜ್ಞಾನಶಕ್ತಿಯಿಂದಲೇ ಅವನು ವಿಜೃಂಭಿಸಬೇಕು. ಅಲ್ಲಿ ಮಾತುಗಾರಿಕೆ ಪ್ರಧಾನವಾಗಿರುವಂಥದ್ದು. ನಿರಂತರ ಅಧ್ಯಯನ ತಾಳಮದ್ದಳೆ ಕ್ಷೇತ್ರಕ್ಕೆ ಬೇಕಾಗುತ್ತದೆ ತಾಳಮದ್ದಳೆ ಕ್ಷೇತ್ರದಲ್ಲಿ ಸಿದ್ಧಿ ಪ್ರಸಿದ್ಧಿಯನ್ನು ಪಡೆಯಬೇಕಾದರೆ ಸಾಧಾರಣವಾದಂತಹ ಜ್ಞಾನ ಭಂಡಾರ ಸಾಕಾಗುವುದಿಲ್ಲ. ವಿಶೇಷವಾದಂತಹ ಅನುಭವ ಬೇಕು. ವಿದ್ವಾಂಸರು, ಒಳ್ಳೆ ಮಾತುಗಾರರ ಮಾತುಗಳನ್ನು ಕೇಳಿಯೂ ಅನುಭವ ಪಡೆದುಕೊಳ್ಳಲು ಸಾಧ್ಯ. ಪರಿಶ್ರಮವು ಬೇಕು. 

ಪ್ರ: ಒಬ್ಬ ಕಲಾವಿದರಾಗಿ ನೀವು ಜನಮಾನಸದಲ್ಲಿ ಉಳಿದಿದ್ದೀರಿ ಯಕ್ಷಗಾನದಲ್ಲಿ ವಿಶೇಷವಾಗಿ ಏನಾದರೂ ಕೆಲಸಗಳನ್ನು ಮಾಡಬೇಕು ಎನ್ನುವಂತಹ ಯೋಚನೆಗಳು ಇದೆಯಾ? 

ಸಂ.ಗೋ: ಯಕ್ಷಗಾನದಲ್ಲಿ ೪೮ ವರ್ಷದ ತಿರುಗಾಟ ನಡೆಸಿದ್ದೇನೆ. ವಿಶೇಷವಾದದ್ದು ಏನು ಮಾಡುವುದೆಂದು ಗೊತ್ತಿಲ್ಲ. ಆದರೆ ಯಾರಾದರೂ ಕಲಾವಿದರು ಮಾತುಗಾರಿಕೆ, ಅಭಿನಯ, ಒಂದು ಪಾತ್ರವನ್ನು ಯಾವ ರೀತಿ ಪ್ರಸ್ತುತಪಡಿಸುವುದು ಇವುಗಳ ಬಗ್ಗೆ ಬಂದು ಕೇಳಿದರೆ ಅವರಿಗೆ ಮಾರ್ಗದರ್ಶನ ಮಾಡಬಲ್ಲೆ. ಈಗಿನ ಕೆಲ ಕಲಾವಿದರಲ್ಲಿ ಆಭರಣ ಹಾಗೂ ವೇಷಭೂಷಣ ಧರಿಸುವ ಔಚಿತ್ಯದ ಕೊರತೆ ಇದೆ. ನನಗೆ ಇದರ ಅನುಭವ ಆಗಿದೆ. ಒಂದು ಸಲ ನನ್ನ ಜೊತೆ ವೇಷ ಮಾಡುವ ಕಲಾವಿದ ಪಾತ್ರಕ್ಕೆ ಮೀರಿದ ಒಳ್ಳೆ ಸೀರೆ ಉಡುತ್ತೇನೆ ಎಂದು ಹೇಳಿದಾಗ ಅದು ಬೇಡ ಆ ಪಾತ್ರಕ್ಕೆ ಆ

ರೀತಿಯ ಸೀರೆ ಸರಿಯಾಗುವುದಿಲ್ಲ ಎಂದು ಹೇಳಲು ದಾಕ್ಷಿಣ್ಯಕ್ಕೆ ಒಳಗಾಗಿದ್ದೆ. ಬೇಡ ಎಂದು ಹೇಳಿದರೆ ಅವನ ಮನಸ್ಸಿಗೆ ಬೇಸರವಾಗುತ್ತದೆ. ಸಖಿ ಪಾತ್ರಕ್ಕೆ ವಿಶೇಷವಾದ ಅಲಂಕಾರ ಉಡುಗೆಗಳು ಸರಿಯಾಗದು. ಶ್ರೀನಿವಾಸ ಕಲ್ಯಾಣದಲ್ಲಿ ಪದ್ಮಾವತಿಯ ಸಖಿ ವಿಶೇಷವಾಗಿ ವೇಷ ಮಾಡಿಕೊಂಡು ಬಂದರೆ ಅಲ್ಲಿ ಪದ್ಮಾವತಿ ಯಾರು ಎಂಬುದನ್ನು ಗುರುತಿಸಲು ಕಷ್ಟವಾಗುತ್ತದೆ. ಇನ್ನು ಚೂಡಾಮಣಿ ಪ್ರಸಂಗದ ಸೀತೆಯ ಪಾತ್ರ, ತಿಳಿದವರೂ ಈ ತಪ್ಪು ಮಾಡುತ್ತಾರೆ. ಅಶೋಕ ವನದಲ್ಲಿರುವ ಸೀತೆ ತಲೆ ಕೆದರಿ ಕುಳಿತುಕೊಳ್ಳಬೇಕು ಸಾಮಾನ್ಯ ಸ್ತ್ರೀಯಾಗಿ ಮಾಂಗಲ್ಯ ಮತ್ತೆ ಬೆಂಡೋಲೆ ಮಾತ್ರ ಧರಿಸಿರಬೇಕು. ಕೆಲವರು ಮುಂದಲೆಯನ್ನು ಧರಿಸಿಕೊಂಡು ಬಂಗಾರದ ಬಳೆಗಳನ್ನು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಇದು ಪಾತ್ರ ಪೋಷಣೆಗೆ ಅಷ್ಟು ಸೂಕ್ತ ಎಂದಿನಿಸುವುದಿಲ್ಲ. ರಾವಣ ಸೀರೆಯನ್ನು ಕದ್ದುಕೊಂಡು ಹೋಗುವಾಗ ಅನಸೂಯಾ ದೇವಿ ಕೊಟ್ಟಿರುವಂತಹ ಒಡವೆಗಳನ್ನು ಅವಳು ಬೇಡ ಎಂದವ:ಉ ಅಲ್ಲೇ ಬಿಸಾಡಿ ಹೋಗುತ್ತಾಳೆ. ಅವಳು ಉಳಿಸಿಕೊಂಡಿದ್ದು ಚೂಡಾಮಣಿಯನ್ನು ಮಾತ್ರ. ಅದು ಕಣ್ಣಿಗೆ ಕಾಣುವಂತೆ ಇರುವುದಿಲ್ಲ. ಅದನ್ನು ಸೀತೆ ಶಿರದಲ್ಲಿ ಇರಿಸಿಕೊಂಡಿರುತ್ತಾಳೆ. ಪಾತ್ರದ ಲೆಕ್ಕದಲ್ಲಿ ಇದನ್ನು ಕಲಾವಿದರು ಗಮನಿಸಬೇಕು. 


Interview- Yalaberu Shekhara Shetty - Badagu Yakshagana Comedy artist


ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿರುವ ಎಳಬೇರು ಶೇಖರ ಶೆಟ್ಟಿಯವರು ೩೬ ವರ್ಷಗಳ ತಿರುಗಾಟದ ಅನುಭವವನ್ನು ಹೊಂದಿದ್ದಾರೆ. ಇವರು ಬಾಲ್ಯದಲ್ಲಿ ಶಾಲೆ ಕಲಿಯಲು ತಮ್ಮೂರಾದ ಎಳಬೇರಿನಿಂದ ಕಮಲಶಿಲೆಗೆ ಬರಬೇಕಿತ್ತು. ಆ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಮಹಾಬಲ ದೇವಾಡಿಗರ ಮನೆಯಲ್ಲಿ ಯಕ್ಷಗಾನವನ್ನು ಮಕ್ಕಳಿಗೆ ಹೇಳಿಕೊಡುವ ಚಟುವಟಿಕೆ ನಡೆಯುತ್ತಿತ್ತು. ದಿನವೂ ಅದೇ ದಾರಿಯಲ್ಲಿ ಶಾಲೆಗೆ ಹೋಗುವಾಗ ಅದನ್ನು ನೋಡುತ್ತಿದ್ದ ಶೇಖರ ಶೆಟ್ಟಿಯವರಿಗೆ ಯಕ್ಷಗಾನದ ಬಗ್ಗೆ ಒಲವು ಮೂಡಿತು. ಅಲ್ಲದೆ ದೇವಾಡಿಗರ ತಮ್ಮ ಆನಂದ ದೇವಾಡಿಗ ಹಾಗೂ ಗೋಳಿಕೆರೆ ಚಂದ್ರಗೌಡರೂ ಇವರು ಯಕ್ಷಗಾನಕ್ಕೆ ಸೇರಲು ಪ್ರೇರಣೆಯಾದರು. ಕೆಲಕಾಲ ಅವರೊಂದಿಗೆ ನವರಾತ್ರಿ ಸಮಯದಲ್ಲಿ ಹೂವಿನ ಕೋಲು ತಿರುಗಾಟಕ್ಕೆ ಹೋಗುತ್ತಿದ್ದರು, ನಂತರ ಯಕ್ಷಗಾನ ಕಲಿಯುವುದಕ್ಕೆ ಮುಂದಾಗುತ್ತಾರೆ. ಮೊದಲಿಗೆ ಯಕ್ಷಗಾನ ಭೀಷ್ಮರೆಂದೆನಿಸಿಕೊAಡಿದ್ದ ಮೂಡಲಕಟ್ಟೆ ಮುತ್ತಯ್ಯ ಹೆಗಡೆಯವರು ನಡೆಸುತ್ತಿದ್ದ ಮಾರಣಕಟ್ಟೆ ಮೇಳಕ್ಕೆ ಇವರ ಸೇರ್ಪಡೆಯಾಗುತ್ತದೆ. ಆರಂಭದಲ್ಲಿ ಕೋಡಂಗಿ ವೇಷ ಮಾಡುತ್ತಾ, ನಂತರ ಬಾಲಗೋಪಾಲ, ಸ್ತ್ರೀವೇಷ ನಂತರ ಮುಂಡಸು ವೇಷಧಾರಿಯಾಗಿ ಭಡ್ತಿ ಪಡೆಯುತ್ತಾರೆ. ನಂತರ ಹಾಸ್ಯ ಕಲಾವಿದರಾಗಿ ಗುರುತಿಸಿಕೊಳ್ಳುತ್ತಾರೆ. 

ಪ್ರ: ಹಾಸ್ಯ ಪಾತ್ರಗಳಲ್ಲಿ ನೀವು ಗುರುತಿಸಿಕೊಳ್ಳುವಂತಾದದ್ದು ಹೇಗೆ?

ಶೇ.ಶೆ: ನಾನು ಹಾಸ್ಯ ಪಾತ್ರಗಳಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದ್ದು ಒಂದು ಪ್ರಸಂಗ - ಮಾರಣಕಟ್ಟೆ ಮೇಳದಲ್ಲಿ ಆಗ ಹೊಸ ಪ್ರಸಂಗಗಳನ್ನು ಆಡುತ್ತಿದ್ದರು. ಸೀತಾನದಿ ಗಣಪಯ್ಯ ಶೆಟ್ರು ಬರೆದಂತಹ ಜಲಕನ್ಯೆ ಎಂಬ ಪ್ರಸಂಗದಲ್ಲಿ ಖಳನಾಯಕನ ಜೊತೆ ಜೋಡಿಯಾಗಿ ಹೋಗುವ ಒಂದು 

ಹಾಸ್ಯ ಪಾತ್ರವಿತ್ತು. ಆ ಪಾತ್ರವನ್ನು ನಮ್ಮ ಗುರುಗಳಾದ ಮಹಾಬಲ ದೇವಾಡಿಗರು ನಿರ್ವಹಿಸುತ್ತಿದ್ದರು. ಅದಕ್ಕೆ ಎದುರಾಳಿಯಾಗಿ ಪ್ರೇಮಿಸುವ ಸ್ತ್ರೀ ಪಾತ್ರವೊಂದಿದೆ.


ಆ ಸ್ತಿçà ವೇಷದ ಜೊತೆಯಲ್ಲಿ ವ್ಯಂಗ್ಯ ಸಖಿಯಾಗಿ ನಾನು ವೇಷ ಮಾಡುತ್ತಿದ್ದೆ ಗುರುಗಳ ಹಾಸ್ಯಕ್ಕೂ ವ್ಯಂಗ್ಯಸಖಿಗೂ ಒಂದು ಸಂಬAಧವಿತ್ತು. ಈ ಹಾಸ್ಯದ ಸನ್ನಿವೇಶ ಆ ಕಾಲಕ್ಕೆ ಜನರಿಗೆ ಬಹಳ ಇಷ್ಟವಾಯಿತು. ೨೫ ವರ್ಷದ ಹಿಂದಿನ ಕಥೆ ಇದು. ಜನ ಅದಕ್ಕೆ ತುಂಬಾ ಪ್ರೋತ್ಸಾಹ ನೀಡಿದರು. ಅಲ್ಲಿಂದ ಹಾಸ್ಯಗಾರನಾಗಿ ನನ್ನ ಪ್ರಯಾಣ ಶುರುವಾಯಿತು. ಅದಾದ ಮೇಲೆ ಸಣ್ಣಪುಟ್ಟ ಹಾಸ್ಯ ಪಾತ್ರಗಳನ್ನು ನೀಡುವುದಕ್ಕೆ ಶುರುಮಾಡಿದರು. ರತಿ ಕಲ್ಯಾಣದ ದೂತ, ಕೌಂಡ್ಲಿಕನ ದೂತ, ಹೀಗೆ ನಾನು ಮಾಡುತ್ತಿದ್ದ ಪಾತ್ರಗಳನ್ನು ಮೇಳದ ಭಾಗವತರಾಗಿದ್ದ ಮರಿಯಪ್ಪಾಚಾರ್ ಒಪ್ಪಿಕೊಳ್ಳುತ್ತಿದ್ದರು. ಆಗ ಭಾಗವತರು ಹೇಳಿದರೆಂದರೆ ಮುಗಿಯಿತು. ಇತರ 

ಕಲಾವಿದರೂ ಅದನ್ನು ಒಪ್ಪಿಕೊಳ್ಳುತ್ತಿದ್ದರು. ನಂತರ ಎಲ್ಲರೂ ಪ್ರೋತ್ಸಾಹಿಸಲು ಪ್ರಾರಂಭಿಸಿದರು ನೀಲಾವರ ಮಹಾಬಲ ಶೆಟ್ರು, ಮೊಳವಳ್ಳಿ ಹಿರಿಯ ನಾಯಕರು, ಐರಬೈಲ್ ಆನಂದ ಶೆಟ್ರು, ಅನಂತಕುಲಾಲ್ ರಾವ್, ಆಲೂರು ಸುರೇಂದ್ರ, ಮೊದಲಾದವರು ನನ್ನ ಪಾತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಪ್ರ: ನಿಮ್ಮ ಹಾಸ್ಯದ ಪಾತ್ರಕ್ಕೆ ಪ್ರೇರಣೆ ಯಾರು? 

ಶೇ.ಶೆ: ಪ್ರೇರಣೆ ಅನ್ನುವುದಕ್ಕಿಂತ ನನಗೆ ಸರಿ ಅನಿಸಿದ್ದನ್ನು ನಾನು ರಂಗದಲ್ಲಿ ನೀಡುತ್ತಿದ್ದೆ. ನಾನು ತುಂಬಾ ಯಕ್ಷಗಾನಗಳನ್ನು ನೋಡುತ್ತಿದ್ದೆ. ನಾನು ನಿರ್ವಹಿಸುವ ಪಾತ್ರಗಳು ಯಾವುದೇ ಮೇಳದಲ್ಲಿ ಪ್ರದರ್ಶನವಾಗುತ್ತಿದ್ದರೆ ಎಲ್ಲಿ ಪ್ರಸಂಗ ನಡೆಯುತ್ತದೋ ಅಲ್ಲಿಗೆ ಖುದ್ದು ಹೋಗಿ ನೋಡುತ್ತಿದ್ದೆ. ಯಾವ ಕಲಾವಿದರು ಹೇಗೆ ಪಾತ್ರ ನಿಭಾಯಿಸುತ್ತಾರೆ ಎನ್ನುವುದನ್ನು ಗಮನಿಸುತ್ತಿದ್ದೆ. ನನಗೆ ಯಾವ ವೇಷದ ಬಗ್ಗೆ ಮಾಹಿತಿ ಬೇಕೋ ಅದನ್ನು ಅವರ ಮನೆಗೆ ಹೋಗಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಟೆಂಟ್ ಮೇಳದ ಎಲ್ಲ ಯಕ್ಷಗಾನಗಳನ್ನು ಬಿಡದೆ ನೋಡುತ್ತಿದ್ದೆ. ಒಂದು ಪ್ರಸಂಗದ ನಡೆ ಹೀಗೆಯೇ ಎಂದಿರುತ್ತದೆ. ಆರಂಭದಲ್ಲಿ ಅದನ್ನು ನಾವು ತಿಳಿದುಕೊಂಡರೆ ಪಾತ್ರಕ್ಕೆ ಒಪ್ಪುವ ಸಾಹಿತ್ಯ ಸಂದರ್ಭೋಚಿತ ಮಾತುಗಳನ್ನು ತುಂಬಬಹುದು. ಹೀಗೆ ನಾನು ಪಾತ್ರ ನಿರ್ವಹಣೆ ಮಾಡುತ್ತೇನೆ.  

ಪ್ರ: ಈಗಿನ ಹಾಸ್ಯಗಾರರು, ಜನರ ಮೆಚ್ಚುಗೆ ಪಡೆಯಲು ಯಾವ ಮಟ್ಟಕ್ಕೂ ಇಳಿಯುವುದನ್ನು ಕಾಣುತ್ತೇವೆ. ಹಿಂದೆ ರಂಗದ ಹಾಸ್ಯಕ್ಕೆ ರಾಜ ಹಾಸ್ಯ ಎಂಬ ಶಿಸ್ತು ಇರುತ್ತಿತ್ತು ಈಗ ಸಾಕಷ್ಟು ಬದಲಾವಣೆಗಳಾಗಿವೆ, ಈ ಬದಲಾವಣೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

ಶೇ.ಶೆ: ಬದಲಾವಣೆಗಳು ಬೇಕು. ಹೊಸ ಪ್ರಸಂಗಗಳು ನಡೆಯುವಾಗ ಕಾಲಘಟ್ಟದ ವಿಷಯಗಳನ್ನು ಬಳಸಿಕೊಂಡರೆ ತಪ್ಪಿಲ್ಲ. ಹಾಗೆಂದು ಅದನ್ನೇ ಓಲೈಸಿಕೊಂಡು ಹೋಗುವುದೂ ಸರಿಯಲ್ಲ. ಹೊಸ ಪ್ರಸಂಗದಲ್ಲಿ ಇಂತಹ ವಿಷಯಗಳನ್ನು ಆಕ್ಷೇಪ ಮಾಡುವಂತಿಲ್ಲ. 

ಪ್ರ: ಹಾಸ್ಯ ಪಾತ್ರಧಾರಿಗಳಿಗೆ ಹೆಜ್ಜೆಗಾರಿಕೆ ಮುಖ್ಯವಲ್ಲ. ಹಾಸ್ಯ ಪಾತ್ರ ಏನೇ ಮಾಡಿದರೂ ಹಾಸ್ಯವಾಗುತ್ತದೆ ಎಂದು ಹೇಳುತ್ತಾರೆ. ಹೆಜ್ಜೆಗಳ ಬಗ್ಗೆ ಕಲಿತಿಲ್ಲದಿದ್ದರೂ ಯಕ್ಷಗಾನದಲ್ಲಿ ವೇಷ ಪಾತ್ರ ಮಾಡಬಹುದಾ? ಉದಾಹರಣೆಗೆ ನಾಟಕ ಕಲಾವಿದರು ಯಕ್ಷಗಾನ ರಂಗದಲ್ಲಿ ಕಾಣಿಸಿಕೊಳ್ಳುವುದು. ಈ ಬಗ್ಗೆ ನಿಮಗೆ ಏನೆನಿಸುತ್ತದೆ. 

ಶೇ.ಶೆ: ಅದು ತಪ್ಪು ಕಲ್ಪನೆ. ಹಾಸ್ಯ ವಿಭಾಗದಲ್ಲಿ ಕುಣಿಯುವುದಾದರೆ ತುಂಬ ವೆರೈಟಿ ಉಂಟು. ಅದನ್ನು ತೋರಿಸಿಕೊಟ್ಟ ಕಲಾವಿದರಿದ್ದಾರೆ. ನಮ್ಮ ಸಾಮರ್ಥ್ಯದ ಮೇಲೆ ನಾವು ಕುಣಿಯಬಹುದು. ಯಕ್ಷಗಾನದ ಹಾಸ್ಯದಲ್ಲಿ ಬೇರೆ ಬೇರೆ ರೀತಿಯ ಕುಣಿತಗಳನ್ನು ತೋರಿ ಕೊಟ್ಟವರಿದ್ದಾರೆ. ಟೆಂಟ್ ಮೇಳದಲ್ಲಿ ರಮೇಶ್ ಭಂಡಾರಿ ಅವರು ತುಂಬಾ ವೆರೈಟಿ ಕುಣಿಯುತ್ತಾರೆ. ಹಾಗೆಯೇ ತೆಂಕಿನಲ್ಲಿ ಸೀತಾರಾಮ ಕುಮಾರ್ ಕಟೀಲ್ ಅವರು ಬಡಗಿಗೆ ಬಂದು ತುಂಬಾ ವೆರೈಟಿ ಕುಣಿತ ಮಾಡಿದ್ದಾರೆ ಕುಣಿತವನ್ನೇ ಹಾಸ್ಯ ಮಾಡಿ ತೋರಿಸಿದವರು ಇದ್ದಾರೆ. ಯಕ್ಷಗಾನ ಕಲಾವಿದನಿಗೆ ಹೆಜ್ಜೆಗಾರಿಕೆಯ ಬಗ್ಗೆ ತಿಳಿದಿರಬೇಕು. 

ಪ್ರ: ನಿಮಗೆ ತುಂಬಾ ತೃಪ್ತಿ ಹಾಗೂ ಹೆಸರು ಕೊಟ್ಟಿರುವಂತಹ ಪಾತ್ರಗಳು ಯಾವುದು?

ಶೇ.ಶೆ: ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಮಂಜ ಹಾಗೂ ಮಂಜಿ ಎಂಬ ಗಂಡ ಹೆಂಡತಿಯ ಪಾತ್ರಗಳಿವೆ. ಈ ಎರಡೂ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಮಂಜನ ಪಾತ್ರ ನನ್ನನ್ನು ಜನರಿಗೆ ತುಂಬಾ ಹತ್ತಿರಕ್ಕೆ ಮುಟ್ಟಿಸಿದೆ. ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಗಳಾಗಿವೆ. ಎರಡರಲ್ಲೂ ಮಂಜನ ಪಾತ್ರವನ್ನು ನಾನೇ ನಿರ್ವಹಿಸಿದ್ದೇನೆ. ಮಾರಣಕಟ್ಟೆಯ ಭಕ್ತಾದಿಗಳಿಗೆ ಈ ಪಾತ್ರ ಬಹಳ ಇಷ್ಟವಾಗಿದೆ. ಇದು ಸಾಕಷ್ಟು ಪ್ರಚಾರವೂ ಆಯಿತು.

ಪ್ರ: ಮಾರಣಕಟ್ಟೆ ಮೇಳ ಬಿಟ್ಟು  ಬೇರೆ ಮೇಳಕ್ಕೆ ಯಾಕೆ ಹೋಗಲಿಲ್ಲ?

ಶೇ.ಶೆ: ಬೇರೆ ಮೇಳಕ್ಕೆ ಹೋಗಲಿಕ್ಕೆ ತುಂಬಾ ಕರೆ ಬರುತ್ತದೆ. ಆರಂಭದಲ್ಲಿ ನಾನು ಗೆಜ್ಜೆ ಕಟ್ಟಿದ್ದು ಮಾರಣಕಟ್ಟೆ ಮೇಳದಲ್ಲಿ. ನಂತರ ಎಂ ಎನ್ ಹೆಗಡೆಯವರು ಬಕ್ವಾಡಿ ಮೇಳ ಎಂದು ಮಾಡಿದ್ದರು. ಅದರಲ್ಲಿ ಒಂದೆರಡು ವರ್ಷ ಸೇವೆ ಸಲ್ಲಿಸಿದೆ. 


ನಂತರ ಮಾರಣಕಟ್ಟೆ ಮೇಳದಲ್ಲೇ ಉಳಿದುಕೊಂಡಿದ್ದೇನೆ. ಈ ಮೇಳ, ಕ್ಷೇತ್ರದ ದೇವರು, ಯಜಮಾನರು, ಪರಿಸರ ಅಭಿಮಾನಿಗಳಿಂದ ಇಲ್ಲಿಯವರೆಗೆ ಈ ಹೊತ್ತಿನವರಿಗೆ ಏನು ಸಮಸ್ಯೆಗಳು ನೂನ್ಯತೆಗಳು ಆಗಿಲ್ಲ. ಈ ಮೇಳದಲ್ಲೇ ನನಗೆ ತೃಪ್ತಿಯಿದೆ. ಒಟ್ಟು ೩೬ ವರ್ಷಗಳು ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಈ ಮೇಳವನ್ನು ಬಿಟ್ಟು ಹೋಗಲು ಮನಸ್ಸಿಲ್ಲ 

ಪ್ರ: ಮಾರಣಕಟ್ಟೆ ಮೇಳದ ವ್ಯವಸ್ಥೆಗಳು ಹೇಗಿವೆ? ಕಲಾವಿದರಿಗೆ ಭದ್ರತೆ ಮತ್ತು ಅವಕಾಶಗಳ ಬಗ್ಗೆ ಹೇಳಿ...

ಶೇ.ಶೆ: ಮಾರಣಕಟ್ಟೆ ಮೇಳ ಎನ್ನುವಂತದ್ದು ಸಮುದ್ರಕ್ಕೆ ಸಮಾನವಾದಂತಹದ್ದು. ಅದರ ಆಳ ಅಂತರ ಕಂಡುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಮೇಳದಲ್ಲಿ ನಾವು ಶಿಸ್ತಿನಿಂದ ಇದ್ದದ್ದೇ ಆದರೆ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಬಡಗಿನಲ್ಲಿ ಹೆಸರಾಂತ ಮೇಳ ಮಂದಾರ್ತಿ ಮತ್ತು ಮಾರಣಕಟ್ಟೆ ಮೇಳಗಳು. ಮಾರಣಕಟ್ಟೆ ಕ್ಷೇತ್ರದ ೩ ಮೇಳಗಳಿವೆ ಇದು

ಶ್ರೀಮಂತ ಮೇಳ. ಮೇಳದಲ್ಲಿ ಮೇಳದ ಶಿಸ್ತಿಗೆ, ಕ್ರಮಕ್ಕೆ ಒಳಪಟ್ಟರೆ ಯಾರಿಗೂ ಏನು ತೊಂದರೆ ಇಲ್ಲ. ಕಲಾವಿದರು ಅಶಿಸ್ತಿನಿಂದ ದಾರಿ ತಪ್ಪಿ ನಡೆದರೆ ಸಮಸ್ಯೆಗಳಾಗುವುದು ಸಹಜ.

ಪ್ರ: ಬಯಲಾಟ ಮೇಳಗಳಲ್ಲಿ ಹೆಚ್ಚಾಗಿ ಆದ ಪ್ರಸಂಗಗಳೇ ಪ್ರದರ್ಶನ ಕಾಣುತ್ತವೆ. ಕೆಲವು ಪೌರಾಣಿಕ ಪ್ರಸಂಗಗಳ ಪಾತ್ರಗಳಿಗೆ ಒಬ್ಬ ಕಲಾವಿದ ಸೀಮಿತವಾಗಿ ಬಿಡುತ್ತಾನೆ. ಆ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿಳಿದುಕೊಂಡಿರುತ್ತಾನೆ. ಹೊಸ ಪ್ರಸಂಗ ಬಂದಾಗ ಸಿದ್ಧತೆಗಳು ಹೆಚ್ಚು ಬೇಕಾಗುತ್ತದೆ. ಬಯಲಾಟದ ಕಲಾವಿದರಾಗಿ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಲಾವಿದರ ಅಧ್ಯಯನ ಹೇಗಿರಬೇಕು? 

ಶೇ.ಶೆ: ಈಗ ಮೇಳಕ್ಕೆ ಬರುವ ಹುಡುಗರು ಇತ್ತೀಚಿನ ದಿನಗಳಲ್ಲಿ ಆಟ ನೋಡಿಯೋ, ಇನ್ನೊಬ್ಬರಿಂದ ತಿಳಿದುಕೊಂಡು ಬರುವುದು ತುಂಬಾ ಕಡಿಮೆ. ಮೊಬೈಲ್ ನೋಡಿ ಪಾತ್ರದ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದು ಹೆಚ್ಚಿನ ಸಂದರ್ಭ ಉಪಯೋಗಕ್ಕೆ ಬರುವುದಿಲ್ಲ. ಫೋನಿನಲ್ಲಿ ನೋಡಿ ಮಾಡುವ ಪಾತ್ರ ಪರಿಪೂರ್ಣ ಅಲ್ಲ. ಚೌಕಿ ಮನೆಯಲ್ಲಿ ಎದುರಿನ ವೇಷದವರ ಜೊತೆ ಕುಳಿತು ಮಾತನಾಡಬೇಕು. ನಮ್ಮ ಎದುರಿನ ವೇಷದವರಲ್ಲಿ ಅನುಭವ ತೆಗೆದುಕೊಂಡು ಹೋದರೆ ರಂಗದಲ್ಲಿ ನಿಭಾಯಿಸಲು ಸುಲಭ. ಸಂವಾದ ಮಾಡುವಾಗ ಹಿರಿಯ ಕಲಾವಿದರು ನಮ್ಮನ್ನು ಸುಧಾರಿಸಿಕೊಂಡು ಹೋಗುತ್ತಾರೆ. ಫೋನಿನಲ್ಲಿ ಒಂದು ಪಾತ್ರವನ್ನು ನೋಡಿದರೆ ಎದುರಿಗೆ ಯಾರೋ ಆಗಿರುತ್ತಾರೆ. ರಂಗಸ್ಥಳದಲ್ಲಿ ಎದುರಿರುವವರು ಅದೇ ಸಂಭಾಷಣೆಗೆ ಬರುತ್ತಾರೆ ಎಂಬುದು ಏನು ಗ್ಯಾರಂಟಿ? ಸಹ ಕಲಾವಿದರ ಜೊತೆಯೇ ಸಂಭಾಷಣೆ ಮಾಡಿಕೊಂಡು ಸಿದ್ದರಾಗಿ ವೇದಿಕೆಗೆ ಹೋಗುವುದು ಸರಿಯಾದ ಕ್ರಮ. 

ಪ್ರ: ಯುವ ಕಲಾವಿದರಿಗೆ ನಿಮ್ಮ ಕಿವಿಮಾತು 

ಶೇ.ಶೆ: ಯುವಕರು ಮೊಬೈಲಿನಿಂದಲೂ ವಿಷಯ ತಿಳಿದುಕೊಳ್ಳಲಿ ಹಾಗೆ ಹಿರಿಯ ಕಲಾವಿದರನ್ನು ಕೇಳಿ ರಂಗಕ್ಕೆ ಸಿದ್ಧರಾಗುವುದು ಅವಶ್ಯಕ. ಪುಸ್ತಕ ಹಿಡಿಯುವುದು ಉತ್ತಮ ಎಂದು ನನ್ನ ಅಭಿಪ್ರಾಯ 

ತಿರುಗಾಟದಲ್ಲಿ ಒಡನಾಡಿಗಳಾಗಿದ್ದ ಕಲಾವಿದರು 

ಶೇ.ಶೆ: ದಿ. ನೀಲಾವರ ಮಹಾಬಲ ಶೆಟ್ಟಿ, ದಿ. ಮೊಳವಳ್ಳಿ ಹಿರಿಯ ನಾಯಕರು, ದಿ. ಅನಂತ ಕುಲಾಲರು, ಐರಬೈಲ್ ಆನಂದ ಶೆಟ್ಟಿ, ಆಲೂರು ಸುರೇಂದ್ರ, ಗೋಳಿಕೆರೆ ಚಂದ್ರಗೌಡರು ನಾಗೂರು ಶ್ರೀನಿವಾಸ, ಉಮೇಶ್ ಸುವರ್ಣ ಭಾಗವತರು, ಸುಧಾಕರ್ ಕೊಟ್ಟಾರಿ ಮೊದಲಾದವರು


Nidle Govinda Bhat - Yakshagana Artist- Tenku


ಸುಮಾರು ನಾಲ್ಕೂವರೆ ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಬಲವಾದ ಹೆಜ್ಜೆಯೂರಿ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಪಾತ್ರಗಳಲ್ಲಿ ಮೆರೆದು ಕಳೆದ ಕೆಲವು ವರ್ಷಗಳಿಂದ ನಿವೃತ್ತಿ ಪಡೆದುಕೊಂಡರೂ ಹವ್ಯಾಸಿಯಾಗಿ ಕೆಲವೊಮ್ಮೆ ಪಾತ್ರ ನಿರ್ವಹಿಸುವ ಹಿರಿಯ ಅನುಭವಿ ಕಲಾವಿದರು ನಿಡ್ಲೆ ಗೋವಿಂದ ಭಟ್. ತನ್ನ ವಿದ್ಯಾಭ್ಯಾಸವನ್ನು ಏಳನೆಯ ತರಗತಿಗೆ ಮೊಟಕುಗೊಳಿಸಿ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಾರೆ. ೧೯೭೧ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಯಕ್ಷಗಾನದ ಶಿಕ್ಷಣ ಪಡೆಯುತ್ತಾರೆ. ತನ್ನ ಹದಿಮೂರನೆ ವಯಸ್ಸಿನಲ್ಲಿ ಕೋಡಂಗಿ ವೇಷದಿಂದ ಯಕ್ಷಯಾನ ಪ್ರಾರಂಭಿಸಿದ ಇವರು ಭೀಮ, ಕರ್ಣ, ರಾವಣ, ಕಾರ್ತವೀರ್ಯ, ಕಂಸ, ಅರ್ಜುನ ಜಮದಗ್ನಿ, ಇಂದ್ರಜಿತು ಶಿಶುಪಾಲ, ದಕ್ಷಬ್ರಹ್ಮ ಮೊದಲಾದ ಪಾತ್ರಗಳಲ್ಲಿ ಮೆರೆದವರು. ಇವರು ತಮ್ಮ ಯಕ್ಷ ಜೀವನದ ಬಗ್ಗೆ ಮೆಲುಕು ಹಾಕುವುದು ಹೀಗೆ.

ಗೋ.ಭ: ಯಕ್ಷಗಾನ ಕಲೆ ಜನರಲ್ಲಿ ಸಂಸ್ಕಾರ ಮೌಲ್ಯಗಳನ್ನು ಬೆಳೆಸುವಂತಹಾ ಕಲೆ. ಮೊದಲಿನಿಂದಲೂ ಯಕ್ಷಗಾನ ಬಯಲಾಟಗಳು ಹಳ್ಳಿಗಳಲ್ಲಿ 

ನಡೆಯುತ್ತಿರುತ್ತವೆ. ಹಿಂದಿನ ಕಾಲದಲ್ಲಿ ಹಳ್ಳಿಯ ಜನರಿಗೆ ವಿದ್ಯಾಭ್ಯಾಸ ಇದ್ದದ್ದು ಕಡಿಮೆ. ಅಂಥವರಿಗೆಲ್ಲ ಯಕ್ಷಗಾನದ ಮುಖಾಂತರ, ಪೌರಾಣಿಕ ಪಾತ್ರಗಳ ಮುಖಾಂತರ ಜೀವನದ ಮೌಲ್ಯ ಏನು ಅನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿತ್ತು. ಧಾರ್ಮಿಕ ಭಾವನೆಗಳನ್ನು ಪ್ರಭಾವಿಸುವಲ್ಲಿ ಕೂಡಾ ಯಕ್ಷಗಾನ ಪ್ರಮುಖವಾಗುತ್ತದೆ. ಆದಕಾರಣ ಯಕ್ಷಗಾನಕ್ಕೆ ವಿಶೇಷವಾದ ಮೌಲ್ಯ ಬರಲಿಕ್ಕೆ ಕಾರಣ ಯಕ್ಷಗಾನ ಮೌಲ್ಯ ಸಂಸ್ಕಾರಗಳನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಹರಕೆ ಯಕ್ಷಗಾನಗಳನ್ನು ನಡೆಸುತ್ತಿದ್ದರು. 

ಪ್ರಭಾವ ಬೀರಿದ ಪಾತ್ರಗಳು: 

ಗೋ.ಭ: ಮನಸಿಗೆ ಮೆಚ್ಚುಗೆಯಾದಂತಹ ಪಾತ್ರಗಳು ಹಲವು ಇವೆ. ವಯಸ್ಸಿನಿಂದಲೇ ಬಾಲ ಗೋಪಾಲದಂತಹ ವೇಷಗಳನ್ನು ಮಾಡುತ್ತಾ ಅನುಭವ ಪಡೆದುಕೊಳ್ಳುತ್ತಾ ಪ್ರಮುಖ ವೇಷಗಳನ್ನು ನಿರ್ವಹಿಸುತ್ತಿದ್ದೆ. ಜಮದಗ್ನಿ, ಹಿರಣ್ಯಾಕ್ಷ, ಇಂದ್ರಜಿತು, ರಾವಣ ಇಂಥ ಪಾತ್ರಗಳು ನನ್ನ ಮೆಚ್ಚಿನ ಪಾತ್ರಗಳು. ನಾನು ತಿರುಗಾಟದಲ್ಲಿರುವಾಗ ಅನೇಕ ಹಿರಿಯ ಕಲಾವಿದರ ಒಡನಾಟ ಇತ್ತು. ಪುತ್ತೂರು ನಾರಾಯಣ ಹೆಗಡೆ, ಕುಂಬ್ಳೆ ಸುಂದರ್ ರಾಯರು, ಸೂರಿ ಕುಮರಿ ಗೋವಿಂದ ಭಟ್ಟರು, ಕುಂಬಳೆ ಶ್ರೀzsರÀರಾಯರು, ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು, ಇಂಥವರ ನಿರ್ದೇಶನದಲ್ಲಿ ನಾನು ತಯಾರಿಯಾಗಿದ್ದು. ಮೊದಲಿಗೆ ವಿಠಲ ಶೆಟ್ಟಿಯವರ ಯಜಮಾನಿಕೆಯ ಕರ್ನಾಟಕ ಮೇಳದಲ್ಲಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಆಗ ದಾಮೋದರ ಮಂಡೆಚ್ಚರು ಮಿಜಾರು ಅಣ್ಣಪ್ಪರು,

ಅರುವ ಕೊರಗಪ್ಪ ಶೆಟ್ಟರು, ಕೊಳ್ಯೂರು ರಾಮಚಂದ್ರ ರಾಯರು ಇವರೊಂದಿಗೆಯೂ ತಿರುಗಾಟ ನಡೆಸಿದ್ದೇನೆ. ಕೆಲವು ಕಾಲ ತುಳು ಪ್ರಸಂಗಗಳಲ್ಲಿ ಕೂಡ ಪಾತ್ರಗಳನ್ನು ಮಾಡಿದೆ. ಆಮೇಲೆ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಯಾದ ಮೇಲೆ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾದವು. ನಾನು ಒಬ್ಬ ಕಲಾವಿದ ಎಂದು ಗುರುತಿಸಿಕೊಂಡಿದ್ದೇ ಧರ್ಮಸ್ಥಳ ಮೇಳದಲ್ಲಿ ಅಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನನ್ನ ವೈಯಕ್ತಿಕ ಕಾರಣಗಳಿಗಾಗಿ ನಾನು ಯಕ್ಷಗಾನದಿಂದ ನಿವೃತ್ತಿ ಪಡೆದುಕೊಂಡೆ. ಮತ್ತೆ ಯಾವುದೇ ವೃತ್ತಿಪರ ಮೇಳದಲ್ಲಿ ತಿರುಗಾಟ ಮಾಡುವುದಿಲ್ಲ ಎಂದು ನಿರ್ಧರಿಸಿದೆ. ಅಭಿರುಚಿಗೆ ಬೇಕಾಗಿ ಹೊರಗಡೆ ಹೋಗಿ ಒಂದೊAದು ವೇಷಗಳನ್ನು ಮಾಡಿಕೊಂಡು ಬರುತ್ತೇನೆ. ನಾನು ಯಕ್ಷಗಾನ ಕಲಿತದ್ದೂ ಪ್ರಾರಂಭದಲ್ಲಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಲಲಿತಕಲಾ ಕೇಂದ್ರದಲ್ಲೇ. ಆಗ ಕುರಿಯ ವಿಠಲ ಶಾಸ್ತ್ರಿಗಳು ಮತ್ತು ಪಡ್ರೆ ಚಂದು ಅಣ್ಣ ಗುರುಗಳಾಗಿದ್ದರು. ಹಿಮ್ಮೇಳದಲ್ಲಿ ಮಾಂಬಾಡಿ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ರು, ಪುತ್ತೂರು ಹಿರಿಯ ಕೃಷ್ಣ ಭಟ್ರು, ಇವರೆಲ್ಲಾ ಅವರೆಲ್ಲ ನನಗೆ ಗುರುಗಳಾಗಿದ್ದರು. ಆಗ ನನ್ನೊಂದಿಗೆ ಸಹಪಾಠಿಗಳಾಗಿದ್ದವರೆಂದರೆ, ದಿವಂಗತ ಚನ್ನಪ್ಪ ಶೆಟ್ಟರು, ಉದ್ಯಾವರ ಜಯಕುಮಾರ್, ಉಬರಡ್ಕ ಉಮೇಶ್ ಶೆಟ್ಟಿ, ಮುಂಡಾಜೆ ಬಾಲಕೃಷ್ಣ ಮುಂಡಾಜಿ ಸದಾಶಿವ ಶೆಟ್ರು ನಾವು ಪ್ರಾರಂಭದ ವಿದ್ಯಾರ್ಥಿಗಳು. ಅವತ್ತಿನಿಂದ ನಾನು ಪ್ರತಿವರ್ಷವೂ ಬಣ್ಣ ಹಚ್ಚುತ್ತಾ ಬಂದಿದ್ದೇನೆ. ಧರ್ಮಸ್ಥಳ ಮೇಳದಿಂದ ನಾನು ಮತ್ತೆ ಉಬರಡ್ಕ ಉಮೇಶ್ ಶೆಟ್ಟಿ ಒಟ್ಟಿಗೆ ನಿವೃತ್ತಿಯಾದದ್ದು. ಆ ವರ್ಷದಿಂದಲೇ ಕಾಲಮಿತಿ ಯಕ್ಷಗಾನ ಪ್ರಾರಂಭವಾಯಿತು. 

ಯಕ್ಷಗಾನದಲ್ಲಾದ ಬದಲಾವಣೆಗಳ ಕುರಿತು

ಗೋ.ಭ: ಯಕ್ಷಗಾನದಲ್ಲಿ ಇತ್ತೀಚಿಗೆ ಕಂಡ ಬದಲಾವಣೆಗಳೆಂದರೆ, ಒಂದು ಯಕ್ಷಗಾನ ಕಾಲಮಿತಿಗೆ ಬಂದದ್ದು. ಆ ಕಾಲದಲ್ಲಿ ಒಂದು ಪಾತ್ರವನ್ನು ಮೊದಲಿನಿಂದ ಕೊನೆಯವರೆಗೆ ಒಬ್ಬನೇ ವೇಷಧಾರಿ ಮಾಡಬೇಕಾಗಿತ್ತು. ಒಂದು ಪೀಠಿಕೆ ವೇಷಕ್ಕೆ ಒಬ್ಬ ಹೋದರೆ ಬೆಳಗಿನವರೆಗೂ ಅವನೇ ಆ ಪಾತ್ರವನ್ನು ನಿಭಾಯಿಸಬೇಕಿತ್ತು. ಹಿರಿಯ ಕಲಾವಿದರಿಗೂ ಅದೇ ರೀತಿ. ಇತ್ತೀಚಿಗೆ ಕಲಾವಿದರಿಗೆ ಅವಕಾಶ ಕೊಡುವಂತ ದೃಷ್ಟಿಯಲ್ಲಿ ಒಂದು ಪಾತ್ರವನ್ನು ಇಬ್ಬಿಬ್ಬರು ಅಥವಾ ಮೂರು ಜನ ಹಂಚಿಕೊAಡು ಮಾಡುವಂತಹ ಒಂದು ಅಭ್ಯಾಸ ಬೆಳೆಯಿತು. ಅಲ್ಲದೇ ವಯಸ್ಸಾದ ಕಲಾವಿದರಿಗೆ ಹೆಚ್ಚು ಕಾಲ ಪಾತ್ರ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೂ ಒಂದು ಪಾತ್ರವನ್ನು ಇಬ್ಬರು ನಿರ್ವಹಿಸುವಂತಹಾ ಪರಿಪಾಠ ಬೆಳೆದು ಬಂತು. ಅದು ಹಾಗೆಯೇ ಮುಂದುವರಿಯಿತು. ಕಾಲಮಿತಿ ಯಕ್ಷಗಾನ ಈಗಿನ ಪರಿಸರಕ್ಕೆ ವಾತಾವರಣಕ್ಕೆ ಅನಿವಾರ್ಯ ಎನ್ನಬಹುದು. ಅದರಿಂದಾಗಿ ಯಕ್ಷಗಾನಕ್ಕೆ ತೊಂದರೆ ಆಯ್ತು ಎಂದು ಹೇಳುವಂತಿಲ್ಲ ಅದರಿಂದ ಕಲೆಗೇನು ದ್ರೋಹ ಆಗಿಲ್ಲ. ಎಲ್ಲ ರಂಗದಲ್ಲೂ ಬದಲಾವಣೆಗಳು ಆಗುವಂತೆ ಸಹಜವಾಗಿ ಇದರಲ್ಲೂ ಬದಲಾವಣೆಗಳಾಗಿದೆ. ಇದರಿಂದ ಕಲೆಗೆ ಪ್ರೇಕ್ಷಕರು ಕಡಿಮೆ ಆಗಿಲ್ಲ. ಈಗ ತುಂಬಾ ವಿದ್ಯಾವಂತ ಕಲಾವಿದರು ಇದ್ದಾರೆ. ಪ್ರೇಕ್ಷಕರೂ ವಿದ್ಯಾವಂತರಿದ್ದಾರೆ. ಅವರೆಲ್ಲರೂ ಸಹಕಾರದಿಂದ ಕಲೆ ಬೆಳೆಯುತ್ತದೆ. ಯಕ್ಷಗಾನ ಕಾಲಮಿತಿ ಆದರೂ ಪ್ರಸಂಗಗಳು ಅಚ್ಚುಕಟ್ಟಾಗಿ ಚೆನ್ನಾಗಿ ನಡೀತಾ ಇವೆ.

ನಿಮ್ಮ ಪಾತ್ರ ಚಿತ್ರಣಕ್ಕೆ ಪ್ರೇರಣೆಯಾದ ಕಲಾವಿದರು 

ಗೋ.ಭ: ಸೂರಿ ಕುಮೇರು ಗೋವಿಂದ ಭಟ್ರು, ರಾಮಯ್ಯ ರೈಗಳು, ಕಂಸ ರಾವಣ ಇಂತಹ ನಾಟಕೀಯ ಪಾತ್ರಗಳಿಗೆ ನಾರಾಯಣ ಹೆಗಡೆಯವರು ಹಿರಣ್ಯಕಶಿಪು ಈ ಪಾತ್ರಗಳನ್ನೆಲ್ಲ ಅವರಿಂದ ನೋಡಿ ನಾನು ಕಲಿತುಕೊಂಡಿದ್ದೆ. ಈ ಕಲಾವಿದರು ಆ ಪಾತ್ರಗಳನ್ನು ಮಾಡುವಾಗ ಅವರ ಜೊತೆಗೆ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದೆ. ಅವರು ರಂಗದಲ್ಲಿ ಪಾತ್ರ ನಿರ್ವಹಿಸುವಂತಹ ರೀತಿ ನಡೆಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿದಿವೆ. ಅದೇ ರೀತಿಯ ನಿರ್ವಹಣೆ ನಮ್ಮಿಂದ ಸಾಧ್ಯವಿಲ್ಲವಾದರೂ ಅದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಮುಂದುವರಿದುಕೊAಡು ಬಂದಿದ್ದೇನೆ. 

ಹೊರರಾಜ್ಯಗಳ ತಿರುಗಾಟದ ಅನುಭವ

ಗೋ.ಭ: ಮಳೆಗಾಲದಲ್ಲಿ ನನ್ನದೇ ಸ್ವಂತ ಮಹಾಗಣಪತಿ ಯಕ್ಷಗಾನ ಮಂಡಳಿ ಎಂಬ ತಂಡವನ್ನು ಕಟ್ಟಿಕೊಂಡು ಉತ್ತರ ಕನ್ನಡ ಮತ್ತು ಇತರ ರಾಜ್ಯಗಳಿಗೆ ಪ್ರವಾಸ ಮಾಡುತ್ತಿದ್ದೆ. ಬೇಸಿಗೆಯಲ್ಲೂ ಮಳೆಗಾಲದಲ್ಲೂ ಪೂರ್ತಿ ತಿರುಗಾಟ ಮಾಡಿಕೊಂಡಿದ್ದೆ. ಆಗ ಮಳೆಗಾಲದಲ್ಲಿ ಕಲಾವಿದರಿಗೆ ಬೇರೆ ಏನು ವೃತ್ತಿ ಇರಲಿಲ್ಲವಲ್ಲ. ನನಗಿಂತಲೂ ಮೊದಲು ಮುಳಿಯಾಲ ಭೀಮ ಭಟ್, ಕುಂಬ್ಳೆ ಸುಂದರ್ ರಾಯರು, ಕಾಸರಗೋಡಿನ ಚೌಹಾಣ್ ಅನ್ನುವವರು ಕಟೀಲು ಪುರುಷೋತ್ತಮ ಭಟ್ರು, ಹೊರರಾಜ್ಯಗಳಿಗೆ ತಂಡಗಳೊAದಿಗೆ ಪ್ರವಾಸ ಮಾಡುತ್ತಿದ್ದರು. ಅದನ್ನೆಲ್ಲ ಗಮನಿಸಿ ನಾನು ಕೂಡ ಹೊರಗೆ ತಂಡ ಕಟ್ಟಿಕೊಂಡು ಹೋಗಬಹುದು ಎಂಬ ಅಭಿಪ್ರಾಯ ಹುಟ್ಟಿಕೊಂಡಿತು. ಪ್ರಾರಂಭದಲ್ಲಿ ೭ರಿಂದ ೮ ಯಕ್ಷಗಾನ ಪ್ರದರ್ಶನಗಳು ಸಿಗುತ್ತಿದ್ದವು. ನಾವು ಹೋದ ಕಡೆ ಒಳ್ಳೆಯ ಪ್ರೋತ್ಸಾಹ ದೊರಕುತ್ತಿತ್ತು. ತಂಡದ ಕಲಾವಿದರ ಸಹಕಾರ ಚೆನ್ನಾಗಿ ಸಿಕ್ಕಿತು. ಒಂದು ವರ್ಷದಲ್ಲಿ ನೂರರಿಂದ ೧೨೫ ಪ್ರದರ್ಶನಗಳನ್ನು ಮಾಡಿದ ಇತಿಹಾಸವು ಇದೆ. ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕಲ್ಕತ್ತ ಹೀಗೆ ನಿರಂತರ ೩೫-೩೬ ವರ್ಷಗಳ ಕಾಲ ತಿರುಗಾಟ ನಡೆಸಿದ್ದೇನೆ. 

ಧರ್ಮಸ್ಥಳ ಟೆಂಟಿನ ಮೇಳವಾಗಿ ನಡೆಯುತ್ತಿದ್ದಾಗ ಅಮೃತ ಸೋಮೇಶ್ವರ ಕಡತೋಕ ಮಂಜುನಾಥ ಭಾಗವತರು ಹೊಸ ಪೌರಾಣಿಕ ಪ್ರಸಂಗಗಳನ್ನು ಜೋಡಣೆ ಮಾಡಿ ಕೊಡುತ್ತಿದ್ದರು. ಅದನ್ನೇ ಮೇಳದಲ್ಲಿ ಆಡಲಾಗುತ್ತಿತ್ತು. ಕಾಲ್ಪನಿಕ ಪ್ರಸಂಗಗಳು ಧರ್ಮಸ್ಥಳ ಮೇಳದಲ್ಲಿ ಆಡೋ ಪದ್ಧತಿಯೇ ಇಲ್ಲ 

ಯಕ್ಷಗಾನದಲ್ಲಿ ಸಂಪಾದಿಸಿದ್ದು -ಸಂತೃಪ್ತಿ

ಗೋ.ಭ: ಯಕ್ಷಗಾನ ಕಲಾವಿದನಾಗಿ ಇಷ್ಟು ವರ್ಷಗಳ ಕಾಲ ದುಡಿದ ಕಾರಣ ನನ್ನನ್ನು ಜನರು ಗುರುತಿಸುವಂತಾಯ್ತು ಯಕ್ಷಗಾನದ ಬಗ್ಗೆ, ಆ ವೃತ್ತಿ ಬಗ್ಗೆ ತುಂಬಾ ಗೌರವ ಮತ್ತು ಪ್ರೀತಿ ಇದೆ. ಜೀವನದಲ್ಲಿ ಸಾಧಿಸಿದ್ದು ಎಂದರೆ ಕಲಾವಿದನಾಗಿ ಗುರುತಿಸಿಕೊಂಡಿದ್ದು, ಕಲಾವಿದರ ಜೊತೆ ಒಕ್ಕೂಟ, ಅಭಿಮಾನಿಗಳ ಪ್ರೀತಿ ಸಂಪಾದನೆ, ಒಡನಾಟಗಳು. ಒಂದು ಹತ್ತು ಜನ ಕಲಾವಿದರು ಒಟ್ಟಾಗಿ ತಿರುಗಾಟ ನಡೆಸುವಂತಹ ಖುಷಿಯೇ ಬೇರೆ. ನಮ್ಮ ವೈಯುಕ್ತಿಕ ನೋವು ಸಮಸ್ಯೆಗಳು ಏನೇ ಇದ್ದರೂ ರಂಗದಲ್ಲಿ ಕಲೆಯ ಪ್ರದರ್ಶನ ಮಾಡುವಾಗ ಆ ಖುಷಿಯೇ ಬೇರೆ. ಈ ಒಂದು ಸಂತೃಪ್ತಿ ನನಗಿದೆ.


Mohammad Gouse- Yakshagana artist- Badagu


ಯಕ್ಷಗಾನ ಎಂಬ ಕಲೆ ತಮ್ಮ ಸಮುದಾಯದಲ್ಲಿ ಅಸ್ಥಿತ್ವದಲ್ಲಿಲ್ಲದ ಕಲೆಯಾದರೂ ಆ ಕಲೆಯನ್ನೇ ಪ್ರೀತಿಸಿ ಕಲಾಸೇವೆ ಸಲ್ಲಿಸಿದ ಮೊದಲ ಮುಸ್ಲಿಂ ಪ್ರತಿಭೆ ಎಂದು ಗುರುತಿಸಬಹುದಾದರೆ ಜೋಗಟ್ ಮಹಮ್ಮದ್, ತಮ್ಮ ಸಮುದಾಯದ ವಿರೋಧಗಳಿಂದಾಗಿ ದೀರ್ಘ ಕಾಲ ಅವರ ಕಲಾಸಕ್ತಿಯನ್ನು ಪೋಷಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಮುಸ್ಲಿಂ ಸಮುದಾಯದ ಕಲೆ ಅಲ್ಲದೇ ಹೋದರೂ ಆ ಸಮುದಾಯದ ಅದೆಷ್ಟೋ ಬಾಂಧವರು ಕಲೆಯನ್ನು ಪ್ರೋತ್ಸಾಹಿಸಿ, ಮೆಚ್ಚಿಕೊಂಡವರೂ ಇದ್ದಾರೆ. ಆದರೆ ಅದೇ ಕಲೆಯನ್ನು ವೃತ್ತಿಯಾಗಿ ಇಂದಿಗೂ ಕಲೆಯ ಸಂಪಾದನೆ ಗೌರವಗಳಿಂದಲೇ ಬದುಕು ಬೆಳಗಿಸಿಕೊಂಡ ಬೆರಳೆಣಿಕೆಯ ಕಲಾವಿದರಲ್ಲಿ ಬಡಗುತಿಟ್ಟಿನ ಮಡಾಮಕ್ಕಿ ಮೇಳದ ಪ್ರಧಾನ ವೇಷಧಾರಿ ಮೊಹಮ್ಮದ್ ಗೌಸ್ ರವರು ಗುರುತಿಸಿಕೊಳ್ಳುತ್ತಾರೆ. ಯಕ್ಷಗಾನದ ವಿವಿಧ ವಿಭಾಗಗಳನ್ನು ಕಣ್ಣಾರೆ ಕಂಡು, ಅನುಭವಿಸಿ, ಕಲಿತು ವೇಷ ಕಟ್ಟಿದ ಮೊಹಮ್ಮದ್ ಗೌಸ್ ರವರ ೪೫ ವರ್ಷಗಳ ಕಲಾಯಾನ ರೋಚಕವಾದದ್ದು. 


ಸುಮಾರು ೫೦-೫೫ ವರ್ಷಗಳ ಹಿಂದೆ ಮನರಂಜನಾ ಮಾಧ್ಯಮವಾಗಿ ಯಾವುದೇ ಮಾಧ್ಯಮಗಳು ಇಲ್ಲದಿದ್ದಂತಹಾ ಸಂದರ್ಭದಲ್ಲಿ ಕುಂದಾಪುರದಿAದ ೧೨ ಕಿಮೀ ಒಳಗಡೆ ಇರೋ ಕಾವ್ರಾಡಿ ಎಂಬಲ್ಲಿ ಮೊಹಮ್ಮದ್ ಗೌಸ್ ರವರ ಯಕ್ಷಗಾನದ ಆಸೆ ಚಿಗುರೊಡೆಯುತ್ತದೆ. ಬಾಲ್ಯದ ದಿನಗಳಲ್ಲಿ ಊರಿನಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಜನೆಯನ್ನು ಇಷ್ಟಪಟ್ಟಿದ್ದ ಅವರನ್ನು ನಂತರ ಯಕ್ಷಗಾನ ಕಲೆ ಆಕರ್ಷಿಸುತ್ತದೆ. ಊರಿನಲ್ಲಿ ತಿರುಗಾಟಕ್ಕೆ ಬರುತ್ತಿದ್ದ ಸೌಕೂರು, ಮಂದಾರ್ತಿ, ಹಾಲಾಡಿ ಮೇಳಗಳ ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ಇವರನ್ನು ಕಲೆ ಸಹಜವಾಗಿ ಸೆಳೆದುಕೊಳ್ಳುತ್ತದೆ. ಆಗ ಬಣ್ಣ ಹಚ್ಚಲು ತೆಂಗಿನ ಸೋಗೆಯ ಗರಿಗಳನ್ನು ಬಳಸುತ್ತಿದ್ದ, ಉಮಿ ಹಾಕಿ ರಂಗಸ್ಥಳ ಮಾಡುತ್ತಿದ್ದ ನೆನಪುಗಳು ಇವರಿಗೆ ಹಚ್ಚ ಹಸಿರು. ಇವರ ಮಾವನವರಿಗೂ ಯಕ್ಷಗಾನದ ಅಭಿರುಚಿ ಹೆಚ್ಚಿದ್ದರಿಂದ ಊರಿನ ಗದ್ದೆ ಬಯಲುಗಳಲ್ಲಿ ನಡೆಯುತ್ತಿದ್ದ ಯಕ್ಷಗಾನಗಳಿಗೆ ಗೌಸ್ ರವರ ಮಾವ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಇವರನ್ನೂ 

ಜೊತೆಗೆ ಕರೆದೊಯ್ಯುತ್ತಿದ್ದರಂತೆ. ಹೀಗೆ ಯಕ್ಷಗಾನ ನೋಡುತ್ತಿರುವಾಗ ಒಮ್ಮೆ ಸೌಕೂರು ಮೇಳದ ಹಾಸ್ಯಗಾರರಾದ ನಾಗು ಶೆಟ್ಟರಲ್ಲಿ ತಾನೂ ವೇಷ ಮಾಡಬೇಕು ಎಂಬ ಆಸೆಯನ್ನು ಹೇಳಿಕೊಳ್ಳುತ್ತಾರೆ. ಆಗ ಅವರು ಪ್ರೀತಿಯಿಂದ ಬಣ್ಣ ಹಚ್ಚಿ ಹುಡುಗನ ಆಸೆಗೆ ಪ್ರೋತ್ಸಾಹಿಸುತ್ತಾರೆ. ಬಾಲ್ಯದ ಅವರ ನೆನಪುಗಳನ್ನು ಅವರು ಹಂಚಿಕೊಳ್ಳುವುದು ಹೀಗೆ..


ಮ.ಗೌ: ಆಗ ಸೌಕೂರು ಮೇಳದಲ್ಲಿ ನಾಗು ಶೆಟ್ಟರು ಎಂಬ ಹಾಸ್ಯಗಾರರಿದ್ದರು. ನಾವು ಚೌಕಿಗೆ ಹೋದಾಗ ಅವರು ಹಣ ನೀಡಿ ನಮ್ಮಲ್ಲಿ ಚಹಾ ತರಿಸಿಕೊಳ್ಳುತ್ತಿದ್ದರು. ನಾನು ಚಹಾ ನೀಡಿ ಅವರಿಂದ ಬಣ್ಣ ಹಾಕಿಸಿಕೊಳ್ಳುತ್ತಿದ್ದೆ. ಆಗ ತೆಂಕಿನಲ್ಲಿ ಧರ್ಮಸ್ಥಳ ಮೇಳ ಕರ್ನಾಟಕ ಮೇಳ ಸುರತ್ಕಲ್ ಮೇಳಗಳು ಇದ್ದವು. ಸುರತ್ಕಲ್ ಮೇಳದಲ್ಲಿ ವೇಣೂರು ಸುಂದರ ಆಚಾರಿ ಕರ್ನಾಟಕ ಮೇಳದಲ್ಲಿ ಮಿಜಾರ್ ಅಣ್ಣಪ್ಪ, ಬಡಗಿನಲ್ಲಿ ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆಯವರ ಮೇಳ, ಅವರ ಪಾತ್ರಗಳು ನನ್ನನ್ನು ತುಂಬಾ ಪ್ರಭಾವಿಸಿದ್ದವು. ಶಂಭು ಹೆಗಡೆ ಮತ್ತು ಮಹಾಬಲ ಹೆಗಡೆಯವರ ಗದಾಯುದ್ಧದ ಕೌರವ, ಭೀಷ್ಮ ವಿಜಯದ ಭೀಷ್ಮ, ಕೃಷ್ಣ ಸಂಧಾನದ ಕೃಷ್ಣ ಕೋಳ್ಯೂರು ರಾಮಚಂದ್ರ ರಾಯರ ಪಾತ್ರಗಳು, ಅಳಿಕೆ ರಾಮಯ್ಯ ರೈಗಳ ದೇವೇಂದ್ರ ಪಾತ್ರ, ಪುತ್ತೂರು ನಾರಾಯಣ ಹೆಗಡೆಯವರ ಕಂಸ, ಕೊನೆಯ ಕರ್ಣ ಈ ಎಲ್ಲ ಪಾತ್ರಗಳು ನನ್ನನ್ನು ಬಹಳ ಸೆಳೆದಿದ್ದವು. ಸತ್ಯ ಹರಿಶ್ಚಂದ್ರ ಪ್ರಸಂಗದಲ್ಲಿ ರಾಮದಾಸ ಸಾಮುಗರ ಹರಿಶ್ಚಂದ್ರ, ಅಳಿಕೆಯವರ ಅವರ ವಿಶ್ವಾಮಿತ್ರ ಮಿಜಾರು ಅಣ್ಣಪ್ಪನವರ ನಕ್ಷತ್ರಿಕ, ಪಾತ್ರವನ್ನು ನೋಡಿ ತುಂಬಾ 

ಖುಷಿಯಾಗುತ್ತಿತ್ತು. ಪುರಾಣ ಪಾತ್ರಗಳಲ್ಲಿ, ಹಿಂದೂ ಸಂಸ್ಕೃತಿಯಲ್ಲಿ ಇಂತಹ ಜೀವಂತಿಕೆ ಇದೆಯಲ್ಲ ಎಂಬ ಹೆಮ್ಮೆ, ಇದರಿಂದಾಗಿ ಆಕರ್ಷಣೆ ನನಗೆ ಉಂಟಾಯಿತು. ಆ ಕಲಾವಿದರು ಪಾತ್ರಗಳಿಗೆ ಹೇಗೆ ಜೀವ ಕೊಡುತ್ತಿದ್ದರು ಎಂದು ಬೆರಗಾಗುತ್ತಿದ್ದೆ. ಅವರ ಪಾತ್ರಗಳನ್ನು ನೋಡಿದ್ರೆ ಯಾರಿಗಾದರೂ ಇಷ್ಟವಾಗಿ ಬಿಡಬೇಕು ಅಂತಹ ನಿರ್ವಹಣೆ. ಈ ಕಲಾವಿದರ ಪಾತ್ರಗಳಿಂದ ಪ್ರಭಾವಿತನಾಗಿ ಅಂತದ್ದೇ ಪಾತ್ರವನ್ನು ನಾನು ಮಾಡಬೇಕು, ಜನರಿಂದ ಮೆಚ್ಚುಗೆ ಪಡೆಯಬೇಕು, ಎಂಬ ಆಸೆ ಉಂಟಾಯಿತು. ರಂಗಸ್ಥಳ ಪ್ರವೇಶ ಮಾಡಬೇಕಾದರೆ ಒಂದು ದಾರಿ ಬೇಕು. ರಂಗದಲ್ಲಿ ನಿಲ್ಲುವ ಶೈಲಿ, ಪಾತ್ರದ ನಡೆ, ಯಾವ ರೀತಿ ಹೋಗಬೇಕು, ಬರಬೇಕು ಇದನ್ನೆಲ್ಲ ಕಲಿಯುವ ಆಸೆ ನನ್ನದಾಗಿತ್ತು. ಆ ಸಮಯದಲ್ಲಿ ಕಂಡ್ಲೂರಿನಲ್ಲಿ ಕನ್ನಿಕಾ ಪರಮೇಶ್ವರಿ ಎಂಬ ಒಂದು ಸಂಘ ಇತ್ತು. ವಂಡ್ಸೆ ಮುತ್ತು ಗಾಣಿಗರು ಅಲ್ಲಿ ಗುರುಗಳಾಗಿದ್ದರು. ಅವರೊಂದಿಗೆ ಸಕ್ಕಟ್ಟು  ಲಕ್ಷ್ಮೀನಾರಾಯಣ ಭಟ್, ಭಾಗವತಿಕೆಗೆ ಆರ್ಗೋಡು ಮೋಹನ್ ಶೆಣೈ ಅವರ ತಂದೆ ದೇವದಾಸ್ ಶೆಣೈಯವರು ಇದ್ದರು. ಆಗಿನ ಕಾಲದಲ್ಲಿ ಮೈಕ್ ಸೆಟ್, ಲೈಟಿಂಗ್ ಇಂತಹ ವ್ಯವಸ್ಥೆಗಳು ಇರಲಿಲ್ಲ. ಹಾರ್ಮೋನಿಯಂ ತಾಳ ಇದರ ಮುಖಾಂತರನೇ ಕಲಿಸುತ್ತಿದ್ದರು. ಆ ಸಂಘವನ್ನು ಆಚಾರಿಗಳು ಮತ್ತು ಬಳೆಗಾರರ ಸಂಘದವರು ನಡೆಸುತ್ತಿದ್ದರು. ಅಲ್ಲಿ ನಾನು ಹೋಗಿ ಯಕ್ಷಗಾನ ಕಲಿಯುವ ನನ್ನ ಆಸೆಯನ್ನು ಅವರಲ್ಲಿ ಹೇಳಿಕೊಂಡೆ. ಆಗ ಸಂಘದವರು "ಏನೂ ತೊಂದರೆ ಇಲ್ಲ. ಯಕ್ಷಗಾನದಲ್ಲಿ ಯಾರು ಕೂಡ ಪಾತ್ರಗಳನ್ನು ಮಾಡಬಹುದು" ಎಂದು ಹೆಜ್ಜೆ ಕಲಿಯಲು ಅನುಮತಿ ನೀಡಿದರು. ನನ್ನನ್ನು ತರಗತಿಗೆ ಸೇರ್ಪಡೆ ಮಾಡಿಕೊಂಡರು. ಈ ಸಂಘದಲ್ಲಿ ವಿದ್ಯಾರ್ಥಿಯಾಗಿ ನಾನು ರಂಗಸ್ಥಳ ಪ್ರವೇಶ ಮಾಡುವುದು, ಹೆಜ್ಜೆಗಾರಿಕೆ ಬಗ್ಗೆ ಅಭ್ಯಾಸ ಮಾಡುತ್ತಾ ಬಂದೆ." 

ಒಂದು ತಿಂಗಳಾದ ಮೇಲೆ ಊರಿನಲ್ಲೇ ಒಂದು ಯಕ್ಷಗಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ನನಗೆ ಪ್ರಥಮದಲ್ಲಿ ವಿದ್ಯುನ್ಮತಿ ಕಲ್ಯಾಣ ಪ್ರಸಂಗದಲ್ಲಿ ದೇವೇಂದ್ರ ಪಾತ್ರ ಮಾಡುವಂತಹ ಅವಕಾಶ ನೀಡಿದರು. ಆ ಪಾತ್ರಕ್ಕೆ ಕುಣಿಯುವ ರೀತಿ ಸಂಭಾಷಣೆ ಎಲ್ಲ ಹೇಳಿಕೊಟ್ಟರು. ಕಂಡ್ಲೂರ್ ಎಂಬ ಸ್ಥಳದಲ್ಲಿ ಆ ಪ್ರದರ್ಶನ ನಡೆಯುವುದಿತ್ತು. ಆ ಊರಿನಲ್ಲಿ ಸುಮಾರು ಎರಡು ಸಾವಿರದಷ್ಟು ಮುಸ್ಲಿಂ ಸಮುದಾಯದವರು ವಾಸವಿರುವಂತಹಾ ಜಾಗ ಅದು. ೮-೧೦ ಪಲ್ಲಿಗಳಿದ್ದವು. ನಾನು ಯಕ್ಷಗಾನ ಕಲಿಯುತ್ತಿರುವುದು ನಮ್ಮ ಜಾತಿಯವರಿಗೂ ಗೊತ್ತಾಗಿ ಜಾತಿಯ ಮುಖಂಡರಿAದ ವಿರೋಧ ವ್ಯಕ್ತವಾಯಿತು. 'ಆ ಹುಡುಗ ದೇವಸ್ಥಾನದಲ್ಲಿ ಯಕ್ಷಗಾನ ಕಲೀತಾ ಇದ್ದಾನಂತೆ. ವೇಷ ಮಾಡುತ್ತಾನಂತೆ ಅವ. ನಮ್ಮ ಸಮಾಜಕ್ಕೆ ಅದು ಸರಿಯಲ್ಲ' ಅಂತ ನಮ್ಮ ಮನೆಯವರಿಗೆಲ್ಲ ಸ್ವಲ್ಪ ದಬ್ಬಾಳಿಕೆ ನಡೆಸಿದ್ದರು. ಆದ್ರೂ ನಾನು ನನ್ನ ಕಲಿಕೆಯನ್ನು ಮುಂದುವರಿಸಿದೆ. ಯಕ್ಷಗಾನಕ್ಕೆ ಇನ್ನೂ ನಾಲ್ಕು ದಿನ ಒಂದು ವಾರ ಇರಬೇಕಾದ್ರೆ ಗುಸುಗುಸು ಮಾತುಗಳು ಶುರುವಾದವು. ಸಮುದಾಯದ ಮುಖಂಡರು 'ಅವನನ್ನು ವೇಷಕ್ಕೆ ಕಳುಹಿಸಬೇಡಿ ರಗಳೆ ಆಗ್ತದೆ.' ಎಂದು ನಿರ್ಬಂಧ ಹಾಕಿದರು. ಜಾತಿಭೇದಗಳು ಆವಾಗ ತೀವ್ರತರದಲ್ಲಿ ಇರಲಿಲ್ಲ. ಹೊಂದಾಣಿಕೆ ಸಾಮರಸ್ಯ ಇತ್ತು. ನಾನು ಯಕ್ಷಗಾನ ಮಾಡುವುದಕ್ಕೆ, ನಮ್ಮ ಗುರುಗಳು ಅಲ್ಲಿನ ಆಚಾರಿಗಳ ಸಂಘದವರು, ಗಾಣಿಗರು ಬಳೆಗಾರರು ಇವರೆಲ್ಲ ಸೇರಿ ಪ್ರೋತ್ಸಾಹ ನೀಡಿದರು. 'ಹೇಗೂ ಯಕ್ಷಗಾನ ಕಲಿತಿದ್ದಿಯಲ್ಲ, ಹೇಗಾದರೂ ಒಂದು ಪ್ರದರ್ಶನ ನೀಡುವುದು' ಅಂತ ಹೇಳಿದರು. ಪ್ರದರ್ಶನದ ದಿನ ನಾನು ವೇಷ ಮಾಡಿಕೊಳ್ಳುವಾಗ ಮತ್ತೆ ನಮ್ಮ ಸಮಾಜದವರು ಬಂದು ಅಡ್ಡ ಹಾಕಿದ್ದರು ಅವನಿಗೆ ವೇಷ ಮಾಡಲಿಕ್ಕೆ ಆಗುವುದಿಲ್ಲ. ಯಕ್ಷಗಾನ ನಿಲ್ಲಿಸಬೇಕು ಅಂತ ಗಲಾಟೆ ಮಾಡಿದ್ರು. ಆದ್ದರಿಂದ ಅಲ್ಲಿ ನನಗೆ ವೇಷ ಮಾಡುವ ಅವಕಾಶ ತಪ್ಪಿತು. ಅಂದು ಸಮುದಾಯದವರು ನನಗೆ ರಂಗಸ್ಥಳ ಪ್ರವೇಶ ಮಾಡಲು ಬಿಡಲೇ ಇಲ್ಲ. ಆದರೆ ಯಕ್ಷಗಾನ ನಿಲ್ಲಿಸಲಿಲ್ಲ. ಆ ದಿನ ನಾನು ಮಾಡಬೇಕಾದ ಪಾತ್ರವನ್ನು ಬೇರೆಯವರಲ್ಲಿ ಮಾಡಿಸಿದರು. ಇಷ್ಟಾದರೂ ನನ್ನ ಯಕ್ಷಗಾನದ ಪ್ರೀತಿ ಕಡಿಮೆಯಾಗಲಿಲ್ಲ. ಸೌಕೂರು ಹಾಲಾಡಿ ಮಂದಾರ್ತಿ ಇಂಥ ಸ್ಥಳಗಳಲ್ಲಿ ಯಕ್ಷಗಾನಗಳಾದಾಗ ನಾನು ಸ್ವಲ್ಪ ಹೆದರಿ ಹೆದರಿ

ಯಾರಿಗೂ ಗೊತ್ತಾಗದ ರೀತಿ ಪಾತ್ರಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ. ಹಳ್ಳಿಗಳಲ್ಲಿ ಪ್ರದರ್ಶನ ನಡೆದಾಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ನನಗೆ ಯಕ್ಷಗಾನವನ್ನು ಬಿಡಬೇಕು ಎನ್ನುವಂತಹ ಮನಸ್ಸೇ ಇರಲಿಲ್ಲ ಏನಾದ್ರೂ ಮಾಡಿ ಸಾಧನೆ ಮಾಡ್ಲೇಬೇಕು ಎಂಬ ಬಲವಾದ ಆಸೆ ಹೊಂದಿದ್ದೆ. ಹಿಂದೆ ಕಂಡ್ಲೂರಿನಲ್ಲಿ ಬಿಟ್ಟಂತಹ ಪಾತ್ರವನ್ನು ನಾನು ಮತ್ತೆ ಸೌಕೂರು ಮೇಳದಲ್ಲಿ ಮಾಡಿದೆ. ಆಗ ಮೊದಲ ಪಾತ್ರವನ್ನು ಬಹಳ ಚೆನ್ನಾಗಿ ಮಾಡಿದೆ ಅಂತ ಮೇಳದವರು ಮತ್ತು ಜನರು ಬಹಳ ಖುಷಿ ಪಟ್ಟರು. ನಂತರ ಅಂಪಾರು ಎಂಬ ಪ್ರದೇಶದಲ್ಲಿ ನಾನು ಬಬ್ರುವಾಹನ ಎನ್ನುವ ಪಾತ್ರ ಮಾಡಿದೆ. ಅದು ಜನರಿಗೆ ಬಹಳ ಇಷ್ಟವಾಯಿತು. ಈ ವಿಷಯವೂ ನಮ್ಮ ಸಮುದಾಯದವರಿಗೆ ತಲುಪಿ ನಮ್ಮನ್ನು ಸಮುದಾಯದಿಂದ ಹೊರಗೆ ಇಡುತ್ತೇವೆ ಎಂಬ ಬೆದರಿಕೆಯನ್ನು ಸಮುದಾಯದ ಮುಖಂಡರು ನೀಡಿದರು.

ಆಗ ನನ್ನ ತಾಯಿ ನನ್ನನ್ನು ಕರೆದುಕೊಂಡು ಗುರುಗಳಿದ್ದಲ್ಲಿಗೆ ಹೋದರು. ಗುರುಗಳು ಅಮ್ಮನಿಗೆ ತುಂಬಾ ಧೈರ್ಯ ಹೇಳಿದರು. ನೀನು ಇಲ್ಲಿ ವೇಷ ಮಾಡಬೇಡ ಎಂದು ನನಗೆ ಬುದ್ದಿ ಹೇಳಿದರು. ಆಗ ನಾನು 'ಗುರುಗಳೇ, ನನಗೆ ವೇಷ ಮಾಡಬೇಕೆಂಬ ಆಸೆ ಇದೆ. ಯಕ್ಷಗಾನದ ಚಂಡೆ ಮದ್ದಳೆ, ಭಾಗವತಿಕೆಯ ಸ್ವರ ಕೇಳಿದ್ರೆ ಏನೋ ಆಕರ್ಷಣೆ ಎಂದಾಗ, "ಹೌದಪ್ಪ ನಿನಗೆ ಆಕರ್ಷಣೆ ಹೌದು ಆದರೆ ಸಮಾಜವನ್ನು ಮೀರಲಿಕ್ಕೆ ಆಗುವುದಿಲ್ಲವಲ್ಲ" ಎಂದು ಗುರುಗಳು ಪ್ರೀತಿಯಿಂದ ಹೇಳಿದರು. "ನಿಮ್ಮ ಸಮಾಜಕ್ಕೆ ಗೊತ್ತಾಗದೆ ಇರುವ ಹಾಗೆ ಘಟ್ಟದ ಮೇಲೆ ಯಕ್ಷಗಾನ ಪ್ರದರ್ಶನ ಆದಾಗ ಪಾತ್ರಗಳನ್ನು ಮಾಡು." ಎಂದು ನನಗೆ ಸಲಹೆ ನೀಡಿದರು. ನನ್ನ ೧೮-೧೯ ರವಯಸ್ಸಿನಲ್ಲಿ ನಾನು ಸೌಕರು ಮೇಳಕ್ಕೆ ಸೇರ್ಪಡೆ ಆದೆ. ಆ ಹೊತ್ತಿಗೆ ನನ್ನ ಜಮದಗ್ನಿ, ಭಸ್ಮಾಸುರ ಮೊದಲಾದ ಪಾತ್ರಗಳನ್ನು ಜನರು ಇಷ್ಟ ಪಡುತ್ತಿದ್ದರು. ಹೈಸ್ಕೂಲ್ ಕಲಿಯುತ್ತಿರಬೇಕಾದರೆ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಯಾವುದೇ ವೇಷ ಇಲ್ಲದೇ ಬಣ್ಣಕ್ಕೆ ಬೂದಿ, ರಟ್ಟಿನ ಕಿರೀಟಗಳನ್ನೇ ಬಳಸಿ ಜಮದಗ್ನಿ ಭಸ್ಮಾಸುರ ಪಾತ್ರಗಳನ್ನು ಚೆನ್ನಾಗಿ ಮಾಡುತ್ತಿದ್ದೆ. ಆಗ ಅಲ್ಲಿ ಕಂದಾವರ ರಘುರಾಮ ಶೆಟ್ಟಿಯವರು, ನನಗೆ ಶಾಲೆಯ ಗುರುಗಳಾಗಿದ್ದರು. ಅವರು ನನ್ನ ಪಾತ್ರಗಳನ್ನು ನೋಡಿ ನೀನು ಮುಂದೆ ಒಳ್ಳೆಯ ಕಲಾವಿದನಾಗಬಹುದು, ಎಂದು ಮೆಚ್ಚಿಕೊಳ್ಳುತ್ತಿದ್ದರು. ನಾನು ಅವರೊಂದಿಗೆ "ಹಾಗಾದ್ರೆ ನೀವು ನನ್ನನ್ನು ಸೌಕೂರು ಮೇಳಕ್ಕೆ ಸೇರಿಸಿ ಗುರುಗಳೇ." ಎಂದು ಕೇಳಿಕೊಂಡೆ. ಅದಕ್ಕವರು ಒಪ್ಪಿ ಸೌಕೂರು ಮೇಳಕ್ಕೆ ಸೇರಲು ಸಹಾಯ ಮಾಡಿದರು. ಸೌಕೂರು ಮೇಳದಲ್ಲಿ ಭಸ್ಮಾಸುರ, ದುಷ್ಟಬುದ್ದಿ, ಇಂತಹಾ ಪಾತ್ರಗಳನ್ನು ನಿರ್ವಹಿಸುತ್ತಿದ್ದೆ. ಆ ಸಮಯದಲ್ಲಿ ನನ್ನೊಂದಿಗೆ ಇದ್ದ ಕೊಳಲಿ ಹರಿ ನಾಯಕರು, ಬೆಲ್ತೂರು ರಮೇಶ್ ಅಣ್ಣ, ಎರಡನೇ ವೇಷಕ್ಕೆ ಕಾಪು ಜೋಗಪ್ಪ ಶೆಟ್ರು, ಇನ್ನಿತರ ಕಲಾವಿದರೂ ಬಹಳ ಪ್ರೋತ್ಸಾಹ ನೀಡಿದರು. ಆ ಸಮಯದಲ್ಲಿ ನನ್ನ ಭಸ್ಮಾಸುರ, ದುಷ್ಟಬುದ್ಧಿಯ ಪಾತ್ರಗಳು ಬಹಳ ಪ್ರಚಾರ ಆಯಿತು. ಚಿಟ್ಟಾಣಿ ಅವರ ಎರಡನೇ ಭಸ್ಮಾಸುರ ಅಂತ ಹೇಳಿದ್ರೆ ಈ ಗೌಸ್ ಅನ್ನೋವಷ್ಟು ಹೆಸರಾಯಿತು. ನನ್ನ ೪೫ ವರ್ಷಗಳ ತಿರುಗಾಟದಲ್ಲಿ, ಕಮಲಶಿಲೆ, ಸಿಗಂದೂರು, ಹಾಲಾಡಿ ಬಗ್ವಾಡಿ ಮೇಗರವಳ್ಳಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದೇನೆ.


ಪ್ರಶ್ನೆ: ಧಾರ್ಮಿಕವಾಗಿ ಹಿಂದೂ ಪುರಾಣದ ಕಥೆಗಳನ್ನು ನೀವು ನಿಮ್ಮ ಸಮುದಾಯದಲ್ಲಿ ಓದಿ ತಿಳಿದುಕೊಳ್ಳುವಂತಹ ಅವಕಾಶ ಕಡಿಮೆ. ಪುರಾಣದ ಜ್ಞಾನಕ್ಕಾಗಿ ತಮ್ಮ ಅಧ್ಯಯನ ಹೇಗಿತ್ತು? ನಿಮ್ಮ ಮಾತೃಭಾಷೆಯು ಬೇರೆ ಆಗಿರಬಹುದು. ಹಾಗಾಗಿ ಪಾತ್ರಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ರಿ?

ಮ.ಗೌ: ನಾವು ಮನೆಯಲ್ಲಿ ಹಿಂದಿ ಅಥವಾ ಉರ್ದು ಮಾತನಾಡುವುದು. ಮನೆಯ ಸುತ್ತಮುತ್ತ ಕೆಲವು ಮನೆಗಳಾದರೂ ಹಿಂದುಗಳ ಮನೆಗಳಿದ್ದವು. ಆದ್ದರಿಂದ ಹೊರಗೆ ವ್ಯಾವಹಾರಿಕ ಭಾಷೆ ಕನ್ನಡವೇ ಆಗಿದೆ. ಹಿಂದೂ ಪುರಾಣದ ಪಾತ್ರಗಳನ್ನು ತಿಳಿದುಕೊಳ್ಳಲು ತಾಳ ಮದ್ದಳೆ ಕಾರ್ಯಕ್ರಮಗಳನ್ನು ಹೆಚ್ಚು ಆಲಿಸುತ್ತಿದ್ದೆ. ಅಲ್ಲದೆ ಕಾರ್ಯಕ್ರಮ ನಡೆಯುವಲ್ಲಿ ಹೋಗಿ ಭಾಗವಹಿಸುತ್ತಿದೆ. ಸಮಯ ಸಿಕ್ಕಾಗಲ್ಲ ಹಿರಿಯ ಕಲಾವಿದರ ಅರ್ಥಗಳನ್ನು ಕೇಳುತ್ತಿದ್ದೆ, ಶೇಣಿ ಗೋಪಾಲಕೃಷ್ಣ ಭಟ್ಟ, ಕುಂಬಳೆ ಸುಂದರ್ ರಾವ್, ಐರೋಡಿ ಗೋವಿಂದಪ್ಪ, ಹಾರಾಡಿ ರಾಮ ಗಾಣಿಗರು, ಇವರ ಪಾತ್ರಗಳನ್ನು ನೋಡಿ ವಿಷಯ ತಿಳಿದುಕೊಳ್ಳುತ್ತಿದ್ದೆ. ಅಲ್ಲದೆ ಅಂದಿನ ಕಾಲದ ಪ್ರಸಿದ್ಧ ಭಾಗವತರಾದ ಕಾಳಿಂಗ ನಾವುಡರು, ನಾರ್ಣಪ್ಪ ಉಪ್ಪೂರರು, ಇವರಿಂದಲೂ ವಿಷಯ ತಿಳಿದುಕೊಳ್ಳುತ್ತಿದ್ದೆ. ಹಾರಾಡಿ ರಾಮಗಾಣಿಗರು ಬಹಳ ಹೆಸರು ಮಾಡಿದವರು. ರಂಗಸ್ಥಳದ ಭೀಷ್ಮ ಅಂದ್ರೆ ನಿಜವಾದ ಭೀಷ್ಮನೆ ಬಂದು ನಿಂತ ಹಾಗೆ ಅವರ ಪಾತ್ರಗಳು. ಇಂತಹ ಕಲಾವಿದರ ಅರ್ಥಗಳನ್ನು ಕೇಳುವುದರ ಮುಖಾಂತರ ನನ್ನ ಜ್ಞಾನ ವೃದ್ದಿಸಿಕೊಂಡೆ ನಾನು ಓದಿದ್ದಕ್ಕಿಂತ ನೋಡಿ ಕಲಿತಿದ್ದೆ ಹೆಚ್ಚು. ನಾನು ಮೆಚ್ಚುವಂತಹಾ ನಮ್ಮದೇ ಸಮುದಾಯದ ಇನ್ನೊಬ್ಬರು ಕಲಾವಿದರೆಂದರೆ ಜೋಗಟ್ ಮೊಹಮ್ಮದ್. ಕುಂಬ್ಳೆಯವರ ಭೀಷ್ಮ ಹಾಗೂ ಜೋಗಟ್ ಮೊಹಮ್ಮದರ ಪರಶುರಾಮ

 ಪಾತ್ರಗಳು ನನಗೆ ಇಷ್ಟವಾದ ಕುಂಬ್ಳೆ ಅವರೇ ಭೀಷ್ಮ ಮತ್ತೆ ಈ ಜೋಗಟು ಮೊಹಮ್ಮದ್ ಅವರ ಪರಶುರಾಮ ಪಾತ್ರವನ್ನು ನಾನು ಬಹಳ ಇಷ್ಟ ಪಟ್ಟಿದ್ದೆ. 


ಪ್ರಶ್ನೆ: ನಿಮ್ಮನ್ನು ಸಾಕಷ್ಟು ಬೆಳೆಸಿ ಸಪೋರ್ಟ್ ಮಾಡಿರುವಂತಹ ಮೇಳ ಯಾವುದು 

ಮ.ಗೌ: ನನ್ನನ್ನು ರಂಗಕ್ಕೆ ಕರೆದುಕೊಂಡು ಹೋಗಿ ತುಂಬಾ ಪ್ರೋತ್ಸಾಹ ನೀಡಿದ ಪ್ರಥಮ ಮೇಳ ಅಂದರೆ ಅದು ಸೌಕೂರು ಮೇಳ. ಅಲ್ಲಿ ಬೆಲ್ತೂರು ರಮೇಶ ಅಣ್ಣನಂತಹಾ ದೊಡ್ಡ ಕಲಾವಿದರು ಒಡನಾಟ ದೊರಕಿತು. ಯಾವ ಪಾತ್ರವನ್ನೇ ಚೆನ್ನಾಗಿ ನಿಭಾಯಿಸುತ್ತಿದ್ದ ಸಮರ್ಥ ಮೊಳಹಳ್ಳಿ ಹಿರಿಯ ನಾಯಕರಂತಹಾ ಕಲಾವಿದರೊಂದಿಗೆ ಪಳಗಿದ್ದೆ ನಾನು.

ಪ್ರಶ್ನೆ: ಕಾಲ್ಪನಿಕ ಪ್ರಸಂಗಗಳಲ್ಲಿ ಮಾಡುವಂತಹ ಅವಕಾಶ ಸಿಕ್ಕಿದೆಯಾ 

ಮ.ಗೌ: ಶಿರಸಿ ಮೇಳದಲ್ಲಿ ಅತಿಥಿಯಾಗಿ ಕಾಲ್ಪನಿಕ ಪ್ರಸಂಗಗಳಲ್ಲಿ ಪಾತ್ರಗಳನ್ನು ನಿಭಾಯಿಸಿದ್ದೆ. ಚಿಟ್ಟಾಣಿಯವರೊಂದಿಗೆ ಜೋಡಿ ವೇಷದಲ್ಲಿ ಕಾಣಿಸಿಕೊಂಡಿದ್ದೆ.  ಭಾಗ್ಯ ಭಾರತಿ ಇನ್ನಿತರ ಕೆಲವು ಕಾಲ್ಪನಿಕ ಪ್ರಸಂಗಗಳಲ್ಲಿ ಪಾತ್ರ ಮಾಡಿದ್ದೆ. 


ಪ್ರಶ್ನೆ: ಈಗ ನಿಮ್ಮ ಸಮುದಾಯದಲ್ಲಿ ನಿಮ್ಮನ್ನು ಯಾವ ರೀತಿ ರಿಸೀವ್ ಮಾಡ್ತಾರೆ? ಗುರುತಿಸುತ್ತಾರೆ 

ಮೊ. ಗೌ: ಈಗ ಮೊದಲಿನ ಹಾಗೆ ವಿರೋಧಗಳಿಲ್ಲ. ನಾನು ಯಕ್ಷಗಾನ ಕಲೆಯಲ್ಲಿರುವುದನ್ನು ಸಮುದಾಯದವರು ಒಪ್ಪಿಕೊಂಡಿದ್ದಾರೆ. ನಮ್ಮ ಬಗ್ಗೆ ಕೀಳಾಗಿ ಅಥವಾ ಸಣ್ಣ ಭಾವನೆಯಿಂದ ನೋಡುವ ಪರಿಸ್ಥಿತಿ ಇಲ್ಲ. ಎಲ್ಲಕ್ಕಿಂತ ಹೆಚ್ಚು ಈ ಕಲೆಯಲ್ಲಿ ಬೆಳೆಯಲು ನನ್ನ ತಂದೆ ಮತ್ತು ತಾಯಿಯವರು ನನಗೆ ತುಂಬಾ ಬೆಂಬಲ ನೀಡಿದರು. ನನ್ನ ಹೆಂಡತಿ ಮತ್ತು ಮಕ್ಕಳು ಸಾಕಷ್ಟು ನನಗೆ ಬೆಂಬಲ ನೀಡಿದರು. ನನ್ನ ಕಲಾಜೀವನದ ಬಗ್ಗೆ, ಒಳ್ಳೆಯ ಕಲೆಯಲ್ಲಿ ನಾನು ಸಾಕಷ್ಟು ಸಾಧನೆ ಮಾಡುತ್ತಿದ್ದೇನೆ ಎಂಬ ಸಂತೋಷ ಅವರಿಗಿದೆ. 

ಯಕ್ಷಗಾನ ಕಲೆಯ ಬಗ್ಗೆ ಸಾರ್ಥಕತೆಯ ಬಗ್ಗೆ ಅವರ ಮಾತುಗಳಲ್ಲಿ ಹೊರ ಹೊಮ್ಮುವುದು ಹೀಗೆ

ಮೊ. ಗೌ: ಯಕ್ಷಗಾನ ಎಂದರೆ ಅದೊಂದು ಸಾಗರ ಅದನ್ನು ಪೂರ್ಣ ಮಾಡಿದ ಕಲಾವಿದ ನನ್ನ ಲೆಕ್ಕದಲ್ಲಿ ಯಾರು ಇರಲಿಕ್ಕಿಲ್ಲ. ಅದರೊಳಗೆ ಕೈ ಹಾಕಿ ಎತ್ತಿದಷ್ಟು ಮತ್ತಷ್ಟು ವಿಚಾರಗಳು ಸಿಗುತ್ತದೆ. ನಾವು ಅದರಲ್ಲಿ ಸಣ್ಣ ಹನಿ ಮಾತ್ರ. ಯಕ್ಷಗಾನದಲ್ಲೂ ನೋವುಗಳು ಇದೆ. ಜೀವನ ಎಂದರೆ ಕಷ್ಟದ ದಿವಸಗಳು ಬರುತ್ತವೆ. ಅದೆಲ್ಲ ಸಹಜ. ಆದರೆ, ನಾನೊಬ್ಬ ಮುಸ್ಲಿಂ ಕಲಾವಿದನಾದ್ರೂ ಇತರ ಕಲಾವಿದರು ತಮ್ಮ ಸಹೋದರನಂತೆ ನನ್ನನ್ನು ಸ್ವೀಕರಿಸಿದು.್ರ ಪ್ರಸ್ತುತ ೩೫ ಕಲಾವಿದರ ಜೊತೆ ಮಡಾಮಕ್ಕಿ ಮೇಳದಲ್ಲಿ ನಾನು ತಿರುಗಾಟ ನಡೆಸುತ್ತಿದ್ದೇನೆ. ನನ್ನನ್ನು ಬೇರೆಯವ ಎಂಬ ದೃಷ್ಟಿಯಿಂದ ಯಾರು ಕಂಡವರಿಲ್ಲ. ಚೌಕಿಯಲ್ಲಾಗಲಿ, ರಂಗಸ್ಥಳದಲ್ಲಾಗಲಿ, ಬಿಡಾರದಲ್ಲಾಗಲಿ ಚೆನ್ನಾಗಿಯೇ ನಡೆಸಿಕೊಳ್ಳುತ್ತಾರೆ. ಮುಸ್ಲಿಂ ಎಂಬ ಭಾವನೆಯಲ್ಲಿ ಯಾರೂ ನೋಡಿಲ್ಲ ಹಿಂದೂ ಮುಸ್ಲಿಂ ಅಂತ ಸಂಘರ್ಷ ಮಾಡುವವರು ಮೂರ್ಖರು. ಅವರಿಗೆ ಬುದ್ಧಿ ಇಲ್ಲ. ಮೊನ್ನೆ ನಮ್ಮವರಲ್ಲಿ ನಾನು ಹೇಳುತ್ತಿದ್ದೆ; ನಾನು ೩೫ ಹಿಂದುಗಳ ಜೊತೆಗಿದ್ದೇನೆ. ಆದರೆ ಯಾವುದೇ ಬೇಧಗಳು ನಮ್ಮ ನಡುವೆ ಬಂದಿಲ್ಲ. ರಂಗಸ್ಥಳದಲ್ಲಿ ಎದುರು ಬದುರು ಪಾತ್ರಗಳಲ್ಲಿ ಚರ್ಚೆ ನಡೆಸುತ್ತೇವೆ. ರಂಗಸ್ಥಳದ ಹೊರಗೆ ಬಂದ ಮೇಲೆ, ಪಾತ್ರ ನಿರ್ವಹಣೆಯ ಸರಿ ತಪ್ಪುಗಳ ಬಗ್ಗೆ ವಿಮರ್ಶೆ ಮಾಡುತ್ತೇವೆ ಅಷ್ಟೆ. ಯಕ್ಷಗಾನ ಜಾತಿ ಧರ್ಮವನ್ನು ಮೀರಿದ ಕಲೆ, ಎಲ್ಲ ಧರ್ಮಗಳಿಗೆ ಒಂದು ಉತ್ತಮ ಸಂದೇಶ ಬೋಧನೆ ಕೊಡುವಂತಹ ಕಲೆ. ಮನುಷ್ಯನಿಗೆ ಜಾತಿಗಿಂತ ಮುಖ್ಯ ನೀತಿ ಮುಖ್ಯ. ಯಾಕೆಂದರೆ ನಾನು ಮುಸ್ಲಿಂ ಎನ್ನುವ ಕಾರಣಕ್ಕೆ ಯಾರಾದ್ರೂ ತೊಂದರೆ ಕೊಟ್ಟಿದ್ದರೆ, ನಾನು ಇಂದು ಇಷ್ಟು ಬೆಳೆಯಲು ಸಾಧ್ಯವಿರಲಿಲ್ಲ.  

ಇವರ ಪ್ರಸಿದ್ಧ ಹಾಗೂ ಮೆಚ್ಚಿನ ವೇಷಗಳು- ಮಡಾಮಕ್ಕಿ ಮೇಳದಲ್ಲಿ ಪ್ರಧಾನ ವೇಷದಾರಿಯಾಗಿರುವ ಮೊಹಮ್ಮದ್ ಗೌಸ್ ಕಥಾನಾಯಕ ಹಾಗೂ ಖಳ ನಾಯಕ ಎರಡೂ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಸತ್ಯ ಹರಿಶ್ಚಂದ್ರ ಪ್ರಸಂಗದ ಹರಿಶ್ಚಂದ್ರ, ಅಥವಾ ವಿಶ್ವಾಮಿತ್ರನ ಪಾತ್ರ, ಕಾರ್ತವೀರ್ಯಾರ್ಜುನದ ಕಾರ್ತವೀರ್ಯ, ಗದಾಯುದ್ಧದಲ್ಲಿ ಕೌರವ ಭೀಮ, ಭಸ್ಮಾಸುರ, ಕುರುಕ್ಷೇತ್ರದ ಕೌರವೇಶ್ವರ, ಚಂದ್ರಹಾಸ ಪ್ರಸಂಗದ ದುಷ್ಟಬುದ್ಧಿ ಪಾಪಣ್ಣ ವಿಜಯದ ಉಗ್ರಸೇನ, ನಳದಮಯಂತಿ ಪ್ರಸಂಗದಲ್ಲಿ ಋತುಪರ್ಣ, ಶನೀಶ್ವರ ಮಹಾತ್ಮೆಯಲ್ಲಿ ವಿಕ್ರಮಾದಿತ್ಯ ಇವು ನಿರ್ವಹಿಸುವ ಇಷ್ಟದ ಪಾತ್ರಗಳು.